ಸುದೀಪ್ ಫುಲ್ ಬ್ಯುಸಿ, ಹಾಲಿವುಡ್ ಸಿನಿಮಾ ಯಾವಾಗ ಆರಂಭ.?

By Bharath Kumar

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದಕ್ಷಿಣ ಭಾರತದ ಬ್ಯುಸಿಯೆಸ್ಟ್ ನಟ. ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟಿಸುತ್ತಿರುವ ಯಶಸ್ವಿ ಕಲಾವಿದ. ಈ ಮಧ್ಯೆ ಹಾಲಿವುಡ್ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದ ಸುದೀಪ್ 'ರೈಸನ್' ಎಂಬ ಚಿತ್ರವನ್ನ ಆರಂಭಿಸಿದ್ದರು.

ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ನಿರೀಕ್ಷೆ ಹೆಚ್ಚಿಸಿದ್ದ ರೈಸನ್ ಚಿತ್ರೀಕರಣ ಯಾವಾಗ ಆರಂಭಿಸಲಿದೆ ಎಂಬ ಕುತೂಹಲ ಕಾಡಿದೆ. ಯಾಕಂದ್ರೆ, ಕಿಚ್ಚ ಸುದೀಪ್ ಅಷ್ಟು ಬ್ಯುಸಿಯಾಗಿದ್ದಾರೆ.

ಸದ್ಯ, ಕನ್ನಡದಲ್ಲಿ 'ಪೈಲ್ವಾನ್' ಚಿತ್ರವನ್ನ ಕೈಗೆತ್ತಿಕೊಂಡಿರುವ ಸುದೀಪ್ ಅದಾದ ನಂತರ 'ಕೋಟಿಗೊಬ್ಬ-3' ಚಿತ್ರವನ್ನ ಪ್ರಾರಂಭಿಸಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ಪಾತ್ರ ನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ ತಮಿಳು ನಟ ಧನುಶ್ ಚಿತ್ರದಲ್ಲಿ ಅಭಿನಯಿಸಲು ಆಹ್ವಾನ ನೀಡಿದ್ದಾರೆ.

when sudeep hollywood movie shooting start

ಇದರ ಜೊತೆ ಮಮ್ಮುಟಿ ಚಿತ್ರದಲ್ಲೂ ಕಿಚ್ಚ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಬ್ಯುಸಿಯಿರು ಸುದೀಪ್ ರೈಸನ್ ಚಿತ್ರವನ್ನ ಯಾವಾಗ ಶುರುಮಾಡಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ.

ಹಾಲಿವುಡ್ ನಿರ್ದೇಶಕ ಎಡ್ಡಿ ಆರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸುದೀಪ್ ಈ ಚಿತ್ರದಲ್ಲಿ ಅಮೇರಿಕಾದ ಕಮಾಂಡೋ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಸುದೀಪ್ ಗೆ ಜೋಡಿ ನಿಕೋಲ್ ಶಾಲ್ಮೋ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
It is interesting to know when to start kannada actor sudeep's hollywood movie risen. Presently sudeep busy in pailwan movie. the movie will directed by hebbuli krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X