Cannes Film Festival 2024 ; ಸೇಮ್ ಟು ಸೇಮ್ - ಕಾನ್ ನಲ್ಲಿ ದೀಪಿಕಾ ಸ್ಟೈಲ್ ಕಾಪಿ ಮಾಡಿದ ಊವರ್ಶಿ..!

ಜಗತ್ತಿನ ಪ್ರಮುಖ ಸಿನಿಮೋತ್ಸವಗಳಲ್ಲಿ ಕಾನ್ ಚಿತ್ರೋತ್ಸವವು ಒಂದು. ಫ್ರಾನ್ಸ್ ನಲ್ಲಿ ಪ್ರತಿ ವರ್ಷ ನಡೆಯುವ ಈ ಚಿತ್ರೋತ್ಸವಕ್ಕೆ ಪ್ರಪಂಚದ ಹಲವಾರು ಸಿನಿ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ.

ಈಗಾಗಲೇ 77ನೇ ಕಾನ್ ಫಿಲ್ಮ್ ಫೆಸ್ಟಿವಲ್ ಪ್ರಾರಂಭವಾಗಿದ್ದು, ಈ ಫೆಸ್ಟಿವಲ್ ನಲ್ಲಿ ನಾಯಕಿಯರ ಬೆಕ್ಕಿನ ನಡಿಗೆಯನ್ನ ನೋಡಲು ಜಗತ್ತು ಕಾದು ಕುಂತಿರುತ್ತೆ. ಅದಕ್ಕೆ ಕಾರಣ ನಾಯಕಿಯರು ಹಾಕಿಕೊಳ್ಳುವ ಉಡುಗೆ ತೊಡುಗೆ. ಪ್ರತಿ ವರ್ಷ ಚಿತ್ರ - ವಿಚಿತ್ರ ಕಾಸ್ಟೂಮ್ ಗಳಲ್ಲಿ ಹಾಲಿವುಡ್ ಅಷ್ಟೇ ಅಲ್ಲ ಬಾಲಿವುಡ್‌ ನಾಯಕಿಯರು ಕೂಡ ಇಲ್ಲಿ ಪ್ರತ್ಯಕ್ಷರಾಗ್ತಾರೆ.

urvashi-rautelas-cannes-dress-draws-comparisons-to-deepika-padukone

ಇನ್ನೂ ಇಲ್ಲಿ ಹಾಕಿಕೊಳ್ಳುವ ಬಟ್ಟೆಗಳಿಗೆ ನಾಯಕಿಯರು ಖರ್ಚು ಮಾಡುವ ಹಣ ಕೇಳಿದರೆ ತಲೆ ತಿರುಗುತ್ತೆ. ಇಂಥ ಕಾನ್ ಫಿಲ್ಮ್ ಫೆಸ್ಟಿವಲ್‌ ನಲ್ಲಿ ಎಂದಿನಂತೆ ಈ ಬಾರಿ ಕೂಡ ಐಶ್ವರ್ಯ ರೈ ತಮ್ಮ ಮಾದಕ ಮೈಮಾಟದಿಂದ ಕಣ್ಮನ ಸೆಳೆಯುವ ಪ್ರಯತ್ನ ಮಾಡಲಿದ್ದಾರೆ. ಇನ್ನೂ ಕಿಯಾರಾ ಅಡ್ವಾಣಿ ಈ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್‌ ನಲ್ಲಿ ಮೊದಲ ಬಾರಿ ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ.

ಕಿಯಾರಾಗೆ ಇದು ಕಾನ್‌ನಲ್ಲಿ ಮೊದಲ ಹೆಜ್ಜೆ ಆದ ಕಾರಣ ಇವರ ವೇಷ ಭೂಷಣ ಹೇಗಿರಲಿದೆ ಅನ್ನುವ ಕುತೂಹಲ ಇದ್ದೇ ಇದೆ. ಇದರ ನಡುವೆ ಊವರ್ಶಿ ರೌಟೇಲಾ ಪ್ರತಿಷ್ಠಿತ ಕಾನ್ ನ ರತ್ನಗಂಬಳಿ ಮೇಲೆ ಕಾಣಿಸಿಕೊಂಡಿದ್ದಾರೆ.

urvashi-rautelas-cannes-dress-draws-comparisons-to-deepika-padukone

ಹೌದು, ಕನ್ನಡದಲ್ಲಿ ಮಿಸ್ಟರ್ ಐರಾವತ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಊವರ್ಶಿ ರೌಟೇಲಾ, ಸತತ ಮೂರನೇ ಬಾರಿ ಕಾನ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಜಾಲ ನಡಿಗೆಯನ್ನ ಮಾಡಿದ್ದಾರೆ. ತಮ್ಮ ಹಾವ-ಭಾವದಿಂದ ಅಲ್ಲಿದ್ದವರ ಹೃದಯವನ್ನೂ ಗೆದ್ದಿದ್ದಾರೆ.

ಆದರೆ ಇದೇ ಸಮಯದಲ್ಲಿ ಊವರ್ಶಿಯ ಈ ಲುಕ್ ಕಂಡು ಅನೇಕರಿಗೆ ದೀಪಿಕಾ ಪಡುಕೋಣೆ ನೆನಪಾಗಿದ್ದಾರೆ. ಯಾಕೆಂದರೆ ಕೆಲ ವರ್ಷದ ಹಿಂದೆ ದೀಪಿಕಾ ಪಡುಕೋಣೆ ಹೆಚ್ಚು ಕಡಿಮೆ ಇದೇ ತರಹದ ಕಾಸ್ಟೂಮ್ ನಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿಯೇ ಊವರ್ಶಿ ರೌಟೇಲಾ, ದೀಪಿಕಾ ಪಡುಕೋಣೆ ಅವರ ಸ್ಟೈಲ್ ಕಾಪಿ ಮಾಡಿದ್ದಾರೆ ಎಂಬ ಅಭಿಪ್ರಾಯವನ್ನ ಸದ್ಯಕ್ಕೆ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ಫೋಟೋ ಅಕ್ಕ - ಪಕ್ಕ ಇಟ್ಟು ಹೋಲಿಕೆಯನ್ನ ಮಾಡುತ್ತಿದ್ದಾರೆ.

urvashi-rautelas-cannes-dress-draws-comparisons-to-deepika-padukone

ಖಲೀದ್ ಮತ್ತು ಮಾರ್ವಾ ಊವರ್ಶಿಯ ಈ ವಸ್ತ್ರವನ್ನ ವಿನ್ಯಾಸ ಮಾಡಿದ್ದಾರೆ. ಉಳಿದಂತೆ ಊವರ್ಶಿಯ ಈ ಅವತಾರಕ್ಕೆ ಖರ್ಚಾದ ಹಣ ಎಷ್ಟು ಅನ್ನುವುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಒಟ್ನಲ್ಲಿ ಸದ್ಯಕ್ಕೆ ಊವರ್ಶಿ ರೌಟೇಲಾ ಅವರ ಈ ಡ್ರೆಸ್ ಬಾಲಿವುಡ್ ನಲ್ಲಿ ಚರ್ಚೆಯನ್ನ ಹುಟ್ಟು ಹಾಕಿದೆ. ದೀಪಿಕಾ ಪಡುಕೋಣೆ ಅವರ ಕಾಸ್ಟೂಮ್ ಜೊತೆ ಈ ಕಾಸ್ಟೂಮ್ ನ ಹೋಲಿಕೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ತರೇವಾರಿ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

More from Filmibeat

English summary
Did Urvashi Rautela's Look Draw Inspiration From Deepika Padukone's 2018 Hot Pink Gown,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X