ಜೇಮ್ಸ್ ಬಾಂಡ್ ಅಭಿಮಾನಿಗಳೇ ಅಟೆನ್ಷನ್: ಇಲ್ಲಿದೆ ಸಿನಿಮಾ ನೋಡಿ ಹಣ ಗೆಲ್ಲುವ ಸೂಪರ್ ಅವಕಾಶ

ನೀವು ಜೇಮ್ಸ್ ಬಾಂಡ್ ಅಭಿಮಾನಿಗಳಾಗಿದ್ದೀರಾ? ಒಂದು ವೇಳೆ ಆಗಿದ್ದರೆ ಬಾಂಡ್ ನ ಸಾಹಸವನ್ನು ನೋಡಿ ಆನಂದಿಸುವ ಜೊತೆಗೆ ಹಣವನ್ನು ಗೆಲ್ಲುವ ಬಂಪರ್ ಆಫರ್ ನಿಮಗಾಗಿ ಕಾದಿದೆ. ಬಾಂಡ್ ಸರಣಿಯ 25ನೇ ಸಿನಿಮಾ ನೋ ಟೈಮ್ ಟು ಡೈ ಬಿಡುಗಡೆಗೂ ಮುಂಚಿತವಾಗಿ ವೆಬ್ ಸೈಟ್ ಒಂದು ಎಲ್ಲಾ 24 ಬಾಂಡ್ ಸರಣಿಯನ್ನು ನೋಡುವ ನೀಡಿದ್ದು, ಇದಕ್ಕೆ ಬಹುಮಾನ ರೂಪದಲ್ಲಿ ಹಣವನ್ನು ಕೊಡಲು ಮುಂದಾಗಿದೆ.

ಬಾಂಡ್ ಸರಣಿಯ 25 ಸಿನಿಮಾ ನೋ ಟೈಮ್ ಟು ಡೈ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ವಿಳಂಬವಾಗಿದ್ದು, ಈ ವರ್ಷ ಸೆಪ್ಟಂಬರ್ ನಲ್ಲಿ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುತ್ತಿರುವುದು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. 25ನೇ ಬಾಂಡ್ ಗಾಗಿ ಕಾತರಿದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಈ ಸಿಹಿ ಸುದ್ದಿ ಸಂತಸ ಮೂಡಿಸಿದೆ.

Nerdbear.com ಎಂಬ ವೆಬ್ ಸೈಟ್ ನಲ್ಲಿ 1962 ರಲ್ಲಿ ಬಂದ ಮೊದಲ ಬಾಂಡ್ ಸಿನಿಮಾದಿಂದ 2015ರಲ್ಲಿ ಬಿಡುಗಡೆಯಾದ ಸ್ಪೆಕ್ಟರ್ ವರೆಗಿನ ಸಿನಿಮಾಗಳನ್ನು ಇಡಲಾಗಿದೆ. ಈ ಸಿನಿಮಾಗಳನ್ನು ವೀಕ್ಷಿಸಿ ನಗದು ರೂಪದಲ್ಲಿ ಬಹುಮಾನ ಗೆಲ್ಲಬಹುದು.

Website Offers chance to binge watch all 24 bond movies for win the money

ಈ ಅವಕಾಶ ಪಡೆಯಲು ಮೊದಲು ವೆಬ್ ಸೈಟ್ ನಿಯಮಗಳನ್ನು ಅನುಸರಿಸಬೇಕು. ವೆಬ್ ಸೈಟ್ ನೀಡುವ ಫಾರ್ಮ್ ಭರ್ತಿ ಮಾಡಬೇಕು. ಜೊತೆಗೆ ಬಾಂಡ್ ಸರಣಿ ಅಭಿಮಾನಿಯಾಗಿರುವ ಬಗ್ಗೆ ವಿವರ ನೀಡಬೇಕು. ಬಳಿಕ ಇದರಲ್ಲಿ ಆಯ್ಕೆಯಾದರು 30 ದಿನಗಳಲ್ಲಿ 24 ಬಾಂಡ್ ಸರಣಿಯನ್ನು ವೀಕ್ಷಿಸಬೇಕು.

ಇದರಲ್ಲಿ ವಿಜೇತರಾದವರಿಗೆ 72,000 ರೂ. ರೂಪಾಯಿ ನಗದು ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಎಲ್ಲಾ ಸಿನಿಮಾಗಳನ್ನು ಉಚಿತವಾಗಿ ನೋಡುವ ಅವಕಾಶ ಸಿಗಲಿದೆ. ಜೊತೆಗೆ ಉಚಿತ ಗಿಫ್ಟ್ ಕಾರ್ಡ್ ಮತ್ತು ನೋ ಟೈಂ ಟು ಡೈ ಸಿನಿಮಾ ಉಚಿತವಾಗಿ ನೋಡುವ ಅವಕಾಶ ಸಿಗಲಿದೆ.

Recommended Video

Kangana Ranaut ಗೂ ಮುಂಚೆ ಹೆಚ್ಚು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿಯರು ಯಾರ್ಯಾರು? | Filmibeat Kannada

ಈ ಪ್ರಕ್ರಿಯೆ ಏಪ್ರಿಲ್ 16ರಂದೆ ಮುಕ್ತಾಯವಾಗಲಿದೆ. ಬಾಂಡ್ ಅಪ್ಪಟ ಅಭಿಮಾನಿಗಳು ಡಾ.ನಂ ನಿಂದ 2015ರಲ್ಲಿ ಬಂದ ಸ್ಪೆಕ್ಟರ್ ವರೆಗೂ ಸಿನಿಮಾ ನೋಡಿ ಎಂಜಾಯ್ ಮಾಡುವ ಜೊತೆಗೆ ಬಹುಮಾನವನ್ನು ಗೆಲ್ಲಬಹುದು.

More from Filmibeat

English summary
Website Offers chance to binge watch all 24 bond movies for win the money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X