XXX ಟ್ರೈಲರ್: ಗ್ಲಾಮರ್-ಡೇರಿಂಗ್-ಡ್ಯಾಶಿಂಗ್ ಲುಕ್ ನಲ್ಲಿ ದೀಪಿಕಾ

ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸುತ್ತಿರುವ ನಟಿ ದೀಪಿಕಾ ಪಡುಕೋಣೆ ನಟನೆಯ 'XXX: ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಎರಡನೇ ಟ್ರೈಲರ್ ಬಿಡುಗಡೆ ಆಗಿದೆ. ಖತರ್ನಾಕ್ ಹುಡುಗಿಯಾಗಿ ದೀಪಿಕಾ.

By ಸೋನು ಗೌಡ

ಬಾಲಿವುಡ್ ನ ಅತ್ಯಂತ ದುಬಾರಿ ನಟಿ ಕಮ್ ಹಾಲಿವುಡ್ ನ ಗ್ಲಾಮರ್ ಡಾಲ್ ದೀಪಿಕಾ ಪಡುಕೋಣೆ ಕಿಸ್ ಮಾಡೋಕು ಸೈ, ಅಷ್ಟೇ ವೇಗದಲ್ಲಿ ಫೈಟ್ ಮಾಡೋಕು ಸೈ ಅನ್ನೋದಕ್ಕೆ, ಈಗಾಗಲೇ ಬಿಡುಗಡೆ ಆಗಿರೋ 'XXX' ಎರಡನೇ ಟ್ರೈಲರ್ ಸಾಕ್ಷಿ.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ, ಭಾಯ್ ಜಾನ್ ಸಲ್ಮಾನ್ ಖಾನ್ ನಡೆಸಿಕೊಡುವ, ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್ 10' ವೇದಿಕೆಯಲ್ಲಿ ನಟಿ ದೀಪಿಕಾ ಪಡುಕೋಣೆ ಅವರು 'XXX: ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.[ಕೊನೆಗೂ XXX ಟ್ರೈಲರ್ ಹಂಚಿಕೊಂಡ ದೀಪಿಕಾ ಪಡುಕೋಣೆ]

Watch 'xXx: RETURN OF XANDER CAGE' Official Trailer

ಸಖತ್ ಜಬರ್ದಸ್ತ್, ಅಷ್ಟೇ ಸ್ಟೈಲಿಷ್ ಮತ್ತು ಮೈನವಿರೇಳಿಸುವ ಸಾಹಸ ದೃಶ್ಯಗಳಿರುವ 'XXX' ಟ್ರೈಲರ್ ನಲ್ಲಿ ದೀಪಿಕಾ ತುಂಬಾ ಸುಂದರವಾಗಿ ಮಿಂಚಿದ್ದಾರೆ. ಇನ್ನು ಕ್ಸಾಂಡರ್ ಕೇಜ್ ಪಾತ್ರದಲ್ಲಿ ಮಿಂಚಿರುವ ವಿನ್ ಡೀಸೆಲ್ ಅವರಂತೂ ತಮ್ಮ ಸಾಹಸದಿಂದ ಮೈ ನಡುಗಿಸಿದ್ದಾರೆ.[ಕಣ್ಣಲ್ಲೇ ಕೊಲ್ಲುತ್ತಿರುವ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ]

Watch 'xXx: RETURN OF XANDER CAGE' Official Trailer

ಬೈಕನ್ನು ಗಾಳಿಯಲ್ಲಿ ಹಾರಿಸಿ, ನೀರಿನಲ್ಲಿ ಮುಳುಗಿಸಿರುವ ವಿನ್ ಡಿಸೇಲ್ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೋ ಅಂತ ಕಾತರದಿಂದ ಕಾಯುವಂತೆ ಮಾಡಿದ್ದಾರೆ. ನಟಿ ದೀಪಿಕಾ ಅವರಂತೂ ತಮ್ಮ ಮೊದಲ ಸಿನಿಮಾದಲ್ಲೇ ಗ್ಲಾಮರ್ ಲುಕ್ ನಲ್ಲಿ ಮಿಂಚಿದ್ದು ಮಾತ್ರವಲ್ಲದೇ, ಡೇರಿಂಗ್ ಮತ್ತು ಡ್ಯಾಶಿಂಗ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿನ್ ಡಿಸೇಲ್ ಗಿಂತ ತಾವೇನು ಕಡಿಮೆ ಇಲ್ಲ ಅಂತ ಸಾಕಷ್ಟು ಸಾಹಸ ಕೂಡ ಮಾಡಿರುವ ದೀಪಿಕಾ ಅಭಿಮಾನಿಗಳಿಗೆ ಫುಲ್ ಮನರಂಜನೆ ನೀಡಿದ್ದಾರೆ. ಇದಕ್ಕಿಂತ ಮೊದಲು ಬಿಡುಗಡೆ ಆಗಿದ್ದ ಟೀಸರ್ ನಲ್ಲಿ ದೀಪಿಕಾ ಅವರನ್ನು ಅಷ್ಟಾಗಿ ಹೈಲೈಟ್ ಮಾಡಿರಲಿಲ್ಲ.['xXx' ಚಿತ್ರಕ್ಕಾಗಿ ರಿಯಲ್ ಗನ್ ಶೂಟ್ ಕಲಿತ ದೀಪಿಕಾ ಪಡುಕೋಣೆ]

Watch 'xXx: RETURN OF XANDER CAGE' Official Trailer

ಆದ್ದರಿಂದ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆ ಆಗಿತ್ತು, ಆದ್ರೆ ಎರಡನೇ ಟ್ರೈಲರ್ ನಲ್ಲಿ ಮಾತ್ರ ದೀಪಿಕಾ ಅವರು ಖಿಲಾಡಿ-ಖತರ್ನಾಕ್ ಆಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ.[ಬಿಗ್ ಬಾಸ್ 10 ಚಾಲನೆ: ಬೆಂಗಳೂರು ಬೆಡಗಿ ಜತೆ ಸಲ್ಮಾನ್]

ಮುಂದಿನ ವರ್ಷ (2017) ಜನವರಿಯಲ್ಲಿ, ನಿರ್ದೇಶಕ ಡಿ.ಜೆ ಕಾರಸೋ ಆಕ್ಷನ್-ಕಟ್ ಹೇಳಿರುವ 'XXX: ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್' ತೆರೆ ಕಾಣಲಿದ್ದು, ಸದ್ಯಕ್ಕೆ ಬಿಡುಗಡೆ ಆಗಿರುವ ಎರಡನೇ ಟ್ರೈಲರ್ ನೋಡಿ ಎಂಜಾಯ್ ಮಾಡಿ....

More from Filmibeat

English summary
Watch 'xXx: RETURN OF XANDER CAGE' - Official Trailer, feat. Vin Diesel, Deepika Padukone, Nina Dobrev, Ruby Rose, Samuel L. Jackson and others. Directed by D. J. Caruso.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X