Michael Jackson: ಬಯೋಪಿಕ್‌ ಸಿನಿಮಾದಲ್ಲಿ 'ಜಾಕ್ಸನ್' ವಿವಾದಗಳು ಇರುತ್ತವೆ ಎಂದ ನಿರ್ದೇಶಕ

ಪಾಪ್‌ ಸಂಗೀತ, ಗಾಯನ ಹಾಗೂ ಬ್ರೇಕ್‌ ಡ್ಯಾನ್ಸ್‌ನಿಂತ ಪ್ರಪಂಚವನ್ನು ಕುಣಿಸಿದ ಪ್ರತಿಭೆ ಮೈಕೆಲ್ ಜಾಕ್ಸನ್. ಪಾಪ್ ಕ್ಷೇತ್ರದಲ್ಲಿ ಮೈಕೆಲ್ ಸಾಧನೆಯನ್ನು ಮರೆಯೋಕೆ ಸಾಧ್ಯವಿಲ್ಲ. 1958, ಆಗಸ್ಟ್ 29ರಂದು ಇಂಡಿಯಾನದ ಗಾರಿಯಲ್ಲಿ ಜನಿಸಿದ ಈತ ಮುಂದೆ ಪ್ರಪಂಚವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ. ಹಾಲಿವುಡ್‌ನಲ್ಲಿ ಮೈಕಲ್ ಜಾಕ್ಸನ್ ಬಯೋಪಿಕ್‌ಗಾಗಿ ಸಿದ್ಧತೆ ನಡೀತಿದೆ.

'ಡೇಂಜರಸ್', 'ಥ್ರಿಲ್ಲರ್', 'ಹಿಸ್ಟರಿ', 'ಇನ್ ವಿನ್ಸಿಬಲ್', 'ಬ್ಲಡ್ ಆನ್ ದ ಡಾನ್ಸ್ ಫ್ಲೋರ್' ಮ್ಯೂಸಿಕ್ ಆಲ್ಬಮ್‌ಗಳ ಮೂಲಕ ಜಾಕ್ಸನ್ ಮೋಡಿ ಮಾಡಿದ್ದರು. ಮೈಯಲ್ಲಿ ಮೂಳೆ ಇದ್ಯಾ? ಇಲ್ವಾ? ಎನ್ನುವಂತೆ ಡ್ಯಾನ್ಸ್ ಮಾಡಿ ಎಲ್ಲರ ಹುಬ್ಬೇರಿಸುತ್ತಿದ್ದರು. ಮೈಕೆಲ್ ಜಾಕ್ಸನ್ ಹುಟ್ಟುಹಬ್ಬದಂದು ಅಭಿಮಾನಿಗಳು ಆತನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಾಕ್ಸನ್ ಕುರಿತು ಸಾಕಷ್ಟು ಡಾಕ್ಯುಮೆಂಟರಿಗಳು ಬಂದೋಗಿದೆ. ಇದೀಗ ಹಾಲಿವುಡ್ 'ಜಾಕ್ಸನ್' ಹೆಸರಿನಲ್ಲಿ ಬಯೋಪಿಕ್ ಸಿನಿಮಾ ನಿರ್ಮಾಣವಾಗುತ್ತಿದೆ. ಆಂಟೋಣಿಯೊ ಫ್ಲೋಕೊ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

Will Not Avoid Controversies of Michael Jackson in his biopic Says Antoine Fuqua

ಮೈಕಲ್ ಜಾಕ್ಸನ್ ತಮ್ಮ 50ನೇ ವಯಸ್ಸಿನಲ್ಲಿ (ಜೂನ್ 25, 2009) ಹೃದಯಾಘಾತದಿಂದ ನಿಧನರಾಗಿದ್ದರು. ಬಾಲ್ಯದಿಂದಲೂ ಸಂಗೀತ ಹಾಗೂ ಡ್ಯಾನ್ಸ್‌ನ ಉಸಿರಾಗಿಸಿಕೊಂಡಿದ್ದ ಜಾಕ್ಸನ್ ಯಶಸ್ಸಿನ ಉತ್ತುಂಗಕ್ಕೇರಿದ ಬಳಿಕ ವಿವಾದಗಳಿಂದ ಹೆಚ್ಚು ಸುದ್ದಿ ಆಗಿದ್ದರು. ಮನೆ ಕೆಲಸದಾಕೆಯ ಮಗನೂ ಸೇರಿದಂತೆ 15 ವರ್ಷಗಳ ಅವಧಿಯಲ್ಲಿ 25 ಮಕ್ಕಳ ಮಕ್ಕಳಿಗೆ ಜಾಕ್ಸನ್ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿತ್ತು. ಅದನ್ನು ಮುಚ್ಚಿಡಲು ಸಾಕಷ್ಟು ಹಣ ಖರ್ಚು ಮಾಡಿದ್ದಾಗಿಯೂ ವರದಿಯಾಗಿತ್ತು.

ಜಾಕ್ಸನ್ ಜೀವನಕ್ಕೆ ಸಂಬಂಧಿಸಿದ ವಿವಾದಗಳನ್ನು ಬಯೋಪಿಕ್ ಸಿನಿಮಾದಲ್ಲಿ ತೋರಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ. ಅಂದಹಾಗೆ ಮೈಕೆಲ್ ಜಾಕ್ಸನ್ ಪಾತ್ರದಲ್ಲಿ ನಟಿಸುವ ಕಲಾವಿದ ಕೂಡ ಸಿಕ್ಕಿದ್ದಾನೆ. ಖುದ್ದು ಅವರ ಸಹೋದರ ಜಾಫರ್ ಜಾಕ್ಸನ್ ಚಿತ್ರದಲ್ಲಿ ನಟಿಸಲಿದ್ದಾನೆ. ಜಾಫರ್ ಜಾಕ್ಸನ್ ಕೂಡ ಚಿಕ್ಕಪ್ಪನ ಹಾದಿಯಲ್ಲಿ ಅಡಿ ಇಟ್ಟಿದ್ದು ಡ್ಯಾನ್ಸ್ ಹಾಗೂ ಸಂಗೀತದ ಮೂಲಕ ಗಮನ ಸೆಳೆದಿದ್ದಾನೆ. ಹಾಗಾಗಿ 'ಜಾಕ್ಸನ್' ಬಯೋಪಿಕ್‌ಗೆ ಆತನೇ ಸೂಕ್ತ ಎಂದು ನಿರ್ಧರಿಸಲಾಗಿದೆ.

Will Not Avoid Controversies of Michael Jackson in his biopic Says Antoine Fuqua

3 ಆಸ್ಕರ್ ಪ್ರಶಸ್ತಿ ಗೆದ್ದಿರುವ ಜಾನ್ ಲೋಗನ್ ಈ ಬಯೋಪಿಕ್ ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧಪಡಿಸಲಿದ್ದಾರೆ. ಜಾಫರ್ ನಿಜಕ್ಕೂ ನಮ್ಮ ತಂದೆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾನೆ ಎಂದು ಮೈಕಲ್ ಜಾಕ್ಸನ್ ಪುತ್ರ ಪ್ರಿನ್ಸ್ ಸಹ ಹೇಳಿದ್ದಾರೆ. ಲಯನ್ಸ್ ಗೇಟ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಮೈಕಲ್ ಜಾಕ್ಸನ್ ರೀತಿ ಜಾಫರ್ ಡ್ಯಾನ್ಸ್ ಮಾಡುತ್ತಿರುವ ಫೋಟೊವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.

ನಿರ್ದೇಶಕ ಆಂಟೋಣಿಯೊ ಫ್ಲೋಕೊ ಮಾತನಾಡಿ "ಮೈಕೆಲ್ ಜಾಕ್ಸನ್ ಮಹಾನ್ ಕಲಾವಿದರಾಗಿದ್ದರು. ಮತ್ತು ಅವರು ಮನುಷ್ಯರಾಗಿದ್ದರು. ಆದ್ದರಿಂದ, ನಾವು ಒಳ್ಳೆಯದು, ಕೆಟ್ಟದು ಮತ್ತು ಕೊಳಕು ಎಲ್ಲವನ್ನು ತೋರಿಸುತ್ತೇವೆ . ನಮ್ಮಲ್ಲಿರುವ ಮಾಹಿತಿ ಆಧಾರದ ಮೇಲೆ 'ಮೈಕೆಲ್' ಕಥೆ ಹೇಳುತ್ತೇವೆ. ನಾನು ಮತ್ತು ಬೋಹೀಮಿಯನ್ ರಾಪ್ಸೋಡಿ ಮಾಡಿದ ನಿರ್ಮಾಪಕ ಗ್ರಹಾಂ ಕಿಂಗ್, ನಮಗೆ ಗೊತ್ತಿರುವ ಸತ್ಯಗಳನ್ನು ಹೇಳಲಿದ್ದೇವೆ ಮತ್ತು ಮೈಕೆಲ್ ಏನು ಎಂಬುದನ್ನು ಪ್ರೇಕ್ಷಕರು ನಿರ್ಧರಿಸುತ್ತಾರೆ, ಆದರೆ ನಾವು ನಮಗೆ ಗೊತ್ತಿರುವ ಸತ್ಯ ಹೇಳಲಿದ್ದೇವೆ" ಎಂದಿದ್ದಾರೆ.

ಅಂದಹಾಗೆ 'ಲೀವಿಂಗ್ ನೆವರ್‌ಲ್ಯಾಂಡ್' ಹೆಸರಿನಲ್ಲಿ ಹಿಂದೆ ಮೈಕಲ್ ಜಾಕ್ಸನ್‌ ಕುರಿತು ಡಾಕ್ಯುಮೆಂಟರಿ ಬಂದಿತ್ತು. ಆದರೆ ಈ ಡಾಕ್ಯುಮೆಂಟರಿಯಲ್ಲಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ತೋರಿಸಿದ್ದಾರೆ ಎಂದು ಸ್ವತಃ ಜಾಕ್ಸನ್ ಕುಟುಂಬ ಸದಸ್ಯರು ಆರೋಪಿಸಿದ್ದರು. ಮಕ್ಕಳ ಜೊತೆ ಜಾಕ್ಸನ್ ಎಂದೂ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಹೇಳಿದ್ದರು. ಹಾಗಾದರೆ ಬಯೋಪಿಕ್‌ ಸಿನಿಮಾದಲ್ಲಿ ಯಾವೆಲ್ಲಾ ವಿವಾದಗಳು ಇರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
will show good, bad, and the ugly facts of Michael Jackson's in biopic says Antoine Fuqua. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X