»   » ಬಹು ನಿರೀಕ್ಷಿತ ಹಾಲಿವುಡ್ದಿನ ಪ್ರಣಯ ಚಿತ್ರದ ಟ್ರೇಲರ್

ಬಹು ನಿರೀಕ್ಷಿತ ಹಾಲಿವುಡ್ದಿನ ಪ್ರಣಯ ಚಿತ್ರದ ಟ್ರೇಲರ್

Posted By:
Subscribe to Filmibeat Kannada

ಬಹು ನಿರೀಕ್ಷಿತ ಹಾಲಿವುಡ್ದಿನ ಪ್ರಣಯ ಚಿತ್ರದ ಟ್ರೇಲರ್ ಹೊರ ಬಂದಿದೆ. ಭಾರಿ ಸಂಚಲನ ಮೂಡಿಸಿದ್ದ ಫಿಫ್ಟಿ ಶೇಡ್ಸ್ ಆಫ್ ಗ್ರೇ ಹೆಸರಿನ ಪ್ರಣಯಭರಿತ ಕಾದಂಬರಿ ಈಗ ಬೆಳ್ಳಿ ಪರದೆಯಲ್ಲಿ ಮೂಡುತ್ತಿದೆ. ಮುಂದಿನ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಚಿತ್ರ ವಿಶ್ವದೆಲ್ಲೆಡೆ ಬಿಡುಗಡೆಗೊಳ್ಳಲಿದೆ. ಸದ್ಯಕ್ಕೆ ಚಿತ್ರ ಟ್ರೇಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಚಿತ್ರದ ಟ್ರೇಲರ್ ನೋಡುವುದಕ್ಕೂ ಮುನ್ನ ಫಿಫ್ಟ್ ಶೇಡ್ಸ್ ಆಫ್ ಗ್ರೇ ಕೃತಿಯ ಬಗ್ಗೆ ಇನ್ನಷ್ಟು ಸಾಲು ಓದಿ...

2011 ರಲ್ಲಿ ಬ್ರಿಟಿಶ್ ಲೇಖಕ ಇ.ಎಲ್ ಜೇಮ್ಸ್ ಬರೆದ ಕಾಮೋನ್ಮತ್ತ ಸನ್ನಿವೇಶಗಳುಳ್ಳ ಕಾಲೇಜು ಕನ್ಯೆ ಹಾಗೂ ಯುವ ಉದ್ಯಮಿ ನಡುವಿನ ಸಂಬಂಧಗಳ ಕಥಾನಕ ಭಾರಿ ಜನಪ್ರಿಯತೆ ಗಳಿಸಿದೆ. ಜೇಮ್ಸ್ ಬರೆದ ಈ ಕೃತಿ ಮೂರು ಭಾಗಗಳನ್ನು ಒಳಗೊಂಡಿದ್ದು ವಿಶ್ವದ 51 ಭಾಷೆಗಳಿಗೆ ಅನುವಾದಗೊಂಡಿದೆ. ಸುಮಾರು 100 ಮಿಲಿಯನ್ ಇ ಕಾಪಿಗಳು ಮಾರಾಟವಾಗಿವೆ.

WATCH: Fifty Shades of Grey New 'Kinky' Trailer

ಕಾದಂಬರಿಯ ಪ್ರಮುಖ ಭೂಮಿಕೆಯಲ್ಲಿರುವ ಕ್ರಿಶ್ಚಿಯನ್ ಗ್ರೇ ಹಾಗೂ ಅನಾಸ್ತಾಶಿಯಾ ಸ್ಟೀಲೆ ಪಾತ್ರದಲ್ಲಿ ಜ್ಯಾಮಿ ಡೊರ್ನನ್ ಹಾಗೂ ಡಕೋಟಾ ಜಾನ್ಸನ್ ನಟಿಸುತ್ತಿದ್ದಾರೆ.ಟೇಲರ್ ಜಾನ್ಸನ್ ನಿರ್ದೇಶಿಸುತ್ತಿರುವ ಈ ಚಿತ್ರ ಫೆ.13, 2015ರಂದು ಹೊರಬರಲಿದೆ. ಕೆಲ್ಲಿ ಮಾರ್ಸೆಲ್ ಚಿತ್ರಕಥೆ ಬರೆದಿದ್ದು ಯೂನಿವರ್ಸಲ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಖ್ಯಾತ ಸಂಗೀತಗಾರ್ತಿ ಬಿಯೊನ್ಸ್ ನೋಲ್ಸ್ ಕಾರ್ಟರ್ ಅವರ ಹಿನ್ನೆಲೆ ಸಂಗೀತದಲ್ಲಿ ಕ್ರಿಶ್ಚಿಯನ್ ಗ್ರೆ ಕಚೇರಿಗೆ ಹೊರಡಲು ತಯಾರಾಗುವುದು, ಅನಾ ಕಾಲೇಜಿಗೆ ಹೊರಡಲು ಸಿದ್ಧವಾಗುವ ದೃಶ್ಯವಿದೆ. ಟ್ರೇಲರ್ ನ ಮೊದಲ 50 ಸೆಕಂಡುಗಳಲ್ಲಿ ಪ್ರಣಯ ಸನ್ನಿವೇಶವಿದೆ. ಆದರೆ, ಪುಸ್ತಕ ಓದುವಾಗ ಸಿಗುವ ಕಲ್ಪನಾ ವಿಹಾರದಷ್ಟು ಸುಖವನ್ನು ಚಿತ್ರದ ಸನ್ನಿವೇಶಗಳು ನೀಡಲಾರವು ಎಂದು ಚಿತ್ರ ತಂಡ ಧೈರ್ಯವಾಗಿ ಒಪ್ಪಿಕೊಂಡಿವೆ. ಸದ್ಯಕ್ಕೆ ಟ್ರೇಲರ್ ನೋಡಿ ಆನಂದಿಸಿ...

English summary
Finally the long wait is over. The official new trailer of Fifty Shades of Grey is out. Showing Jamie Dornan as the billionaire Christian Grey and Dakota Johnson as the cute Anastasia Steele, the new trailer is romantic, kinky and scandalous at the same time. The trailer was dropped on ABC's Scandal show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada