Mission- Impossible: ಮೈ ಜುಮ್ ಎನಿಸುವ ಆಕ್ಷನ್ ಸೀಕ್ವೆನ್ಸ್: ಹುಬ್ಬೇರಿಸುವಂತಿದೆ ಟಾಮ್ ಕ್ರೂಸ್ ಸಾಹಸ
ಹಾಲಿವುಡ್ ಸೂಪರ್ ಹಿಟ್ 'ಮಿಷನ್ ಇಂಪಾಸಿಬಲ್' ಸರಣಿಯ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹೊಸ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಟಾಮ್ ಕ್ರೂಸ್ ನಟನೆಯ 'ಮಿಷನ್ ಇಂಪಾಜಿಬಲ್ ಡೆಡ್ ರೆಕಾನಿಂಗ್ ಪಾರ್ಟ್- 1' ಸಿನಿಮಾ ವಿಶ್ವದಾದ್ಯಂತ ಜುಲೈ 12 ರಂದು ತೆರೆಗಪ್ಪಳಿಸಲಿದೆ. ಈ ಸರಣಿಯ 7ನೇ ಸಿನಿಮಾ ಇದು ಅನ್ನೋದು ವಿಶೇಷ.
ಹಾಲಿವುಡ್ ಸಿನಿಮಾಗಳ ಹಿಂದಿನ ಎಲ್ಲಾ ಬಾಕ್ಸಾಫೀಸ್ ದಾಖಲೆ ಮುರಿಯಲು ಈ ಸಿನಿಮಾ ಬರ್ತಿದೆ. ಸದ್ಯ ಚಿತ್ರದ ಫೈನಲ್ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಟಾಮ್ ಕ್ರೂಸ್ ನಟಿಸಿರುವ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದ ಆಕ್ಷನ್ ಜೋರಾಗಿರುತ್ತದೆ ಅನ್ನೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಮೈ ಜುಮ್ ಎನ್ನಿಸೋ ಆಕ್ಷನ್, ಚೇಸಿಂಗ್ ದೃಶ್ಯಗಳನ್ನು ಸೇರಿಸಿ ಟ್ರೈಲರ್ ಕಟ್ ಮಾಡಿದ್ದಾರೆ. ರೈಲು ಸಾಗುತ್ತಿರುವ ಸೇತುವೆ ಬ್ಲಾಸ್ಟ್ ಆಗೋದು ಅದರಿಂದ ಟಾಮ್ ಕ್ರೂಸ್ ಬಚಾವಾಗುವ ಸನ್ನಿವೇಶ ಇಂಟ್ರೆಸ್ಟಿಂಗ್ ಆಗಿದೆ.

ಎತ್ತರದ ಬೆಟ್ಟದ ಮೇಲಿಂದ ಪ್ರಪಾತಕ್ಕೆ ಬೈಕ್ ಸಮೇತ ಟಾಮ್ ಕ್ರೂಸ್ ಜಂಪ್ ಮಾಡಿರುವ ಸೀನ್ಸ್ ಕೂಡ ರೋಚಕವಾಗಿದೆ. ಇಂತಹ ಸನ್ನಿವೇಶಗಳಲ್ಲಿ ನಟಿಸಿರುವ ಟಾಮ್ ಕ್ರೂಸ್ ಧೈರ್ಯವನ್ನು ಮೆಚ್ಚಲೇಬೇಕು. 'ಮಿಷನ್ ಇಂಪಾಜಿಬಲ್ ಡೆಡ್ ರೆಕಾನಿಂಗ್ ಪಾರ್ಟ್-1' ಚಿತ್ರದಲ್ಲಿ ಬರೀ ಆಕ್ಷನ್ ಎಪಿಸೋಡ್ ಮಾತ್ರ ಇಲ್ಲ ಕಾಮಿಡಿ ಸನ್ನಿವೇಶಗಳು ಇವೆ. ಟಾಮ್ ಕ್ರೂಜ್ ಕ್ರೇಜ್ ಹಾಗೂ ಸ್ಟಾಮಿನಾಗೆ ತಕ್ಕಂತೆ ನಿರ್ದೇಶಕ ಕ್ರಿಸ್ಟೊಫರ್ ಮೆಕ್ ಕ್ವಾರಿ ಸಿನಿಮಾ ಡಿಸೈನ್ ಮಾಡಿದ್ದಾರೆ. ಈಗಾಗಲೇ ಹಾಲಿವುಡ್ ಪ್ರೇಕ್ಷಕರು ಸಿನಿಮಾ ನೋಡಲೇಬೇಕು ಎಂದು ನಿರ್ಧರಿಸಿದ್ದಾರೆ.
ಅಂದಹಾಗೆ 'ಮಿಷನ್ ಇಂಪಾಜಿಬಲ್ ಡೆಡ್ ರೆಕಾನಿಂಗ್ ಪಾರ್ಟ್- 1' ಚಿತ್ರದಲ್ಲಿ ವಿಲನ್ ಮನುಷ್ಯ ಅಲ್ಲ. ಬದಲಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಗಿರುವುದು ವಿಶೇಷ. ಈ ಬಾರಿ ತಂತ್ರಜ್ಞಾನ ಬಳಸಿ ಸಿನಿಮಾ ಬಹಳ ರೋಚಕವಾಗಿ ಮೂಡಿ ಬರುವಂತೆ ಮಾಡಲಾಗಿದೆ. ಪ್ರಪಂಚದಲ್ಲಿ ವಿಧ್ವಂಸ ಕೃತ್ಯಗಳನ್ನು ನಡೆಸಲು ದುಷ್ಟ ಶಕ್ತಿ ನಡೆಉವ ಪಿತೂರಿಗಳನ್ನು ನಾಯಕ ಎಥಾನ್ ಹಂಟ್ ಹೇಗೆ ತಡೆಯುತ್ತಾನೆ ಅನ್ನೋದು ಚಿತ್ರದ ಒನ್‌ಲೈನ್ ಸ್ಟೋರಿ.
ಸಿನಿಮಾ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ರೋಮ್‌ನಲ್ಲಿ ಈಗಾಗಲೇ ಸಿನಿಮಾ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿದವರೆಲ್ಲಾ ಮೆಚ್ಚಿಕೊಂಡಾಡುತ್ತಿದ್ದಾರೆ. 'ಮಿಷನ್ ಇಂಪಾಜಿಬಲ್ ಡೆಡ್ ರೆಕಾನಿಂಗ್ ಪಾರ್ಟ್- 1'ಪ್ರಿವ್ಯೂಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದರಿಂದ ಚಿತ್ರತಂಡ ಮತ್ತಷ್ಟು ಕಾನ್ಫಿಡೆಂಟ್ ಆಗಿದೆ. ಭಾರತ ಸೇರಿದಂತೆ ಹಲವೆಡೆ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ಈ ವಾರವೇ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











