twitter
    For Quick Alerts
    ALLOW NOTIFICATIONS  
    For Daily Alerts

    ಪ್ರವಾದಿ ಕುರಿತಾದ ಇರಾನ್ ಚಿತ್ರ: ಭಾರತದಲ್ಲಿ ಬಿಡುಗಡೆಗೆ ವಿರೋಧ

    |

    ಇರಾನಿನ ನಿರ್ದೇಶಕ ಮಾಜಿದ್ ಮಜಿದಿ ನಿರ್ದೇಶನದ ವಿವಾದಾತ್ಮಕ ಚಿತ್ರ 'ಮುಹಮ್ಮದ್: ದಿ ಮೆಸ್ಸೆಂಜರ್ ಆಫ್ ಗಾಡ್' ಮತ್ತೆ ಸುದ್ದಿಯಲ್ಲಿದೆ. 2015ರಲ್ಲಿ ಬಿಡುಗಡೆಯಾಡಿದ್ದ ಈ ಚಿತ್ರಕ್ಕೆ ಎ.ಆರ್ ರೆಹಮಾನ್ ಸಂಗೀತ ನೀಡಿದ್ದರು. ವಿವಿಧೆಡೆ ಪ್ರದರ್ಶನ ಕಂಡು ಪ್ರಶಸ್ತಿಗಳನ್ನೂ ಪಡೆದುಕೊಂಡಿತ್ತು.

    Recommended Video

    ತೆಲುಗು ಟಿವಿ ಲೋಕದಲ್ಲಿ ದಾಖಲೆ ಬರೆದಿದ್ಯಂತೆ KGF | TRP | KGF1 | Filmibeat Kannada

    ಆದರೆ ಇದು ಇಸ್ಲಾಂ ಧರ್ಮದ ನಂಬಿಕೆಗಳ ವಿರುದ್ಧವಾಗಿದೆ ಮತ್ತು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂಬ ಆರೋಪ ಕೇಳಿಬಂದಿತ್ತು. ಜತೆಗೆ ಅನೇಕ ಕಡೆ ಸಿನಿಮಾ ವಿರುದ್ಧ ಪ್ರತಿಭಟನೆಗಳೂ ನಡೆದಿದ್ದವು.

    ಹಿಂದೂಗಳ ಭಾವನೆಗೆ ಧಕ್ಕೆ: ನೆಟ್‌ ಫ್ಲಿಕ್ಸ್ ಬಹಿಷ್ಕರಿಸುವಂತೆ ಅಭಿಯಾನಹಿಂದೂಗಳ ಭಾವನೆಗೆ ಧಕ್ಕೆ: ನೆಟ್‌ ಫ್ಲಿಕ್ಸ್ ಬಹಿಷ್ಕರಿಸುವಂತೆ ಅಭಿಯಾನ

    ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ಮುಂಬೈನ ರಾಜಾ ಅಕಾಡೆಮಿ ಮಜಿದಿ ಮತ್ತು ರೆಹಮಾನ್ ವಿರುದ್ಧ ಫತ್ವಾ ಹೊರಡಿಸಿತ್ತು. ಚಿತ್ರವನ್ನು ನಿಷೇಧಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿತ್ತು.

    Twitter Trends To Boycott Iranian Movie Muhammad The Messenger Of God By Majid Majidi

    ಆದರೆ ಇದ್ದಕ್ಕಿದ್ದಂತೆ ಈ ಚಿತ್ರ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ 'ಮುಹಮ್ಮದ್...' ಸಿನಿಮಾ ಸಿನಿಮಾ ಡಾನ್ ಎಂಬ ಆಪ್‌ನಲ್ಲಿ ಜುಲೈ 21ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ. ಪ್ರವಾದಿಯ ಬಗ್ಗೆ ಯಾರೂ ಸಿನಿಮಾ ಮಾಡಬಾರದು. ಅದನ್ನು ಮೀರಿ ಮಾಡಿರುವ ಈ ಸಿನಿಮಾ ಭಾರತದಲ್ಲಿ ಬಿಡುಗಡೆಯಾಗಬಾರದು ಎಂಬ ಒತ್ತಾಯ ಕೇಳಿಬಂದಿದೆ.

    ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ. ಪ್ರಾಫೆಟ್ ಸಿನಿಮಾವನ್ನು ಬಹಿಷ್ಕರಿಸಿ ಎಂಬುದು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಈ ಚಿತ್ರದ ಹಿಂದಿ ಟ್ರೇಲರ್ ಮೇ ತಿಂಗಳಿನಲ್ಲಿಯೇ ಬಿಡುಗಡೆಯಾಗಿತ್ತು. ಅದೀಗ ಜನರ ಕಣ್ಣಿಗೆ ಬಿದ್ದಿದ್ದು, ಚರ್ಚೆಗೆ ಗ್ರಾಸವಾಗಿದೆ.

    English summary
    Netizens opposing the release of controversial Iranian movie Muhammad: The Messenger of God by Majid Majidi on Don Cinema App.
    Sunday, July 5, 2020, 19:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X