ಆಸ್ಕರ್ ವಿಜೇತ ನಟ ಕೆವಿನ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

'ಹೌಸ್ ಆಫ್ ಕಾರ್ಡ್ಸ್', 'ಸೂಪರ್ ಮ್ಯಾನ್ ರಿಟರ್ನ್ಸ್' 'ಎಲ್‌ಎ ಕಾನ್ಫಿಡೆನ್ಶಿಯಲ್' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ನಟ ಕೆವಿನ್ ಸ್ಪೇಸಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

62 ವರ್ಷದ ಕೆವಿನ್ ಸ್ಪೇಸಿ ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬ್ರಿಟನ್‌ನಲ್ಲಿ ದೂರು ದಾಖಲಾಗಿದೆ. 'ದಿ ಯೂಶ್ಯುಲ್ ಸಸ್ಪೆಕ್ಟ್', 'ಅಮೆರಿಕನ್ ಬ್ಯೂಟಿ' ಸಿನಿಮಾಗಳಿಗಾಗಿ ಆಸ್ಕರ್ ಪಡೆದಿರುವ ಕೆವಿನ್ ಸ್ಪೇಸಿ ಮೂವರು ಪುರುಷರ ವಿರುದ್ಧ ಗಂಭೀರವಾದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಪ್ರಕರಣ ದಾಖಲಾಗಿದೆ.

ಲಂಡನ್‌ನ ಮೆಟ್ರೊಪಾಲಿಟಿನ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕೆವಿನ್, ಮೂವರು ಪುರುಷರ ವಿರುದ್ಧ ದೌರ್ಜನ್ಯ ಎಸಗಿದ್ದಾರಲ್ಲದೆ, ಅವರಲ್ಲಿ ಒಬ್ಬರ ಮೇಲೆ ಅತ್ಯಾಚಾರವನ್ನೂ ಮಾಡಿದ್ದಾರೆ ಎಂದಿದ್ದಾರೆ.

Two Time Oscar Winner Actor Kevin Spacey Charged With Sexual Assault

ಕೆವಿನ್ ವಿರುದ್ಧ ಮಾಡಲಾಗಿರುವ ಆರೋಪಕ್ಕೆ ಸಾಕ್ಷಿಗಳನ್ನು ಮೆಟ್ರೊಪಾಲಿಟಿನ್ ಪೊಲೀಸರು ಸಂಪಾದಿಸಿದ್ದು, ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ಕೆವಿನ್ ವಿರುದ್ಧ ಒಟ್ಟು ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಮೊದಲೆರಡು ಪ್ರಕರಣಗಳು 2005 ರಲ್ಲಿ ಲಂಡನ್‌ನಲ್ಲಿ ನಡೆದಿದ್ದಾಗಿದೆ. ಎರಡನೇ ಪ್ರಕರಣ 2008 ರ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆದಿದೆ. ನಾಲ್ಕನೇ ಪ್ರಕರಣ ನಡೆದಿರುವುದು ದಕ್ಷಿಣ ಇಂಗ್ಲೆಂಡ್‌ನ ಗ್ಲುಕೆಸ್ಟ್‌ಶೈರ್‌ನಲ್ಲಿ ನಡೆದಿದೆ.

ಪ್ರಕರಣದ ಬಗ್ಗೆ ಹೆಚ್ಚಿನ ವರದಿ ಮಾಡಲು ಬ್ರಿಟೀಷ್ ಕಾನೂನಿನಲ್ಲಿ ಅನುಮತಿ ಇಲ್ಲ. ವಿಚಾರಣೆ ವೇಳೆ ಪ್ರಭಾವ ಬೀಳಬಹುದಾದ ಕಾರಣದಿಂದ ಈ ರೀತಿಯ ಪ್ರಕರಣಗಳ ಮಾಧ್ಯಮ ವರದಿಯ ಮೇಲೆ ಬ್ರಿಟೀಷ್ ಕಾನೂನು ನಿಯಂತ್ರಣ ಹೇರಿದೆ. ಹಾಗಾಗಿ ಪ್ರಕರಣದ ಹೆಚ್ಚಿನ ಮಾಹಿತಿಗಳು ಹೊರಬಿದ್ದಿಲ್ಲ.

ಕೆವಿನ್ ಸ್ಪೈಸಿ ವಿರುದ್ಧ ಈ ಮೊದಲೂ ಸಹ 'ಮೀ ಟೂ' ಆರೋಪ ಕೇಳಿ ಬಂದಿತ್ತು. 'ಹೌಸ್ ಆಫ್ ಕಾರ್ಡ್ಸ್' ನ ಕೊನೆಯ ಸೀಸನ್ ಚಿತ್ರೀಕರಣದ ವೇಳೆ ಕೆವಿನ್ ವಿರುದ್ಧ ಆರೋಪಗಳನ್ನು ಮಾಡಲಾಗಿತ್ತು. ಬಳಿಕ 'ಆಲ್ ದಿ ಮನಿ ಇನ್‌ ದಿ ವರ್ಲ್ಡ್‌' ಸರಣಿಯಿಂದ ಇದೇ ಕಾರಣಕ್ಕೆ ಕೆವಿನ್ ಅನ್ನು ಕೈಬಿಡಲಾಗಿತ್ತು ಸಹ. 2019 ರಲ್ಲಿ ಕೆವಿನ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವೊಂದನ್ನು ಸಾಕ್ಷಿ ಕೊರತೆಯಿಂದ ಕೈ ಬಿಡಲಾಗಿತ್ತು. ಇದೀಗ ಮತ್ತೆ ಕೆವಿನ್ ವಿರುದ್ಧ ದೂರು ದಾಖಲಾಗಿದೆ.

ನಟ ಕೆವಿನ್ ಪ್ರಸ್ತುತ ನ್ಯೂ ಯಾರ್ಕ್‌ನಲ್ಲಿದ್ದು, ಅಲ್ಲಿ ಸಿವಿಲ್‌ ಪ್ರಕರಣವೊಂದರ ವಿಚಾರಣೆಗೆ ಹಾಜರಾಗಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣವು ಬ್ರಿಟನ್‌ನಲ್ಲಿ ದಾಖಲಾಗಿದ್ದು, ಕೆವಿನ್, ಬ್ರಿಟನ್‌ಗೆ ವಾಪಸ್ಸಾದ ಬಳಿಕ ಅವರ ವಿಚಾರಣೆ ನಡೆಯಲಿದೆ.

More from Filmibeat

English summary
Two time Oscar award winner actor Kevin Spacey charged with sexual assault. Four cases registerd against Kevin in UK.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X