ಜಪಾನ್‌ನಲ್ಲಿ ದೇವರಕೊಂಡ ಪತ್ನಿಯ ಜಾದೂ ; ರಶ್ಮಿಕಾ ಮಂದಣ್ಣಗೆ ಯಾರು ಸಾಟಿಯಿಲ್ಲ ಎಂದ ಹಾಲಿವುಡ್ ಸ್ಟಾರ್

10 ವರ್ಷದ ಹಿಂದೆ ರಶ್ಮಿಕಾ ಮಂದಣ್ಣ ಅಂದರೆ ಯಾರದು ? ಎಂಬ ಪ್ರಶ್ನೆ ಹಲವರಲ್ಲಿತ್ತು. ಆದರೆ.. ಆ ನಂತರ ಬಂದ ''ಕಿರಿಕ್ ಪಾರ್ಟಿ'' ಇವರ ಬದುಕನ್ನೇ ಬದಲಿಸಿತು. ''ಕಿರಿಕ್ ಪಾರ್ಟಿ'' ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು.

ಇವತ್ತು ರಶ್ಮಿಕಾ ಮಂದಣ್ಣ ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ. ಕನ್ನಡ ಒಂದು ಹೊರತು ಪಡಿಸಿದರೆ ಬೇರೆ ಎಲ್ಲಾ ಭಾಷೆಯಲ್ಲಿ ರಶ್ಮಿಕಾಗೆ ಚಿನ್ನದಂತಹ ಬೇಡಿಕೆ ಇದೆ. ಅದರಲ್ಲಿಯೂ ಹಿಂದಿಯಲ್ಲಿಯಂತೂ ರಶ್ಮಿಕಾ ಮಂದಣ್ಣ ಕಾಲ್‌ಶೀಟ್‌ಗೆ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

Marvel Star Winston Duke Left Spellbound by Rashmika Mandanna at Anime Awards 2026

ಇನ್ನೂ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ ಬಿಡಾರ ಹೂಡಿದ ನಂತರ ಅನೇಕರು ರಶ್ಮಿಕಾ ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಮರೆತರು ಎಂದೇ ಅಂದುಕೊಂಡಿದ್ದರು. ಆದರೆ.. ಕನ್ನಡವನ್ನು ಸುಲಭವಾಗಿ ಮರೆತ ರಶ್ಮಿಕಾ ಪಾಲಿಗೆ ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಮರೆಯುವುದು ಸುಲಭ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರಶ್ಮಿಕಾ ಮಂದಣ್ಣ ಈಗ ಹೈದರಾಬಾದ್‌ನ ಸೊಸೆ.

ಇಂಥಾ ರಶ್ಮಿಕಾ ಮಂದಣ್ಣ ಅವರಿಗೆ ಹಾಲಿವುಡ್‌ನ ಸೂಪರ್ ಸ್ಟಾರ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.

ಹೌದು, ಅಸಲಿಗೆ ಪ್ರತಿ ವರ್ಷ 'ಕ್ರಂಚಿರಾಲ್ ಅನಿಮೆ ಅವಾರ್ಡ್ಸ್' ಸಮಾರಂಭ ನಡೆಯುತ್ತೆ. 2017ರಿಂದ 2022ರವರೆಗೆ ಅಮೆರಿಕಾದಲ್ಲಿ ನಡೆದ ಈ ಕಾರ್ಯಕ್ರಮ ಕಳೆದ ಮೂರು ವರ್ಷಗಳಿಂದ ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿದೆ. ವಿಶೇಷ ಅಂದರೆ ಕಳೆದ ಎರಡು ವರ್ಷಗಳಿಂದ ರಶ್ಮಿಕಾ ಮಂದಣ್ಣ ಈ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆ ಮಾಡುತ್ತಿದ್ದಾರೆ.

ಈ ಬಾರಿ ಟೋಕಿಯೋದ ಭವ್ಯ ''ಗ್ರಾಂಡ್ ಪ್ರಿನ್ಸ್ ಹೋಟೆಲ್ ತಕನಾವಾ''ದಲ್ಲಿ ನಡೆದ 10ನೇ ವರ್ಷದ ಕಾರ್ಯಕ್ರಮದಲ್ಲಿ ಹಾಲಿವುಡ್‌ನ ಸ್ಟಾರ್ ವಿನ್‌ಸ್ಟನ್ ಡ್ಯೂಕ್, ರಶ್ಮಿಕಾಗೆ ಸಾಥ್ ನೀಡಿದ್ದಾರೆ. ನಿರೂಪಣೆ ಮಾಡಿದ್ದಾರೆ. ಈ ವರ್ಷದ 'ಬೆಸ್ಟ್ ಅನಿಮೇಷನ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.

Marvel Star Winston Duke Left Spellbound by Rashmika Mandanna at Anime Awards 2026

ವಿನ್‌ಸ್ಟನ್ ಡ್ಯೂಕ್ ಪಾಲಿಗಿದು ಹೊಸ ಅನುಭವ. ಈ ಹಿನ್ನೆಲೆ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿರುವ ವಿನ್‌ಸ್ಟನ್ ಡ್ಯೂಕ್, ರಶ್ಮಿಕಾ ಮಂದಣ್ಣ ಅವರನ್ನು ಅಪ್ರತಿಮ ಎಂದು ಬಣ್ಣಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ವಿನ್‌ಸ್ಟನ್ ಡ್ಯೂಕ್,"ಅನಿಮೆ ಪ್ರಶಸ್ತಿ ಸಮಾರಂಭದ ಅದ್ಭುತ ಅನುಭವಕ್ಕಾಗಿ ಕ್ರಂಚಿರಾಲ್‌ಗೆ ಧನ್ಯವಾದಗಳು. ಇದು ನನ್ನ ಮೊದಲ ಜಪಾನ್ ಪ್ರವಾಸವಾಗಿದ್ದು, ಇಲ್ಲಿನ ಶ್ರೀಮಂತ ಸಂಸ್ಕೃತಿಯನ್ನು ಆಸ್ವಾದಿಸಿದ್ದು ಮತ್ತು ಅದ್ಭುತ ಜನರನ್ನು ಭೇಟಿಯಾಗಿದ್ದು ಅವಿಸ್ಮರಣೀಯವಾಗಿತ್ತು. ಅದರಲ್ಲೂ ಮುಖ್ಯವಾಗಿ, ಅಪ್ರತಿಮ (Incomparable) ಪ್ರತಿಭೆ ರಶ್ಮಿಕಾ ಮಂದಣ್ಣ ಅವರೊಂದಿಗೆ ವೇದಿಕೆ ಹಂಚಿಕೊಂಡ ಕ್ಷಣ ನಿಜಕ್ಕೂ ಅದ್ಭುತವಾಗಿತ್ತು" ಎಂದು ಹೇಳಿದ್ದಾರೆ.

ಸದ್ಯ ವಿನ್‌ಸ್ಟನ್ ಡ್ಯೂಕ್ ಅವರ ಈ ಪೋಸ್ಟ್ ವೈರಲ್ ಆಗಿದ್ದು, ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಹಿರಿಹಿರಿ ಹಿಗ್ಗುತ್ತಿದ್ಧಾರೆ. ನಮ್ಮ ನ್ಯಾಷನಲ್ ಕ್ರಶ್‌ಗೆ ಹಾಲಿವುಡ್ ಸ್ಟಾರ್ ಕೂಡ ಫಿದಾ ಆದರು ಎಂದು ಸಂಭ್ರಮ ಪಡುತ್ತಿದ್ದಾರೆ. ರಶ್ಮಿಕಾ ಅವರ ಈ ಅಂತರರಾಷ್ಟ್ರೀಯ ಸಾಧನೆಯನ್ನು ಹಲವರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಮತ್ತೂ ಕೆಲವರು ಹಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ನೋಡಬೇಕೆಂಬ ತಮ್ಮ ಆಸೆಯನ್ನು ಕೂಡ ವ್ಯಕ್ತಪಡಿಸಿದ್ಧಾರೆ.

ಇನ್ನುಳಿದಂತೆ ವಿಶ್ವದಾದ್ಯಂತ ಭಾರೀ ಕ್ರೇಜ್ ಸೃಷ್ಟಿಸಿದ್ದ ''ಮೈ ಹೀರೋ ಅಕಾಡೆಮಿ: ಫೈನಲ್ ಸೀಸನ್'' ಅತ್ಯುತ್ತಮ ಅನಿಮೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಫಿಲ್ಮ್ ಆಫ್ ದಿ ಇಯರ್ ವಿಭಾಗದಲ್ಲಿ ''ಡೆಮನ್ ಸ್ಲೇಯರ್: ಕಿಮೆಟ್ಸು ನೊ ಯೈಬಾ ಇನ್ಫಿನಿಟಿ ಕ್ಯಾಸಲ್'' ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವರ್ಷದ ಅತ್ಯುತ್ತಮ ಅನಿಮೇಷನ್ ಪ್ರಶಸ್ತಿಯು ''ಸೋಲೋ ಲೆವೆಲಿಂಗ್ ಸೀಸನ್ 2'' ಪಾಲಾಯಿತು.

English summary
"Incomparable!" Marvel star Winston Duke was left spellbound by Indian sensation Rashmika Mandanna after co-presenting at the 2026 Anime Awards. Read the 'Black Panther' actor's glowing praise for the actress here!
Read more about: rashmika mandanna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X