For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಾಪಸ್ಸು ನೀಡಿದ ಟಾಮ್ ಕ್ರೂಸ್

  |

  ಖ್ಯಾತ ನಟ ಟಾಮ್ ಕ್ರೂಸ್, ತಮಗೆ ಬಂದಿದ್ದ ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ. ಟಾಮ್ ಕ್ರೂಸ್ ಮಾತ್ರವಲ್ಲ ಇನ್ನೂ ಕೆಲವು ಖ್ಯಾತ ನಟ, ನಟಿಯರು ಸಹ ತಮಗೆ ಬಂದಿದ್ದ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.

  ಗೋಲ್ಡನ್ ಗ್ಲೋಬ್ ಪ್ರಶಸ್ತಿ ಆಯೋಜಿಸುವ ಎಚ್‌ಎಫ್‌ಪಿಎ (ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್) ವಿಶ್ವಾಸರ್ತೆಯ ಬಗ್ಗೆ ಪ್ರಶ್ನೆ ಎದ್ದಿರುವ ಕಾರಣ ಟಾಮ್ ಕ್ರೂಸ್, ಬ್ಲಾಕ್ ವಿಡೋ ಖ್ಯಾತಿಯ ಸ್ಕಾರ್ಲೆಟ್ ಜಾನ್‌ಸನ್, ಹಲ್ಕ್ ಖ್ಯಾತಿಯ ಮಾರ್ಕ್ ರಫೆಲೊ ಹಾಗೂ ಇನ್ನೂ ಕೆಲವರು ತಮಗೆ ದೊರಕಿದ್ದ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ.

  ಎಚ್‌ಎಫ್‌ಪಿಎಯಲ್ಲಿ ವರ್ಣಭೇದತೆ, ಲಿಂಗಭೇದ, ಭ್ರಷ್ಟಾಚಾರ, ಬೆದರಿಸುವಿಕೆ ಹೆಚ್ಚಿದೆ ಎಂದು ಹಲವು ದೂರುಗಳು ಕೇಳಿಬಂದಿವೆ. ಕಪ್ಪುವರ್ಣೀಯರಿಗೆ ಎಚ್‌ಎಫ್‌ಪಿಎಯಲ್ಲಿ ಅವಕಾಶ ಕೊಡಲಾಗುತ್ತಿಲ್ಲ ಎಚ್‌ಎಫ್‌ಪಿಎಯು ವರ್ಣಭೇದತೆ ಆಚರಿಸುತ್ತಿದೆ ಎಂದು ದೂರುಗಳು ಬಂದಿದ್ದವು. ಇದೇ ಕಾರಣಕ್ಕೆ ಟಾಮ್ ಕ್ರೂಸ್ ಸೇರಿ ಹಲವರು ತಮ್ಮ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.

  ಎಚ್‌ಎಫ್‌ಪಿಎ ನಡೆಸುವ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭವನ್ನು ಪ್ರಸಾರ ಮಾಡುತ್ತಿದ್ದ ಎನ್‌ಬಿಸಿಯು 2022 ರ ಗೋಲ್ಡನ್ ಗ್ಲೋಬ್ ಸಮಾರಂಭವನ್ನು ಪ್ರಸಾರ ಮಾಡುವುದಿಲ್ಲ ಎಂದು ಹೇಳಿದೆ.

  ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ಇನ್ನೂ ಕೆಲವು ದೈತ್ಯ ಒಟಿಟಿಗಳು ಸಹ ತಾವು ಎಚ್‌ಎಫ್‌ಪಿಎ ಜೊತೆಗಿನ ನಂಟು ಕಡಿದುಕೊಳ್ಳುತ್ತಿರುವುದಾಗಿ ಹೇಳಿವೆ.

  :ನಟಿ ರೇಖಾ‌ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮದುವೆ ಮುರಿದು ಬಿದ್ದಿದ್ದು ಯಾಕೆ? | Filmibeat Kannada

  ಆರೋಪಗಳನ್ನು ಒಪ್ಪಿಕೊಂಡಿರುವ ಎಚ್‌ಎಫ್‌ಪಿಎ ಸುಧಾರಣಾ ನೀತಿಯನ್ನು ಬಿಡುಗಡೆ ಮಾಡಿದ್ದು, ಸಂಸ್ಥೆಯ ಒಳಗೆ ದೊಡ್ಡ ಮಟ್ಟದ ಸುಧಾರಣೆಯನ್ನು ತರಲಿದ್ದೇವೆ ಎಂದು ಹೇಳಿದೆ.

  English summary
  Hollywood actor Tom Cruise returns his golden globe awards. Actress Scarlett Johansson also returns her Golden globe award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X