For Quick Alerts
  ALLOW NOTIFICATIONS  
  For Daily Alerts

  ಬಾಹ್ಯಾಕಾಶದಲ್ಲಿ ಸಿನಿಮಾ ಶೂಟಿಂಗ್ ಮಾಡಲಿದ್ದಾರೆ ಟಾಮ್ ಕ್ರೂಸ್

  |

  ಹಾಲಿವುಡ್‌ನ ಸ್ಟಾರ್ ಟಾಮ್ ಕ್ರೂಸ್ ತಮ್ಮ ಮೈನವಿರೇಳಿಸುವ ಸಾಹಸವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುವ ಉತ್ಸಾಹದಲ್ಲಿದ್ದಾರೆ. ಬಾಹ್ಯಾಕಾಶಕ್ಕೆ ತೆರಳಿ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುವ ಹೊಸ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ.

  ಆಪ್ತ ಸಹಾಯಕನ ಬರ್ತ್ ಡೇಗೆ ಕಿಚ್ಚ ಕೊಟ್ಟ ಸ್ಪೆಷಲ್ ಗಿಫ್ಟ್ ಹೇಗಿದೆ ನೋಡಿ | Kiccha Sudeep Gift for His Assistant

  ಈ ಸಾಹಸ ನಡೆಯಲಿರುವುದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸಹಭಾಗಿತ್ವದಲ್ಲಿ. ಎಲೊನ್ ಮಸ್ಕ್ ಅವರ ವಿಮಾನಯಾನ ಸಂಸ್ಥೆ ಸ್ಪೇಸ್ ಎಕ್ಸ್ ಹಾಗೂ ಟಾಮ್ ಕ್ರೂಸ್ ಇಬ್ಬರೂ ನಾಸಾದೊಂದಿಗೆ ಮಾತುಕತೆ ನಡೆಸಿದ್ದು, ಗ್ರಾಫಿಕ್ಸ್‌ಗಳ ಬದಲು ನೈಜವಾಗಿಯೇ ಬಾಹ್ಯಾಕಾಶದಲ್ಲಿ ಚಿತ್ರೀಕರಣ ನಡೆಸುವ ಬಗ್ಗೆ ಉದ್ದೇಶವನ್ನು ವಿವರಿಸಿದ್ದಾರೆ.

  ಭಾರತದಲ್ಲಿ ನಡೆದ ಭಾವುಕ ಸನ್ನಿವೇಶವನ್ನು ನೆನಪಿಸಿಕೊಂಡ ಟೈಟಾನಿಕ್ ನಾಯಕಿಭಾರತದಲ್ಲಿ ನಡೆದ ಭಾವುಕ ಸನ್ನಿವೇಶವನ್ನು ನೆನಪಿಸಿಕೊಂಡ ಟೈಟಾನಿಕ್ ನಾಯಕಿ

  ಸದ್ಯಕ್ಕೆ ಈ ಸಿನಿಮಾದ ನಿರ್ಮಾಣ ಹಾಗೂ ಇತರೆ ಮಾಹಿತಿ ಹೊರಬಂದಿಲ್ಲ. ಇದು ಆಕ್ಷನ್-ಸಾಹಸಮಯಿ ಚಿತ್ರ ಎಂದು ಹೇಳಲಾಗಿದೆ.

  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ಟಾಮ್ ಕ್ರೂಸ್ ಹಾಗೂ ಅವರ ತಂಡ ಭೂಮಿಯಿಂದ 250 ಮೈಲಿ ಎತ್ತರದಲ್ಲಿನ ಕಕ್ಷೆಯಲ್ಲಿ ಬಹುಕೋಟಿ ಡಾಲರ್ ವೆಚ್ಚದ ಲ್ಯಾಬೋರೇಟರಿಯನ್ನು ಸ್ಥಾಪಿಸಲಿದ್ದಾರೆ.

  ಹಾಲಿವುಡ್ ನಟನನ್ನು ಬೈಕ್‌ನಲ್ಲಿ ಬೆನ್ನಟ್ಟಿದ್ದ ಭಾರತದ ಅಭಿಮಾನಿಹಾಲಿವುಡ್ ನಟನನ್ನು ಬೈಕ್‌ನಲ್ಲಿ ಬೆನ್ನಟ್ಟಿದ್ದ ಭಾರತದ ಅಭಿಮಾನಿ

  ಈ ಹಿಂದೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿನಿಮಾಗಳ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು. 2002ರಲ್ಲಿ ಐಮ್ಯಾಕ್ಸ್ ಸಾಕ್ಷ್ಯಚಿತ್ರ, 2012ರಲ್ಲಿ 'ಅಪೋಜಿ ಆಫ್ ಫಿಯರ್' ಎಂಬ ಸೈನ್ಸ್ ಫಿಕ್ಷನ್ ಸಿನಿಮಾ ಶೂಟಿಂಗ್ ಮಾಡಲಾಗಿತ್ತು. ಆದರೆ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಚಿತ್ರೀಕರಣದಲ್ಲಿ ಭಾಗವಹಿಸುವ ಮೊದಲ ನಟ ಎಂಬ ಕೀರ್ತಿ ಟಾಮ್ ಕ್ರೂಸ್ ಅವರ ಪಾಲಾಗಲಿದೆ.

  English summary
  Hollywood star Tom Cruise and NASA join together to shoot a film in space.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X