For Quick Alerts
  ALLOW NOTIFICATIONS  
  For Daily Alerts

  ವಿಲ್ ಸ್ಮಿತ್ ಪತ್ನಿಯ ಬೋಳು ತಲೆ ಬಗ್ಗೆ ಚರ್ಚೆ: ಕೂದಲು ಕತ್ತರಿಸಿಕೊಂಡಿದ್ದೇಕೆ ಜಾಡಾ?

  |

  ನಟ ವಿಲ್ ಸ್ಮಿತ್ ಮೊದಲ ಬಾರಿಗೆ ಅತ್ಯುತ್ತಮ ನಟನೆಗೆ ಆಸ್ಕರ್ ಪಡೆದುಕೊಂಡಿದ್ದಾರೆ. ಆದರೆ ವಿಲ್ ಸ್ಮಿತ್ ಆಸ್ಕರ್ ಪಡೆದಿದ್ದಕ್ಕಿಂತಲೂ ಆಸ್ಕರ್‌ ವೇದಿಕೆ ಮೇಲೆ ವಿಲ್ ಸ್ಮಿತ್ ತೋರಿದ ವರ್ತನೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.

  ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿ ಘೋಷಿಸಲು ಬಂದ ನಟ, ಕಾಮಿಡಿಯನ್ ಕ್ರಿಸ್ ರಾಕ್, ವಿಲ್ ಸ್ಮಿತ್ ಪತ್ನಿ ಜಾಡಾ ತಮ್ಮ ತಲೆ ಬೋಳಿಸಿಕೊಂಡಿರುವ ವಿಷಯದ ಬಗ್ಗೆ ತಮಾಷೆ ಮಾಡಿದರು. ಕೂಡಲೇ ವೇದಿಕೆ ಏರಿದ ನಟ ವಿಲ್ ಸ್ಮಿತ್, ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದರು. ಈ ವಿಷಯ ಬಹಳ ಸುದ್ದಿಯಾಯ್ತು.

  Oscars 2022 : ಆಸ್ಕರ್ಸ್ ವೇದಿಕೆ ಮೇಲೆ ಸಹ ನಟನ ಮೇಲೆ ಹಲ್ಲೆ ಮಾಡಿದ ವಿಲ್ ಸ್ಮಿತ್Oscars 2022 : ಆಸ್ಕರ್ಸ್ ವೇದಿಕೆ ಮೇಲೆ ಸಹ ನಟನ ಮೇಲೆ ಹಲ್ಲೆ ಮಾಡಿದ ವಿಲ್ ಸ್ಮಿತ್

  ವಿಲ್ ಸ್ಮಿತ್ ಪತ್ನಿ ಜಾಡಾ ತಮ್ಮ ತಲೆ ಕೂದಲು ಬೋಳಿಸಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರು. ಇದು ಕಮಿಡಿಯನ್ ಕ್ರಿಸ್ ರಾಕ್‌ಗೆ ಹಾಸ್ಯಾಸ್ಪದವಾಗಿ ಕಂಡಿತು. ಆದರೆ ವಿಲ್ ಸ್ಮಿತ್ ಪತ್ನಿ ಜಾಡಾ ಫ್ಯಾಷನ್‌ಗಾಗಿಯೋ ಇತರೆ ಕಾರಣಗಳಿಗಾಗಿಯೋ ತಲೆ ಕೂದಲು ತೆಗೆಸಿಲ್ಲ. ಅದಕ್ಕೆ ಘನವಾದ ಕಾರಣವಿದೆ.

  ಸ್ವತಃ ನಟಿಯಾಗಿರುವ ಜಾಡಾ ಪಿಂಕೆಟ್ ಸ್ಮಿತ್‌ ಅಲೋಫೇಶಿಯಾ ಹೆಸರಿನ ಖಾಯಿಲೆಯಿಂದ ಬಳಲುತ್ತಿದ್ದಾರೆ. 2018 ರಲ್ಲಿ ತಮಗೆ ಅಲೋಫೇಶಿಯಾ ಆಗಿರುವುದಾಗಿ ಹೇಳಿದ್ದರು. ಹಾಗಾಗಿ ಅವರು ತಮ್ಮ ತಲೆಗೂದಲು ತೆಗೆಸಿಕೊಂಡಿದ್ದರು. ಅದು ಅವಶ್ಯಕವೂ ಆಗಿತ್ತು.

  Oscars 2022: ಹಲ್ಲೆ ಮಾಡಿದ್ದಕ್ಕೆ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ ನಟ ಸ್ಮಿತ್Oscars 2022: ಹಲ್ಲೆ ಮಾಡಿದ್ದಕ್ಕೆ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ ನಟ ಸ್ಮಿತ್

  ಅಲೋಫೇಶಿಯಾ ಎಂದರೆ, ದೇಹದ ರೋಗ ನಿರೋಧಕ ಶಕ್ತಿಯು ತಲೆ ಕೂದಲನ್ನು ದೇಹದ ವೈರಿ ಎಂದು ಭಾವಿಸಿ ತಲೆಕೂದಲನ್ನು ಬೆಳೆಯದ ಅಥವಾ ಉದುರಿಹೋಗುವ ಪರಿಸ್ಥಿತಿ ನಿರ್ಮಿಸುವುದನ್ನು ಅಲೋಫೇಶಿಯಾ ಎನ್ನುತ್ತಾರೆ. ಕೂದಲು ಉದುರಿದ ಜಾಗಗಳಲ್ಲಿ ರುಪಾಯಿ ಕಾಯಿಲ್ ಗಾತ್ರದ ಮಚ್ಚೆಗಳು ನಿರ್ಮಾಣವಾಗುತ್ತವೆ. ಕೆಲವರಿಗೆ ಒಮ್ಮೆಲೆ ಹೆಚ್ಚು ಕೂದಲು ಉದುರಿ ಬಿಡುತ್ತದೆ.

  21018 ರಲ್ಲಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಜಾಡಾ ಸ್ಮಿತ್, ''ನಾನು ಸ್ನಾನ ಮಾಡುವಾಗ ಹಿಡಿಯ ತುಂಬ ಕೂದಲು ಉದುರುತ್ತಿತ್ತು. ಅದು ನನಗೆ ಆತಂಕ ತಂದಿತು. ಮೊದಲಿಗೆ ನಾನು ಬಹಳ ಭಯ ಪಟ್ಟಿದ್ದೆ. ಬಳಿಕ ಅದಕ್ಕೆ ಹೊಂದಿಕೊಂಡೆ'' ಎಂದರು. ಕೂದಲು ವಿಪರೀತ ಉದುರುತ್ತಿದ್ದ ಕಾರಣ ಕೂದಲನ್ನು ಕತ್ತರಿಸಿಕೊಳ್ಳಲು ಜಾಡಾ ನಿರ್ಧರಿಸಿದರು. 2021 ರ ಜುಲೈನಲ್ಲಿ ಮೊದಲ ಬಾರಿಗೆ ತಮ್ಮ ಬೋಳು ತಲೆಯನ್ನು ಸಾಮಾಜಿಕ ಜಾಲತಾಣದಲ್ಲಿ ಜಾಡಾ ಪ್ರದರ್ಶಿಸಿದರು.

  ಆದರೆ ಕಮಿಡಿಯನ್ ಕ್ರಿಸ್ ರಾಕ್, ಜಾಡಾಳ ಸಮಸ್ಯೆಯ ಬಗ್ಗೆ ಹಾಸ್ಯ ಮಾಡಿದ್ದು ಪತಿ ವಿಲ್ ಸ್ಮಿತ್‌ಗೆ ಸಹಿಸಲಾಗಿಲ್ಲ. ಹಾಗಾಗಿ ಕೂಡಲೆ ವೇದಿಕೆ ಏರಿದ ವಿಲ್ ಸ್ಮಿತ್, ಕ್ರಿಸ್ ಕಪಾಳಕ್ಕೆ ಭಾರಿಸಿದರು.

  English summary
  Will Smith smacked comedian who talked about his wife's bald head. Why Smith's wife Jada shaved her head.
  Tuesday, March 29, 2022, 10:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X