ಸಂದರ್ಶನ: ಈ ವರ್ಷ ಖುಷಿ ಕೊಟ್ಟಿದೆ, ಹೊಸ ವರ್ಷದಲ್ಲೂ ಭಾರೀ ನಿರೀಕ್ಷೆಯಿದೆ- ಸಂಜನಾ ಆನಂದ್

2025ಕ್ಕೆ ಬೈಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸುವ ಸಮಯ ಹತ್ತಿರವಾಗ್ತಿದೆ. ಈ ವರ್ಷ ಚಂದನವನದಲ್ಲಿ ಸಾಕಷ್ಟು ಸಿಹಿ, ಕಹಿ ವಿಚಾರಗಳಿವೆ. ಎಲ್ಲವನ್ನು ಮೀರಿ ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಬೇಕಿದೆ. ಕನ್ನಡ ನಟಿ ಸಂಜನಾಗೆ ಈ ವರ್ಷ ಭರ್ಜರಿ ಸಕ್ಸಸ್ ಸಿಕ್ಕಿದೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

6 ವರ್ಷಗಳ ಹಿಂದೆ 'ಕೆಮೆಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ ಮೂಲಕ ಸಂಜನಾ ಆನಂದ್ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಕುಷ್ಕ, ಸಲಗ, ಶೋಕಿವಾಲ, ವಿಂಡೋಸೀಟ್ ಎಂಬ ಸಿನಿಮಾಗಳಲ್ಲಿ ನಟಿಸಿದ್ದರು. 'ಹನಿಮೂನ್' ಎಂಬ ಒಂದು ವೆಬ್ ಸೀರಿಸ್‌ನಲ್ಲಿ ಕೂಡ ಬಣ್ಣ ಹಚ್ಚಿದ್ದರು. ಸಂಜನಾ ಕನ್ನಡ ಚಿತ್ರರಂಗದ ಭರವಸೆಯ ನಟಿ ಎನಿಸಿಕೊಂಡಿದ್ದಾರೆ.

2025 Has Been a Memorable Year for Me Sanjana Anand Looks Ahead to an Even Bigger New Year

ಈ ವರ್ಷ ಹೇಗಿತ್ತು?

ನನಗೆ ಈ ವರ್ಷ ನನಗೆ ಬಹಳ ಯಶಸ್ಸು ತಂದುಕೊಟ್ಟಿದೆ. 'ಎಕ್ಕ' ಹಾಗೂ 'ರಾಯಲ್' ಸಿನಿಮಾಗಳು ಬಿಡುಗಡೆ ಆಗಿತ್ತು. 'ಎಕ್ಕ' ಸಿನಿಮಾ ಗೆದ್ದಿದ್ದು 'ಬ್ಯಾಂಗಲ್ ಬಂಗಾರಿ' ಸಾಂಗ್ ಹಿಟ್ ಆಗಿ ಗೊತ್ತೇಯಿದೆ. ಹಾಗಾಗಿ ಸಿಕ್ಕಾಪಟ್ಟೆ ಖುಷಿ ಇತ್ತು. ಇದೇ ವರ್ಷ ಚಿತ್ರೀಕರಣ ಆರಂಭಿಸಿ ಬಿಡುಗಡೆ ಮಾಡಿದ ಸಿನಿಮಾ 'ಎಕ್ಕ'. ಇಷ್ಟು ಬೇಗ ನನ್ನ ಸಿನಿಮಾ ಬಿಡುಗಡೆ ಆಗಿದ್ದು ಇದೇ ಮೊದಲು. ಶಿವಣ್ಣನ ಜೊತೆ 'ಬೇಲ್' ಎಂಬ ಚಿತ್ರಕ್ಕೆ ಸಹಿ ಮಾಡಿದ್ದೀನಿ. ಇದಕ್ಕಿಂತ ಖುಷಿ ಏನು ಬೇಕು. ಒಂದೇ ವರ್ಷದಲ್ಲಿ 2 ಸಿನಿಮಾ ಬಿಡುಗಡೆಯಾಗಿದ್ದು ಇದೇ ಮೊದಲು.

ಹೊಸ ವರ್ಷ ನಿರೀಕ್ಷೆ

ಮುಂದಿನ ವರ್ಷದಲ್ಲಿ 'ಹಯಗ್ರೀವ' ಹಾಗೂ 'ಮುಧೋಳ್' ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. 'ಬೇಲ್' ಚಿತ್ರದ ಅರ್ಧದಷ್ಟು ಚಿತ್ರೀಕರಣ ನಡೆದಿದೆ. ಮುಂದಿನ ವರ್ಷವೇ ಆ ಸಿನಿಮಾ ಬಿಡುಗಡೆ ಆಗುವ ಬಗ್ಗೆ ಗೊತ್ತಿಲ್ಲ. ಒಂದೇ ವೇಳೆ ವರ್ಷದ ಕೊನೆಗೆ ಆ ಸಿನಿಮಾ ಬಂದರೆ ನನ್ನ 3 ಸಿನಿಮಾಗಳು ಒಂದೇ ವರ್ಷ ತೆರೆಗೆ ಬಂದಂತೆ ಆಗುತ್ತದೆ. ಈ ಚಿತ್ರಗಳ ಪಾತ್ರಗಳು ಬಹಳ ಚೆನ್ನಾಗಿದೆ. ಮತ್ತಷ್ಟು ಗೆಲುವಿನ ನಿರೀಕ್ಷೆಯಿದೆ.

2025 Has Been a Memorable Year for Me Sanjana Anand Looks Ahead to an Even Bigger New Year

ಪರಭಾಷಾ ಸಿನಿಮಾಗಳ ಬಗ್ಗೆ ಹೇಳಿ

ತೆಲುಗಿನಲ್ಲಿ 3 ವರ್ಷಗಳ ಹಿಂದೆ ಒಂದು ಸಿನಿಮಾ ಮಾಡಿದ್ದೆ. ಬಳಿಕ 2 ಚಿತ್ರಗಳಲ್ಲಿ ನಟಿಸಿದ್ದೀನಿ. ಕಾರಣಾಂತರಗಳಿಂದ ಆ ಸಿನಿಮಾಗಳು ತಡವಾಗುತ್ತಿದೆ. ಜೊತೆಗೆ ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಭಾಷಾ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆಯಿದೆ.

ವೈಯಕ್ತಿಕ ಜೀವನದಲ್ಲಿ ಈ ವರ್ಷ ಎಷ್ಟು ಖುಷಿ ತಂದುಕೊಡ್ತು

ಮನೆಯಲ್ಲಿ ಎಲ್ಲರೂ ದುಡಿಯುತ್ತಿದ್ದೇವೆ. ಅದರಲ್ಲೇ ಖುಷಿಯಿದೆ. ಈ ವರ್ಷ ವಿದೇಶ ಪ್ರವಾಸಕ್ಕೆ ಹೋಗಿ ಬಂದೆ. ಅದು ಬಹಳ ಖುಷಿಯಿದೆ. ನನ್ನ ಹುಟ್ಟುಹಬ್ಬಕ್ಕೆ ಕಸೀನ್ಸ್ ಜೊತೆ ವಿಯೆಟ್ನಾಂ ಪ್ರವಾಸ ಮಾಡಿಬಂದೆ. ಈ ವರ್ಷ ನಾನು ಅಂದುಕೊಂಡಿದ್ದೆಲ್ಲಾ ಆಗಿದೆ. ಹಾಗಾಗಿ ಬಹಳ ಖುಷಿಯಿದೆ. ಒಂದಷ್ಟು ಜಾಹೀರಾತುಗಳು, ಈವೆಂಟ್‌ಗಳು ಚೆನ್ನಾಗಿ ಆಯ್ತು. ಮುಂದಿನ ವರ್ಷ ತಂಗಿ ಜೊತೆ ವಿದೇಶ ಪ್ರವಾಸಕ್ಕೆ ಹೋಗುವ ಪ್ಲ್ಯಾನ್ ಇದೆ.

ಹೊಸ ವರ್ಷದ ರೆಸಲ್ಯೂಷನ್

ಪ್ರತಿ ತಿಂಗಳು ರೆಸಲ್ಯೂಷನ್ ಇರುತ್ತೆ. ಹೊಸ ವರ್ಷಕ್ಕೆ ಅಂತ ಯಾವುದು ಇಲ್ಲ. ಜಿಮ್‌ಗೆ ಹೋಗೋದು, ಡಯೆಟ್ ಮಾಡೋದು ಎಲ್ಲವೂ ಸದಾ ಚಾಲ್ತಿಯಲ್ಲಿ ಇರುತ್ತೆ. ಹೊಸ ವರ್ಷದಲ್ಲಿ ಒಳ್ಳೆ ಸಿನಿಮಾಗಳನ್ನು ಮಾಡಬೇಕು ಎನ್ನುವ ಆಸೆಯಿದೆ. ಮತ್ತಷ್ಟು ಒಳ್ಳೆ ಪಾತ್ರಗಳು ಬೇಕು. ಇನ್ನುಳಿದಂತೆ ಈ ವರ್ಷ ನನ್ನ ಬಕೆಟ್ ಲಿಸ್ಟ್‌ನಲ್ಲಿ ಇದ್ದದ್ದು ಎಲ್ಲವೂ ಪೂರೈಸಿದ್ದೇನೆ. ಹೊಸ ವರ್ಷದ ದಿನ ಮನೆಯಲ್ಲಿ ಎಲ್ಲರೂ ಕೂತು ರೆಸಲ್ಯೂಷನ್ ಏನು ಅಂತ ಬರೆಯುತ್ತೇವೆ. ಅದನ್ನು ಸಾಧಿಸುವ ಪ್ರಯತ್ನ ಮಾಡುತ್ತೇವೆ.

More from Filmibeat

Read more about: sanjana anand sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X