ಜಾಹೀರಾತಿಗಾಗಿ ಮೇಲುಡುಗೆ ಕಳಚಿದ ಮಡೋನ್ನಾ

ಮಡೋನ್ನಾರ ವಯಸ್ಸು 54 ವರ್ಷಗಳಾಗಿದ್ದರೂ ಈ ಜಾಹೀರಾತಿನಲ್ಲಿ ಮಾತ್ರ ಅವರು ಇನ್ನೂ ಹರೆಯದ ಚೆಲುವೆಯ ತರಹ ಕಾಣಿಸಿಕೊಂಡಿರುವುದು ವಿಶೇಷ. "Truth or Dare by Madonna" ಎಂಬ ಪರಿಮಳ ದ್ರವ್ಯಕ್ಕಾಗಿ ಅವರು ಬೆತ್ತಲಾಗಿದ್ದಾರೆ.
ಸೆಂಟ್ ಬಾಟಲ್, ಅದರ ಪಕ್ಕದಲ್ಲೇ ಎರಡೂ ಕೈಗಳನ್ನು ತಲೆಹಿಂದಕ್ಕೆ ಟ್ಟುಕೊಂಡು ಭಂಗಿಯಲ್ಲಿ ಮಡೋನ್ನಾ ನಿಂತಿದ್ದಾರೆ. ಎದೆಯ ಭಾಗದ ಬಳಿ Naked ಎಂಬ ಕಪ್ಪುಪಟ್ಟಿ. ಈ ಜಾಹೀರಾತಿನಲ್ಲಿ ತಮ್ಮ ಅಸಲಿ ವಯಸ್ಸನ್ನು ಮರೆಮಾಚಿ ಹದಿಹರೆಯದ ಹುಡುಗಿ ತರಹ ಮೇಕಪ್ ಮಾಡಿಕೊಂಡಿದ್ದಾರೆ.
ಮಡೋನ್ನಾ ಇಷ್ಟೆಲ್ಲಾ ಕಷ್ಟಪಟ್ಟು ಮೇಕಪ್ ಮಾಡಿಕೊಂಡು ಹುಡುಗಿ ತರಹ ಪೋಸು ನೀಡಿದ್ದರೂ ಅವರ ಮುಖದಲ್ಲಿನ ನೆರಿಗೆಗಳು ಮಾತ್ರ ಅವರ ಅಸಲಿ ವಯಸ್ಸನ್ನು ಬಹಿರಂಗಪಡಿಸುತ್ತಿವೆ. ಆದರೂ ಮಡೋನ್ನಾ ಮಾತ್ರ ತಾನಿನ್ನೂ ನಿಂಬೆಹಣ್ಣಿನಂತಹ ಹುಡುಗಿ ಎಂದು ತಿಳಿದಂತಿದೆ.
ಈ ಹಿಂದೊಮ್ಮೆ 'ಡಬ್ಲ್ಯು' ನಿಯತಕಾಲಿಕೆಗಾಗಿ ಮಡೋನ್ನಾ ಬೆತ್ತಲಾಗಿದ್ದರು. ಆಗ ಅವರ ವಯಸ್ಸು 50 ವರ್ಷ. ಮೇಕಪ್ ಇಲ್ಲದ, ವಿಗ್ ಧರಿಸಿರುವ, ಪಾರದರ್ಶಕ ಕಪ್ಪು ನಿಕ್ಕರ್, ಮೈಬಣ್ಣದ ಬ್ರಾ ತೊಟ್ಟು ಸುಪ್ಪತ್ತಿಗೆ ಮೇಲೆ ಕುಳಿತ ಭಂಗಿಯಲ್ಲಿ ಮಡೋನ್ನಾ ದರ್ಶನ ನೀಡಿದ್ದರು. (ಏಜೆನ್ಸೀಸ್)


Click it and Unblock the Notifications











