Super Bowl 2025 ; ಹಾಲಿವುಡ್ ಸೆಲೆಬ್ರಿಟಿಗಳಿಗೆ ಹುಚ್ಚು ಹಿಡಿಸಿರುವ ಸೂಪರ್ ಬೌಲ್ ಬಗ್ಗೆ ನಿಮಗೆಷ್ಟು ಗೊತ್ತು...?
ಕ್ರಿಕೆಟ್ ಎಂದರೆ ಭಾರತದಲ್ಲಿ ಒಂದು ಧರ್ಮದಂತೆ ಆಚರಿಸಲಾಗುತ್ತದೆ. ಅದೇ ಅಮೆರಿಕಾದವರ ಪಾಲಿಗೆ ಸೂಪರ್ ಬೌಲ್ ಧರ್ಮ. ಪ್ರತಿ ವರ್ಷ ಫೆಬ್ರವರಿಯ ಮೊದಲ ಭಾನುವಾರದಿಂದ ಆರಂಭವಾಗುವ ಈ ಪುಟ್ಭಾಲ್ ಲೀಗ್‌ಗೆ ಇಡೀ ಅಮೆರಿಕಾ ಕಾತುರದಿಂದ ಕಾಯುತ್ತಿರುತ್ತೆ. ರಾಷ್ಟ್ರೀಯ ಪುಟ್ಬಾಲ್ ಲೀಗ್‌ನ ಈ ಚಾಂಪಿಯನ್ ಶಿಪ್‌ನಲ್ಲಿ ಅಮೆರಿಕನ್ ಫುಟ್ಬಾಲ್ ಕಾನ್ಪರೆನ್ಸ್ ಮತ್ತು ರಾಷ್ಟ್ರೀಯ ಪುಟ್ಬಾಲ್ ಕಾನ್ಸರೆನ್ಸ್‌ನ ವಿಜೇತರು ಸೆಣಸಾಡುತ್ತಾರೆ.
ಪ್ರತಿ ವರ್ಷ ಬೇರೆ ಬೇರೆ ನಗರಗಳಲ್ಲಿ ಆಯೋಜಿಸಲಾಗುವ ಈ ಪಂದ್ಯಾವಳಿಯನ್ನು ನೋಡಲು ಕೇವಲ ಅಮೆರಿಕ ಮಾತ್ರವಲ್ಲ ಬೇರೆ ದೇಶಗಳಿಂದ ಕೂಡ ಪ್ರೇಕ್ಷಕರು ಆಗಮಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಸೂಪರ್ ಬೌಲ್ ನ ಕ್ರೀಡಾಂಗಣದಲ್ಲಿ ಕುಳಿತು ಕಣ್ತುಂಬಿಕೊಳ್ಳುವುದು ಸುಲಭ ಅಲ್ಲ. ಅದಕ್ಕೆ ಜೇಬು ತುಂಬಾ ಗಟ್ಟಿಯಾಗಿರಬೇಕು. ಯಾಕೆಂದರೆ ಟಿಕೆಟ್‌ನ ಬೆಲೆ ಮೂರು ಲಕ್ಷದಿಂದ ಆರಂಭವಾಗುತ್ತೆ. ಇನ್ನೂ ಕೆಲವೊಮ್ಮೆ ಮತ್ತು ದುಬಾರಿ ಇರುತ್ತೆ. ಆದರೂ ಕೂಡ ಕ್ಯಾರೇ ಎನ್ನದ ಅನೇಕರು ಸೂಪರ್ ಬೌಲ್ ನೋಡಲು ತಮ್ಮ ಮನೆ ಮಂದಿಯನ್ನೆಲ್ಲ ಕರೆದುಕೊಂಡು ಹೋಗುತ್ತಾರೆ. ಅಷ್ಟರ ಮಟ್ಟಿಗೆ ಅಲ್ಲಿನ ಜನರ ಮೇಲೆ ಈ ಸೂಪರ್ ಬೌಲ್ ಪ್ರಭಾವ ಬೀರಿದೆ.

ಇನ್ನು. ಈ ಸೂಪರ್ ಬೌಲ್ ಕ್ರೇಜ್ ಹೇಗಿದೆ ಅಂದರೆ ಟೂರ್ನಾಮೆಂಟ್‌ಗೆ ಚಾಲನೆ ಸಿಗುವ ಮೊದಲ ಭಾನುವಾರವನ್ನು ಸೂಪರ್ ಬೌಲ್ ಸಂಡೇ ಎಂದೇ ಕರೆಯಲಾಗುತ್ತೆ. ಅಮೆರಿಕದಲ್ಲಿ ರಜೆಯನ್ನು ಕೂಡ ಘೋಷಣೆ ಮಾಡಲಾಗುತ್ತೆ. ಮೈದಾನದಲ್ಲಿ ಈ ಆಟವನ್ನು ಕಣ್ತುಂಬಿಕೊಳ್ಳಲು ಅನೇಕರಿಗೆ ಸಾಧ್ಯವಾಗದ ಹಿನ್ನೆಲೆ ಅಮೆರಿಕಾದ ಬಹುತೇಕ ಹೋಟೆಲ್‌ಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೂಪರ್ ಬೌಲ್ ಪಂದ್ಯಗಳನ್ನು ಪ್ರಸಾರ ಮಾಡಲಾಗುತ್ತೆ. ಸೂಪರ್ ಬೌಲ್ ಪಂದ್ಯಾವಳಿಯ ನೆಪದಲ್ಲಿ ಅಮೆರಿಕಾದಲ್ಲಿ ಅನೇಕರು ಫ್ಯಾಮಿಲಿ ಗೆಟ್ ಟುಗೆದರ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಾರೆ. ಎಲ್ಲ ಕುಟುಂಬಸ್ಥರು ಜೊತೆಯಲ್ಲಿ ಕುಳಿತು ಪಂದ್ಯಗಳನ್ನು ನೋಡುತ್ತಾ ಮೋಜು ಮಸ್ತಿ ಮಾಡುತ್ತಾರೆ.
ಇನ್ನು ಸೂಪರ್ ಬೌಲ್ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಲು ಅಮೆರಿಕಾದ ಮಾಧ್ಯಮ ಕೂಡ ಪ್ರಮುಖ ಕಾರಣ. ಪಂದ್ಯಾವಳಿ ಶುರುವಾಗುವ ಹತ್ತು-ಇಪ್ಪತ್ತು ದಿನದ ಮುನ್ನವೇ ಸೂಪರ್ ಬೌಲ್ ಸುತ್ತ ಮುತ್ತ ಅನೇಕ ಕಾರ್ಯಕ್ರಮಗಳನ್ನು ಅಮೆರಿಕಾದ ಮಾಧ್ಯಮಗಳು ಪ್ರಸಾರ ಮಾಡಲು ಶುರು ಮಾಡುತ್ತವೆ. ಹೈಪ್ ಸೃಷ್ಟಿಸುತ್ತವೆ. ಟಿಆರ್‌ಪಿಯಲ್ಲಿ ಕೂಡ ಅಲ್ಲಿನ ಮಾಧ್ಯಮ ದಾಖಲೆ ಬರೆಯುತ್ತವೆ. ಮಾಧ್ಯಮದವರಿಗೆ ಸಾರ್ವಕಾಲಿಕ ಅತೀ ಹೆಚ್ಚು ಟಿಆರ್‌ಪಿಯನ್ನು ತಂದು ನೀಡುವ ಟೂರ್ನಾಮೆಂಟ್ ಈ ಸೂಪರ್ ಬೌಲ್.
ಸೂಪರ್ ಬೌಲ್‌ನ ಇನ್ನೊಂದು ವಿಶೇಷ ಅಂದರೆ ಅದು ಹಾಫ್ ಟೈಮ್. ಪಂದ್ಯದ ನಡುವೆ ಆಟಗಾರರಿಗೆ ಸಿಗುವ ಈ ಹನ್ನೆರಡು ನಿಮಿಷದ ವಿಶ್ರಾಂತಿ ಸಮಯದಲ್ಲಿ ದುಡ್ಡಿನ ಸುರಿಮಳೆಯಾಗುತ್ತೆ. ಲೈವ್ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ನೃತ್ಯ ಕಾರ್ಯಕ್ರಮಗಳು ಇರುತ್ತವೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜಾಹೀರಾತುಗಳನ್ನು ಕೂಡ ಪ್ರದರ್ಶನ ಮಾಡಲಾಗುತ್ತೆ. ಮೈಕಲ್ ಜಾಕ್ಸನ್, ಬಿಯಾನ್ಸ್, ಶಕೀರಾ, ಮತ್ತು ದಿ ವೀಕೆಂಡ್ ಹೀಗೆ ಅನೇಕರು ಈ ಹಿಂದೆ ಸೂಪರ್ ಬೌಲ್‌ನಲ್ಲಿ ಹಾಡಿದ್ದಾರೆ. ಕುಣಿದಿದ್ದಾರೆ. ಹನ್ನೆರಡು ನಿಮಿಷದಲ್ಲಿ ಲಕ್ಷಾಂತರ ಜನರನ್ನು ಮನರಂಜಿಸಿದ್ದಾರೆ. 2016ರಲ್ಲಿ ಈ ಹಾಫ್ ಟೈಮ್‌ನಲ್ಲಿ ಕೇವಲ 30 ಸೆಕೆಂಡ್‌ಗೆ ಸುಮಾರು $4.8 ಮಿಲಿಯನ್ ಹಣವನ್ನು ಜಾಹೀರಾತು ಕಂಪನಿ ಸುರಿದಿತ್ತು ಅಂದರೆ ಈ ಆಟದ ಮಹಿಮೆ ಎಂತಹದ್ದು ಎನ್ನುವುದನ್ನು ನೀವೆ ಲೆಕ್ಕ ಹಾಕಿ. ಇಂಥಾ ಸೂಪರ್ ಬೌಲ್ ಈ ಭಾನುವಾರದಿಂದ ಆರಂಭವಾಗಲಿದೆ. ಟೇಲರ್ ಸ್ವಿಫ್ಟ್, ಪಾಲ್ ರುಡ್, ಬ್ರಾಡ್ಲಿ ಕೂಪರ್ ಮತ್ತು ಜಾನ್ ಬ್ಯಾಟಿಸ್ಟೆ ಉದ್ಘಾಟನಾ ಪಂದ್ಯಾವಳಿಗೆ ಆಗಮಿಸುವ ನಿರೀಕ್ಷೆ ಇದೆ.


Click it and Unblock the Notifications











