Will Smith: ಆಸ್ಕರ್‌ನಿಂದ ವಿಲ್‌ ಸ್ಮಿತ್ 10 ವರ್ಷ ಬ್ಯಾನ್, ಕಪಾಳ ಮೋಕ್ಷಕ್ಕೆ ಶಿಕ್ಷೆ!

ಹಾಸ್ಯನಟ ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಮಾಡಿ, ಆಸ್ಕರ್‌ ವೇದಿಕೆಯ ಮೇಲೆ ಗಮನ ಸೆಳೆದಿದ್ದರು. ಇದರಿಂದ ಸ್ಮಿತ್ ಅವರಿಂದ ಆಸ್ಕರ್ ಹಿಂಪಡೆಯಲಾಗುತ್ತದೆ ಎನ್ನುವ ಸುದ್ದಿಗಳ ಹಬ್ಬಿದ್ದವು. ಆದರೆ ಮಂಡಳಿ ಈಗ ವಿಭಿನ್ನ ನಿರ್ಧಾರ ತೆಗೆದುಕೊಂಡಿದೆ. ಎರಡು ವಾರಗಳ ನಂತರ ಆಸ್ಕರ್ ಮಂಡಳಿ ವಿಲ್ ಸ್ಮಿತ್ ನಡೆಗೆ ಕ್ರಮ ಜರುಗಿಸಿದೆ.

ವಿಲ್ ಸ್ಮಿತ್‌ರನ್ನು ಮುಂದಿನ 10 ವರ್ಷ ಆಸ್ಕರ್‌ನಿಂದ ಬ್ಯಾನ್ ಮಾಡಲಾಗಿದೆ. ಮುಂದಿನ 10 ವರ್ಷ ಆಸ್ಕರ್‌ಗೆ ಹಾಜರಾಗದಂತೆ ನಿಷೇಧಿಸಿ ತೀರ್ಮಾನ ಹೊರಡಿಸಲಾಗಿದೆ. ಆದರೆ ಮುಂದಿನ ಒಂದು ದಶಕದಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ನಡೆಸುವ ಯಾವುದೇ ಇತರ ಕಾರ್ಯಕ್ರಮಗಳಿಗೆ ಹಾಜರಾಗಲು ಸ್ಮಿತ್‌ಗೆ ಅನುಮತಿ ಇಲ್ಲ.

ಅಕಾಡೆಮಿ ಮುಖ್ಯಸ್ಥರು ಬರೆದ ಪತ್ರದಲ್ಲಿ ಮಂಡಳಿಯ ನಿರ್ಧಾರ ಪ್ರಕಟ ಆಗಿದೆ. "ಕಿಂಗ್ ರಿಚರ್ಡ್"ಗಾಗಿ ಸ್ಮಿತ್ ಗೆದ್ದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಿಂತೆಗೆದುಕೊಂಡಿಲ್ಲ ಅಥವಾ ಮುಂದೆ ಭವಿಷ್ಯದಲ್ಲಿ ಆಸ್ಕರ್ ನಾಮನಿರ್ದೇಶನಗಳ ಮೇಲೆ ಯಾವುದೇ ನಿಷೇಧವನ್ನು ಉಲ್ಲೇಖಿಸಿಲಿಲ್ಲ.

Will Smith Banned 10 Years From Oscars Ceremonies For Slapping Chris Rock On Stage

ಏಪ್ರಿಲ್ 8, 2022 ರಿಂದ 10 ವರ್ಷಗಳ ಅವಧಿ ತನಕ ಸ್ಮಿತ್ ಅವರು ಅಕಾಡೆಮಿ ಪ್ರಶಸ್ತಿಗಳನ್ನು ಒಳಗೊಂಡಂತೆ, ವೈಯಕ್ತಿಕವಾಗಿ ಯಾವುದೇ ಅಕಾಡೆಮಿ ಕಾರ್ಯಕ್ರಮಗಳಿಗೆ ಹಾಜರಾಗಲು ಅನುಮತಿ ನೀಡಬಾರದೆಂದು ಅಧ್ಯಕ್ಷ ಡೇವಿಡ್ ಬರೆದಿದ್ದಾರೆ.

ಸ್ಮಿತ್ ವಿರುದ್ಧದ ಕ್ರಮಗಳನ್ನು ಕೈಗೊಳ್ಳಲು ಅಕಾಡೆಮಿ ಗೌರ್ನರ್‌ಗಳು ಶುಕ್ರವಾರ (ಮಾರ್ಚ್ 8) ಬೆಳಿಗ್ಗೆ ಸಭೆ ನಡೆಸಿದ್ದು, ನಟನ ಮೇಲೆ ಹತ್ತು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

Will Smith Banned 10 Years From Oscars Ceremonies For Slapping Chris Rock On Stage

ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿ ಘೋಷಿಸಲು ಬಂದ ನಟ, ಕಾಮಿಡಿಯನ್ ಕ್ರಿಸ್ ರಾಕ್, ವಿಲ್ ಸ್ಮಿತ್ ಪತ್ನಿ ಜಾಡಾ ತಮ್ಮ ತಲೆ ಬೋಳಿಸಿಕೊಂಡಿರುವ ವಿಷಯದ ಬಗ್ಗೆ ತಮಾಷೆ ಮಾಡಿದರು. ಕೂಡಲೇ ವೇದಿಕೆ ಏರಿದ ನಟ ವಿಲ್ ಸ್ಮಿತ್, ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದರು. ಈ ವಿಷಯ ಬಹಳ ಸುದ್ದಿಯಾಯ್ತು.

More from Filmibeat

English summary
Will Smith Banned 10 Years From Oscars Ceremonies For Slapping Chris Rock On Stage, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X