28ರ ಹರೆಯದಲ್ಲಿ ಕೊನೆಯುಸಿರೆಳೆದ ಖ್ಯಾತ ನೀಲಿ ತಾರೆ, ಆರ್ಥಿಕ ಸಹಾಯ ಮಾಡುವಂತೆ ಅಂಗಲಾಚಿದ ಕುಟುಂಬ..!
ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ ಇಡೀ ಸಮಾಜವನ್ನೇ ಹಾಳು ಮಾಡುತ್ತೆ. ಬದಲಾದ ಈ ಕಾಲದಲ್ಲಿ ಶೇಕಡಾ 70 ರಷ್ಟು ಜನ ಯುವ ಜನಾಂಗ ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ. ಮಾದಕ ಮಾಯಾಜಾಲದಲ್ಲಿ ಸಿಲುಕಿ ಮಾನಸಿಕವಾಗಿ ದೈಹಿಕವಾಗಿ ನೊಂದು ಬೆಂದು ಹೋಗುವುದಲ್ಲದೇ ಅನೇಕರು ತಮ್ಮ ಬದುಕಿಗೆ ತಾವೇ ತಮ್ಮ ಕೈಯಾರೆ ಕೊಳ್ಳಿ ಇಡುತ್ತಿದ್ದಾರೆ. ತಮ್ಮ ಸೌಂದರ್ಯದಿಂದ ಪಡ್ಡೆ ಹುಡುಗರ ಹೃದಯ ಗೆದ್ದಿದ್ದ...
ಕೈಲಿ ಪೇಜ್ ಕೂಡ ಈ ಮಾದಕ ಮಾಯಾಜಾಲದಲ್ಲಿ ಸಿಲುಕಿ ದುರಂತ ಅಂತ್ಯ ಕಂಡರಾ ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ.ಹೌದು.. ಕೈಲಿ ಪೇಜ್ .. ಈ ಹೆಸರಿಗೆ ಸಮ್ಮೋಹಕವಾದ ಸೆಳೆತ ಇತ್ತು.ಅದಕ್ಕೆ ಪ್ರಮುಖವಾದ ಕಾರಣ ನೀಲಿ ನೆರಳು.

2017ರಲ್ಲಿ ನೆಟ್‌ಫ್ಲಿಕ್ಸ್‌ನ 'ಹಾಟ್ ಗರ್ಲ್ಸ್ ವಾಟೆಂಡ್' ಎಂಬ ಡ್ಯಾಕುಮೆಂಟರಿ ಸೀರಿಸ್‌ನಲ್ಲಿ ಕಾಣಿಸಿಕೊಂಡ ಕೈಲಿ ಈ ಡಾಕ್ಯು ಸೀರಿಸ್ ಮೂಲಕ ಅನೇಕರ ಹೃದಯಕ್ಕೆ ಹತ್ತಿರವಾಗಿದ್ದರು. ತಮ್ಮ ಬದುಕಿನ ಅನೇಕ ಕಥೆಗಳನ್ನು ಹಂಚಿಕೊಂಡಿದ್ದರು.
ಇದಕ್ಕೂ ಮುನ್ನ ಅಂದರೆ 2016ರಲ್ಲಿಯೇ ನೀಲಿ ಪ್ರಪಂಚಕ್ಕೆ ಬಂದಿದ್ದ ಕೈಲಿ ಸುಮಾರು 200ಕ್ಕೂ ಅಧಿಕ ಅಡಲ್ಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇಂಥಾ ಕೈಲಿ ಪೇಜ್ ತಮ್ಮ 28ನೇ ಪ್ರಾಯದಲ್ಲಿ ಕೊನೆಯುಸಿರೆಳೆದಿದ್ದಾರೆ. ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ 'ನ್ಯೂ ಯಾರ್ಕ್ ಪೋಸ್ಟ್' ವರದಿಯನ್ನು ಮಾಡಿದೆ.
ಕೈಲಿ ಪೇಜ್ ಅವರ ಅಕಾಲಿಕ ನಿಧನಕ್ಕೆ ಕಾರಣವೇನು ಎನ್ನುವುದು ಇನ್ನು ಬಹಿರಂಗವಾಗದಿದ್ದರೂ ಅತಿಯಾದ ಡ್ರಗ್ಸ್ ಸೇವನೆಯಿಂದ ಕೈಲಿ ಇಹಲೋಕ ತ್ಯಜಿಸಿರಬಹುದು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇದರ ನಡುವೆ ಕೊಲೆಯಾಗಿರಬಹುದಾದ ಶಂಕೆಯನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕೈಲಿ 200ಕ್ಕೂ ಅಧಿಕ ಬ್ಲೂ ಫಿಲ್ಮ್‌ಗಳಲ್ಲಿ ಅಭಿನಯಿಸಿದ್ದರೂ ಕೂಡ ಕೈಲಿ ಕುಟುಂಬ ಆರ್ಥಿಕ ಸಹಾಯ ಮಾಡುವಂತೆ ಅಂಗಲಾಚಿದೆ. ಕೈಲಿ ಅವರ ಮೃತ ದೇಹವನ್ನು ಮಿಡ್ ವೆಸ್ಟ್‌ಗೆ ಸಾಗಿಸಲು ಮತ್ತು ಅಂತ್ಯಸಂಸ್ಕಾರಕ್ಕೆ ಹಣ ನೀಡಿ ಎಂದು ಕುಟುಂಬ ವರ್ಗ 'ಗೋ ಫಂಡ್ ಮಿ' {Go Fund Me } ಈ ಮೂಲಕ ಅನೇಕರಲ್ಲಿ ಮನವಿಯನ್ನು ಮಾಡಿದೆ. ಕೈಲಿ ಕುಟುಂಬದ ಈ ನಡೆ ಸದ್ಯ ಅನೇಕರ ಅಚ್ಚರಿಗೆ ಕಾರಣವಾಗಿದೆ. ಅನೇಕರು ಆರ್ಥಿಕ ಸಹಾಯವನ್ನು ಮಾಡುತ್ತಿದ್ದಾರೆ.
ಇನ್ನು ಕೈಲಿ ತಮ್ಮ ಜೀವಿತಾವಧಿಯಲ್ಲಿ ಬ್ರೇಜರ್ಸ್ ನಿರ್ಮಾಣ ಸಂಸ್ಥೆಯ ಜೊತೆ ಕೆಲಸ ಮಾಡಿದ್ದರು. ಈ ಸಂಸ್ಥೆ ನಿರ್ಮಾಣದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆ ಕೈಲಿ ಅವರ ನಿಧನದ ಸುದ್ದಿಯಿಂದ ಆಘಾತಗೊಂಡಿರುವ ಬ್ರೇಜರ್ಸ್ ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದೆ. ಕೈಲಿ ಅವರ ನಗು ಮತ್ತು ಅವರ ಕೆಲಸ ಸದಾ ಕಾಲ ನಮ್ಮ ನೆನಪಿನಲ್ಲಿರುತ್ತೆ ಎಂದು ಹೇಳಿದೆ.
ಇನ್ನುಳಿದಂತೆ ಕಳೆದ ವರ್ಷ ನೀಲಿ ಪ್ರಪಂಚದ ಮತ್ತೊಬ್ಬ ನಟಿ ಥೈನಾ ಫೀಲ್ಡ್ಸ್ ಕೂಡ ಇದೇ ರೀತಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೇವಲ 24 ವರ್ಷ ವಯಸ್ಸಾಗಿತ್ತು. ಪೋ*ರ್ನ್ ಉದ್ಯಮದಲ್ಲಿನ ದೌರ್ಜನ್ಯದ ಕುರಿತು ಮಾತನಾಡಿ ಒಂದು ತಿಂಗಳಿನಲ್ಲಿಯೇ ಥೈನಾ ಸಾವನ್ನಪ್ಪಿದ್ದು ಹಲವು ಅನುಮಾಗಳಿಗೆ ಎಡೆ ಮಾಡಿ ಕೊಟ್ಟಿತ್ತು.
ಇದಕ್ಕೂ ಮುನ್ನ 2024ರ ಮಾರ್ಚ್ ನಲ್ಲಿ ಸೋಫಿಯಾ ಲಿಯೋನ್ ಅವರ ಶವ ಅವರ ಮೃತ ದೇಹ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು. ಈ ವಿಷಯವನ್ನು ಆಕೆಯ ದತ್ತು ತಂದೆ ಮೈಕ್ ರೊಮೆರೋ ಬಹಿರಂಗಗೊಳಿಸಿದ್ದರು . ಇನ್ನೊಂದು ಕಡೆ ಸೋಫಿಯಾಗೆ ಪಾರ್ಶ್ವವಾಯುಗೆ ಒಳಗಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿತ್ತು. ಸದ್ಯ ಕೈಲೀ ಪೇಜ್ ಅವರ ಸಾವಿನ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಕೈಲಿಯ ಸಾವಿಗೆ ಕಾರಣವೇನು ಎನ್ನುವುದು ಇನ್ನು ಬಹಿರಂಗವಾಗಬೇಕಿದೆ.
The Brazzers team is deeply saddened to learn of Kylie Page’s passing.
— Brazzers (@Brazzers) June 26, 2025
Kylie will be remembered for her laughter, kindness and bringing light wherever she went. We extend our heartfelt condolences to Kylie’s family, friends, and fans during this difficult time. 🤍


Click it and Unblock the Notifications











