ಹಿಂದೂ ದೇವತೆಯಂತೆ ವೇಷ ಧರಿಸಿ, ಅಸಹ್ಯ ಭಂಗಿಯಲ್ಲಿ ಶಿಲುಬೆ ನೆಕ್ಕಿದ ಗಾಯಕಿ, ಭುಗಿಲೆದ್ದ ಆಕ್ರೋಶ
ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಮಾನವನ ಹಕ್ಕುಗಳಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಆದರೆ ಈಗೀಗ .. ಅಭಿವ್ಯಕ್ತಿ ಹೆಸರಿನಲ್ಲಿ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದು, ಧಾರ್ಮಿಕ ವ್ಯಕ್ತಿತ್ವಗಳ ಅವಹೇಳನವನ್ನು ಮಾಡುವುದು ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆಯೇ 'ಟ್ರೂ ಬ್ಲೂ' ಹಾಡು.
ಹೌದು.. ಟ್ರೂ ಬ್ಲೂ.. ಜೆನಿಸಿಸ್ ಯಾಸ್ಮಿನ್ ಮೋಹನ್ ರಾಜ್ ಅಲಿಯಾಸ್ ಟಾಮಿ ಜೆನಿಸಿಸ್ ಅವರ ಹೊಸ ಹಾಡು. ಮೂಲತಃ ಕೆನಡಾದ ರ್ಯಾಪ್ ಸಿಂಗರ್ ಆಗಿರುವ ಜೆನಿಸಿಸ್ ತಂದೆ ತಮಿಳುನಾಡಿನವರಾದರೆ ತಾಯಿ ಸ್ವೀಡನ್‌ನವರು.

ಇಂಥಾ ಜೆನಿಸಿಸ್ ಯಾಸ್ಮಿನ್ ವಿರುದ್ಧ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಯಾಕೆಂದರೆ.. ಹಾಡಿನ ನೆಪದಲ್ಲಿ ಜೆನಿಸಿನ್ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಅವಮಾನ ಮಾಡಿದ್ದಾರೆ. ಹಾಡಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತೆ.
ಬಿಂದಿ .. ಕಿವಿಯೋಲೆ .. ಮೂಗುತಿ .. ಚಿನ್ನಾಭರಣ ಹಾಕಿಕೊಂಡು ಕಾಳಿ ದೇವತೆಯಂತೆ ಮೇಕಪ್ ಮಾಡಿಕೊಂಡಿರುವ ಜಿನಿಸಿನ್ ಯಾಸ್ಮಿನ್ ಮೈತುಂಬಾ ನೀಲಿ ಬಣ್ಣ ಬಳಿದುಕೊಂಡಿದ್ದಾರೆ. ಬಿಕಿನಿಯನ್ನು ಧರಿಸಿ ಕೈಯಲ್ಲಿ ಕ್ರಿಶ್ಚಿಯನ್ ಧರ್ಮದ ಶಿಲುಬೆಯನ್ನು ಹಿಡಿದು ಅಸಹ್ಯ- ಅಶ್ಲೀಲವಾದ ಭಂಗಿಗಳಲ್ಲಿ ಹಿಡಿದು ಫೋಸ್ ನೀಡಿದ್ದಾರೆ. ಶಿಲುಬೆಯನ್ನು ನೆಕ್ಕಿದ್ದಾರೆ.

ಸದ್ಯ .. ಜೆನಿಸಿಸ್ ಯಾಸ್ಮಿನ್ ಅವರ ಈ ಹಾಡು ಹಲವರನ್ನು ಕೆರಳಿಸಿದೆ. ಜೆನಿಸಸ್ ಯಾಸ್ಮಿನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೂಡ ಕೇಳಿ ಬರುತ್ತಿದೆ. ಹಲವರು ಜೆನಿಸಿಸ್ ಬೇಕು ಬೇಕಂತಲೇ ಉದ್ದೇಶಪೂರ್ವಕವಾಗಿ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಅವಮಾನ ಮಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಕ್ರಿಯಾಶೀಲತೆಯ ಹೆಸರಿನಲ್ಲಿ ಎರಡು ಧರ್ಮಗಳಿಗೆ ಮಾಡಲಾದ ಅವಮಾನ ಇದು ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಶಿಲುಬೆಯನ್ನು ಇಟ್ಟುಕೊಳ್ಳಬಾರದ ಜಾಗದೆಲ್ಲಲ್ಲ ಇಟ್ಕೊಂಡು ಎಲ್ಲರ ಭಾವನೆಗಳಿಗೆ ಜೆನಿಸಿಸ್ ನೋವುಂಟು ಮಾಡಿದ್ದಾರೆ ಎಂದಿದ್ದಾರೆ.
ವೈರಲ್ ಆಗಲು ಜೆನಿಸಿಸ್ ಉಪಯೋಗಿಸಿರುವ ಕೀಳು ಮಟ್ಟದ ಪ್ರಚಾರದ ತಂತ್ರ ಇದು ಎಂದು ಕೂಡ ಅನೇಕರು ತಮ್ಮ ಅಭಿಪ್ರಾಯವನ್ನು ಆಕ್ರೋಶವನ್ನು ಹೊರ ಹಾಕಿದ್ದಾರೆ. ಕೂಡಲೇ ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಬೇಕೆಂದು ಕೂಡ ಆಗ್ರಹಿಸುತ್ತಿದ್ದಾರೆ.
ಅಂದ್ಹಾಗೇ ಕೆನಡಾದ ವ್ಯಾಂಕೋವರ್‌ನಲ್ಲಿ ಜನಿಸಿದ ಟಾಮಿ ಜೆನೆಸಿಸ್, ಎಮಿಲಿ ಕಾರ್ ಆರ್ಟ್ ಅಂಡ್ ಡಿಸೈನ್ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. 34ರ ಪ್ರಾಯದ ಟಾಮಿ 2015ರಲ್ಲಿ ಅವ್‌ಫುಲ್ ರೆಕಾರ್ಡ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. 'ಮಿಕ್ಸ್ ಟೇಪ್ ವರ್ಲ್ಡ್ ವಿಷನ್'ನಲ್ಲಿ ಕಾಣಿಸಿಕೊಂಡಿದ್ದರು. 2016ರಲ್ಲಿ ಅಂತರಾಷ್ಟ್ರೀಯ ಮ್ಯಾಗ್‌ಜಿನ್ ಇವರನ್ನು ಬಂಡಾಯದ ಭೂಗತ ರ್ಯಾಪ್ ರಾಣಿ ಎಂದು ಬಣ್ಣಿಸಿತ್ತು.
ಲಿಂಗ, ಗುರುತು, ಲೈಂಗಿಕತೆಯ ಸುತ್ತ ಹೆಚ್ಚೆಚ್ಚು ಹಾಡುಗಳನ್ನು ಮಾಡುವ ಟಾಮಿ ಜೆನಿಸಿಸ್ 2018ರ ನವೆಂಬರ್‌ನಲ್ಲಿ ತಮ್ಮ ಮೊದಲ ಆಲ್ಬಂ ಹಾಡನ್ನು ಬಿಡುಗಡೆ ಮಾಡಿದ್ದರು. 2021ರಲ್ಲಿ ಗೋಲ್ಡಿ ಲಾಕ್ಸ್ ಎಕ್ಸ್ ಎಂಬ ಮತ್ತೊಂದು ಆಲ್ಬಂನ್ನು ಕೂಡ ಹೊರ ತಂದಿದ್ದರು.
ಈ ಎರಡು ಆಲ್ಬಂಗಳ ನಡುವೆ ಹಲವು ನಾನ್ ಆಲ್ಬಂ ಹಾಡುಗಳನ್ನು ಕೂಡ ಟಾಮಿ ಜೆನೆಸಿಸ್ ಹಾಡಿದ್ದಾರೆ. ಸದ್ಯ ಇವರ ಮೂರನೇ ಆಲ್ಬಂ ಜೆನೆಸಿಸ್ ಈ ಜುಲೈನಲ್ಲಿ ಸಂಪೂರ್ಣವಾಗಿ ಬಿಡುಗಡೆಯಾಗಲಿದ್ದು, ಸದ್ಯ ವಿವಾದಕ್ಕೀಡಾದ ಟ್ರೂ ಬ್ಲೂ ಹಾಡು ಈ ಜೆನೆಸಿಸ್ ಆಲ್ಬಂನಲ್ಲಿರುವ ಹಾಡಾಗಿದೆ. ಇದಕ್ಕೂ ಮುನ್ನ ತಮ್ಮ ಇದೇ ಆಲ್ಬಂದಿಂದ ಕಳೆದ ತಿಂಗಳು ಬೇಬಿ ಆರ್ ಯು ಓಕೆ ಹಾಡನ್ನು ಟಾಮಿ ಜೆನೆಸಿಸ್ ಬಿಡುಗಡೆ ಮಾಡಿದ್ದರು.
ಸದ್ಯ ಟಾಮಿ ಜೆನೆಸಿಸ್ ವಿರುದ್ದ ಆಕ್ರೋಶದ ಅಲೆ ಎದ್ದಿದ್ದು, ಈ ವಿವಾದದ ಕುರಿತು, ಹಾಡಿನ ಕುರಿತು ಟಾಮಿ ಜೆನೆಸಿಸ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications











