ಡಿಸೆಂಬರ್ 25ಕ್ಕೆ ಭಾರತದಲ್ಲಿ 'ವಂಡರ್ ವುಮನ್ 1984' ಬಿಡುಗಡೆ
ಹಾಲಿವುಡ್ ಸಿನಿಮಾ ವಂಡರ್ ವುಮನ್ 1984 ಸಿನಿಮಾ ಭಾರತದಲ್ಲಿ ಡಿಸೆಂಬರ್ 25ರಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಇಂಗ್ಲೀಷ್, ಹಿಂದಿ, ತೆಲುಗು ಹಾಗು ತಮಿಳಿನಲ್ಲಿ ವಂಡರ್ ವುಮನ್ ಸಿನಿಮಾ ತೆರೆಕಾಣಲಿದೆ.
ಅಂದ್ಹಾಗೆ, ಡಿಸೆಂಬರ್ 16 ರಂದೇ ವಿಶ್ವದ ಹಲವು ಕಡೆ ವಂಡರ್ ವುಮನ್ ಸಿನಿಮಾ ರಿಲೀಸ್ ಆಗುತ್ತಿದೆ. ಪ್ಯಾಟಿ ಜೆಂಕಿನ್ಸ್ ನಿರ್ದೇಶಿಸಿದ ಈ ಚಿತ್ರದಲ್ಲಿ ಕ್ರಿಸ್ಟನ್ ವಿಗ್ ಮತ್ತು ಕ್ರಿಸ್ ಪೈನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ಯಾಟಿ ಜೆಂಕಿನ್ ಅವರ 2017 ರ ಚಿತ್ರದ ಮುಂದುವರಿದ ಭಾಗ ವಂಡರ್ ವುಮನ್ 1984 ಎನ್ನುವುದು ವಿಶೇಷ.
2016ರ ಬ್ಯಾಟ್‌ಮ್ಯಾನ್ vs ಸೂಪರ್‌ಮ್ಯಾನ್‌ನಲ್ಲಿ ಮೊದಲ ಬಾರಿಗೆ ಸೂಪರ್ ಹೀರೋ ಆಗಿ ಕಾಣಿಸಿಕೊಂಡ ನಂತರ, ಗಾಲ್ ಗಡೊಟ್ ಭಾರತದಲ್ಲಿ ಖ್ಯಾತಿ ಗಳಿಸಿಕೊಂಡರು. ಹಾಗಾಗಿ, 'ವಂಡರ್ ವುಮನ್ 1984' ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಿದೆ.

'ವಂಡರ್ ವುಮನ್ 1984' ಸಿನಿಮಾ ಬಿಡುಗಡೆ ದಿನಾಂಕ
- ಡಿಸೆಂಬರ್ 16, 2020: ಬೆಲ್ಜಿಯಂ, ಬಲ್ಗೇರಿಯಾ., ಈಜಿಪ್ಟ್, ಎಸ್ಟೋನಿಯಾ, ಫ್ರಾನ್ಸ್, ಗ್ರೀಸ್, ಹಾಲೆಂಡ್, ಐಸ್ಲ್ಯಾಂಡ್, ಇಂಡೋನೇಷ್ಯಾ, ಪೋರ್ಚುಗಲ್, ದಕ್ಷಿಣ ಆಫ್ರಿಕಾ, ಸ್ವಿಟ್ಜರ್ಲೆಂಡ್, ಮತ್ತು ಯುಕೆಯಲ್ಲಿ 'ವಂಡರ್ ವುಮನ್ 1984' ಸಿನಿಮಾ ರಿಲೀಸ್ ಆಗುತ್ತಿದೆ.
- ಡಿಸೆಂಬರ್ 25, 2020: ಕೆನಡಾ, ಕೊಲಂಬಿಯಾ, ಫಿನ್ಲ್ಯಾಂಡ್, ಭಾರತ, ಲಾಟ್ವಿಯಾ, ಲಿಥುವೇನಿಯಾ, ನಾರ್ವೆ, ಸ್ವೀಡನ್, ವೆನೆಜುವೆಲಾ ಮತ್ತು ಯುಎಸ್ ನಲ್ಲಿ ತೆರೆಕಾಣಲಿದೆ.
- ಡಿಸೆಂಬರ್ 26, 2020: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್
- ಜನವರಿ 7, 2021: ಉಕ್ರೇನ್, ಉರುಗ್ವೆ
- ಜನವರಿ 8, 2021: ಫಿಲಿಪೈನ್ಸ್
- ಜನವರಿ 15, 2021: ರೊಮೇನಿಯಾ ಮತ್ತು ಟರ್ಕಿ
- ಜನವರಿ 21, 2021: ಚಿಲಿ, ಮತ್ತು ಪೆರು
- ಜನವರಿ 22, 2021: ಪೋಲೆಂಡ್
- ಜನವರಿ 28, 2021: ಇಟಲಿ


Click it and Unblock the Notifications











