35ನೇ ವರ್ಷದಲ್ಲಿ ಕೊನೆಯುಸಿರೆಳೆದ ಹಾಲಿವುಡ್‌ನ ಖ್ಯಾತ ನಟಿ ; ‘ದಿ ರಿಂಗ್’ ಸಿನಿಮಾ ಖ್ಯಾತಿಯ ‘ಡೇವೀಗ್ ಚೇಸ್’ ನಿಧನ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು.

ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ. ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ಡೇವಿಗ್ ಚೇಸ್ ಅವರ ಅಕಾಲಿಕ ಸಾವು ಮತ್ತೊಂದು ಉದಾಹರಣೆ.

Tragedy at 35 Lilo amp amp Stitch and The Ring Star Daveigh Chase Passes Away

ಹೌದು, ಡೇವೀಗ್ ಚೇಸ್.. ಇನ್ನು ಬಾಳಿ ಬದುಕಬೇಕಿದ್ದ ಹಾಲಿವುಡ್‌ನ ಪ್ರತಿಭೆ. ಜುಲೈ 24-1990ರಂದು ನೆವಾಡಾದ ಲಾಸ್ ವೇಗಾಸ್‌ನಲ್ಲಿ ಹುಟ್ಟಿದ್ದ ಡೇವೀಗ್‌ ಚೇಸ್‌ಗೆ ಬಾಲ್ಯದಲ್ಲಿಯೇ ಬಣ್ಣದ ಗೀಳು ಹತ್ತಿತ್ತು.

ಬಾಲ್ಯದಿಂದಲೇ ಹಾಡುಗಾರಿಕೆ ಮತ್ತು ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಡೇವೀಗ್ ಚೇಸ್, ಕೇವಲ 7ರ ಹರೆಯದಲ್ಲಿ ಮುಖಕ್ಕೆ ಮೇಕಪ್ ಹಚ್ಚಿದರು. ಜಾಹೀರಾತಿನಲ್ಲಿ ಕಾಣಿಸಿಕೊಂಡರು. 1998ರಲ್ಲಿ ಟಿವಿ ಶೋಗಳ ಮೂಲಕ ಹಲವರ ಕಣ್ಮನ ಸೆಳೆದ ಡೇವೀಗ್ 2002ರ ಹೊತ್ತಿಗೆ ತಮ್ಮ 12ನೇ ವರ್ಷದಲ್ಲಿ ಇಡೀ ಹಾಲಿವುಡ್ ಬೆರಗಾಗುವಂತಹ ಯಶಸ್ಸನ್ನು ಸಾಧಿಸಿದರು.

ಡೇವೀಗ್ ಚೇಸ್ ಅವರ ಖ್ಯಾತ ಸಿನಿಮಾ ಮತ್ತು ಪಾತ್ರ

ಹಾಲಿವುಡ್ ಇತಿಹಾಸದಲ್ಲಿ ಮತ್ತು ಚಿತ್ರ ರಸಿಕರ ಹೃದಯದಲ್ಲಿ ಡೇವೀಗ್ ಚೇಸ್ ಕೇವಲ ಎರಡೇ ಪಾತ್ರಗಳ ಮೂಲಕ ಶಾಶ್ವತ ಸ್ಥಾನ ಪಡೆದಿದ್ದಾರೆ. ಎರಡು ತದ್ವಿರುದ್ದ ಪಾತ್ರಗಳು. ಆ ಪೈಕಿ 2002ರಲ್ಲಿ ಬಂದ ಡಿಸ್ನಿ ಸಂಸ್ಥೆಯ ವಿಶ್ವಪ್ರಸಿದ್ಧ ಲಿಲೋ ಆಂಡ್ ಸ್ಟಿಚ್ ಅನಿಮೇಷನ್ ಚಿತ್ರ ಒಂದು.

ಈ ಚಿತ್ರದಲ್ಲಿ ಹವಾಯ್ ದ್ವೀಪದ ಮುದ್ದಾದ ಹುಡುಗಿ ''ಲಿಲೋ'' ಪಾತ್ರಕ್ಕೆ ಇವರ ಕಂಠ ಕುಣಿದಿತ್ತು. ಇನ್ನು ಅದೇ ವರ್ಷ ಅಂದರೆ 2002ರಲ್ಲಿಯೇ ಬಂದ '' ದಿ ರಿಂಗ್'' ಇವರ ಮತ್ತೊಂದು ಜಗದ್ವಿಖ್ಯಾತ ಚಿತ್ರ.

ಹಾರರ್ ಚಿತ್ರಪ್ರೇಮಿಗಳು ಯಾವತ್ತು ಮರೆಯಲು ಆಗದ ''ದಿ ರಿಂಗ್'' ಚಿತ್ರದಲ್ಲಿ ''ಸಮಾರಾ ಮಾರ್ಗನ್'' ಎಂಬ ಭಯಾನಕ ದೆವ್ವದ ಪಾತ್ರವನ್ನು ನಿರ್ವಹಿಸಿದ್ದವರು ಬೇರೆ ಯಾರು ಅಲ್ಲ. ಬದಲಿಗೆ ಇವರೇ. ಈ ಚಿತ್ರದಲ್ಲಿನ ಇವರ ಅಭಿನಯಕ್ಕೆ 2003ರ ''ಎಂಟಿವಿ ಮೂವಿ ಅವಾರ್ಡ್ಸ್''ನಲ್ಲಿ ''ಬೆಸ್ಟ್ ವಿಲನ್'' ಪ್ರಶಸ್ತಿ ಸಿಕ್ಕಿತ್ತು.

ಇನ್ನು 2001ರಲ್ಲಿ ಆಸ್ಕರ್ ಗೆದ್ದ ಜಪಾನೀಸ್ ಅನಿಮೇಷನ್ ಸಿನಿಮಾ ''ಸ್ಪಿರಿಟೆಡ್ ಅವೇ'' ಯ ಇಂಗ್ಲಿಷ್ ವರ್ಷನ್‌ನಲ್ಲಿ ನಾಯಕಿ ''ಚಿಹಿರೋ'' ಪಾತ್ರಕ್ಕೆ ಧ್ವನಿ ನೀಡಿದ್ದು ಕೂಡ ಇದೇ ಡೇವೀಗ್ ಚೇಸ್. ''ಡೋನಿ ಡಾರ್ಕೊ''.. ''ಬಿಗ್ ಲವ್''.. ಇವರ ಮತ್ತೆರಡು ಮತ್ತು ಪ್ರಮುಖವಾದ ಚಿತ್ರಗಳು.

ಹೀಗೆ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿಯ ಶಿಖರಕ್ಕೇರಿದ್ದ ಡೇವೀಗ್ ಚೇಸ್, ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ವಿವಾದಗಳು ಇವರ ಬೆನ್ನು ಬಿಡಲಿಲ್ಲ. ಮಾದಕ ದ್ರವ್ಯ ಹೊಂದಿರುವ ಆರೋಪ ಸೇರಿ ಕೆಲವು ಅಪರಾಧಗಳಲ್ಲಿ ಇವರ ಹೆಸರು ಕೇಳಿ ಬಂದಿತ್ತು.

ಸಾವಿಗೆ ಕಾರಣವೇನು ..?

ಜೂನ್ 16, 2026 ರಂದು ತಮ್ಮ 35ನೇ ಕಿರಿಯ ವಯಸ್ಸಿನಲ್ಲಿ ಲಾಸ್ ಏಂಜಲೀಸ್‌ನಲ್ಲಿ ಡೇವೀಗ್ ಚೇಸ್ ನಿಧನರಾಗಿದ್ದು, ಅವರ ಮ್ಯಾನೇಜರ್ ಕೂಡ ಆಗಿದ್ದ ಅವರ ಬಾಯ್‌ಫ್ರೆಂಡ್ ಜಾನ್ ರ್‍ಯಾನ್ ಕೆಲವು ದಿನಗಳ ಹಿಂದೆ ತೀವ್ರ ಅಪೌಷ್ಟಿಕತೆಯಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೆನಿಂಜೈಟಿಸ್‌ನಿಂದ ಉಂಟಾದ ಗಂಭೀರ ತೊಂದರೆಗಳು ಹಾಗೂ ರಕ್ತದ ಸೋಂಕು (ಸೆಪ್ಸಿಸ್) ಕಾಣಿಸಿಕೊಂಡಿದ್ದು, ಅಂತಿಮವಾಗಿ ಅವರು ಸಾವು ಬದುಕಿನ ಹೋರಾಟದಲ್ಲಿ ಸೋತಿದ್ಧಾರೆ ಎಂದು ಹೇಳಿದ್ಧಾರೆ.

ಸೋಂಕು ತೀವ್ರಗೊಂಡ ಕಾರಣ ಅವರ ದೇಹದ ಪ್ರಮುಖ ಅಂಗಾಂಗಗಳು ಒಂದೊಂದಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದವು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎಂದು ಕಣ್ಣೀರಾಗಿದ್ಧಾರೆ. ಡೇವೀಗ್ ಚೇಸ್ ಅವರ ನಿಧನಕ್ಕೆ ಹಾಲಿವುಡ್‌ ಚಿತ್ರರಂಗ ಕಂಬನಿ ಮಿಡಿದಿದೆ.

English summary
Tragic loss in Hollywood: Daveigh Chase, the beloved voice of Lilo and star of 'The Ring,' has passed away at 35. Read more about her iconic career.
Read more about: death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X