'ಟಾಕ್ಸಿಕ್' ಇಂಗ್ಲೀಷ್ ವರ್ಷನ್ ಬಗ್ಗೆ ಹೀಗೊಂದು ಸುದ್ದಿ; ಛೇ ಮತ್ತೆ ಹಳೇ ರಾಗ ಆಯ್ತಲ್ಲ

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಜೂನ್ 4ರಂದು ತೆರೆಗೆ ಬರಲಿದೆ. ಹಾಲಿವುಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ ಟೀಸರ್, ಸಾಂಗ್ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡಿದೆ.

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡ ಜೊತೆಗೆ ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಿದೆ. ಅಮೆರಿಕಾ ಸೇರಿ ಹೊರ ದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ಯಶ್ ಅಬ್ಬರಿಸೋಕೆ ಬರ್ತಿದ್ದಾರೆ. ಇದೊಂದು ಪೀರಿಯಡ್ ಗ್ಯಾಂಗ್‌ಸ್ಟರ್ ಸಿನಿಮಾ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.

Toxic English Release Delay Sparks Debate as Yash Aims for Global Breakthrough

'KGF' ಸರಣಿ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದ ಯಶ್ ಇದೀಗ ಪ್ಯಾನ್ ಇಂಡಿಯಾ ಮಾರ್ಕೆಟ್ ಕಬ್ಜ ಮಾಡಲು ಸಿದ್ಧತೆ ನಡೆಸಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳ ಮೂಲಕ ಭಾರತ ಹಾಗೂ ಪಾಶ್ಚಿಮಾತ್ಯ ಸಿನಿಪ್ರಪಂಚಗಳನ್ನು ಒಂದೆಡೆ ಸೇರಿಸಿ ಪ್ರೇಕ್ಷಕರನ್ನು ರಂಜಿಸುವ ಸಾಹಸ ಮಾಡುತ್ತಿದ್ದಾರೆ. ಹಾಲಿವುಡ್ ಮಂದಿ ಕೂಡ 'ಟಾಕ್ಸಿಕ್' ಟೀಸರ್ ನೋಡಿ ಹುಬ್ಬೇರಿಸಿದ್ದಾರೆ. ಭಾರತೀಯ ಭಾಷೆಯ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ಚಿತ್ರೀಕರಣ ಮಾಡಿರುವುದು ಬಹಳ ವಿರಳ. ಅದರಲ್ಲೂ ಒಂದು ಬಹುಕೋಟಿ ವೆಚ್ಚದ ಕಮರ್ಷಿಯಲ್ ಚಿತ್ರವನ್ನು ಇಂಗ್ಲೀಷ್ ಭಾಷೆಯಲ್ಲಿ ಕಟ್ಟಿಕೊಟ್ಟಿಲ್ಲ. ಆ ಮೂಲಕ ಹೊಸ ಅಧ್ಯಾಯಕ್ಕೆ 'ಟಾಕ್ಸಿಕ್' ಟೀಂ ನಾಂದಿ ಹಾಡಿದೆ.

ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಭಾಗಿ ಆಗಿದ್ದರು. ಈ ವೇಳೆ 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಹಾಲಿವುಡ್ ಮಂದಿಗೂ ನಮ್ಮ ಸಿನಿಮಾ ತಾಖತ್ತು ತೋರಿಸಬೇಕುಎ ಎನ್ನುವ ಕಾರಣಕ್ಕೆ ಏಕಕಾಲದಲ್ಲಿ ಇಂಗ್ಲೀಷ್‌ ಭಾಷೆಯಲ್ಲಿ ಸಿನಿಮಾ ಸೆರೆ ಹಿಡಿದಿರುವುದಾಗಿ ತಿಳಿಸಿದ್ದಾರೆ. ಭಾರತದಲ್ಲಿ ಹಿಟ್ ಆಗಿರುವ ಸಿನಿಮಾಗಳನ್ನು ಬಳಿಕ ಇಂಗ್ಲೀಷ್ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಿರುವ ಉದಾಹರಣೆಯಿದೆ. 'RRR' ಹಾಗೂ 'ಕಾಂತಾರ' ಸೇರಿ ಕೆಲ ಚಿತ್ರಗಳಲ್ಲಿ ಆ ಪ್ರಯತ್ನ ಮಾಡಲಾಗಿತ್ತು. ಆದರೆ ಒಮ್ಮೆಲೆ ಚಿತ್ರೀಕರಣ ನಡೆಸಿ ಬಿಡುಗಡೆ ಮಾಡಿರಲಿಲ್ಲ.

Toxic English Release Delay Sparks Debate as Yash Aims for Global Breakthrough

'ಟಾಕ್ಸಿಕ್' ಇಂಗ್ಲೀಷ್ ವರ್ಷನ್ ರಿಲೀಸ್ ಡೇಟ್ ಬಗ್ಗೆ ಹೊಸ ಸುದ್ದಿ ಹರಿದಾಡ್ತಿದೆ. ಜೂನ್ 4ಕ್ಕೆ ಇಂಗ್ಲೀಷ್ ಭಾಷೆಯಲ್ಲಿ ರಾಯನ ದರ್ಬಾರ್ ನೋಡೊಕೆ ಆಗಲ್ಲ ಎನ್ನಲಾಗ್ತಿದೆ. ಜೂನ್ 3ರಂದೇ ವಿದೇಶಗಳಲ್ಲಿ 'ಟಾಕ್ಸಿಕ್' ಪ್ರೀಮಿಯರ್ ಶೋಗಳು ಶುರುವಾಗಲಿದೆ. ಆದರೆ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಮಾತ್ರ ಅಂದು ಸಿನಿಮಾ ಬಿಡುಗಡೆ ಆಗುತ್ತದೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇತ್ತೀಚೆಗೆ ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಸಂದರ್ಶನ ಮಾಡಿದ್ದ ನಿರೂಪಕಿ ಸಬೀನ್ ಫಹೀಮ್ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎರಡ್ಮೂರು ವರ್ಷಗಳಿಂದ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ. ಮಾರ್ಚ್ 19ಕ್ಕೆ ಬರಬೇಕಿದ ಚಿತ್ರವನ್ನು 3 ತಿಂಗಳು ಮುಂದೂಡಲಾಗಿದೆ. ಇಷ್ಟೆಲ್ಲಾ ಸಮಯ ವ್ಯಯಿಸಿ ಏಕಕಾಲಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಕೂಡ ಸಿನಿಮಾ ಬಿಡುಗಡೆ ಮಾಡದೇ ಇದ್ದರೆ ಹೇಗೆ? ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಏಕಕಾಲಕ್ಕೆ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್‌ನಲ್ಲಿ ಕನ್ನಡ ಸಿನಿಮಾ ಬಿಡುಗಡೆ ಆಗಿ ದಾಖಲೆ ಬರೆಯುತ್ತದೆ ಎಂದುಕೊಂಡರೆ ಮತ್ತೆ ಹಳೇ ರಾಗ ಯಾಕೆ ಎನ್ನುತ್ತಿದ್ದಾರೆ. ಭಾರತೀಯ ಭಾಷೆಗಳಲ್ಲಿ ಸಿನಿಮಾ ತೆರೆಕಂಡು ಹಿಟ್ ಆದ ಬಳಿಕ ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆ ಮಾಡುವ ಲೆಕ್ಕಾಚಾರವೇ ಸರಿಯಲ್ಲ ಎನ್ನುತ್ತಿದ್ದಾರೆ.

ಪ್ರೈಂ ಮೀಡಿಯಾ ಸಂಸ್ಥೆ ಹಾಲಿವುಡ್‌ನಲ್ಲಿ ಭಾರತೀಯ ಭಾಷೆಗಳಲ್ಲಿ 'ಟಾಕ್ಸಿಕ್' ಸಿನಿಮಾ ವಿತರಣೆ ಮಾಡುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇಂಗ್ಲೀಷ್ ವರ್ಷನ್ ವಿತರಣೆ ಹಕ್ಕು ಯಾರ ಪಾಲಾಗುತ್ತದೆ ಎಂದು ಕಾದು ನೋಡಬೇಕಿದೆ.

Read more about: yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X