ಬೆಸ್ಟ್‌ ನಿರ್ದೇಶಕನ ಸಿನಿಮಾ ನೋಡಲು ಮುಸುಕು ಧರಿಸಿ ಚಿತ್ರಮಂದಿರಕ್ಕೆ ಬಂದ ಟಾಮ್ ಕ್ರೂಸ್

ವಿಶ್ವದ ಅತ್ಯುತ್ತಮ ಸಿನಿಮಾ ನಿರ್ದೇಶಕರ ಪಟ್ಟಿಯಲ್ಲಿ ಕ್ರಿಸ್ಟೋಫರ್ ನೋಲನ್ ಹೆಸರು ಇಲ್ಲದೇ ಇರಲು ಸಾಧ್ಯವೇ ಇಲ್ಲ. ಆತನ ಸಿನಿಮಾಗಳೇ ಹೇಳುತ್ತವೇ ಕ್ರಿಸ್ಟೋಫರ್ ನೋಲನ್ ಏಕೆ ಅದ್ಭುತ ಸಿನಿಮಾ ನಿರ್ದೇಶಕ, ಸಿನಿಮಾ ತಂತ್ರಜ್ಞ ಎಂದು.

Recommended Video

Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

ಬಹುಕಾಲದ ನಂತರ ಕೊರೊನಾ ನಡುವೆಯೂ ಕ್ರಿಸ್ಟೋಫರ್ ನೋಲನ್‌ ನಿರ್ದೇಶನದ 'ಟೆನೆಟ್' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕೊರೊನಾ ಭೀತಿಯ ನಡುವೆಯೂ ಮುಗಿಬಿದ್ದು ಜನ ನೋಡುತ್ತಿದ್ದಾರೆ.

ವಿಶ್ವದ ಅತ್ಯುತ್ತಮ ನಿರ್ದೇಶಕನ ಸಿನಿಮಾ ನೋಡಲು ವಿಶ್ವದ ಅತ್ಯಂತ ದುಬಾರಿ ಹಾಗೂ ಪ್ರಸಿದ್ಧ ನಟ ಟಾಮ್ ಕ್ರೂಸ್ ಹೋಗಿದ್ದರು. ತಾವು ಸಿನಿಮಾ ನೋಡಲು ಹೋದ ವಿಡಿಯೋವನ್ನು ಸಹ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ದೇಶಗಳಲ್ಲಷ್ಟೆ ಟೆನೆಟ್ ಬಿಡುಗಡೆ ಆಗಿದೆ

ಕೆಲವು ದೇಶಗಳಲ್ಲಷ್ಟೆ ಟೆನೆಟ್ ಬಿಡುಗಡೆ ಆಗಿದೆ

ಅಮೆರಿಕ ಸೇರಿ ಕೆಲವೆಡೆಯಷ್ಟೆ 'ಟೆನೆಟ್' ಸಿನಿಮಾ ಬಿಡುಗಡೆ ಆಗಿದೆ. ಮಿಶನ್ ಇಂಪಾಸಿಬಲ್ ಖ್ಯಾತಿಯ ಟಾಮ್ ಕ್ರೂಸ್ ಮೊದಲ ದಿನವೇ ಸಿನಿಮಾ ನೋಡಲು ಹೋಗಿದ್ದಾರೆ. ಚಿತ್ರಮಂದಿರದಲ್ಲಿ ಸಾಮಾನ್ಯರಂತೆ ಕೂತು ಸಿನಿಮಾ ನೋಡಿ ಬಂದಿದ್ದಾರೆ ಟಾಮ್.

ಮಾಸ್ಕ್ ಧರಿಸಿದ್ದರೂ ಗುರುತಿಸಿದ ಮಕ್ಕಳು

ಮಾಸ್ಕ್ ಧರಿಸಿದ್ದರೂ ಗುರುತಿಸಿದ ಮಕ್ಕಳು

ಟಾಮ್ ಕ್ರೂಸ್ ಮಾಸ್ಕ್‌ ಧರಿಸಿಕೊಂಡೆ ಚಿತ್ರಮಂದಿರಕ್ಕೆ ಹೋಗಿದ್ದಾರೆ. ಆದರೆ ದಾರಿಯಲ್ಲಿಯೇ ಕೆಲವು ಮಕ್ಕಳು ಟಾಮ್ ಕ್ರೂಸ್ ಅನ್ನು ಗುರುತಿಸಿದ್ದಾರೆ. ಮಾಸ್ಕ್ ಹಾಕಿಕೊಂಡಿದ್ದರೂ ತಮ್ಮನ್ನು ಗುರುತಿಸಿದ್ದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಟಾಮ್ ಕ್ರೂಸ್.

ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡ ಟಾಮ್ ಟ್ರೂಸ್

ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡ ಟಾಮ್ ಟ್ರೂಸ್

ಸಿನಿಮಾ ನೋಡಿದ ಬಳಿಕ, ಎಲ್ಲರಿಗೂ ಮರಳಿ ಚಿತ್ರಮಂದಿರಕ್ಕೆ ಬಂದಿರುವುದಕ್ಕೆ ಧನ್ಯವಾದ ಹೇಳಿರುವ ಟಾಮ್ ಕ್ರೂಸ್, ಟೆನೆಟ್ ಸಿನಿಮಾ ನನಗೆ ಬಹಳ ಇಷ್ಟವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರ್ದೇಶಕನ ಕಲ್ಪನೆಗೆ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

ಅಂತರಿಕ್ಷದಲ್ಲಿ ಚಿತ್ರೀಕರಣ ನಡೆಸಲಿದ್ದಾರೆ

ಅಂತರಿಕ್ಷದಲ್ಲಿ ಚಿತ್ರೀಕರಣ ನಡೆಸಲಿದ್ದಾರೆ

ಟಾಮ್ ಕ್ರೂಸ್ ಮಿಶನ್ ಇಂಪಾಸಿಬಲ್ ನ 7 ನೇ ಸರಣಿಯ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ನಿರ್ಮಾಪಕರಾಗಿರುವ ಟಾಮ್ ಕ್ರೂಸ್, ಅದ್ಭುತ ಸಾಹಸಭರಿತ ಮಿಶನ್ ಇಂಪಾಸಿಬಲ್ ಸರಣಿಯ ಹೊಸ ಸಿನಿಮಾವನ್ನು ಅಂತರಿಕ್ಷದಲ್ಲಿ ಚಿತ್ರೀಕರಣ ಮಾಡಲಿದ್ದಾರೆ.

More from Filmibeat

English summary
Actor Tom Cruise watched Christopher Nolan's Tenet movie in theater with people by wearing mask. He loved the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X