Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊದಲ ವಾರಾಂತ್ಯಕ್ಕೆ ಭಾರತದಲ್ಲಿ ಅತಿಹೆಚ್ಚು ಹಣ ಗಳಿಸಿದ 5 ಹಾಲಿವುಡ್ ಚಿತ್ರಗಳು
ಹಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ಅವತಾರ್ ದ ವೇ ಆಫ್ ವಾಟರ್ ಬಿಡುಗಡೆಗೊಂಡು ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. 2009ರಲ್ಲಿ ತೆರೆ ಕಂಡಿದ್ದ ಅತಿದೊಡ್ಡ ಹಿಟ್ ಚಿತ್ರ ಅವತಾರ್ ಮುಂದುವರಿದ ಭಾಗವಾದ ಅವತಾರ್ ದ ವೇ ಆಫ್ ವಾಟರ್ ಕಳೆದ ಶುಕ್ರವಾರ ( ಡಿಸೆಂಬರ್ 16 ) ವಿಶ್ವದಾದ್ಯಂತ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮೊದಲ ಮೂರು ದಿನಗಳ ಓಟವನ್ನು ಪೂರೈಸಿದೆ.
ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 1150 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಬೃಹತ್ ಓಪನಿಂಗ್ ಪಡೆದುಕೊಂಡು 'ಅವೆಂಜರ್ಸ್ ಎಂಡ್ ಗೇಮ್' ಬಳಿಕ ಬಿಡುಗಡೆ ದಿನ ಅತಿಹೆಚ್ಚು ಗಳಿಕೆ ಮಾಡಿದ ಹಾಲಿವುಡ್‌ನ ಎರಡನೇ ಚಿತ್ರ ಎನಿಸಿಕೊಂಡ ಅವತಾರ್ ದ ವೇ ಆಫ್ ವಾಟರ್ ಮೊದಲ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಯಿತು. ಮೊದಲ ಅತಿಹೆಚ್ಚು ಗಳಿಸಿದ ಚಿತ್ರವಾಗದಿದ್ದರೂ ಸಹ ಅವತಾರ್ ದ ವೇ ಆಫ್ ವಾಟರ್ ಗಳಿಕೆ ಮಾತ್ರ ಸಾಮಾನ್ಯವಾಗಿಲ್ಲ. ಮೊದಲ 3 ದಿನಗಳಲ್ಲಿ ಬರೋಬ್ಬರಿ 3600ಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ಗಳಿಸಿದೆ.
ಇನ್ನು ಭಾರತದಲ್ಲಿ ಹಾಲಿವುಡ್ ಚಿತ್ರರಂಗ ತನ್ನ ಬೃಹತ್ ಮಾರುಕಟ್ಟೆ ಹೊಂದಿದ್ದು ಇಲ್ಲಿಯೂ ಸಹ ಹಾಲಿವುಡ್ ಚಿತ್ರಗಳು ಕೋಟ್ಯಂತರ ರೂಪಾಯಿಗಳನ್ನು ಗಳಿಸಿ ಅಬ್ಬರಿಸುತ್ತವೆ. ಅವತಾರ್ ದ ವೇ ಆಫ್ ವಾಟರ್ ಸಹ ಭಾರತದಲ್ಲಿ ಮೊದಲ ದಿನ 58 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿತ್ತು. ಈ ಮೂಲಕ ಭಾರತದಲ್ಲಿ ಅವೆಂಜರ್ಸ್ ಎಂಡ್ ಗೇಮ್ ಬಳಿಕ ಅತಿಹೆಚ್ಚು ಗಳಿಸಿದ ಹಾಲಿವುಡ್ ಚಿತ್ರ ಎನಿಸಿಕೊಂಡ ಅವತಾರ್ ದ ವೇ ಆಫ್ ವಾಟರ್ ಮೊದಲ ವಾರಾಂತ್ಯಕ್ಕೆ ದೇಶದಲ್ಲಿ ಎಷ್ಟು ಗಳಿಸಿದೆ ಹಾಗೂ ಭಾರತದಲ್ಲಿ ಮೊದಲ ವಾರಾಂತ್ಯಕ್ಕೆ ಅತಿಹೆಚ್ಚು ಗಳಿಸಿದ ಟಾಪ್ 5 ಹಾಲಿವುಡ್ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಭಾರತದಲ್ಲಿ ಅತಿಹೆಚ್ಚು ಗಳಿಸಿದ ಟಾಪ್ 5 ಹಾಲಿವುಡ್ ಚಿತ್ರಗಳು
1. ಅವೆಂಜರ್ಸ್ ಎಂಡ್ ಗೇಮ್ : 187 ಕೋಟಿ ಗ್ರಾಸ್
2. ಅವತಾರ್ ದ ವೇ ಆಫ್ ವಾಟರ್: 165 ಕೋಟಿ ಗ್ರಾಸ್ ( ತ್ರೀಡಿ ಚಾರ್ಜಸ್ ಸೇರಿಸಿದರೆ 183 ಕೋಟಿ )
3. ಸ್ಪೈಡರ್ ಮ್ಯಾನ್ ನೋ ವೇ ಹೋಮ್ ( 4 ದಿನಗಳಲ್ಲಿ ): 138 ಕೋಟಿ ಗ್ರಾಸ್
4. ಅವೆಂಜರ್ಸ್ ಇನ್ಫಿನಿಟಿ ವಾರ್ : 115 ಕೋಟಿ ಗ್ರಾಸ್
5. ಡಾಕ್ಟರ್ ಸ್ಟ್ರೇಂಜ್ ಇನ್ ಸ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್ ( 4 ದಿನಗಳಲ್ಲಿ): 96 ಕೋಟಿ ಗ್ರಾಸ್

ಭಾರತದ ಯಾವ ಭಾಗದಲ್ಲಿ ಎಷ್ಟು ಕಲೆಕ್ಷನ್?
ಮೊದಲ 3 ದಿನಗಳಲ್ಲಿ ಅವತಾರ್ ದ ವೇ ಆಫ್ ವಾಟರ್ ಭಾರತದ ಯಾವ ಭಾಗದಲ್ಲಿ ಎಷ್ಟು ಕೋಟಿ ಗಳಿಸಿದೆ ಎಂಬ ಮಾಹಿತಿ ಇಲ್ಲಿದೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣ - 39.41 ಕೋಟಿ ಗ್ರಾಸ್
ತಮಿಳುನಾಡು - 21.23 ಕೋಟಿ ಗ್ರಾಸ್
ಕರ್ನಾಟಕ: 23.30 ಕೋಟಿ ಗ್ರಾಸ್
ಕೇರಳ: 10.16 ಕೋಟಿ ಗ್ರಾಸ್
ದೇಶದ ಉಳಿದ ಭಾಗ: 88.97 ಕೋಟಿ ಗ್ರಾಸ್
ಒಟ್ಟು: 183.12 ಕೋಟಿ ರೂಪಾಯಿ ಗ್ರಾಸ್

ಕರ್ನಾಟಕದಲ್ಲಿ ಮೊದಲ 3 ದಿನ ಗಳಿಸಿದ್ದೆಷ್ಟು?
ಕರ್ನಾಟಕದಲ್ಲಿ ಮೊದಲ 3 ದಿನಗಳ ಪೈಕಿ ಅವತಾರ್ ದ ವೇ ಆಫ್ ವಾಟರ್ ಯಾವ ದಿನ ಎಷ್ಟು ಗಳಿಸಿತು ಎಂಬ ಮಾಹಿತಿ ಇಲ್ಲಿದೆ.
ಮೊದಲ ದಿನ: 7.38 ಕೋಟಿ ರೂಪಾಯಿ ಗ್ರಾಸ್
ಎರಡನೇ ದಿನ: 8.51 ಕೋಟಿ ರೂಪಾಯಿ ಗ್ರಾಸ್
ಮೂರನೇ ದಿನ: 8.01 ಕೋಟಿ ರೂಪಾಯಿ ಗ್ರಾಸ್