ಪತಿಯ ತುಟಿಗೆ ಮುತ್ತಿಟ್ಟು ಲಿಪ್ ಸ್ಟಿಕ್ ಮಾರ್ಕ್ ಅಳಿಸಿದ ಪ್ರಿಯಾಂಕಾ ವಿಡಿಯೋ ವೈರಲ್.!

ಹಾಲಿವುಡ್ ನಲ್ಲೂ ಗುರುತಿಸಿಕೊಂಡಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಮತ್ತು ಅಮೇರಿಕದ ಗಾಯಕ ನಿಕ್ ಜೋನಸ್ ತಮ್ಮ ದಾಂಪತ್ಯ ಜೀವನವನ್ನು ಸರಾಗವಾಗಿ, ಸುಂದರವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಎಲ್ಲೇ ಹೋದರೂ ಕೈಕೈ ಹಿಡಿದುಕೊಂಡೇ ಓಡಾಡುವ ಈ ದಂಪತಿ 'ರೋಮ್ಯಾಂಟಿಕ್ ಕಪಲ್' ಅಂತಲೇ ಹೆಸರುವಾಸಿ.

ಇತ್ತೀಚೆಗಷ್ಟೇ ಲಾಸ್ ಏಂಜಲೀಸ್ ನಲ್ಲಿ ನಡೆದ 77ನೇ ಗೋಲ್ಡನ್ ಗ್ಲೋಬ್ ಅವಾರ್ಡ್ ಸೆರೆಮನಿಯಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಸ್ ಭಾಗವಹಿಸಿದ್ದರು. ತಿಳಿ ಕೆಂಪು ಬಣ್ಣದ ಗೌನ್ ನಲ್ಲಿ ಪ್ರಿಯಾಂಕಾ ಛೋಪ್ರಾ ಕಂಗೊಳಿಸುತ್ತಿದ್ದರೆ, ಕಪ್ಪು ಬಣ್ಣದ ಸೂಟ್ ನಲ್ಲಿ ನಿಕ್ ಜೋನಸ್ ಮಿಂಚುತ್ತಿದ್ದರು.

ಅವಾರ್ಡ್ ಸೆರೆಮನಿಯಲ್ಲಿ ಭಾಗವಹಿಸುವ ಮುನ್ನ ನಿರೂಪಕರ ಜೊತೆಗೆ ಪ್ರಿಯಾಂಕಾ ಮತ್ತು ನಿಕ್ ಮಾತಿಗಿಳಿದರು. ಹೇಳಿ ಕೇಳಿ ಇವ್ರು ರೋಮ್ಯಾಂಟಿಕ್ ದಂಪತಿ. ಹೀಗಾಗಿ 'ಕಿಸ್ ಮಾಡಿ' ಎಂದು ನಿರೂಪಕರು ಕೇಳಿದರು. ಆಗ ಹಿಂದು ಮುಂದು ನೋಡದ ನಿಕ್ ಜೋನಸ್, ಪತ್ನಿ ಪ್ರಿಯಾಂಕಾ ತುಟಿಗೆ ಮುತ್ತಿಡಲು ಮುಂದಾದರು.

viral-video-priyanka-chopra-kisses-nick-jonas-wipes-lipstick-from-his-lips

ಮೊದಲು ಪ್ರಿಯಾಂಕಾ ಹಿಂದೆ ಸರಿದರೂ, ಕೊನೆಗೆ ಒಬ್ಬರಿಗೊಬ್ಬರು ಲಿಪ್ ಕಿಸ್ ಮಾಡಿದರು. ಆಗ ಪ್ರಿಯಾಂಕಾ ತುಟಿ ಮೇಲಿದ್ದ ಕೆಂಪು ಬಣ್ಣದ ಲಿಪ್ ಸ್ಟಿಕ್ ಪತಿ ನಿಕ್ ಜೋನಸ್ ತುಟಿಗೂ ಅಂಟಿತು. ಅದನ್ನ ನೋಡಿ ಮುಜುಗರಕ್ಕೀಡಾದ ಪ್ರಿಯಾಂಕಾ ತಕ್ಷಣ ಅದನ್ನ ಅಳಿಸುವ ಕೆಲಸ ಮಾಡಿದರು.

ನಿಕ್ ಜೋನಸ್ ತುಟಿ ಮೇಲಿದ್ದ ಲಿಪ್ ಸ್ಟಿಕ್ ಮಾರ್ಕ್ ಅಷ್ಟು ಸುಲಭವಾಗಿ ಹೋಗಲಿಲ್ಲ. ಆಗ, ಬ್ಯಾಕ್ ಸ್ಟೇಜ್ ನಲ್ಲಿ ಪ್ಯಾಚಪ್ ಮಾಡುವೆ ಅಂತ ನಿಕ್ ಜೊತೆಗೆ ಪ್ರಿಯಾಂಕಾ ಹೊರಟುಬಿಟ್ಟರು. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

More from Filmibeat

English summary
Viral video: Priyanka Chopra kisses Nick Jonas, wipes lipstick from his lips.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X