ಮೈನವಿರೇಳಿಸುವ ಸಾಹಸ: ವಿಮಾನದ ರೆಕ್ಕೆಯ ಮೇಲೆ ಕುಳಿತು ಸವಾರಿ ಮಾಡಿದ ಟಾಮ್ ಕ್ರೂಸ್!
ಟಾಮ್ ಕ್ರೂಸ್ ಜಗತ್ತಿನ ಅತ್ಯುತ್ತಮ ಆಕ್ಷನ್ ಹೀರೋಗಳಲ್ಲಿ ಮೊದಲಿಗರು. ಅವರಂತೆ ಆಕ್ಷನ್ ದೃಶ್ಯಗಳನ್ನು ಮಾಡುವ ನಟರ ಸಂಖ್ಯೆ ಜಗತ್ತಿನಲ್ಲಿ ಬಹಳ ಕಡಿಮೆ. ಜಾಕಿ ಚಾನ್ ಹೊರತುಪಡಿಸಿದರೆ ಅತ್ಯಂತ ಅಪಾಯಕಾರಿ ಸ್ಟಂಟ್‌ಗಳಲ್ಲಿ ತೊಡಗಿಕೊಳ್ಳುವುದು ಟಾಮ್ ಕ್ರೂಸ್ ಮಾತ್ರವೇ.
ಟಾಮ್ ಕ್ರೂಸ್ ಹಲವು ಅತ್ಯುತ್ತಮ ಆಕ್ಷನ್ ಸಿನಿಮಾಗಳನ್ನು ಸಿನಿ ಜಗತ್ತಿಗೆ ನೀಡಿದ್ದಾರೆ. ಅದರಲ್ಲಿ ಪ್ರಮುಖವಾದುದು 'ಮಿಶನ್ ಇಂಪಾಸಿಬಲ್' ಸರಣಿ.
1996ರಲ್ಲಿ ಆರಂಭವಾದ 'ಮಿಷನ್ ಇಂಪಾಸಿಬಲ್' ಸಿನಿಮಾ ಸರಣಿ ಅತಿ ಹೆಚ್ಚು ಜನಪ್ರಿಯ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. 'ಫಾಸ್ಟ್ ಆಂಡ್ ಫ್ಯೂರಿಯಸ್' ಸಿನಿಮಾ ಸರಣಿಗೆ ಹೋಲಿಸಿದರೆ ತಮ್ಮ ಗುಣಮಟ್ಟವನ್ನು ಕಾಯ್ದುಕೊಂಡು ಅಭಿಮಾನಿಗಳಿಗೆ ಪ್ರತಿ ಹೊಸ ಸಿನಿಮಾದಲ್ಲಿಯೂ ಹೊಸ ಅನುಭೂತಿಯನ್ನು ನೀಡುತ್ತಾ ಬರುತ್ತಿದೆ. 'ಮಿಷನ್ ಇಮ್‌ಪಾಸಿಬಲ್' ಸರಣಿಯ ಸಿನಿಮಾಗಳಲ್ಲಿ ಟಾಮ್ ಕ್ರೂಸ್ ಈವರೆಗೆ ಕೆಲವು ಅತ್ಯುತ್ತಮ ಮತ್ತು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿದ್ದಾರೆ. ಇದೀಗ 'ಮಿಷನ್ ಇಂಪಾಸಿಬಲ್ 8' ತಯಾರಾಗುತ್ತಿದ್ದು, ಅದಕ್ಕಾಗಿ ಭಾರಿ ಅಪಾಯಕಾರಿ ಸಾಹಸವೊಂದನ್ನು ಟಾಮ್ ಮಾಡಿದ್ದಾರೆ.

ಈ ಹಿಂದಿನ 'ಮಿಷನ್ ಇಂಪಾಸಿಬಲ್ ಫಾಲೌಟ್' ಸಿನಿಮಾಕ್ಕಾಗಿ ವಿಮಾನದ ಬಾಗಿಲನ್ನು ಹಿಡಿದುಕೊಂಡು ಆಕಾಶಕ್ಕೆ ಹಾರಿದ್ದರು ಟಾಮ್ ಕ್ರೂಸ್, ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ 'ಮಿಷನ್ ಇಂಪಾಸಿಬಲ್ 8' ಸಿನಿಮಾಕ್ಕಾಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಟಾಮ್ ಕ್ರೂಸ್ ವಿಮಾನದ ರೆಕ್ಕೆಯ ಮೇಲೆ ಕುಳಿತುಕೊಂಡು ಚಿತ್ರೀಕರಣ ಮಾಡಿದ್ದಾರೆ.
ಆಕಾಶದಲ್ಲಿ ಹಾಡುತ್ತಿರುವ ವಿಮಾನದ ಒಳಗೆ ಸೀಟ್‌ನಲ್ಲಿ ಕುಳಿತುಕೊಳ್ಳಲೇ ಹಲವರು ಭಯಪಡುತ್ತಾರೆ. ಆದರೆ ಟಾಮ್ ಕ್ರೂಸ್, ಆಕಾಶದಲ್ಲಿ ಹಾರುವ ವಿಮಾನದ ರೆಕ್ಕೆಯ ಮೇಲೆ ಕುಳಿತುಕೊಂಡಿದ್ದಾರೆ. ಕೇವಲ ಕುಳಿತುಕೊಂಡಿರುವುದು ಮಾತ್ರವಲ್ಲ ತಲೆ ಕೆಳಗಾಗಿ ಜೋತು ಬಿದ್ದಿದ್ದಾರೆ. ಟಾಮ್ ಕ್ರೂಸ್‌ರ ಈ ಅಪಾಯಕಾರಿ ಸಾಹದ ಹಲವು ಚಿತ್ರಗಳು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
1941 ಬೋಯಿಂಗ್ ಬಿ75ಎನ್1 ವಿಮಾನ ಹತ್ತಿರುವ ಟಾಮ್ ಕ್ರೂಸ್ ನೆಲದಿಂದ 2000 ಅಡಿ ಮೇಲೆ ಹಾರಾಟ ನಡೆಸುತ್ತಾ, ವಿಮಾನದ ರೆಕ್ಕೆಯ ಮೇಲೆ ಹತ್ತಿ ಕುಳಿತಿದ್ದಾರೆ. ಕೇವಲ ಕುಳಿತಿದ್ದು ಮಾತ್ರವಲ್ಲ ತಲೆ ಕೆಳಕಾಗಿ ಜೋತು ಬಿದ್ದಿದ್ದಾರೆ. ಈ ಸಮಯದಲ್ಲಿ ವಿಮಾನ ಸಹ ಆಕಾಶದಲ್ಲಿ ಹಲವು ಬಾರಿ ತಲೆ ಕೆಳಗಾಗಿ ಸಂಚಾರ ನಡೆಸಿದೆ. ಈ ದೃಶ್ಯಗಳನ್ನು 'ಮಿಷನ್ ಇಂಪಾಸಿಬಲ್ 8' ಸಿನಿಮಾಕ್ಕಾಗಿ ಚಿತ್ರೀಕರಣ ಮಾಡಿಕೊಳ್ಳಲಾಗಿದೆ.
'ಟಾಮ್ ಕ್ರೂಸ್' ನಟನೆಯ 'ಮಿಷನ್ ಇಂಪಾಸಿಬಲ್ 7' ಸಿನಿಮಾ ಈಗಾಗಲೇ ತಯಾರಾಗಿದೆ. ಈ ಸಿನಿಮಾವನ್ನು ಅಂತರಿಕ್ಷದಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಸಿನಿಮಾವು ಈ ವೇಳೆಗಾಗಲೆ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಇರುವ ಕಾರಣದಿಂದ ಬಿಡುಗಡೆ ತಡವಾಗಿದೆ. 'ಮಿಷನ್ ಇಂಪಾಸಿಬಲ್ 7' ಸಿನಿಮಾವನ್ನು ಕೊರೊನಾ ನಡುವೆಯೇ ವಿಶೇಷ ಮುತುವರ್ಜಿ ವಹಿಸಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾವು 2022 ಕ್ಕೆ ಬಿಡುಗಡೆ ಆಗಲಿದೆ. ಇದೀಗ ಚಿತ್ರೀಕರಣಗೊಳ್ಳುತ್ತಿರುವ 'ಮಿಷನ್ ಇಂಪಾಸಿಬಲ್ 8' ಸಿನಿಮಾವು 2023ರಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











