ಸದ್ದಿಲ್ಲದೇ ಮದುವೆಯಾದ ಸ್ಪೈಡರ್ ಮ್ಯಾನ್ ಜೋಡಿ ; ಟಾಮ್ ಹಾಲೆಂಡ್-ಝೆಂಡೆಯಾ ಈಗ ಗಂಡ-ಹೆಂಡ್ತಿ

ಚಿತ್ರರಂಗದಲ್ಲಿ ನಾಯಕಿಯರು ಯಾರೇ ಹುಡುಗರ ಜೊತೆ ಸುಳಿದಾಡಿದರೂ ಅವರ ಅಭಿಮಾನಿಗಳು ತಲೆ ಕೆದರಿಕೊಳ್ಳುತ್ತಾರೆ. ಆ ಹುಡುಗನ ಕುಲ.. ಗೋತ್ರ.. ಜನ್ಮವನ್ನೇ ಜಾಲಾಡಲು ಶುರು ಮಾಡುತ್ತಾರೆ. ಅಂಥಾದ್ದರಲ್ಲಿ ಚಿತ್ರರಂಗದಲ್ಲಿಯೇ ಇರುವ ಯುವ ನಾಯಕನ ಜೊತೆ ಮೇಲಿಂದ ಮೇಲೆ ನಾಯಕಿ ಕಾಣಿಸಿಕೊಂಡರೆ..?

ಅಭಿಮಾನಿಗಳ ಎದೆಯೊಡೆಯದಿರುತ್ತಾ ? ಹಾಗಂತೆ .. ಹೀಗಂತೆ .. ಎಂದು ಮಾತನಾಡುವ ಒಂದು ವರ್ಗ ಸುಮ್ಮನೆ ಕೂರುತ್ತಾ ..? ಇದಕ್ಕೆ ಟಾಮ್ ಹಾಲೆಂಡ್ ಮತ್ತು ಝೆಂಡೆಯಾ ಅವರ ಲವ್ ಸ್ಟೋರಿ ಮತ್ತೊಂದು ಉದಾಹರಣೆ.

You Missed It Law Roach Confirms Zendaya and Tom Holland s Secret Wedding

ಹೌದು, ಟಾಮ್ ಹಾಲೆಂಡ್ ಮತ್ತು ಝೆಂಡೆಯಾ ಹಾಲಿವುಡ್‌ನ ಪ್ರಖ್ಯಾತ ಜೋಡಿ. 'ಸ್ಪೈಡರ್-ಮ್ಯಾನ್'ನ ಪೀಟರ್ ಪಾರ್ಕರ್ ಮತ್ತು ಎಂಜೆ. ''ಸ್ಟೈಡರ್ ಮ್ಯಾನ್ - ಹೋಮ್ ಕಮಿಂಗ್''.. ''ಸ್ಪೈಡರ್ ಮ್ಯಾನ್-ಫಾರ್ ಫ್ರಮ್ ಹೋಮ್''.. ''ಸ್ಟೈಡರ್ ಮ್ಯಾನ್- ನೋ ವೇ ಹೋಮ್''.. ಹೀಗೆ ಒಂದಾದ ಮೇಲೊಂದರಂತೆ ಮೂರು ಚಿತ್ರಗಳಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡವರು ಇವರಿಬ್ಬರು.

ಸದ್ಯ ಇವರು ಇಬ್ಬರು ಆಕ್ಟ್ ಮಾಡಿರುವ ''ಸ್ಪೈಡರ್ ಮ್ಯಾನ್ - ಬ್ಯ್ರಾಂಡ್ ನ್ಯೂ ಡೇ'' ಸಿನಿಮಾ ಇನ್ನೂ ತೆರೆಗೆ ಬರಬೇಕಿದೆ. ಈ ಚಿತ್ರ ಹೊರತು ಪಡಿಸಿದರೆ ಕ್ರಿಸ್ಟೋಫರ್ ನೋಲನ್ ಅವರ ''ದಿ ಒಡಿಸ್ಸಿ'' ಚಿತ್ರದಲ್ಲಿ ಕೂಡ ಈ ಜೋಡಿ ಅಭಿನಯಿಸಿದೆ.

ಇಂಥಾ ಟಾಮ್ ಹಾಲೆಂಡ್ ಮತ್ತು ಝೆಂಡೆಯಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಅನುಮಾನ ಕಳೆದ 7-8 ವರ್ಷಗಳಿಂದ ಹಲವರಲ್ಲಿತ್ತು. ಆದರೆ.. ಈ ಜೋಡಿ ಮಾತ್ರ ಎಲ್ಲರಂತೆ ಹಾಗೇನು ಇಲ್ಲವಲ್ಲಾ, ನಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳುತ್ತಲೇ ಬರುತ್ತಿತ್ತು.

ಆದರೆ.. 2021ರಲ್ಲಿ ಕಾರಿನಲ್ಲಿ ಇವರ ಖುಲ್ಲಂ ಖುಲ್ಲಾ ರೊಮ್ಯಾನ್ಸ್‌ನ ಫೋಟೊ ಒಂದು ವೈರಲ್ ಆಗಿತ್ತು. 2025ರ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಝೆಂಡೆಯಾ ಕೈಯಲ್ಲಿದ್ದ 5 ಕ್ಯಾರೆಟ್ ವಜ್ರದ ಉಂಗುರ ಎಲ್ಲರ ಕಣ್ಣು ಕುಕ್ಕಿತ್ತು. 2024ರ ಕ್ರಿಸ್ಮಸ್ ಹಬ್ಬದಂದು ಝೆಂಡೆಯಾ ಅವರಿಗೆ ಟಾಮ್ ಹಾಲೆಂಡ್ ಪ್ರಪೋಸ್ ಮಾಡಿದ್ದರು ಎಂದು ಆ ನಂತರ ''ಪೇಜ್ ಸಿಕ್ಸ್'' ವರದಿ ಮಾಡಿತ್ತು. ಇದಕ್ಕೆ ಪೂರಕವಾಗಿ ''ಪ್ಯಾಟ್ರಿಯಾನ್ ಬ್ಲಾಗ್''ನಲ್ಲಿ ಟಾಮ್ ಹಾಲೆಂಡ್ ಅವರ ತಂದೆ ಡೊಮಿನಿಕ್ ಸದ್ದಿಲ್ಲದೇ ನಿಶ್ಚಿತಾರ್ಥ ನಡೆದಿದೆ ಎನ್ನುವ ಸುದ್ದಿಯ ಮೇಲೆ ಅಧಿಕೃತ ಮುದ್ರೆ ಒತ್ತಿದ್ದರು. ನಿಶ್ಚಿತಾರ್ಥದ ವಿವರಗಳನ್ನು ಹಂಚಿಕೊಂಡಿದ್ದರು.

You Missed It Law Roach Confirms Zendaya and Tom Holland s Secret Wedding

ಇನ್ನೂ ಕಳೆದ ವರ್ಷವೇ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಝೆಂಡೆಯಾ ಅವರನ್ನು ಟಾಮ್ ಹಾಲೆಂಡ್ ಅವರ ಗೆಳತಿ ಎಂದು ಕರೆದಾಗ ಮಾತಿನ ಮಧ್ಯೆ ಮಾತನಾಡಿದ್ದ ಟಾಮ್ ಹಾಲೆಂಡ್ ತಮ್ಮ ಪ್ರೀತಿಯ ವಿಚಾರವನ್ನು ಒಪ್ಪಿಕೊಂಡಿದ್ದರು. ಝೆಂಡೆಯಾ ನನ್ನ ಗೆಳತಿ ಅಲ್ಲ ಪ್ರೇಯಸಿ ಎಂದು ಹೇಳಿದ್ದರು.

ಇಂಥಾ ಟಾಮ್ ಹಾಲೆಂಡ್ ಮತ್ತು ಝೆಂಡೆಯಾ ಸದ್ಯ ಸದ್ದಿಲ್ಲದೇ ಮದುವೆ ಕೂಡ ಆಗಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಅದಕ್ಕೆ ಕಾರಣ ಝೆಂಡಯಾ ಅವರ ಬಹುಕಾಲದ ಸ್ಟೈಲಿಸ್ಟ್ ಹಾಗೂ ಆಪ್ತ ಗೆಳೆಯ ಲಾ ರೋಚ್ ನೀಡಿದ ಹೇಳಿಕೆ.

ಹೌದು, ಅಸಲಿಗೆ ಲಾಸ್ ಏಂಜಲೀಸ್‌ನಲ್ಲಿ ಇತ್ತೀಚೆಗೆ 2026ನೇ ಸಾಲಿನ ''ಆಕ್ಟರ್ ಅವಾರ್ಡ್ಸ್'' ಸಮಾರಂಭ ನೆರವೇರಿತು. ಈ ಸಮಾರಂಭದಲ್ಲಿ ಲಾ ರೋಚ್ ಭಾಗವಹಿಸಿದ್ದರು. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಇದೇ ಸಮಯದಲ್ಲಿ ''ಆಕ್ಸೆಸ್ ಹಾಲಿವುಡ್‌''ಗೆ ಸಂದರ್ಶನವನ್ನು ನೀಡಿದ ಲಾ ರೋಚ್ ಅವರಿಗೆ ಟಾಮ್ ಹಾಲೆಂಡ್ ಮತ್ತು ಝೆಂಡೆಯಾ ಮದುವೆ ನಡೆದಿದೆಯಾ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಆಗ ನಗು ನಗುತ್ತಲೇ ಉತ್ತರಿಸಿರುವ ಲಾ ರೋಚ್ ನೂರಕ್ಕೆ ನೂರು ನೀವು ಹೇಳಿದ್ದು ಸತ್ಯ, ಅವರಿಬ್ಬರ ಮದುವೆ ಈಗಾಗಲೇ ನಡೆದಿದೆ, ನೀವು ಸುವರ್ಣ ಅವಕಾಶವನ್ನು ಕೈ ಚೆಲ್ಲಿದ್ದೀರಾ ಎಂದು ಹೇಳಿದ್ದಾರೆ.

ಸದ್ಯ ಲಾ ರೋಚ್ ಅವರ ಈ ವಿಡಿಯೋ ವೈರಲ್ ಆಗಿದ್ದು, ನಾನು ಝೆಂಡಯಾ ಮತ್ತು ಟಾಮ್‌ಗಾಗಿ ತುಂಬಾ ಸಂತೋಷಪಡುತ್ತೇನೆ! ನಾನು ಅವರನ್ನು ಪ್ರತ್ಯೇಕವಾಗಿ ಮತ್ತು ದಂಪತಿಯಾಗಿ ಪ್ರೀತಿಸುತ್ತೇನೆ. ಅವರು ಪ್ರೀತಿಸುವುದಕ್ಕಿಂತ ಮುಂಚೆ, ಕೇವಲ ವದಂತಿಗಳಿದ್ದಾಗಲೂ, ನಾನು ಯಾವಾಗಲೂ ಅವರನ್ನು ಬೆಂಬಲಿಸುತ್ತಿದ್ದೆ. ಅವರು ಒಟ್ಟಾಗಿರುವುದಕ್ಕೆ ತುಂಬಾ ಸಂತೋಷವಾಯಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನವ ಜೋಡಿಗೆ ಹಲವರು ಶುಭಾಶಯವನ್ನು ಕೋರುತ್ತಿದ್ಧಾರೆ.

More from Filmibeat

English summary
Are Zendaya and Tom Holland married? Following a viral red carpet interview at the 2026 Actor Awards, Law Roach claims the pair have already tied the knot. See the evidence behind the secret wedding rumors and the couple’s latest public appearance
Read more about: spider man secret marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X