ಬೆಳ್ಳಿತೆರೆಯ ಸುಂದರಿಗೆ ಕ್ಲೀನ್ ಬೋಲ್ಡ್ ಆದ ಸ್ಟಾರ್ ಕ್ರಿಕೆಟರ್ ; ಮಂಡಿಯೂರಿ ಪ್ರಪೋಸ್- ನಟಿ ಭಾವುಕ

ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ಇಲ್ಲಿಯವರೆಗೆ ಹಲವಾರು ಕ್ರಿಕೆಟ್ ಸ್ಟಾರ್‌ಗಳು ಸಿಲುಕಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ತಮ್ಮ ಪರಾಕ್ರಮದ ಪ್ರದರ್ಶನ ಮಾಡುವ ಹಲವರು ಬೆಳ್ಳಿತೆರೆಯ ಮಹಾರಾಣಿಯರ ಸೌಂದರ್ಯಕ್ಕೆ ಮನ ಸೋತಿದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ''ಬಿಲ್ಲಾ''.. ''ಮ್ಯಾಕ್ಸಿಮಮ್''.. ''ಬಾಡಿಗಾರ್ಡ್‌''.. ಚಿತ್ರಗಳ ಚೆಲುವೆ ಹೇಜಲ್ ಕೀಚ್ ಅವರ ಜೊತೆ ಯುವರಾಜ್ ಸಿಂಗ್ ಮದುವೆಯಾಗಿದ್ದಾರೆ. ''ದಿಲ್ ದಿಯಾ ಹೈ''.. ''ದಿ ಟ್ರೈನ್''.. ''ಜಿಲ್ಲಾ ಗಾಜಿಯಾಬಾದ್''.. ನಾಯಕಿ ಗೀತಾ ಬಸ್ರಾ ಜೊತೆ ಹರ್ಭಜನ್ ಸಿಂಗ್ ಸಪ್ತಪದಿ ತುಳಿದಿದ್ದಾರೆ. ''ಚಕ್ ದೇ ಇಂಡಿಯಾ'' ಚೆಲುವೆ ಸಾಗರಿಕಾಗೆ ಜಹೀರ್ ಖಾನ್ ಶರಣಾಗಿದ್ದಾರೆ.

WICKET TAKEN Sam Curran Engaged to Stunning Actress Isabella Grace All the Viral Details

ಇವರಷ್ಟೇ ಅಲ್ಲ ಕೆ.ಎಲ್.ರಾಹುಲ್.. ವಿರಾಟ್ ಕೊಹ್ಲಿ.. ಒಬ್ಬರಾ.. ಇಬ್ಬರಾ.. ಹೀಗೆ ಹಲವರು ಚಿತ್ರರಂಗದ ನಾಯಕಿಯರ ಜೊತೆ ಹೊಸ ಬದುಕು ಶುರು ಮಾಡಿದ್ಧಾರೆ. ಇಷ್ಟೇ ಯಾಕೆ ಮೊನ್ನೆ ಮೊನ್ನೆ ಸ್ಮೃತಿ ಮಂಧಾನ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕೇವಲ ಭಾರತದ ಕ್ರಿಕೆಟ್ ಪ್ಲೇಯರ್ಸ್ ಮಾತ್ರ ಅಲ್ಲ ವಿದೇಶದ ಸ್ಟಾರ್ ಆಟಗಾರರು ಕೂಡ ನಾಯಕಿಯರ ಬೆಡಗು ಭಿನ್ನಾಣಕ್ಕೆ ಮನ ಸೋತಿದ್ದಾರೆ. ಈ ಸಾಲಿಗೆ ಈಗ ಸ್ಯಾಮ್ ಕರನ್ ಸೇರಿಕೊಂಡಿದ್ದಾರೆ.

WICKET TAKEN Sam Curran Engaged to Stunning Actress Isabella Grace All the Viral Details

ಹೌದು, ಸ್ಯಾಮ್ ಕರನ್.. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ. ಬೌಲರ್‌ಗಳನ್ನು ಮನಬಂದಂತೆ ದಂಡಿಸುವ ಸಾಮರ್ಥ್ಯ ಹೊಂದಿರುವ ಸ್ಯಾಮ್ ಕರನ್ ಬೆಂಕಿ ಚೆಂಡನ್ನು ಎಸೆಯುವ ಆಲ್ ರೌಂಡರ್. ಇಂಥಾ ಸ್ಯಾಮ್ ಕರನ್ ಸದ್ಯ ಇಂಗ್ಲೆಂಡ್‌ನ ನಟಿ ಮತ್ತು ರಂಗಭೂಮಿ ಕಲಾವಿದೆ ಇಸಾಬೆಲ್ಲಾ ಗ್ರೇಸ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸಿನಿಮಾ ಶೈಲಿಯಲ್ಲಿ ಮಂಡಿಯೂರಿ ತಮ್ಮ ಪ್ರಿಯತಮೆಗೆ ಪ್ರಪೋಸ್ ಮಾಡಿದ್ದಾರೆ. ಸ್ಯಾಮ್ ನೀಡಿದ ಈ ಸರ್‌ಫ್ರೈಸ್‌ದಿಂದ ಇಸಾಬೆಲ್ಲಾ ಭಾವುಕರಾಗಿದ್ದಾರೆ.

ಸದ್ಯ ಸ್ಯಾಮ್ ಕರನ್ ಪ್ರೇಮ ನಿವೇದನೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರು ಸ್ಯಾಮ್ ಕರನ್ ಮತ್ತು ಇಸಾಬೆಲ್ಲಾ ಗ್ರೇಸ್ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಅಂದ್ಹಾಗೇ ಇಸಾಬೆಲ್ಲಾ ಗ್ರೇಸ್ '''ಶೀ ರ‍್ಯಾನ್ ಅಟ್ ಹರ್ ಓನ್ ರೇಸ್''.. ''ಡೈವ್ ಬಾಂಬ್''.. ''ರೈಸ್ ಅಪ್''.. ''ಮಿಚಿನ್ ಮರ್ಡರ್ಸ್''.. ''ಫೈನಲ್ ಗರ್ಲ್‌ ಫಿಲ್ಮ್''.. ''ಮನಿ ಮೇಕರ್''.. ''ಅಕ್ಕಿ''..ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

WICKET TAKEN Sam Curran Engaged to Stunning Actress Isabella Grace All the Viral Details

ಇನ್ನು ಸ್ಯಾಮ್ ಕರನ್ ಮತ್ತು ಇಸಾಬೆಲ್ಲಾ ಗ್ರೇಸ್ ಇಬ್ಬರ ವಯಸ್ಸು ಒಂದೇ. ಇಬ್ಬರಿಗೆ ಈಗ 27 ವರ್ಷ. ಆದರೂ ಸ್ಯಾಮ್ ಕರನ್‌ಗೆ ಹೋಲಿಸಿದರೆ ಇಸಾಬೆಲ್ಲಾ 21 ದಿನ ದೊಡ್ಡವರು. ಜೂನ್ 3 1998ರಂದು ಸ್ಯಾಮ್ ಕರನ್ ಹುಟ್ಟಿದ್ದರೆ ಇಸಾಬೆಲ್ಲಾ ಮೇ 13-1998ರಂದು ಹುಟ್ಟಿದ್ದಾರೆ.

ಎಕ್ಸೆಟರ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಇಸಾಬೆಲ್ಲಾಗೆ ಎಮಿಲಿ ಮತ್ತು ಅಲೆಕ್ಸಾಂಡ್ರಾ ಎಂಬ ಇಬ್ಬರು ಸಹೋದರಿಯರಿದ್ದಾರೆ. ಇನ್ನು ಮಾಧ್ಯಮಗಳ ವರದಿಯ ಪ್ರಕಾರ ಇಸಾಬೆಲ್ಲಾ ಗ್ರೇಸ್ ಮತ್ತು ಸ್ಯಾಮ್ ಕರನ್ 2018ರ ಆಸು ಪಾಸು ಮೊದಲ ಬಾರಿ ಭೇಟಿಯಾಗಿದ್ದರು.

ಇನ್ನು 2019ರ ''ಐಪಿಎಲ್‌''ನಲ್ಲಿ ಸ್ಯಾಮ್ ''ಪಂಜಾಬ್ ಕಿಂಗ್ಸ್‌'' ಪರ ಆಡುತ್ತಿದ್ದರು. ಈ ಸಮಯದಲ್ಲಿ ಇಸಾಬೆಲ್ಲಾ ಮೊದಲ ಬಾರಿ ಭಾರತಕ್ಕೆ ಬಂದಿದ್ದರು. ಐಪಿಎಲ್ ಮ್ಯಾಚ್‌ಗಳನ್ನು ಎಂಜಾಯ್ ಮಾಡಿದ್ದರು. ಇನ್ನುಳಿದಂತೆ ಈ ಬಾರಿ ಸ್ಯಾಮ್ ಕರನ್ ಚೆನ್ನೈ ಪರ ಅಲ್ಲ ಬದಲಿಗೆ ರಾಜಸ್ತಾನ್ ರಾಯಲ್ಸ್ ಪರ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

More from Filmibeat

English summary
Who is Isabella Grace? The actress and partner of cricketer Sam Curran is now his fiancée! Get the full story on their engagement and see their stunning photos.
Read more about: cricket love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X