twitter
    For Quick Alerts
    ALLOW NOTIFICATIONS  
    For Daily Alerts

    'ಸಿನಿಮಾ ಮೌನವಾಗಿಲ್ಲ ಎಂದು ಸಾಬೀತು ಪಡಿಸಲು ಹೊಸ ಚಾರ್ಲಿ ಚಾಪ್ಲಿನ್ ಬರಬೇಕು': ಉಕ್ರೇನ್ ಅಧ್ಯಕ್ಷ

    |

    ಕಾನ್ ಫಿಲ್ಮ್ ಫೆಸ್ಟಿವನಲ್‌ಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಮೇ 17 ರಿಂದ ಮೇ 28ರ ವರೆಗೆ ಫ್ರಾನ್ಸ್‌ನಲ್ಲಿ ಕಾನ್ ಫೆಸ್ಟಿವಲ್‌ 2022 ನಡೆಯುತ್ತಿದೆ. ಭಾರತದಿಂದ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಭಾರತವನ್ನು ಪ್ರತಿನಿಧಿಸುತ್ತಿದ್ದರೆ, ಐಶ್ವರ್ಯಾ ರೈ ಬಚ್ಚನ್, ತಮನ್ನಾ, ಪೂಜಾ ಹೆಗ್ಡೆ ಸೇರಿದಂತೆ ಗಣ್ಯರು ಭಾಗವಹಿಸಿದ್ದಾರೆ. ಇದೇ ವೇಳೆ ಕಾನ್ ಫೆಸ್ಟಿವಲ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ವಿಡಿಯೋ ಮೂಲಕ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ.

    ಮೊದಲೇ ರೆಕಾರ್ಡ್ ಮಾಡಿದ ವಿಡಿಯೋವನ್ನು ಕಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಇದು ವಿಶ್ವದ ಮೂಲೆ ಮೂಲೆಯಿಂದ ಬಂದಿದ್ದ ಸೆಲೆಬ್ರೆಟಿಗಳಿಗೆ ಸರ್ಪ್ರೈಸ್ ಆಗಿತ್ತು. ಈ ವೇಳೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಆಡಿದ ಮಾತುಗಳಿಗೆ ಕಾನ್ ಚಲನಚಿತ್ರೋತ್ಸವಕ್ಕೆ ಆಗಮಿಸಿದ್ದ ಗಣ್ಯರು ತಲೆದೂಗಿದ್ದಾರೆ.

    ಹೊಸ ಚಾರ್ಲಿ ಚಾಪ್ಲಿನ್ ಬರಬೇಕು ಎಂದು ಉಕ್ರೇನ್ ಅಧ್ಯಕ್ಷ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ದಿನದಿಂದ ಶಾಂತಿ ಬಗ್ಗೆ ಮಾತಾಡುತ್ತಿದ್ದಾರೆ. ಯುದ್ಧದ ಸನ್ನಿವೇಶದಲ್ಲಿ ಇಡೀ ವಿಶ್ವವೇ ಉಕ್ರೇನ್ ಅಧ್ಯಕ್ಷ ಝೆಲ್ಯಂಸ್ಕಿ ನಡೆಯನ್ನು ಎದುರು ನೋಡುತ್ತಿತ್ತು. ಈ ಹಿಂದೆ ಗ್ರ್ಯಾಮಿ ಅವಾರ್ಡ್‌ನಲ್ಲಿ ಉಕ್ರೇನ್ ಅಧ್ಯಕ್ಷ ಸಿನಿಮಾದ ಬಗ್ಗೆ ಪರಿಣಾಮಕಾರಿಯಾಗಿ ಮಾತಾಡಿದ್ದರು. ಈಗ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಝೆಲೆನ್ಸ್ಕಿಯ ಅದ್ಭುತ ಮಾತುಗಳಿಗೆ ಗಣ್ಯರೆಲ್ಲ ತಲೆದೂಗಿದ್ದಾರೆ.

    We Need A New Charlie Chaplin to Prove Cinema Is Not Mute Says Ukraine President In Cannes 2022

    " ಸಿನಿಮಾ ಮೌನವಾಗಿರುತ್ತದೆಯೇ, ಅಥವಾ ಮೌನ ಮುರಿದು ಮಾತನಾಡುತ್ತಾ? ಸರ್ವಾಧಿಕಾರಿಯೊಬ್ಬ ಇದ್ದಾನೆ ಎಂದುಕೊಂಡರೆ, ಸ್ವಾತಂತ್ರ್ಯಕ್ಕಾಗಿ ಯುದ್ಧ ನಡೆಯುತ್ತಿದ್ದರೆ, ಮತ್ತೊಮ್ಮೆ ಎಲ್ಲವೂ ನಮ್ಮ ಒಗ್ಗಟ್ಟಿನ ಮೇಲೆ ನಿಂತಿರುತ್ತದೆ. ಸಿನಿಮಾ ಈ ಒಗ್ಗಟ್ಟಿನಿಂದ ಹೊರಗೆ ಉಳಿಯಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

    ಮೌನ ಮುರಿಯಲು ಹೊಸ ಚಾರ್ಲಿ ಚಾಪ್ಲಿನ್ ಬರಬೇಕು?

    ಕಾನ್ ಫೆಸ್ಟಿವಲ್‌ನಲ್ಲಿ ಝೆಲೆನ್ಸ್ಕಿ ಎರಡನೇ ವಿಶ್ವ ಯುದ್ಧದ ವೇಳೆ ಸಿನಿಮಾದ ಪವರ್‌ ಹೇಗಿತ್ತು? ಎಂಬುವುದನ್ನು ಹೇಳುತ್ತಿದ್ದರು. 1940ರಲ್ಲಿ ಚಾರ್ಲಿ ಚಾಪ್ಲಿನ್ ಸಿನಿಮಾ 'ದಿ ಗ್ರೇಟ್ ಡಿಕ್ಟೇಟರ್' ಸಿನಿಮಾ ನಾಜಿ ಮುಖಂಡ ಅಡಾಲ್ಫ್ ಹಿಟ್ಲರ್‌ ಅನ್ನು ಅಣುಕು ಮಾಡಿದ್ದ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.

    "ಚಾರ್ಲಿ ಚಾಪ್ಲಿನ್ 'ಡಿಕ್ಟೇಟರ್' ಸಿನಿಮಾ ರಿಯಲ್ ಡಿಕ್ಟೇಟರ್ ಅನ್ನು ಸರ್ವನಾಶ ಮಾಡಲು ಸಾಧ್ಯವಾಗಿಲ್ಲ. ಆದರೆ, ಆ ಸಿನಿಮಾ ಸುಮ್ಮನೆ ಕೂರಲಿಲ್ಲ. ಅದಕ್ಕಾಗಿ ಸಿನಿಮಾಗಳಿಗೆ ಧನ್ಯವಾದಗಳನ್ನು ಹೇಳಬೇಕು. ಚಾರ್ಲಿ ಚಾಪ್ಲಿನ್ ಸಿನಿಮಾಗೆ ಥ್ಯಾಂಕ್ಸ್ ಹೇಳಬೇಕು." ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.

    We Need A New Charlie Chaplin to Prove Cinema Is Not Mute Says Ukraine President In Cannes 2022

    ಇದೇ ವೇಳೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಹೊಸ ಚಾರ್ಲಿ ಚಾಪ್ಲಿನ್ ಅಗತ್ಯವಿದೆ ಎಂದು ಹೇಳಿದ್ದಾರೆ. " ಇಂದು ಸಿನಿಮಾ ಮೌನವಾಗಿಲ್ಲ ಎಂಬುದನ್ನು ಸಾಬೀತು ಮಾಡಲು ನಮಗೆ ಹೊಸ ಚಾರ್ಲಿ ಚಾಪ್ಲಿನ್ ಅಗತ್ಯವಿದೆ. ಈ ವೇಳೆ ಸಿನಿಮಾ ಸುಮ್ಮನಿರಬೇಕಾ ಅಥವಾ ಮಾತಾಡಬೇಕಾ? ಅಥವಾ ಇದೆಲ್ಲದರಿಂದ ಸಿನಿಮಾ ಹೊರಗುಳಿಯಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ. ಉಕ್ರೇನ್ ಅಧ್ಯಕ್ಷರ ಈ ಮಾತಿಗೆ ಗಣ್ಯರು ಎದ್ದು ನಿಂತು ಗೌರವ ಸೂಚಿಸಿದ್ದಾರೆ.

    75ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಾರ್ ಥೀಮ್ ಅನ್ನು ಇಡಲಾಗಿದೆ. ಇದಕ್ಕಾಗಿ ಉಕ್ರೇನ್ ಸಿನಿಮಾ ಮಂದಿಗಾಗಿ ಒಂದು ವಿಶೇಷ ದಿನವನ್ನೂ ಮೀಸಲಿಡಲಾಗಿದೆ. ಇದೇ ವೇಳೆ ರಷ್ಯಾದ ಸೇನೆಯಿಂದ ಸಾವನ್ನಪ್ಪಿದ ಉಕ್ರೇನ್ ನಿರ್ದೇಶಕ ಮಂಟಾಸ್ ಅವರ ಡಾಕ್ಯೂಮೆಂಟರಿ ' ಮರಿಯೊಪೊಲಿಸ್ 2' ಅನ್ನು ವಿಶೇಷ ಪ್ರದರ್ಶನ ಮಾಡಲಿದೆ.

    English summary
    We Need A New Charlie Chaplin to Prove Cinema Is Not Mute Says Ukraine President In Cannes 2022, Know More.
    Wednesday, May 18, 2022, 15:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X