For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ನಿರ್ದೇಶಕನ ಜೊತೆ ಯಶ್: ಮುಂದಿನ ಸಿನಿಮಾಕ್ಕೆ ದೊಡ್ಡ ಯೋಜನೆ?

  |

  'ಕೆಜಿಎಫ್ 2' ಸಿನಿಮಾ ಬಹುದೊಡ್ಡ ಹಿಟ್ ಆಗಿದೆ. ಆದರೆ ಇತಿಹಾಸ-ಇತಿಹಾಸವೇ, ಜನರಿಗೆ ಭವಿಷ್ಯದ ಬಗ್ಗೆ ಆಸಕ್ತಿ. ಹಾಗಾಗಿ 'ಕೆಜಿಎಫ್ 2' ಅಂಥಹಾ ಸಿನಿಮಾ ಮಾಡಿರುವ ಯಶ್ ಮುಂದೆ ಎಂಥಹಾ ಸಿನಿಮಾ ನೀಡಲಿದ್ದಾರೆ ಎಂದು ಕಾತರರಾಗಿದ್ದಾರೆ.

  'ಕೆಜಿಎಫ್ 2' ಬಳಿಕ ತಮ್ಮ ಮೇಲೆ ಏರಿರುವ ನಿರೀಕ್ಷೆಗಳ ಮೂಟೆಗಳ ಭಾರದ ಅರಿವಿರುವ ಯಶ್ ಸಹ, ದೊಡ್ಡ ಹಿಟ್ ಸಿನಿಮಾವನ್ನೇ ನೀಡುವ ಉಮೇದಿನಲ್ಲಿದ್ದಾರೆ. ಅದಕ್ಕಾಗಿ ಸೂಕ್ತ ಕತೆಗಾಗಿ ಕಳೆದೊಂದು ವರ್ಷದಿಂದಲೂ ಹುಡುಕಾಟ ನಡೆಸುತ್ತಲೇ ಇದ್ದಾರೆ.

  ಅಮೆರಿಕದಲ್ಲಿ 'ಶೂಟಿಂಗ್' ಮಾಡಿದ ಯಶ್! ಭೇಷ್ ಎಂದ ಸ್ಟಂಟ್ ನಿರ್ದೇಶಕ!ಅಮೆರಿಕದಲ್ಲಿ 'ಶೂಟಿಂಗ್' ಮಾಡಿದ ಯಶ್! ಭೇಷ್ ಎಂದ ಸ್ಟಂಟ್ ನಿರ್ದೇಶಕ!

  ಈ ನಡುವೆ ನರ್ತನ್‌ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂತು. ಅದಾದ ಬಳಿಕ ತಮಿಳಿನ ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಯಿತು. ಆದರೆ ಅವೆರಡೂ ಸುಳ್ಳಾಗಿದೆ. ಇದೀಗ ಹಠಾತ್ತನೆ ನಟ ಯಶ್ ಹಾಲಿವುಡ್‌ ಕಡೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಖ್ಯಾತ ಆಕ್ಷನ್ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕರೂ ಆಗಿರುವ ಜೆಜೆ ಪೆರ್ರಿಯನ್ನು ಭೇಟಿ ಮಾಡಿದ್ದಾರೆ.

  ಶೂಟಿಂಗ್ ಯಾರ್ಡ್‌ನಲ್ಲಿ ನಟ ಯಶ್

  ಶೂಟಿಂಗ್ ಯಾರ್ಡ್‌ನಲ್ಲಿ ನಟ ಯಶ್

  ಜೆಜೆ ಪೆರ್ರಿ ಜೊತೆ ಸಾಕಷ್ಟು ಕಾಲ ಕಳೆದಿರುವ ನಟ ಯಶ್, ಶೂಟಿಂಗ್ ಯಾರ್ಡ್‌ ಒಂದರಲ್ಲಿ ಗನ್ ಶೂಟಿಂಗ್ ಸಹ ಮಾಡಿದ್ದಾರೆ. ತಮ್ಮ ನಿಖರತೆ, ವೇಗ, ಬಂದೂಕು ಬಳಸುವ ನೈಪುಣ್ಯತೆಗಳಿಂದ ಜೆಜೆ ಪೆರ್ರಿಯನ್ನು ಇಂಪ್ರೆಸ್ ಮಾಡಿದ್ದಾರೆ. ಯಶ್, ತಾವು ಗನ್ ಶೂಟಿಂಗ್ ಮಾಡಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಜೆಜೆ ಪೆರ್ರಿಗೆ ಧನ್ಯವಾದ ಸಹ ಹೇಳಿದ್ದಾರೆ.

  ಕುತೂಹಲ ಕೆರಳಿಸಿರುವ ಯಶ್-ಜೆಜೆ ಪೆರ್ರಿ ಭೇಟಿ

  ಕುತೂಹಲ ಕೆರಳಿಸಿರುವ ಯಶ್-ಜೆಜೆ ಪೆರ್ರಿ ಭೇಟಿ

  ಯಶ್, ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿಯನ್ನು ಭೇಟಿ ಮಾಡಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಯಶ್ ಏನಾದರೂ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆಯೇ ಅಥವಾ ಹಾಲಿವುಡ್ ನಿರ್ದೇಶಕರೇನಾದರೂ ಯಶ್‌ಗಾಗಿ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತಾರೆಯೇ? ಅಥವಾ ಯಶ್‌ರ ಮುಂದಿನ ಕನ್ನಡ ಸಿನಿಮಾಕ್ಕೆ ಜೆಜೆ ಪೆರ್ರಿ ಸಾಹಸ ನಿರ್ದೇಶನ ಮಾಡುತ್ತಾರೆಯೇ ಎಂಬ ಕುತೂಹಲ ಉಂಟಾಗಿದೆ. ಯಶ್ ಅಭಿಮಾನಿಗಳಂತೂ, ಯಶ್-ಜೆಜೆ ಪೆರ್ರಿಯ ಭೇಟಿಯಿಂದ ಸಖತ್ ಥ್ರಿಲ್ ಆಗಿದ್ದು, ಯಶ್ ದೊಡ್ಡ ಸುದ್ದಿಯನ್ನೇ ನೀಡಲಿದ್ದಾರೆ ಎನ್ನುತ್ತಿದ್ದಾರೆ.

  ಯಾರು ಈ ಜೆಜೆ ಪೆರ್ರಿ?

  ಯಾರು ಈ ಜೆಜೆ ಪೆರ್ರಿ?

  ಜೆಜೆ ಪೆರ್ರಿ ಹಾಲಿವುಡ್‌ನ ಜನಪ್ರಿಯ ಸ್ಟಂಟ್ ಮ್ಯಾನ್ ಹಾಗೂ ಆಕ್ಷನ್ ನಿರ್ದೇಶಕ, ಇತ್ತೀಚೆಗೆ ಸಿನಿಮಾ ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದಾರೆ. ಸೂಪರ್ ಹಿಟ್ ಹಾಲಿವುಡ್ ಸಿನಿಮಾಗಳಾದ 'ಐರನ್ ಮ್ಯಾನ್', 'ಅವತಾರ್', ಆಸ್ಕರ್ ವಿಜೇತ 'ಡಿಜಾಂಗೊ ಅನ್‌ಚೈನ್ಡ್', 'ಅರ್ಗೊ' ಸಿನಿಮಾಗಳಿಗೆ ಸ್ಟಂಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಇದೇ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿರುವ 'ಡೇ ಶಿಫ್ಟ್' ಸಿನಿಮಾ ನಿರ್ದೇಶನ ಸಹ ಮಾಡಿದ್ದಾರೆ.

  ಯಶ್ ಮುಂದಿನ ಸಿನಿಮಾ ಯಾವುದಾಗಲಿದೆ?

  ಯಶ್ ಮುಂದಿನ ಸಿನಿಮಾ ಯಾವುದಾಗಲಿದೆ?

  ಯಶ್ ಪ್ರಸ್ತುತ ತಮ್ಮ ಮುಂದಿನ ಸಿನಿಮಾಕ್ಕಾಗಿ ಕತೆ, ನಿರ್ದೇಶಕನ ಹುಡುಕಾಟದಲ್ಲಿದ್ದಾರೆ. ಯಶ್ ಹಾಗು ನರ್ತನ್ ಒಟ್ಟಿಗೆ ಸಿನಿಮಾ ಮಾಡುವುದು ಬಹುತೇಕ ಖಾತ್ರಿಯಾಗಿತ್ತು. ಆದರೆ ಕೊನೆಯ ಘಟ್ಟದಲ್ಲಿ ಯಶ್, ನರ್ತನ್ ಮಾಡಿದ್ದ ಕತೆಯನ್ನು ನಿರಾಕರಿಸಿದರು. ಇದೀಗ ಹಲವು ಭಾಷೆಯ ನಿರ್ದೇಶಕರುಗಳಿಂದ ಯಶ್ ಕತೆ ಕೇಳುತ್ತಿದ್ದಾರೆ. ತೆಲುಗಿನ ಬಡಾ ನಿರ್ಮಾಪಕ ದಿಲ್ ರಾಜು, ಯಶ್‌ರ ಮುಂದಿನ ಸಿನಿಮಾಕ್ಕೆ ಬಂಡವಾಳ ಹಾಕಲು ನಿರ್ಧರಿಸಿದ್ದಾರೆ. ಆದರೆ ನಿರ್ದೇಶಕ ಹಾಗೂ ಕತೆ ಅಂತಿಮವಾಗಿಲ್ಲ. ಯಶ್, ಕಳೆದ ಆರು ವರ್ಷದಲ್ಲಿ ಮಾಡಿರುವುದು ಎರಡೇ ಸಿನಿಮಾ, ಅದು 'ಕೆಜಿಎಫ್ 1' ಹಾಗೂ 'ಕೆಜಿಎಫ್ 2'.

  English summary
  Actor Yash met Hollywood stunt and movie director JJ Perry. Yash fans expecting Yash will announce something big project in near future.
  Thursday, September 29, 2022, 15:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X