ಹೇಗಿದ್ದವಳು, ಹೇಗಾದಳು ; ಅಂದು ಗೌರಮ್ಮ, ಇಂದು ಬಿಚ್ಚಮ್ಮ.. ಅಯ್ಯೋ 'ರಾಮ'..'ರಾಮ' ..!
'ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ', ಈ ಮಾತು 'ಶ್ರೀ ಲಕ್ಷ್ಮೀ ಸತೀಶ್' ಅಲಿಯಾಸ್ 'ಆರಾಧ್ಯ ದೇವಿ'ಗೆ ಹೆಚ್ಚು ಸೂಕ್ತವಾಗುತ್ತೆ. ಹೌದು,' ಶ್ರೀ ಲಕ್ಷ್ಮೀ ಸತೀಶ್'.. ನಿಮಗೆ ನೆನಪಿರಬೇಕು ..? ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಸೌಂದರ್ಯ ಸಮರ ಸಾರಿದ್ದ ಮಲಯಾಳಿ ಚೆಲುವೆ ಈಕೆ.
ಸೀರೆ ಹಾಗೂ ತನ್ನ ಅಂದ ಚೆಂದದಿಂದನೇ ಅನೇಕರ ಹೃದಯಕ್ಕೆ ಕನ್ನ ಹಾಕಿದ್ದ' ಶ್ರೀ ಲಕ್ಷ್ಮೀ ಸತೀಶ್' ನಸೀಬು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಬದಲಾಗಿತ್ತು. 'ರಾಮ್ ಗೋಪಾಲ್ ವರ್ಮಾ' ಕಣ್ಣು ಈಕೆಯ ಮೇಲೆ ಬಿದ್ದು, ನಾಯಕಿಯಾಗುವ ಸುವರ್ಣ ಅವಕಾಶವೂ ಒಲಿದು ಬಂತು.

ಇದೆಲ್ಲವೂ ಆಗಿ ಹೆಚ್ಚು ಕಡಿಮೆ ಈಗ ನಾಲ್ಕು ತಿಂಗ್ಳಾಗಿದೆ. ಸದ್ಯದ ತಾಜಾ ಸಮಾಚಾರ ಏನೆಂದರೆ ಈ ನಾಲ್ಕು ತಿಂಗಳಿನಲ್ಲಿ 'ಶ್ರೀ ಲಕ್ಷ್ಮೀ ಸತೀಶ್' ಗುರುತು ಹಿಡಿಯಲಾಗದಷ್ಟು ಬದಲಾಗಿದ್ದಾರೆ. ಸೀರೆಯಲ್ಲಿ 'ಕಣ್ಮನ' ಸೆಳೆಯುತ್ತಿದ್ದ ಶ್ರೀ ಲಕ್ಷ್ಮೀ ಇದೀಗ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಎಲ್ಲವೂ ರಾಮ್ ಗೋಪಾಲ್ ವರ್ಮಾ 'ಮಹಿಮೆ'
ಪಕ್ಕಾ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಿರುವ ಅವತಾರವನ್ನ 'ಶ್ರೀ ಲಕ್ಷ್ಮೀ ಸತೀಶ್' ಇಲ್ಲಿ ತಾಳಿದ್ದಾರೆ. ಒಂದಕ್ಕಿಂತೊಂದು ಚೆಂದ, ಒಂದಕ್ಕಿಂತೊಂದು ಅಂದ. ಹೀಗಾಗಿಯೇ ಶ್ರೀ ಲಕ್ಷ್ಮೀ ಸತೀಶ್ 'ಕಣ್ಣುಗಳು ಕಟ್ಟಿದ ಆ ಕನಸುಗಳ ಕೋಟೆ'ಯಲ್ಲಿ ಅನೇಕರು ಕಣ್ಮರೆಯಾಗುತ್ತಿದ್ದಾರೆ. ತಮ್ಮ ಮನಸಿನ ನೋವನ್ನೆಲ್ಲ ಶ್ರೀ ಲಕ್ಷ್ಮೀಯ 'ನೆನಪಿನಲ್ಲಿ' ಮರೆಯುವ ಪ್ರಯತ್ನವನ್ನ ಮಾಡುತ್ತಿದ್ದಾರೆ

'ಕಣ್ಣೋಟವೇ ಸಾಕು, ಎಲ್ಲರ ಮನಸೂರೆ ಮಾಡೋಕೆ, ಅವಳ ಸ್ಪರ್ಶವೊಂದು ಸಾಕು ಹೂವಿನ ಮೊಗ್ಗು ಅರಳೋಕೆ' ಎಂಬಂತೆ ಸುಡುವ ಸೂರ್ಯನ ಕೆಳಗೆ ರಾಮ್' ಗೋಪಾಲ್ ವರ್ಮಾ ತೋಟದಲ್ಲಿ ಅರಳಿರುವ ಈ 'ಹೂ'ವನ್ನ ಎಲ್ಲರೂ ಸದ್ಯಕ್ಕೆ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.
ಆರಾಧ್ಯ ದೇವಿಯಾಗಿ ಬದಲಾದ ಶ್ರೀ ಲಕ್ಷ್ಮೀ ಸತೀಶ್ ..!
ಅದೆಲ್ಲೋ ಕೇರಳದ ಕಾಡು ಮೇಡಿನಲ್ಲಿ, ತನ್ನಷ್ಟಕ್ಕೆ ತಾನು ಕ್ಯಾಮರಾಗಳಿಗೆ ಫೋಸ್ ಕೊಡುತ್ತಾ ಹಾಯಾಗಿದ್ದ ಶ್ರೀ ಲಕ್ಷ್ಮೀ ಸತೀಶ್, ರಾಮ್ ಗೋಪಾಲ್ ವರ್ಮಾ ಸಹವಾಸದಿಂದ ತಮ್ಮ ಹೆಸರನ್ನ ಆರಾಧ್ಯ ದೇವಿಯೆಂದು ಬದಲಿಸಿಕೊಂಡಿದ್ದರು. ಇನ್ನೂ ಕೇರಳದಿಂದ ಶ್ರೀ ಲಕ್ಷ್ಮೀಯನ್ನ 'ಹೈಜ್ಯಾಕ್' ಮಾಡಿದ್ದ ರಾಮು, ಶ್ರೀ ಲಕ್ಷ್ಮೀ 'ಸೀರೆ'ಯಲ್ಲಿರುವ ಫೋಟೋಗಳನ್ನ ನೋಡಿ, 'ಸಾರಿ' ಹೆಸರಿನಲ್ಲಿ ಸಿನಿಮಾವನ್ನ ಘೋಷಿಸಿದ್ದರು ಕೂಡ. ಆ ಸಿನಿಮಾ ಎಲ್ಲಿಯವರೆಗೆ ಬಂತೋ ಗೊತ್ತಿಲ್ಲ. ಅಷ್ಟರಲ್ಲಿ ರಾಮು ತಮ್ಮ ಹೊಸ 'ಅನ್ವೇಷಣೆ'ಯ ನವನವೀನ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ತೇಲಿ ಬಿಟ್ಟಿದ್ದಾರೆ. ಸಿನಿ ರಸಿಕರನ್ನ ಹುಚ್ಚೆಬ್ಬಿಸಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯಕ್ಕೆ ಆರಾಧ್ಯ ದೇವಿಯ ಆರಾಧನೆಯನ್ನ ಸಾಮಾಜಿಕ ಜಾಲತಾಣ ಮಾಡುತ್ತಿದೆ.
ಒಟ್ಟಿನಲ್ಲಿ ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರೂ ಗೆಸ್ ಮಾಡಲು ಸಾಧ್ಯವಾಗುವುದಿಲ್ಲ. ಇವತ್ತು ಟಾರ್ ರೋಡನಲ್ಲಿದ್ದವರು, ನಾಳೆ ಸ್ಟಾರ್ ಆಗಿ ಮೆರೆಯಬಹುದು. ಇದಕ್ಕೆ ಶ್ರೀ ಲಕ್ಷ್ಮೀ ಸತೀಶ್ ಅಂದರೆ ಆರಾಧ್ಯ ದೇವಿ ಮತ್ತೊಂದು ಉದಾಹರಣೆ


Click it and Unblock the Notifications











