For Quick Alerts
  ALLOW NOTIFICATIONS  
  For Daily Alerts

  ಖುಷಿ ವಿಚಾರ ಹಂಚಿಕೊಂಡ 'ವಂಡರ್ ವುಮನ್‌' ಗಲ್ ಗಡೊಟ್

  |

  ಜನಪ್ರಿಯ 'ವಂಡರ್ ವುಮನ್' ಸಿನಿಮಾ ಸರಣಿಯನ್ನು ಅತಿಮಾನುಷ ಶಕ್ತಿಯ ವಂಡರ್ ವುಮನ್‌ ಆಗಿ ನಟಿಸಿರುವ ಗಲ್ ಗಡೊಟ್ ಖುಷಿ ವಿಚಾರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ತೆರೆಯ ಮೇಲೆ ಸೂಪರ್ ವುಮನ್ ಆಗಿ ಮಿಂಚುವ ಗಲ್ ಗಡೊಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಅವರ ಮೂರನೇ ಹೆಣ್ಣು ಮಗು. ಈ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಗಲ್ ಗಡೊಟ್, ಇಡೀಯ ಕುಟುಂಬದ ಚಿತ್ರವನ್ನು ಹಂಚಿಕೊಂಡಿದ್ದಾರೆ. ''ಇದು ನನ್ನ ಸುಂದರ ಕುಟುಂಬ. ಇದಕ್ಕಿಂತಲೂ ಸಂತೋಷವಾಗಿ ನಾನು ಇರಲು ಸಾಧ್ಯವಿಲ್ಲ. ನಾವೆಲ್ಲ 'ಡ್ಯಾನಿಯಲ್‌'ಗಳನ್ನು ಉತ್ಸಾಹದಿಂದ ಸ್ವಾಗತಿಸಿದ್ದೇವೆ'' ಎಂದಿದ್ದಾರೆ.

  ಗಲ್ ಗಡೊಟ್‌ಗೆ ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಮೊದಲ ಮಗಳು ಆಲ್ಮಾ, ಎರಡನೇ ಮಗಳು ಮಾಯಾ ಈಗ ಹುಟ್ಟಿರುವ ಮಗಳಿಗೆ ಡ್ಯಾನಿಯಲ್ ಎಂದು ಹೆಸರಿಟ್ಟಿದ್ದಾರೆ. ಗಲ್ ಗಡೊಟ್‌ರ ಪೋಸ್ಟ್‌ಗೆ ಹಲವು ಹಾಲಿವುಡ್‌ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಸಹ ಶುಭಾಶಯ ಹೇಳಿದ್ದಾರೆ.

  ತಾವು ಗರ್ಭಿಣಿ ಆಗಿದ್ದ ಸುದ್ದಿಯನ್ನು ಮಾರ್ಚ್ 2021 ರಲ್ಲಿ ಗಲ್ ಗಡೊಟ್ ಬಹಿರಂಗಪಡಿಸಿದ್ದರು. ಅದೇ ಸಮಯದಲ್ಲಿ ಟಾಕ್‌ಶೋ ಒಂದಕ್ಕೆ ಅತಿಥಿಯಾಗಿ ಬಂದಿದ್ದ ಗಲ್ ಗಡೊಟ್, ಹೊಟ್ಟೆಯಲ್ಲಿ ಮಗು ಹೇಗೆ ಬಂತು ಮತ್ತು ಅದು ಹೊರಗೆ ಹೇಗೆ ಬರುತ್ತದೆ ಎಂದು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಹೇಗೆ ವಿವರಿಸಿದೆ ಎಂಬುದನ್ನು ಹೇಳಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.

  Wonder Woman Fame Gal Gadot Welcomes Third Baby Girl
  Kichcha Sudeep Biography | ಕಿಚ್ಚ ಸುದೀಪ್ ಜೀವನಚರಿತ್ರೆ | Sudeep Age, Movies, Family, Net Worth, Awards

  ಗಲ್ ಗಡೊಟ್ ನಟಿಸಿರುವ 'ಡೆತ್ ಆನ್ ದಿ ನೈಲ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಆ ಸಿನಿಮಾದಲ್ಲಿ ಬಾಲಿವುಡ್‌ನ ಅಲಿ ಫಜಲ್ ಸಹ ನಟಿಸಿದ್ದಾರೆ. 'ವಂಡರ್ ವುಮನ್' ಸಿನಿಮಾ ಸರಣಿ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿರುವ ಗಲ್ ಗಡೊಟ್ ಕೊನೆಯ ಬಾರಿ 'ವಂಡರ್ ವುಮನ್' ಆಗಲು ಸಜ್ಜಾಗಿದ್ದಾರೆ. 'ವಂಡರ್ ವುಮನ್ 3' ಸಿನಿಮಾದಲ್ಲಿ ಗಲ್ ಗಡೊಟ್ ನಟಿಸುತ್ತಿದ್ದು ಇದೇ ಈ ಸರಣಿಯ ಕೊನೆಯ ಸಿನಿಮಾ ಆಗಲಿದೆ.

  English summary
  Wonder Woman movie fame Gal Gadot welcomes third baby girl. She posted her family members photo on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X