twitter
    For Quick Alerts
    ALLOW NOTIFICATIONS  
    For Daily Alerts

    ಮಿಸ್ ಮಾಡದೇ ನೋಡಬೇಕಾದ 2014ರ ಚಿತ್ರಗಳು

    By ಜೇಮ್ಸ್ ಮಾರ್ಟಿನ್
    |

    ಹಾಲಿವುಡ್ ನಲ್ಲಿ 2014ರಲ್ಲಿ ವೈವಿಧ್ಯಮಯ ಚಿತ್ರಗಳನ್ನು ಪ್ರೇಕ್ಷಕರಿಗೆ ಕಾಣುವ ಸೌಭಾಗ್ಯ ಸಿಕ್ಕಿದ್ದು ವಿಶೇಷ. ಇಂಟರ್ ಸ್ಟೆಲ್ಲರ್, ಹಂಗರ್ ಗೇಮ್ಸ್, ಸ್ಪೈಡರ್ ಮ್ಯಾನ್, ಎಕ್ಸ್ ಮೆನ್, ಪ್ಲಾನೆಟ್ ಆಫ್ ಏಪ್ಸ್, ಅನಾಬೆಲ್ ನಿರೀಕ್ಷಿತ ಯಶಸ್ಸಿನ ಜೊತೆಗೆ ಬಾಯ್ ಹುಡ್, ಗಾನ್ ಗರ್ಲ್ಸ್, ಹಾಬಿಟ್, ಎಕ್ಸೊಡಸ್ ಚಿತ್ರಗಳು ಕೂಡಾ ಸದ್ದು ಮಾಡಿದವು.

    ಹಲವು ಕಾದಂಬರಿ ಆಧಾರಿತ ಚಿತ್ರಗಳು ಯಶಸ್ಸಿನ ಹಾದಿ ಹಿಡಿದಿರುವುದು ಹಾಲಿವುಡ್ ನಲ್ಲಿ ಈ ವರ್ಷದ ಹೆಗ್ಗಳಿಕೆ. ಸಾಹಸ, ಪ್ರಣಯ, ವೈಜ್ಞಾನಿಕ ಚಿತ್ರಗಳ ನಡುವೆ ಕೆಲವೇ ಕೆಲವು ಹಾಸ್ಯಭರಿತ ಚಿತ್ರಗಳು ಹೀಗೆ ಬಂದು ಹಾಗೆ ಹೋದವು. ಹಾರರ್ ಚಿತ್ರಗಳು, ಸರಣಿ ಚಿತ್ರಗಳು ಸದ್ದು ಮಾಡಿದ್ದೇ ಹೆಚ್ಚು. [2014ರ ಟಾಪ್ ಕಾಮೋದ್ರೇಕ ಸಿನ್ಮಾಗಳು]

    2014ರಲ್ಲಿ ಹೆಚ್ಚುಗಳಿಕೆ ಹಾಗೂ ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಟ್ರಾನ್ಸ್ ಫಾರ್ಮರ್ಸ್, ಎಕ್ಸ್ ಮೆನ್, ಹಂಗರ್ ಗೇಮ್ಸ್, ಸ್ಪೈಡರ್ ಮ್ಯಾನ್ ಹೀಗೆ ಸರಣಿ ಚಿತ್ರಗಳೇ ತುಂಬಿವೆ. ಜೊತೆಗೆ ಗಳಿಕೆ ಟಾಪ್ ಟೆನ್ ನಿಂದ ಹೊರಗಿದ್ದರು ಗಾನ್ ಗರ್ಲ್, ಬಾಯ್ ಹುಡ್, ಲೂಸಿ ಚಿತ್ರಗಳು ಮಿಸ್ ಮಾಡದೇ ನೋಡಿ ಕೆಟಗೆರಿಯಲ್ಲಿ ಸೇರಿಸಲೇಬೇಕಾಗಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

    2014ರಲ್ಲಿ ತೆರೆಕಂಡ ಚಿತ್ರಗಳ ಪೈಕಿ ಮಿಸ್ ಮಾಡದೇ ನೋಡಬೇಕಾದ ಟಾಪ್ 20 ಗಳ ಪಟ್ಟಿ ಇಲ್ಲಿದೆ ತಪ್ಪದೇ ನೋಡಿ...

    Maleficent/Malefique

    Maleficent/Malefique

    ವಾಲ್ಟ್ ಡಿಸ್ನಿ ನಿರ್ಮಾಣದ ಫ್ಯಾಂಟಸಿ ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದಲ್ಲದೆ ಏಂಜಲೀನಾ ಜೋಲಿ ಅಭಿನಯದಿಂದ ಹೆಚ್ಚಿನ ಜನಪ್ರಿಯತೆ ಗಳಿಸಿತು.

    ಟ್ರಾನ್ಸ್ ಫಾರ್ಮರ್ಸ್: ಏಜ್ ಆಫ್ ಎಕ್ ಸ್ಟಿಂಷನ್

    ಟ್ರಾನ್ಸ್ ಫಾರ್ಮರ್ಸ್: ಏಜ್ ಆಫ್ ಎಕ್ ಸ್ಟಿಂಷನ್

    ಸೈ ಫೈ ಕಥಾನಕ ಹೊಂದಿರುವ ಸರಣಿಯ ಈ ಚಿತ್ರ ಅತಿಹೆಚ್ಚು ಗಳಿಕೆ ಹೊಂದಿರುವ ಚಿತ್ರಗಳ ಪೈಕಿ($1,087,404,499) ಅಗ್ರಸ್ಥಾನ ಕಾಯ್ದುಕೊಂಡಿದೆ. ಮಾರ್ಕ್ ವಾಲ್ಬರ್ಗ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಮೈಕಲ್ ಬೇ ನಿರ್ದೇಶಿಸಿದ್ದಾರೆ.

    ಎಕ್ಸ್ ಮೆನ್ ಸರಣಿಯ ಡೇಸ್ ಆಫ್ ಫ್ಯೂಚರ್ ಪಾಸ್ಟ್

    ಎಕ್ಸ್ ಮೆನ್ ಸರಣಿಯ ಡೇಸ್ ಆಫ್ ಫ್ಯೂಚರ್ ಪಾಸ್ಟ್

    ವೋಲ್ವರೈನ್ ಅಥವಾ ಹ್ಯೂ ಜಾಕ್ಮನ್ ಅಭಿಮಾನಿಗಳಿಗೆ ರಸದೌತಣ ನೀಡಿದ ಈ ಚಿತ್ರ ಸೂಪರ್ ಹೀರೋ ಮಾದರಿ ಸಾಹಸ ಸರಣಿಯ ಚಿತ್ರದಲ್ಲಿ ಆಸ್ಕರ್ ವಿಜೇತೆ ಜೆನ್ನಿಫರ್ ಲಾರೆನ್ಸ್ ಕೂಡಾ ಇದ್ದು, ಬಾಕ್ಸಾಫೀಸ್ ನಲ್ಲೂ ಉತ್ತಮ ಗಳಿಕೆ ಹೊಂದಿದೆ.

    ದಿ ಇಮಿಟೇಷನ್ ಗೇಮ್

    ದಿ ಇಮಿಟೇಷನ್ ಗೇಮ್

    2014ರಲ್ಲಿ ಬಹು ಚರ್ಚೆಗೊಳಲ್ಪಟ್ಟ ಈ ಚಿತ್ರ ಗಣಿತಜ್ಞ ಅಲಾನ್ ಟ್ಯೂರಿಂಗ್ ಅವರ ಜೀವನ ಕಥಾನಕ ಆಧಾರಿಸಿದೆ. 2015ರ ಆಸ್ಕರ್ ರೇಸಿನಲ್ಲಿ ಉತ್ತಮ ಚಿತ್ರ ಹಾಗೂ ಉತ್ತಮ ನಟ ಕೆಟಗೆರಿಯಲ್ಲಿ ಬೆನೆಡಿಕ್ಟ್ ಸೇರುವುದು ಗ್ಯಾರಂಟಿ ಎಂಬ ಗಾಳಿಸುದ್ದಿ ಹಬ್ಬಿದೆ.

    ಬ್ರಾಡ್ ಪಿಟ್ ಫ್ಯೂರಿ

    ಬ್ರಾಡ್ ಪಿಟ್ ಫ್ಯೂರಿ

    ಬ್ರಾಡ್ ಪಿಟ್ ಅಭಿನಯದ ಯುದ್ಧ ಕಥಾನಕ ಸಾಹಸ ಭರಿತ ಚಿತ್ರ ಫ್ಯೂರಿ ಎರಡನೇ ಮಹಾಯುದ್ಧ ಕಥೆಯನ್ನು ಹೊಂದಿದೆ.

    ದಿ ಥಿಯರಿ ಆಫ್ ಎವರಿಥಿಂಗ್ :ಆತ್ಮಕಥನ

    ದಿ ಥಿಯರಿ ಆಫ್ ಎವರಿಥಿಂಗ್ :ಆತ್ಮಕಥನ

    ವಿಶ್ವಖ್ಯಾತ ಖಭೌತ ವಿಜ್ಞಾನಿ ಸ್ಟೀಫಂಗ್ ಹಾಕಿಂಗ್ ಅವರ ಜೀವನ ಆಧಾರಿತ ಚಿತ್ರ ದಿ ಥಿಯರ್ ಆಫ್ ಎವರಿಥಿಂಗ್ ಜನರ ಮೆಚ್ಚುಗೆ ಗಳಿಸಿತು. ಮುಖ್ಯ ಪಾತ್ರಧಾರಿ ಎಡ್ಡಿ ಅಭಿನಯ ಅವರನ್ನು ಆಸ್ಕರ್ ರೇಸಿನಲ್ಲಿ ನಿಲ್ಲಿಸುವ ಸಾಧ್ಯತೆಗಳಿವೆ.

    ಇಂಟರ್ ಸ್ಟೆಲ್ಲರ್

    ಇಂಟರ್ ಸ್ಟೆಲ್ಲರ್

    ಆಸ್ಕರ್ ರೇಸಿನಲ್ಲಿ ಬೇರೆ ಚಿತ್ರಗಳಿಗೆ ಒಳ್ಳೆ ಪೈಪೋಟಿ ನೀಡಬಲ್ಲ ಇಂಟರ್ ಸ್ಟೆಲ್ಲರ್ ಚಿತ್ರ $624,548,000 ಗಳಿಕೆಯೊಂದಿಗೆ ಟಾಪ್ 8ನೇ ಸ್ಥಾನದಲ್ಲಿದ್ದರೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ತುಂಬಾ ಟೆಕ್ನಿಕಲ್ ಎನಿಸಿಕೊಂಡ ಈ ಚಿತ್ರದಲ್ಲಿ ಮ್ಯಾಥ್ಯೂ ಮೆಕ್ ಕೊನಾಗೆ ಹಾಗೂ ಆನೆ ಹ್ಯಾಥವೇ ಮುಖ್ಯಭೂಮಿಕೆಯಲ್ಲಿದ್ದರೆ ಕ್ರಿಸ್ಟೋಫರ್ ನೋಲಾನ್ ಅದ್ಭುತ ನಿರ್ದೇಶನವಿದೆ.

    ಹಂಗರ್ ಗೇಮ್ಸ್ ಮಾಕಿಂಗ್ಜೇ ಭಾಗ 1

    ಹಂಗರ್ ಗೇಮ್ಸ್ ಮಾಕಿಂಗ್ಜೇ ಭಾಗ 1

    ಜೆನ್ನಿಫರ್ ಲಾರೆನ್ಸ್ ಅಭಿನಯದ ಈ ಚಿತ್ರ ಮಾಕಿಂಗ್ಜೇ ಸರಣಿಯ ಮೂರನೇ ಭಾಗವಾಗಿದೆ. ಮೊದಲೆರಡು ಚಿತ್ರಗಳು ಕಾದಂಬರಿ ಆಧಾರಿತವಾಗಿದ್ದರೆ, ಮೂರನೇ ಚಿತ್ರಕ್ಕೆ ಸುಜಾನ್ ಕಾಲಿನ್ಸ್ ಕಥೆ ಒದಗಿಸಿದ್ದರು. ಟಾಪ್ 10 ಗಳಿಕೆಯಲ್ಲೂ ಸ್ಥಾನ ಪಡೆದ ಈ ಚಿತ್ರ ಜನಮನ್ನಣೆಯನ್ನು ಗಳಿಸಿದೆ.

    ಗಾನ್ ಗರ್ಲ್

    ಗಾನ್ ಗರ್ಲ್

    ಬೆನ್ ಅಫ್ಲೆಕ್ ಹಾಗೂ ಮಾಜಿ ಬಾಂಡ್ ಗರ್ಲ್ ರೋಸ ಮಂಡ್ ಪೈಕ್ ನಟನೆಯ ಗಾನ್ ಗರ್ಲ್ ಥ್ರಿಲ್ಲರ್ ಚಿತ್ರ ಕೂಡಾ ಕಾದಂಬರಿ ಆಧಾರಿತ ಚಿತ್ರವಾಗಿದೆ. ಗಿಲಿಯನ್ ಫಿನ್ ಬರೆದ ಅದೇ ಹೆಸರಿನ ಕಾದಂಬರಿಯನ್ನು ಸಮರ್ಥವಾಗಿ ತೆರೆಗೆ ಅಳವಡಿಸಲಾಗಿದೆ. ಆಸ್ಕರ್ ರೇಸಿಗೆ ಹೋಗುವ ಎಲ್ಲಾ ಸಾಮರ್ಥ್ಯ ಈ ಚಿತ್ರಕ್ಕಿದೆ.

    ಬಾಯ್ ಹುಡ್

    ಬಾಯ್ ಹುಡ್

    ಮೇಸನ್ ಎಂಬವನ ಬಾಲ್ಯ, ಯೌವನ 5 ರಿಂದ 18 ವರ್ಷ ವಯಸ್ಸಿನ ಬದುಕಿನ ಕಥಾನಕ ಹೃದಯಸ್ಪರ್ಶಿಯಾಗಿ ಎಲ್ಲರ ಮನ ಮುಟ್ಟಿದೆ. ಹಾಲಿವುಡ್ ಇತಿಹಾಸದಲ್ಲಿ ಕ್ಲಾಸಿಕ್ ಚಿತ್ರಗಳ ಪಟ್ಟಿಗೆ ಈ ಚಿತ್ರ ಸೇರುವುದು ಖಚಿತ ಎನ್ನಲಾಗಿದೆ.

    ಬರ್ಡ್ ಮ್ಯಾನ್

    ಬರ್ಡ್ ಮ್ಯಾನ್

    ಮೈಕಲ್ ಕೀಟನ್ ಮುಖ್ಯ ಪಾತ್ರದಲ್ಲಿರುವ ಬರ್ಡ್ ಮ್ಯಾನ್ ಚಿತ್ರ ಅಣಕು ಚಿತ್ರವಾಗಿದ್ದು, ಹಾಸ್ಯಭರಿತ ನಿರೂಪಣೆಯೊಂದಿಗೆ ಸಿನಿಬದುಕಿನ ಕಹಿಸತ್ಯವನ್ನು ತೆರೆದಿಡುತ್ತದೆ.

    ವಿಪ್ಲಾಶ್

    ವಿಪ್ಲಾಶ್

    ಜೆ.ಕೆ ಸಿಮನ್ಸ್ ಹಾಗೂ ಮಿಲ್ಸ್ ಟೆಲ್ಲರ್ ನಟನೆಯ ಜಾಜ್ ಡ್ರಮ್ಮರ್ ಕಥಾನಕ ಹೊಂದಿರುವ Whiplash ಚಿತ್ರಕ್ಕೆ ಡೇಮಿಯನ್ ಛಾಜೆಲೆ ನಿರ್ದೇಶನವಿದೆ.

    ಅನ್ ಬ್ರೋಕನ್

    ಅನ್ ಬ್ರೋಕನ್

    ನಟಿ ಏಂಜಲೀನಾ ಜೋಲಿ ನಿರ್ದೇಶನದ ಒಲಿಂಪಿಯನ್, ಯೋಧ ಲೂಯಿಸ್ ಝಾಂಪೆರಿನಿ ಆತ್ಮಕಥಾನಕವಾಗಿದೆ. ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ.

    ಲೂಸಿ

    ಲೂಸಿ

    ಸ್ಕಾರ್ಲೆಟ್ ಜಾನ್ಸನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲೂಸಿ ಚಿತ್ರಕ್ಕೆ ಲೂಕ್ ಬೆಸನ್ ನಿರ್ದೇಶನವಿದೆ. ತೈವಾನ್ ನಲ್ಲಿ ನೆಲೆಸಿದ್ದ 25ರ ಹರೆಯ ಅಮೆರಿಕನ್ ಮಹಿಳೆ ಡ್ರಗ್ಸ್ ಜಾಲದಲ್ಲಿ ಸಿಲುಕಿ ಪಾರಾಗುವ ಚಿತ್ರ ಇದಾಗಿದೆ.

    ದಿ ಇಮ್ಮಿಗ್ರಾಂಟ್

    ದಿ ಇಮ್ಮಿಗ್ರಾಂಟ್

    ನ್ಯೂಯಾರ್ಕ್ ನ ವಿಮರ್ಶಕರ ಪ್ರಶಸ್ತಿ ಗಳಿಸಿದ ಮೇಲೆ ಈ ಚಿತ್ರದ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ಚರ್ಚೆ ಶುರುವಾಯಿತು. ಜೇಮ್ಸ್ ಗ್ರೇ ನಿರ್ದೇಶನದ ಈ ಚಿತ್ರದಲ್ಲಿ ಪೋಲ್ಯಾಂಡ್ ನ ಯುದ್ಧ ಮುಗಿದ ನಂತರದ ಬದುಕಿನ ಚಿತ್ರಣ ಸಿಗುತ್ತದೆ.

    ಅನ್ನಾಬೆಲ್ಲೆ

    ಅನ್ನಾಬೆಲ್ಲೆ

    ಹಾರರ್ ಸರಣಿ ಚಿತ್ರ 2013ರ ದಿ ಕಾಂಜ್ಯೂರಿಂಗ್ ನ ಮುಂದಿನ ಭಾಗವಾದ ಅನ್ನಾಬೆಲ್ಲೆ ಕಥೆ ಜನರ ಮೆಚ್ಚುಗೆ ಗಳಿಸಿತು.

    ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್

    ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್

    ರೋಮ್ ಕಾಮ್ ಲವರ್ಸ್ ಚಿತ್ರ ಹೃದಯಸ್ಪರ್ಶಿ ಕಥಾನಕ ಹೊಂದಿದ್ದು, ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.

    ಕ್ಯಾಪ್ಟನ್ ಅಮೆರಿಕ: ದಿ ವಿಂಟರ್ ಸೋಡ್ಜರ್

    ಕ್ಯಾಪ್ಟನ್ ಅಮೆರಿಕ: ದಿ ವಿಂಟರ್ ಸೋಡ್ಜರ್

    ಸೂಪರ್ ಹೀರೋ ಮಾದರಿ ಚಿತ್ರ ಕ್ಯಾಪ್ಟನ್ ಅಮೆರಿಕದ ಮುಂದುವರೆದ ಭಾಗವಾಗಿದ್ದು, ವಿಶ್ವದೆಲ್ಲೆಡೆ ಉತ್ತಮ ಗಳಿಕೆ ಹೊಂದಿತು

    ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ

    ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ

    ಸೂಪರ್ ಹೀರೋ ಸರಣಿಯ ಮತ್ತೊಂದು ಚಿತ್ರ ಇದಾಗಿದ್ದು, 2014ರ ತೆರೆ ಕಂಡ ಚಿತ್ರಗಳಲ್ಲಿ ಪೈಕಿ ನೋಡಲೇಬೇಕಾದ ಚಿತ್ರ ಇದಾಗಿದೆ.

    ಟೀನೇಜ್ ಮುಟ್ಯಾಂಟ್ ನಿಂಜಾ ಟರ್ಟಲ್ಸ್

    ಟೀನೇಜ್ ಮುಟ್ಯಾಂಟ್ ನಿಂಜಾ ಟರ್ಟಲ್ಸ್

    ವೈಜ್ಞಾನಿಕ ಸಾಹಸಭರಿತ ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದ್ದು ಜನ ಮೆಚ್ಚುಗೆ ಗಳಿಸಿತು.

    English summary
    2014 is coming to an end, so it is time to wind up the year's best movies which won our hearts and made us watch it over and over again.Some of the best movies of 2014 includes Interstellar which is too technical, but the presentation and performances have won millions of hearts.
    Monday, December 22, 2014, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X