ಬಹುಕಾಲದ ಗೆಳತಿಯನ್ನು ವರಿಸಿದ WWE ಸ್ಟಾರ್ ಮತ್ತು ನಟ ಜಾನ್ ಸೀನಾ
WWE ಮೂಲಕ ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸಿ ಈಗ ಹಾಲಿವುಡ್ ನಲ್ಲಿ ಮಿಂಚುತ್ತಿರುವ ಜಾನ್ ಸೀನಾ ತಮ್ಮ ಬಹುಕಾಲದ ಪ್ರೇಯಸಿಯ ಜೊತೆಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಪ್ರೇಯಸಿ ಶೇ ಶೆರಿಯಾತ್ಜಾದೆ ಜೊತೆ ಜಾನ್‌ಸೀನಾ ಪ್ಲೋರಿಡಾದಲ್ಲಿ ಗೌಪ್ಯವಾಗಿ ಮದುವೆಯಾಗಿದ್ದು ಈ ವಿಚಾರವನ್ನು ಅವರು ಬಹಿರಂಗಗೊಳಿಸಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳು ಅಧಿಕೃತ ದಾಖಲೆಗಳೊಂದಿಗೆ ಈ ಸುದ್ದಿಯನ್ನು ಖಚಿತಪಡಿಸಿದೆ.
ಜಾನ್ ಸೀನಾ ತಮ್ಮ ಹಳೆಯ ಪ್ರೇಯಸಿ ನಿಕ್ಕಿ ಬೆಲ್ಲಾಜೊತೆಗಿನ ಸಂಬಂಧ ಕಡಿದುಕೊಂಡ ನಂತರ ಕಳೆದ 2019ರ ಆರಂಭದಲ್ಲಿ ಶೇ ಶೆರಿಯಾತ್ಜಾದೆ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಜಾನ್‌ಸೀನಾ ಹಾಗೂ ಶೇ ಶೆರಿಯಾತ್ಜಾದೆ ಈ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಹಾಗೂ ಫ್ಲೋರಿಡಾದಲ್ಲಿ ವಿವಾಹ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದರು ಎಂದು ವರದಿಯಾಗಿದೆ.

ಪ್ರಾಡಕ್ಟ್ ಮ್ಯಾನೇಜರ್ ಶೇ ಶೆರಿಯಾತ್ಜಾದೆ
ಇರಾನ್‌ನಲ್ಲಿ ಜನಿಸಿರುವ ಶೇ ಶೆರಿಯಾತ್ಜಾದೆ ಕೆನಡಾದ ನಾಗರೀಕರಾಗಿದ್ದಾರೆ. 31ರ ಹರೆಯದ ಶೇ ಬ್ರಿಟೀಷ್ ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಇಂಜಿನೀಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ವ್ಯಾಂಕೋವರ್‌ನಲ್ಲಿ ಟೆಕ್ ಕಂಪನಿಯೊಂದರ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎಲಿಜಬೆತ್ ಹುಬರ್ಡ ಮದುವೆಯಾಗಿದ್ದ ಜಾನ್ ಸೀನಾ
ರೆಸ್ಲರ್ ನಿಕ್ಕಿ ಬೆಲ್ಲಾ ಜೊತೆ ಪ್ರೀತಿಯಲ್ಲಿ ಬೀಳುವ ಮೊದಲು ಜಾನ್‌ಸೀನಾ 2009ರಲ್ಲಿ ಎಲಿಜಬೆತ್ ಹುಬರ್ಡ ಜೊತೆಗೆ ವಿವಾಹವಾಗಿದ್ದರು. 2012ರ ವರೆಗೆ ಎಜಿಜಬೆತ್ ಜೊತೆಗೆ ಸಂಸಾರ ನಡೆಸಿದ್ದ ಜಾನ್ ಸೀನಾ ಬಳಿಕ ವಿಚ್ಛೇದನ ಪಡೆದು ಬೇರೆಯಾಗಿದ್ದರು.
Recommended Video

ಜಾನ್ ಸಿನಿಮಾ ಸಿನಿಮಾ
ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ ಸೀನಾ ಸದ್ಯ ಪೀಸ್ ಮೇಕರ್ ಸರಣಿಗೆ ಸಹಿ ಮಾಡಿದ್ದಾರೆ. ಇದು ಸೂಸೈಡ್ ಸ್ಕ್ವಾಡ್ ನ ಸ್ಪಿನ್ ಆಫ್ ಸರಣಿಯಾಗಿದೆ. ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ಸ್ಲಿಥರ್ ಸಿನಿಮಾ ಖ್ಯಾತಿಯ ನಿರ್ದೇಶಕ ಜೇಮ್ಸ್ ಗನ್ ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸರಣಿ ಮುಂದಿನ ವರ್ಷ ತೆರೆಗೆ ಬರುತ್ತಿದೆ.


Click it and Unblock the Notifications











