For Quick Alerts
  ALLOW NOTIFICATIONS  
  For Daily Alerts

  ಪ್ರತಿಯೊಬ್ಬ ಸಿನಿಮಾ ಪ್ರೇಮಿ ನೋಡಲೇಬೇಕಾದ ಚಿತ್ರ 'ದ ಗಾಡ್ ಫಾದರ್'!

  By ರವೀಂದ್ರ ಕೊಟಕಿ
  |

  ಒಂದು ಸಿನಿಮಾ ಬಿಡುಗಡೆಯಾಗಿ ಒಂದು ವಾರ ಅಥವಾ ತಿಂಗಳಿಗೆ ಮರೆತು ಹೋಗುತ್ತಿರುವ ಈಗಿನ ಕಾಲದಲ್ಲೂ, ಅದೊಂದು ಸಿನಿಮಾ ಬಿಡುಗಡೆಯಾಗಿ 49 ವರ್ಷಗಳು ಸಂದಿದೆ. ಅದರ ಜನಪ್ರಿಯತೆ ಮಾತ್ರ ಇಂದಿಗೂ ಕುಂದಿಲ್ಲ. ಅದರಿಂದ ಸ್ಫೂರ್ತಿ ಪಡೆದು ಅಥವಾ ಕಾಪಿ ಹೊಡೆದು ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ನೂರಾರು ಚಿತ್ರಗಳು ಬಿಡುಗಡೆಯಾಗಿ ಭರ್ಜರಿ ಯಶಸ್ಸನ್ನು ಕೂಡ ಕಂಡಿವೆ. ಇಂದಿಗೂ ಈ ಚಿತ್ರ ಪ್ರಪಂಚದ ಸಿನಿ ಜಗತ್ತಿನಲ್ಲಿ ಒಂದು ಕಲ್ಟ್ ಕ್ಲಾಸ್ಸಿಕ್. 24 ಮಾರ್ಚ್ 1972 ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಸರಿಸಮನಾದ ಮತ್ತೊಂದು ಗ್ಯಾಂಗ್ಸ್ಟರ್ ಚಿತ್ರ ಬಂದಿಲ್ಲ. ಸತತ 50 ವರ್ಷಗಳಿಂದ ವಿಶ್ವದ ದಿ ಬೆಸ್ಟ್ ಸಿನಿಮಾ ಆಗಿ ಉಳಿದಿರುವ ಚಿತ್ರವೇ 'ದ ಗಾಡ್ ಫಾದರ್'.

  'ದ ಗಾಡ್ ಫಾದರ್' ಮೂಲತಃ ಅದೇ ಹೆಸರಿನಲ್ಲಿ ಕಾದಂಬರಿಕಾರ 'ಮಾರಿಯೋ ಪುಜೊ' ಬರೆದ ಕಾದಂಬರಿಯನ್ನು ಆಧರಿಸಿ 'ಫ್ರಾನ್ಸಿಸ್ ಫೋರ್ಡ್ ಕಾಪ್ಪೋಲೋ' ನಿರ್ದೇಶಿಸಿದ್ದಾರೆ. ಒಂದು ಯಾವ ಗ್ರೀನ್ ಕ್ಲಾಸ್ಸಿಕ್ ಮಾಸ್ಟರ್ ಪೀಸ್ ಜೊತೆಗೆ ಗ್ಯಾಂಗ್ಸ್ಟರ್ ಚಿತ್ರ. ಆದರೆ ಇಂತ ಚಿತ್ರವನ್ನು ನೋಡಲು ನಿಮಗೆ ಆಸಕ್ತಿದ್ದರೆ ಮಾತ್ರ ಸಾಲದು ಜೊತೆಗೆ ಸಿನಿಮಾ ನೋಡುವ ತಾಳ್ಮೆ ಕೂಡ ಬೇಕಾಗುತ್ತದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳು. ಒಂದು, ಸಿನಿಮಾ ಮೂರುಗಂಟೆಯ ಕಾಲಾವಧಿ. ಎರಡು, ಸಿನಿಮಾದ ಆರಂಭ ಮಂದಗತಿಯಲ್ಲಿ ಇರುತ್ತದೆ. ಇನ್ನು ಚಿತ್ರದ ಎರಡು ಪ್ರಮುಖ ಆಕರ್ಷಣೆಗಳು ಒಂದು, ತಂದೆ ಮತ್ತು ಮಗನ ನಡುವಿನ ಸಂಬಂಧ. ಎರಡು, ಕ್ರೈಂ ಫ್ಯಾಮಿಲಿ ಡ್ರಾಮಾ. ಇನ್ನು ಈ ಚಿತ್ರದ ಅತಿದೊಡ್ಡ ಯಶಸ್ವಿಗೆ ಕಾರಣವಾಗುವ ಅಂಶಗಳನ್ನು ನೋಡುವುದಾದರೆ ಅದು ಕತೆಯಾಗಬಹುದು, ಚಿತ್ರಕಥೆ, ಸಿನಿಮಾಟೋಗ್ರಫಿ, ಬ್ಯಾಕ್ ಗ್ರೌಂಡ್ ಸ್ಕೋರ್, ಪಾತ್ರಗಳ ನಿರ್ವಹಣೆ ಹೀಗೆ ಎಲ್ಲವೂ ಪೈಪೋಟಿಗೆ ಬಿದ್ದಂತೆ ಈ ಕ್ಲಾಸ್ ಸಿನಿಮಾವನ್ನು ರೂಪಿಸಿದೆ.

  ದೆವ್ವದ ಸಿನಿಮಾ ನೋಡುವ ಕೆಲಸ ಖಾಲಿ ಇದೆ, 90 ಸಾವಿರ ಸಂಬಳ: ಯಾರಿಗಿದೆ ಧೈರ್ಯ?ದೆವ್ವದ ಸಿನಿಮಾ ನೋಡುವ ಕೆಲಸ ಖಾಲಿ ಇದೆ, 90 ಸಾವಿರ ಸಂಬಳ: ಯಾರಿಗಿದೆ ಧೈರ್ಯ?

  ಕಥೆಯೊಳಗೆ ಪ್ರವೇಶಿಸುವುದಕ್ಕೆ ಮೊದಲು ಎರಡು ಪ್ರಮುಖ ಪಾತ್ರಗಳ ವಿವರಣೆ ಅನಿವಾರ್ಯ. 'ಡಾನ್ ವಿಟೊ ಕಾರ್ಲಿಯೋನ್' ಈ ಸಿನಿಮಾದ ಕೇಂದ್ರ ಬಿಂದು ಅತ್ಯಂತ ಕ್ರೂರವಾದ ಡಾನ್, ವಿಟೊ ಫ್ಯಾಮಿಲಿಯ ಮುಖ್ಯಸ್ಥ. ಕುಟುಂಬಕ್ಕೆ ಮತ್ತು ಅಂಡರ್ವರ್ಲ್ಡ್ ಗೆ ಈತನೇ 'ದ ಗಾಡ್ ಫಾದರ್'. ಅತ್ಯಂತ ಚಾಕಚಕ್ಯತೆ ಮತ್ತು ಬುದ್ಧಿವಂತಿಕೆಯಿಂದ ಎಲ್ಲವನ್ನು ಡೀಲ್ ಮಾಡುವ ಡಾನ್. ಅವನ ಬಲ ಮತ್ತು ಬಲಹೀನತೆ ಎರಡು ಕೂಡ ಅವನ ಅತಿ ದೊಡ್ಡ ಸಂಸಾರ. ಡಾನ್ ವಿಟೊ ಕಾರ್ಲಿಯೋನ್ ಕೊನೆಯ ಮಗ. ಚಿತ್ರದ ಅತ್ಯಂತ ಪ್ರಮುಖ ಪಾತ್ರ ಕೂಡ. ಇನ್ನು ಈ ಪಾತ್ರಗಳು ಹೊರತಾಗಿ ಕೂಡ ಅನೇಕ ಪಾತ್ರಗಳಿವೆ. ಜೊತೆಗೆ ದೊಡ್ಡಮಟ್ಟದ ಗ್ಯಾಂಗ್ಸ್ಟರ್ ಗಳಿದ್ದಾರೆ. ಹೀಗಾಗಿ ಪಾತ್ರಗಳ ವಿವರಣೆಯನ್ನು ಇಲ್ಲಿಗೆ ನಿಲ್ಲಿಸಿ ಕಥೆಯೊಳಗೆ ಪ್ರವೇಶ ಮಾಡೋಣ. ಮುಂದೆ ಓದಿ...

  ಮೆಟ್‌ ಗಾಲಾ 2021ನಲ್ಲಿ ಪಾಲ್ಗೊಂಡ ಏಕೈಕ ಭಾರತೀಯ ಮಹಿಳೆ ಸುಧಾ ರೆಡ್ಡಿ ಯಾರು?ಮೆಟ್‌ ಗಾಲಾ 2021ನಲ್ಲಿ ಪಾಲ್ಗೊಂಡ ಏಕೈಕ ಭಾರತೀಯ ಮಹಿಳೆ ಸುಧಾ ರೆಡ್ಡಿ ಯಾರು?

  ಕಥೆಯ ಆರಂಭ

  ಕಥೆಯ ಆರಂಭ

  ಅದು ನ್ಯೂಯಾರ್ಕ್ ಸಿಟಿ. 19 45ರ ಕಾಲಘಟ್ಟ ಗಾಡ್ ಫಾದರ್ ಕೊನ್ನಿ ವಿವಾಹದ ಸಂದರ್ಭದೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ಚಿತ್ರದ ಮೊದಲ ದೃಶ್ಯದಲ್ಲಿ ಬೋನ್ ಸೇರ ತನ್ನ ಮಗಳನ್ನು ಕಾಪಾಡುವಂತೆ, ಅದಕ್ಕೆ ಬೇಕಾದಷ್ಟು ಹಣವನ್ನು ತಾನು ಕೊಡುವುದಾಗಿ ಕೂಡ ಗಾಡ್ ಫಾದರ್ ಗೆ ಹೇಳುತ್ತಾನೆ. ಹೀಗೆ ಹಣದ ಆಫರ್ ಮಾಡುವುದು ಗಾಡ್ ಫಾದರ್ ಗೆ ಇಷ್ಟವಾಗುವುದಿಲ್ಲ. ಸಹಾಯ ಕೇಳಿಕೊಂಡು ಬರುವ ಪದ್ದತಿ ಇದಲ್ಲ, ಗಾಡ್ ಫಾದರ್ ಹತ್ತಿರ ನ್ಯಾಯ ಮಾಡುವಂತೆ ಕೇಳಿಕೊಂಡು ಬರುವವರು ಹೇಗೆ ಇರಬೇಕು? ಹೇಗೆ ವರ್ತಿಸಬೇಕು? ಅಂತ ಪ್ರಶ್ನಿಸುವ ಗಾಡ್ ಫಾದರ್, ಗಾಡ್ ಫಾದರ್ ನ ಗಾಡ್ ಫಾದರ್ ತರ ನೋಡಬೇಕು. ಖರೀದಿ ಮಾಡುವ ಪ್ರಯತ್ನ ಮಾಡಬಾರದು ಅಂತ ಎಚ್ಚರಿಕೆ ಕೊಡುತ್ತಾನೆ. ಇದರಿಂದ ಭಯ ಬಿದ್ದ ಅವನು ಸಹಾಯ ಮಾಡುವಂತೆ ಅಂಗಲಾಚುತ್ತಾನೆ. ಅದಕ್ಕೆ ಗಾಡ್ ಫಾದರ್ ಸಹಾಯ ಮಾಡುವುದಾಗಿ ಮಾತು ಕೊಡುತ್ತಾನೆ. ಸುಮಾರು ಹತ್ತು ನಿಮಿಷದ ಈ ದೃಶ್ಯ ಗಾಡ್ ಫಾದರ್ ನ ಗತ್ತು, ವ್ಯಕ್ತಿತ್ವದ ಅನಾವರಣಗೊಳಿಸುತ್ತದೆ.

  ಗಾಡ್ ಫಾದರ್ ಮಗಳ ವಿವಾಹ

  ಗಾಡ್ ಫಾದರ್ ಮಗಳ ವಿವಾಹ

  ಇದರ ನಂತರ ಗಾಡ್ ಫಾದರ್ ಮಗಳು ಕೊನ್ನಿ ಮದುವೆ ಸಂಭ್ರಮ. ಇದರಲ್ಲಿಯೇ ಚಿತ್ರದ ಬಹುತೇಕ ಎಲ್ಲಾ ಪಾತ್ರಗಳು ನಮಗೆ ಕಾಣಸಿಗುತ್ತವೆ. ಮೈಕಲ್ ತನ್ನ ಪ್ರೇಯಸಿ ಕೆ ಆಡಮ್ಸ್ ಅನ್ನು ರಿಸೆಪ್ಷನ್ ಅಲ್ಲಿ ಕುಟುಂಬಕ್ಕೆ ಇಂಟ್ರೊಡ್ಯೂಸ್ ಮಾಡುತ್ತಾನೆ. ಡಾನ್ ಕುಟುಂಬಕ್ಕೆ ಸೇರಿದ್ದರು ಕೂಡ ಮೈಕಲ್ ಈ ಎಲ್ಲಾ ಚಟುವಟಿಕೆಗಳಿಂದ ದೂರ ಇರುತ್ತಾನೆ. ಹೀಗಾಗಿ ತನ್ನ ತಂದೆ ಮಾಡುವ ಕೆಲಸಗಳು ತನಗೆ ಇಷ್ಟವಾಗುವುದಿಲ್ಲ ಅಂತ ಮೈಕಲ್ ಕೆ ಗೆ ಹೇಳುತ್ತಾನೆ.

  - ಇದೆ ರಿಸೆಪ್ಶನ್ ನಲ್ಲಿ ಖ್ಯಾತ ಗಾಯಕ ಜಾನ್ ತನಗೆ ಸಿನಿಮಾದಲ್ಲಿ ಅಭಿನಯಿಸುವ ಆಸಕ್ತಿ ಇದೆ, ಒಂದು ಅವಕಾಶ ಕೊಡಿಸುವಂತೆ ಗಾಡ್ ಫಾದರ್ ನಲ್ಲಿ ಕೇಳಿಕೊಳ್ಳುತ್ತಾನೆ. ಸ್ಟುಡಿಯೋ ಒಂದರ ಓನರ್ ವಾಲ್ಟನ್ ಜಾಕ್ ಓಲ್ಡ್ ಸ್ಟುಡಿಯೋ ಜೊತೆ ಮಾತನಾಡುವಂತೆ ನಂಬಿಕಸ್ತ ಟಾಮ್ ಗೆ ಲಾಸ್ ಎಂಜಲೀಸ್ ಕಳಿಸುತ್ತಾನೆ.ಅದೇ ರೀತಿ ಅವನು ಆ ಸ್ಟುಡಿಯೋ ಓನರ್ ಬಳಿ ಹೋಗಿ ಗಾಡ್ ಫಾದರ್ ಹೇಳಿದ ವಿಷಯ ತಲುಪಿಸಿದಾಗ ಜಾನ್ ಗೆ ಪಾತ್ರ ನೀಡಲು ಅವನು ನಿರಾಕರಿಸುತ್ತಾನೆ. ಮಾರನೇ ದಿವಸ ಆ ಸ್ಟುಡಿಯೋ ಓನರ್ ಸಾಕಷ್ಟು ಹಣ ಕೊಟ್ಟು ಖರೀದಿಸಿದ ಅವನ ಪ್ರೀತಿಯ ಕುದುರೆಯ ತಲೆ ಅವನ ಕಾಲಿನ ಬಳಿ ಕತ್ತರಿಸಿ ಇಡಲಾಗಿರುತ್ತದೆ. ಗಾಡ್ ಫಾದರ್ ಮಾತನ್ನು ಧಿಕ್ಕರಿಸಿದರೆ ಯಾವ ಸ್ಥಿತಿ ಬರುತ್ತದೆ ಅಂತ ಸೂಚಕವಾಗಿ ಆ ದೃಶ್ಯ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.

  ಮಾಫಿಯಾ ಕುಟುಂಬಗಳು

  ಮಾಫಿಯಾ ಕುಟುಂಬಗಳು

  ಈ ಚಿತ್ರದಲ್ಲಿ ಕೇವಲ ಗಾಡ್ ಫಾದರ್ ನ ಕುಟುಂಬ ಮಾತ್ರವಲ್ಲದೆ ಇದರ ಜೊತೆಗೆ ಐದು ಮಾಫಿಯಾ ಕುಟುಂಬಗಳು ಚಿತ್ರದಲ್ಲಿರುತ್ತದೆ. ಕ್ರಿಸ್ಮಸ್ ಗೆ ಕೆಲವು ದಿನಗಳ ಮೊದಲು ಡ್ರಗ್ ಮಾಫಿಯಾದ ಸೊಲೋಜೂ ಡ್ರಗ್ಸ್ ವ್ಯವಹಾರದಲ್ಲಿ ತಮಗೆ ಸಹಾಯವಾಗಿ ನಿಲ್ಲಬೇಕು ಅಂತ ಕೇಳುತ್ತಾನೆ. ಇವನಂತೆ ಇನ್ನೂ ಎರಡು ಕುಟುಂಬಗಳು ಇದೇ ವ್ಯವಹಾರವನ್ನು ಮಾಡುತ್ತಿರುತ್ತಾರೆ. ಇದಕ್ಕೆ ಗಾಡ್ ಫಾದರ್ ಹಿರಿಯ ಮಗ ಸನ್ನಿ, ಟಾಮ್ ಸಮರ್ಥಿಸುತ್ತಾರೆ ಆದರೆ ಡ್ರಗ್ಸ್ ಡೀಲಿಂಗ್ ತುಂಬಾ ರಿಸ್ಕ್ ಮತ್ತು ಡೇಂಜರಸ್ ಅಂತ ಗ್ರಹಿಸಿದ ಗಾಡ್ ಫಾದರ್ ಇದಕ್ಕೆ ಒಪ್ಪಿಕೊಳ್ಳುವುದಿಲ್ಲ. ಸೊಲೋಜೂ ಮೇಲೆ ಒಂದು ಕಣ್ಣಿಡುವಂತೆ ಲುಕಾ ಬ್ರಾಸಿಗೆ ಗಾಡ್ ಫಾದರ್ ಹೇಳುತ್ತಾನೆ. ಆದರೆ ಇದನ್ನು ಅರ್ಥೈಸಿಕೊಂಡ ಸೊಲೋಜೂ ಲುಕಾ ಬ್ರಾಸಿನ ಕೊಂದು ಬಿಡುತ್ತಾನೆ.

  ಗಾಡ್ ಫಾದರ್ ಹತ್ಯಾಯತ್ನ, ಮೈಕಲ್ ಎಂಟ್ರಿ

  ಗಾಡ್ ಫಾದರ್ ಹತ್ಯಾಯತ್ನ, ಮೈಕಲ್ ಎಂಟ್ರಿ

  ಇದಾದ ಕೆಲವು ದಿನಗಳಿಗೆ ಒಂದು ಫ್ರೂಟ್ ಶಾಪ್ ಮುಂದೆ ಗಾಡ್ ಫಾದರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಇದರ ನಂತರ ಹಿರಿಯ ಮಗ ಸನ್ನಿ ಗಾಡ್ ಫಾದರ್ ಸ್ಥಾನದಲ್ಲಿ ಡಾನ್ ಆಗಿ ಕೂರುತ್ತಾನೆ. ಆಸ್ಪತ್ರೆಗೆ ಅಡ್ಮಿಟ್ ಆದ ಗಾಡ್ ಫಾದರ್ ಅನ್ನ ನೋಡಲು ಕಿರಿಯ ಮಗ ಮೈಕಲ್ ಬರುತ್ತಾನೆ. ತನ್ನ ತಂದೆ ಮೇಲೆ ನಡೆದ ಹತ್ಯಾಯತ್ನದ ಹಿಂದೆ ಸೊಲೋಜೂ ಕೈವಾಡವಿದೆ ಎಂದು ಭಾವಿಸುತ್ತಾನೆ. ಮೈಕಲ್ ಇಲ್ಲಿಂದಲೇ ಅಂಡರ್ವರ್ಲ್ಡ್ ಗೆ ಎಂಟ್ರಿ ತೆಗೆದುಕೊಳ್ಳುತ್ತಾನೆ. ಮೈಕಲ್ ಅಂಡರ್ವರ್ಲ್ಡ್ ಗೆ ಬರುವುದು ಗಾಡ್ ಫಾದರ್ ಗೆ ಎಳ್ಳಷ್ಟು ಇಷ್ಟವಿರುವುದಿಲ್ಲ.ಇಡೀ ಗಾಡ್ ಫಾದರ್ ಕುಟುಂಬದಲ್ಲಿ ಮೈಕಲ್ ಮಾತ್ರ ಈ ಚಟುವಟಿಕೆಗಳಿಂದ ದೂರ ಇದ್ದವನು ಮತ್ತು ಅತ್ಯಂತ ಸಭ್ಯಸ್ಥ ನು ಕೂಡ. ಇಲ್ಲಿ ತಂದೆ ಮತ್ತು ಮಗನ ನಡುವಿನ ಒಂದು ತಿಕ್ಕಾಟಅದ್ಭುತವಾಗಿ ಹೆಣೆಯಲಾಗಿದೆ.ಮುಂದೆ ಚಿತ್ರದಲ್ಲಿ ಕೆಲವು ತಿರುವುಗಳು ಪಡೆದ ನಂತರ ಮೈಕಲ್ ಸೊಲೋಜೂನ ಅವನ ಬೆಂಬಲಕ್ಕೆ ನಿಂತ ಪೊಲೀಸ್ ಅಧಿಕಾರಿಯನ್ನು ಕೊಂದು ಗಾಡ್ ಫಾದರ್ ಜನ್ಮಸ್ಥಳವಾದ ಸಿಸಿಲಿ ಗೆ ಹೊರಟು ಹೋಗುತ್ತಾನೆ. ಕತೆ ಹೀಗೆ ಮುಂದೆ ಸಾಗಿದ ನಂತರ ಗಾಡ್ ಫಾದರ್ ನ ಹಿರಿಯ ಮಗನ ಟೋಲ್ ಬೂತ್ ಒಂದರ ಬಳಿ ಹತ್ಯೆ ಮಾಡಲಾಗುತ್ತದೆ. ಹಿರಿಯಣ್ಣನ ಸ್ಥಾನದಲ್ಲಿ ಮೈಕಲ್ ಬಂದು ಕುಟುಂಬದ ಜವಾಬ್ದಾರಿ ಮತ್ತು ಗಾಡ್ ಫಾದರ್ ನ ಸ್ಥಾನವನ್ನು ಕೂಡ ಪಡೆಯುತ್ತಾನೆ.

  ಗಾಡ್ ಫಾದರ್ ನಿಧನ-ಐದು ಕುಟುಂಬಗಳ ಅಧಿಪತಿಗಳ ಹತ್ಯೆ

  ಗಾಡ್ ಫಾದರ್ ನಿಧನ-ಐದು ಕುಟುಂಬಗಳ ಅಧಿಪತಿಗಳ ಹತ್ಯೆ

  ಮೈಕಲ್ ಕೈಯಲ್ಲಿ ಈಗ ಗಾಡ್ ಫಾದರ್ ನ ಸಾಮ್ರಾಜ್ಯ ಭದ್ರವಾಗಿರುತ್ತದೆ. ಇದೇ ಸಮಯದಲ್ಲಿ ಮೈಕಲ್ ನ ಮಗನ ಜೊತೆ ಆಟವಾಡುತ್ತಿದ್ದ ಗಾಡ್ ಫಾದರ್ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಳ್ಳುತ್ತಾನೆ. ಮುಂದೆ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮೈಕಲ್ ಎಲ್ಲಾ 5 ಮಾಫಿಯಾ ಕುಟುಂಬಗಳ ಅಧಿಪತಿ ಗಳನ್ನು ಚರ್ಚ್ ಒಂದರಲ್ಲಿ ಸ್ಕೆಚ್ ಹಾಕಿ ಕೊಂದು ಬಿಡುತ್ತಾನೆ. ಇದರ ನಂತರ ಮೈಕಲ್ ಎದುರಾಳಿ ಗಳಿಲ್ಲದ ಡಾನ್ ಆಗುತ್ತಾನೆ. ಇದೇ ಸಮಯದಲ್ಲಿ ಲಾಸ್ ವೆಗಾಸ್ ಗೆ ಕುಟುಂಬವನ್ನು ಶಿಫ್ಟ್ ಮಾಡಬೇಕೆಂಬ ತನ್ನ ನಿರ್ಣಯದಿಂದ ಹಿಂದೆ ಸರಿಯುತ್ತಾನೆ. ಮೈಕಲ್ ತನ್ನ ಆಧಿಪತ್ಯವನ್ನು ಇಲ್ಲಿಂದ ವಿಸ್ತರಿಸಿಕೊಳ್ಳುವ ಯೋಚನೆಯಲ್ಲಿ ಮಗ್ನನಾಗುತ್ತಾನೆ. ಮುಂದೆ ಏನಾಗುತ್ತದೆ...? ಇದಕ್ಕಾಗಿ ನೀವು 'ದ ಗಾಡ್ ಫಾದರ್ -2' ನೋಡಬೇಕಾಗುತ್ತದೆ!

  ಚಿತ್ರ ಮುಗಿದ ನಂತರವೂ ಕಾಡುತ್ತದೆ!

  ಚಿತ್ರ ಮುಗಿದ ನಂತರವೂ ಕಾಡುತ್ತದೆ!

  ಚಿತ್ರದ ಎಲ್ಲಾ ಕಥೆಯನ್ನು ಕೆಲವೇ ಸಾಲುಗಳಲ್ಲಿ ಬರೆಯುವುದು ಕಷ್ಟಕರ. ಹೀಗಾಗಿ ಸಾಧ್ಯವಾದಷ್ಟು ವಿವರಣೆ ಕೊಡುವ ಪ್ರಯತ್ನ ಮಾಡಿದ್ದೇನೆ. ದೊಡ್ಡ ಕ್ಯಾನ್ವಾಸ್ ನಲ್ಲಿರುವ ಪಾತ್ರಗಳು, ಅವುಗಳ ವರ್ತನೆ, ಚಿತ್ರದಲ್ಲಿ ಬರುವ ತಿರುವುಗಳು ಹೀಗೆ ಎಲ್ಲವನ್ನು ಒಂದು ವಿಮರ್ಶೆಯಲ್ಲಿ ಹೇಳುವುದು ಕಷ್ಟಸಾಧ್ಯದ ಕೆಲಸವೇ ಸರಿ.ಸುದೀರ್ಘ ಮೂರು ಗಂಟೆಗಳ ಕಾಲ ತದೇಕಚಿತ್ತದಿಂದ ಸಿನೆಮಾ ನೋಡಿ ಹೊರಗೆ ಬಂದಮೇಲೆ ಕೂಡ ಇದರಲ್ಲಿನ ಪ್ರತಿಯೊಂದು ದೃಶ್ಯಾವಳಿಗಳು, ಕೌಟುಂಬಿಕ ಕಲಹಗಳು, ಗ್ಯಾಂಗ್ ಸ್ಟಾರ್ ಗಳ ಜೀವನ, ಅಂಡರ್ವರ್ಲ್ಡ್ ನ ತಂತ್ರಗಳು ಕುತಂತ್ರಗಳು ಹೀಗೆ ಪ್ರತಿಯೊಂದು ನಮ್ಮನ್ನ ಹಿಡಿದಿಟ್ಟು ಆಲೋಚಿಸುವಂತೆ ಮಾಡುತ್ತದೆ. 'ಮರ್ಲಾನ್ ಬ್ರಾಂಡೊ'ಗಾಡ್ ಫಾದರ್ ಪಾತ್ರದಲ್ಲಿ ಜೀವಿಸಿರುವ ವಿಧಾನವೇ ಒಂದು ರೀತಿಯ ಸೈಲೆಂಟ್ ಕಿಲ್ಲರ್. ಅಲ್ ಪ್ಯಾಸಿನೊ ಮೈಕಲ್ ಪಾತ್ರದಲ್ಲಿ ಗಮನಾರ್ಹ. ಪಾತ್ರವರ್ಗ ತುಂಬಾ ದೊಡ್ಡದಾಗಿರುವುದರಿಂದ ಎಲ್ಲಾ ಪಾತ್ರಗಳ ಬಗ್ಗೆ ವಿವರಣೆ ನೀಡಲು ಸಾಧ್ಯವಿಲ್ಲ, ಆದರೆ ಪ್ರತಿಯೊಬ್ಬರೂ ಅವರ ಪಾತ್ರಕ್ಕೆ ಸಂಯೋಜಿತವಾದ ನಾಯವನ್ನೇ ಒದಗಿಸಿದ್ದಾರೆ.

  ಪ್ರಪಂಚ ಸಿನಿಮಾರಂಗದ 'ಮಾಸ್ಟರ್ ಪೀಸ್'

  ಪ್ರಪಂಚ ಸಿನಿಮಾರಂಗದ 'ಮಾಸ್ಟರ್ ಪೀಸ್'

  'ದ ಗಾಡ್ ಫಾದರ್' ಇಂದಿಗೂ ಪ್ರಪಂಚದ ಸಿನಿಮಾ ಜಗತ್ತಿನಲ್ಲೊಂದು ಮಾಸ್ಟರ್ ಪೀಸ್. ಸರಿಸುಮಾರು 50 ವರ್ಷದ ನಂತರವೂ ಇದರ ಹತ್ತಿರಕ್ಕೆ ಮತ್ತೊಂದು ಗ್ಯಾಂಗ್ಸ್ಟರ್ ಚಿತ್ರ ಬಂದು ನಿಲ್ಲುತ್ತಿಲ್ಲ. ಅಮೇರಿಕಾದ ಸಿನಿಮಾ ಜಗತ್ತಿನಲ್ಲಿ (ಹಾಲಿವುಡ್) ಇಂದಿಗೂ ಇದು ಎರಡನೇ ಅತ್ಯುತ್ತಮ ಚಿತ್ರ (ಮೊದಲನೆಯ ಅತ್ಯುತ್ತಮ ಚಿತ್ರ: ಸಿಟಿಜನ್ ಕೇನ್) ಹೆಗ್ಗಳಿಕೆಯನ್ನು ಪಡೆದಿದೆ. ಈ ಚಿತ್ರದಿಂದ ಸ್ಪೂರ್ತಿಗೊಂಡು ಅನೇಕ ಚಿತ್ರಗಳು ಪ್ರಪಂಚದಲ್ಲಿ ರೂಪಗೊಂಡು ಅವು ಕೂಡ ಮಾಸ್ಟರ್ ಪೀಸ್ ಗಳಾಗಿಯೇ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಮಣಿರತ್ನಂ ನಿರ್ದೇಶನದ 'ನಾಯಗನ್', ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಸರ್ಕಾರ್' ಈ ಸಾಲಿನಲ್ಲಿ ನಿಲ್ಲುವ ಕೆಲವು ಪ್ರಮುಖ ಚಿತ್ರಗಳು. ಪ್ರತಿ ಸಿನಿಮಾಸಕ್ತರು ಒಮ್ಮೆ ಒಂದು ಪರಿಪೂರ್ಣ ಚಿತ್ರದ ಮೇಕಿಂಗ್ ಅನ್ನು ತಿಳಿಯಲು ಗಾಡ್ ಫಾದರ್ ತಪ್ಪದೇ ನೋಡಲೇಬೇಕು.

  English summary
  Why Cinema Lovers Must watch World Best Movie The God Father.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X