ಆಸ್ಕರ್ ಸಮಾರಂಭದಲ್ಲಿ ಕ್ರಿಸ್ ರಾಕ್ ಮೇಲೆ ಸ್ಮಿತ್ ಹಲ್ಲೆ, ಯಾರು ಈ ಕ್ರಿಸ್ ರಾಕ್?
ವಿಶ್ವವೇ ಕಾಯುತ್ತಿದ್ದ 94ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಲಾಸ್ ಏಂಜಲಿಸ್ ನ ಡಾಲ್ಬಿ ಥಿಯೇಟರ್ ನಲ್ಲಿ ಭಾನುವಾರ ನಡೆಯಿತು. ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಈ ಪ್ರಶಸ್ತಿ ಸಮಾರಂಭಕ್ಕೆ ತೆರೆಬಿದಿದ್ದು, ಹಲವರು ಆಸ್ಕರ್ ಅವಾರ್ಡ್ ಪಡೆದು ಬೀಗಿದ್ದಾರೆ. ಇನ್ನು ಇದೇ ಆಸ್ಕರ್ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಅಮೇರಿಕನ್ ನಟ ವಿಲ್ ಸ್ಮಿತ್ ಪತ್ನಿ ಹಾಗೂ ಜಾಡಾ ಪಿಂಕೆಟ್ ಸ್ಮಿತ್ ಒಟ್ಟಿಗೆ ಆಸ್ಕರ್ಸ್‌ಗೆ ಬಂದಿದ್ದರು. ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿ ಘೋಷಿಸಲು ಬಂದ ಕ್ರಿಸ್ ರಾಕ್, ವಿಲ್ ಸ್ಮಿತ್ ಪತ್ನಿ ಜಾಡಾ ತಮ್ಮ ತಲೆ ಬೋಳಿಸಿಕೊಂಡಿರುವ ವಿಷಯದ ಬಗ್ಗೆ ತಮಾಷೆ ಮಾಡಿದರು. ಕೂಡಲೇ ವೇದಿಕೆ ಏರಿದ ನಟ ವಿಲ್ ಸ್ಮಿತ್, ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿರುವ ಘಟನೆ ನಡೆದು ಹೋಗಿದೆ.
ಅಷ್ಟಕ್ಕು ವಿಲ್ ಸ್ಮಿತ್ ರಿಂದ ಹೊಡೆತ ತಿಂದ ಕ್ರಿಸ್ ರಾಕ್ ಯಾರು ಅನ್ನುವ ಬಗ್ಗೆ ಇದೀಗ ಹುಡುಕಾಟಗಳು ಹೆಚ್ಚಾಗಿದೆ. ಅಷ್ಟಕ್ಕು ಕ್ರಿಸ್ ಯಾರು? ಎಷ್ಟು ಸಿನಿಮಾ ಮಾಡಿದ್ದಾರೆ? ಇವರ ಸ್ಪೆಷಾಲಿಟಿ ಏನು ಮುಂದೆ ಒದಿ.

ಕ್ರಿಸ್ ರಾಕ್ ಒಬ್ಬ ಸ್ಟ್ಯಾಂಡ್ ಅಪ್ ಹಾಸ್ಯನಟ. ಸ್ಟ್ಯಾಂಡ್ ಅಪ್ ಹಾಸ್ಯನಟನಾಗಿ ಕೆಲಸ ಮಾಡಿದ ನಂತರ ಅವರ ಪ್ರತಿಭೆ ಗುರುತಿಸಿ ಸಿನಿಮಾದಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತೆ. 1990 ರ ದಶಕದ ಆರಂಭದಲ್ಲಿ ಸ್ಯಾಟರ್ಡೇ ನೈಟ್ ಲೈವ್ ಕಾರ್ಯಕ್ರಮದ ಸದಸ್ಯನಾಗಿ ರಾಕ್ ಒಳ್ಳೆ ಹೆಸರನ್ನು ಸಂಪಾದಿಸಿದ್ದರು.
ಕ್ರಿಸ್ ರಾಕ್ 'ಡೌನ್ ಟು ಅರ್ಥ್' , 'ಹೆಡ್ ಆಫ್ ಸ್ಟೇಟ್' , 'ದಿ ಲಾಂಗೆಸ್ಟ್ ಯಾರ್ಡ್' , 'ಮಡಗಾಸ್ಕರ್' ಎಂಬ ಸೀರಿಸ್ ಮತ್ತು ಗ್ರೋನ್ ಅಪ್ಸ್ ಸರಣಿಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈ ಸರಣಿಗಳ ಮೂಲಕ ತನ್ನ ಟ್ಯಾಲೆಂಟ್ ಪ್ರೂವ್ ಮಾಡಿಕೊಂಡಿದ್ದರು. 'ಗ್ರೋನ್ ಅಪ್ಸ್ 2' , 'ಟಾಪ್ ಫೈವ್', HBO ಸ್ಟ್ಯಾಂಡ್-ಅಪ್ ವಿಶೇಷಗಳ ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು. 'ಎವೆರಿಬಡಿ ಹೇಟ್ಸ್ ಕ್ರಿಸ್' ಎಂಬ ಕಾಮಿಡಿ ಸ್ಕ್ರಿಪ್ಟ್ ಬರೆದು ಅದನ್ನು ನಿರ್ಮಿಸಿದ್ದಾರೆ ಕೂಡ. 2020 ರಲ್ಲಿ ಕ್ರಿಸ್ ರಾಕ್ FX ಬ್ಲ್ಯಾಕ್ ಕಾಮಿಡಿ-ಕ್ರೈಮ್ ಡ್ರಾಮಾ ಆಂಥಾಲಜಿ ಸರಣಿ ಫಾರ್ಗೋದ ನಾಲ್ಕನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು.

ರಾಕ್ 2005 ರಲ್ಲಿ ಮತ್ತು 2016 ರಲ್ಲಿ ಎರಡು ಬಾರಿ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕ್ರಿಸ್ ರಾಕ್ ಈ ವರೆಗೂ ನಾಲ್ಕು ಎಮ್ಮಿ ಪ್ರಶಸ್ತಿಗಳು ಮತ್ತು ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕಾಮಿಡಿ ಸೆಂಟ್ರಲ್ ನಡೆಸಿದ ಸಮೀಕ್ಷೆಯಲ್ಲಿ ಅವರು ಐದನೇ ಶ್ರೇಷ್ಠ ಸ್ಟ್ಯಾಂಡ್ ಅಪ್ ಹಾಸ್ಯನಟ ಎಂದು ಆಯ್ಕೆಯಾಗಿದ್ದಾರೆ. ಕ್ರಿಸ್ ರಾಕ್ ಯುನೈಟೆಡ್ ಕಿಂಗ್‌ಡಂನಲ್ಲಿ 2007 ರಲ್ಲಿ ಚಾನೆಲ್ 4 ನ 100 ಗ್ರೇಟೆಸ್ಟ್ ಸ್ಟ್ಯಾಂಡ್ ಅಪ್‌ಗಳಲ್ಲಿ ಒಂಬತ್ತನೇ ಶ್ರೇಷ್ಠ ಸ್ಟ್ಯಾಂಡ್ ಅಪ್ ಕಾಮಿಕ್ ಆಗಿ ಗುರುತಿಸಿಕೊಂಡಿದ್ದರು ಮತ್ತು 2010 ರ ಪಟ್ಟಿಯಲ್ಲಿ ಎಂಟನೇ-ಶ್ರೇಷ್ಠ ಸ್ಟ್ಯಾಂಡ್-ಅಪ್ ಕಾಮಿಕ್ ಆಗಿ ಆಯ್ಕೆಯಾಗಿದ್ದರು. ಹೀಗೇ ತನ್ನ ಸ್ಟ್ಯಾಂಡ್ ಅಪ್ ಕಾಮಿಡಿ ಮೂಲಕವೇ ಗುರುತಿಸಿಕೊಂಡಿರುವ ಕ್ರಿಸ್ ರಾಕ್2022 ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಸ್ಮಿತ್ ಅವರಿಂದ ಅವಮಾನ ಅನುಭವಿಸಿದ್ದಾರೆ. ಹಾಗೂ ಕ್ರಿಸ್ ರಾಕ್ ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.


Click it and Unblock the Notifications











