For Quick Alerts
  ALLOW NOTIFICATIONS  
  For Daily Alerts

  ಅಪ್ಪನ ಹುಟ್ಟು ಹಬ್ಬದಂದೇ ದಂಗೆ ಆರಂಭಿಸಿದ ಅಭಿಷೇಕ್ ಅಂಬರೀಶ್: Exclusive ಡಿಟೈಲ್ಸ್ ಇಲ್ಲಿದೆ!

  |

  ಇಂದು (ಮೇ 29) ರೆಬೆಲ್ ಸ್ಟಾರ್ ಅಂಬರೀಶ್ ಅವರ 70ನೇ ಹುಟ್ಟುಹಬ್ಬ. ಈ ವಿಶೇಷ ದಿನದಂದು ಅಂಬಿ ಪುತ್ರ ಅಭಿಷೇಕ್ ಅಭಿನಯದ ನಾಲ್ಕನೇ ಸಿನಿಮಾ ಫಸ್ಟ್ ಲುಕ್ ರಿವೀಲ್ ಆಗಿದೆ. ಈ ಸಿನಿಮಾವನ್ನು 'ಅಯೋಗ್ಯ' ಹಾಗೂ 'ಮದಗಜ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

  ಕಳೆದ ಕೆಲವು ದಿನಗಳಿಂದ ಮಹೇಶ್ ಕುಮಾರ್ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷ್‌ನಲ್ಲಿ ಒಂದು ಸಿನಿಮಾ ಅನೌನ್ಸ್ ಆಗುತ್ತೆ ಎನ್ನುವ ಗುಸುಗುಸು ಓಡಾಡುತ್ತಲೇ ಇತ್ತು. ಇಂದು ಆ ಊಹಾ-ಪೋಹಗಳಿಗೆಲ್ಲಾ ಫಸ್ಟ್ ಲುಕ್ ಪೋಸ್ಟರ್ ಉತ್ತರ ಕೊಟ್ಟಿದೆ. ಸದ್ಯ ಸಿನಿಮಾದ ಟೈಟಲ್ ಇನ್ನೂ ರಿವೀಲ್ ಮಾಡಿಲ್ಲ. ಆದರೆ, ಫಸ್ಟ್ ಲುಕ್ ಸಿಕ್ಕಾಪಟ್ಟೆ ಮಾಸ್ ಆಗಿದೆ.

  ಡಾಲಿ ಧನಂಜಯ್ ದಿಢೀರನೆ ಅಭಿಷೇಕ್ ಅಂಬರೀಶ್ ಭೇಟಿಯಾಗಿದ್ದರ ಗುಟ್ಟೇನು?ಡಾಲಿ ಧನಂಜಯ್ ದಿಢೀರನೆ ಅಭಿಷೇಕ್ ಅಂಬರೀಶ್ ಭೇಟಿಯಾಗಿದ್ದರ ಗುಟ್ಟೇನು?

  ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್ ಕೊನೆಯ ಹಂತದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ 'ಪೈಲ್ವಾನ್' ಖ್ಯಾತಿಯ ಕೃಷ್ಣ ನಿರ್ದೇಶನದ 'ಕಾಳಿ' ಶೂಟಿಂಗ್ ಆರಂಭ ಆಗಲಿದೆ. ಆ ಬಳಿಕ ಮಹೇಶ್ ಹಾಗೂ ಅಭಿಷೇಕ್ ಸಿನಿಮಾ ಶುರುವಾಗಲಿದೆ. ಫಸ್ಟ್ ಲುಕ್ ರಿಲೀಸ್ ಮಾಡಿದ ಈ ಸಂದರ್ಭದಲ್ಲಿ ಮಹೇಶ್ ಕುಮಾರ್ ಸಿನಿಮಾ ಬಗ್ಗೆ ಎಕ್ಸ್‌ಕ್ಲ್ಯೂಸಿವ್ ಆಗಿ ಮಾಹಿತಿಯನ್ನು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

  ಅಭಿಷೇಕ್ ಸಿನಿಮಾ ಲುಕ್ ಹಿನ್ನೆಲೆಯೇನು?

  ಅಭಿಷೇಕ್ ಸಿನಿಮಾ ಲುಕ್ ಹಿನ್ನೆಲೆಯೇನು?

  "ಇದು ಕಥೆಗೆ ಸಂಬಂಧ ಪಟ್ಟ ಪೋಸ್ಟರ್. ರೆಬೆಲಿನ್ ಬಿಗಿನ್ಸ್ ಅಂತ ಹೇಳಿದ್ದೇವೆ. ಒಬ್ಬ ಹೋರಾಟಗಾರ, ದಂಗೆ ಬ್ಯಾಕ್‌ಡ್ರಾಪ್ ಅಂತ ಹೇಳಬಹುದು. ಅವರ ಹಿಂದಿನ ಮೂರು ಸಿನಿಮಾಗಿಂತ ಇದು ವಿಭಿನ್ನ ಅಂತ ಹೇಳಬಲ್ಲೆ. ಅಮರ್, ಬ್ಯಾಡ್ ಮ್ಯಾನರ್ಸ್ ಹಾಗೂ ಕಾಳಿ ಈ ಮೂರು ಸಿನಿಮಾಗಳಿಗಿಂತ ವಿಭಿನ್ನವಾಗಿರುತ್ತೆ ಅಂತ ಹೇಳಬಹುದು."

  ಶ್ರೀಮುರಳಿ 'ಮದಗಜ' ಸಕ್ಸಸ್ ಮೀಟ್‌ನಲ್ಲಿ 'ಮದಗಜ 2' ಘೋಷಣೆ: ಏನಂತಿದೆ ಸ್ಯಾಂಡಲ್‌ವುಡ್?ಶ್ರೀಮುರಳಿ 'ಮದಗಜ' ಸಕ್ಸಸ್ ಮೀಟ್‌ನಲ್ಲಿ 'ಮದಗಜ 2' ಘೋಷಣೆ: ಏನಂತಿದೆ ಸ್ಯಾಂಡಲ್‌ವುಡ್?

  ಈ ಲುಕ್‌ನಲ್ಲಿ ಕಾಣಿಸುತ್ತಿರೋದೇನು?

  ಈ ಲುಕ್‌ನಲ್ಲಿ ಕಾಣಿಸುತ್ತಿರೋದೇನು?

  "ಈ ಪೋಸ್ಟರ್‌ನಲ್ಲಿ ಏನು ಕಾಣುತ್ತಿದೆ ಅಂದರೆ, ಯುದ್ಧದಲ್ಲಿ ಒಬ್ಬ ಸೈನಿಕನನ್ನು ಹೊಡೆದು, ಎದುರಾಳಿಯ ರಕ್ತ ಮತ್ತು ಕೆಸರು ಮುಖಕ್ಕೆ ಹಾರಿರುವುದು. ಒಂದು ಕಾಲಘಟ್ಟದಲ್ಲಿ ನಡೆಯುವ ಕಥೆ. ಈ ಕಾರಣಕ್ಕಾಗಿ ಇಂತಹದ್ದೊಂದು ಪೋಸ್ಟರ್ ಅನ್ನು ರಿವೀಲ್ ಮಾಡಿದ್ದೇವೆ. ಪ್ರೇಕ್ಷಕರನ್ನು ಮಿಸ್ ಗೈಡ್ ಮಾಡಬಾರದು ಅಂತ ಕಥೆಗೆ ಹೊಂದಿಕೊಂಡಂತಹ ಪೋಸ್ಟರ್ ಕೊಡಬೇಕು ಅಂತಾನೇ ಈ ರೀತಿ ಪೋಟೊಶೂಟ್ ಮಾಡಿದ್ದೇವೆ."

  ಈ ಸಿನಿಮಾಗೆ ಮುಹೂರ್ತ ಯಾವಾಗ?

  ಈ ಸಿನಿಮಾಗೆ ಮುಹೂರ್ತ ಯಾವಾಗ?

  " ಸದ್ಯಕ್ಕೆ ಅವರ ಸಿನಿಮಾ ಕಾಳಿ ನಡೆಯುತ್ತಿದೆ. ಆ ಮೇಲೆ ನನ್ನ ಸಿನಿಮಾ ಶುರುವಾಗುತ್ತೆ. ಅಕ್ಟೋಬರ್ 03 ಅಭಿಷೇಕ್ ಅಂಬರೀಶ್ ಬರ್ತ್‌ಡೇ ಅಂದು ನನ್ನ ಸಿನಿಮಾ ಮುಹೂರ್ತ ಮಾಡುತ್ತೇನೆ. ಹಾಗೇ ಸಿನಿಮಾ ಶೂಟಿಂಗ್ ಕೂಡ ಶುರುವಾಗುತ್ತೆ."

  ಅಂಬಿ ಪುತ್ರ ಅಭಿಷೇಕ್ 3ನೇ ಚಿತ್ರಕ್ಕೆ ತಯಾರಿ: ಡೈರೆಕ್ಟರ್ ಕೂಡ ಫಿಕ್ಸ್!ಅಂಬಿ ಪುತ್ರ ಅಭಿಷೇಕ್ 3ನೇ ಚಿತ್ರಕ್ಕೆ ತಯಾರಿ: ಡೈರೆಕ್ಟರ್ ಕೂಡ ಫಿಕ್ಸ್!

  ಈ ಸಿನಿಮಾಗೆ ಫೋಟೊ ಶೂಟ್ ಮಾಡಿದ್ದೇಗಿತ್ತು?

  ಈ ಸಿನಿಮಾಗೆ ಫೋಟೊ ಶೂಟ್ ಮಾಡಿದ್ದೇಗಿತ್ತು?

  " ಈ ಫಸ್ಟ್ ಲುಕ್ ಮಾಡಿದ್ದೇ ಮೂರು ದಿನಗಳ ಹಿಂದೆ. ಇಷ್ಟರೊಳಗೆ ನಾನು ಬೇರೆಯವರ ಮೇಲೆ ಟೆಸ್ಟ್ ಶೂಟ್ ಮಾಡಿದ್ದೆ. ಅವರಿಗೂ ಈ ಲುಕ್ ಇಷ್ಟ ಆಯ್ತು. ಮೇಕಪ್‌ಗೆ ತುಂಬಾ ಹೊತ್ತು ಕೂತಿದ್ದರು. ಈ ಲುಕ್‌ಗಾಗಿ ಮುಖಕ್ಕೆ ಒಂದು ರೀತಿ ಅಂಟು ಹಾಕಿದ್ದೆವು. ಅದು ಉರಿಯುತ್ತೆ. ಮುಖದಲ್ಲಿ ರಕ್ತ ಇಳಿಯುವ ತನಕ ಕಾಯಬೇಕಿತ್ತು. ಕಣ್ಣಿನ ಒಳಗಿಂದ ರಕ್ತ ಬರಬೇಕಿತ್ತು. ಆದರೂ ಇದನ್ನೆಲ್ಲಾ ಸಹಿಸಿಕೊಂಡು ಲುಕ್ ಕೊಟ್ಟರು. ಈಗ ಫಸ್ಟ್ ಲುಕ್ ನೋಡಿ ಖುಷಿಯಾಗಿದ್ದು, ಫೆಂಟಾಸ್ಟಿಕ್ ಅಂದ್ರು."

  ಅಭಿ ಸಿನಿಮಾದ ಫೀಲಿಂಗ್ ಹೇಗಿದೆ?

  ಅಭಿ ಸಿನಿಮಾದ ಫೀಲಿಂಗ್ ಹೇಗಿದೆ?

  "ನಾನು ಮಂಡ್ಯದವನೇ. ನಾನು ಅಂಬರೀಶ್ ಅವರ ದೊಡ್ಡ ಅಭಿಮಾನಿ. ಬಾಲ್ಯದಿಂದಲೇ ಅವರ ಸಿನಿಮಾ ನೋಡಿಕೊಂಡು ಬಂದಿದ್ದೇನೆ. ಅವರ ಸಿನಿಮಾ ನಿರ್ದೇಶನ ಮಾಡಲು ಸಾಧ್ಯವಾಗಿಲ್ಲ. ಆದರೆ, 'ಡ್ರಾಮಾ' ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಈಗ ಅವರ ಮಗನಿಗಾಗಿ ಒಂದು ಸಿನಿಮಾ ಮಾಡುತ್ತೇನೆ. ಪ್ರೀತಿ, ಅಭಿಮಾನ, ಜವಾಬ್ದಾರಿ ಮೂರೂ ಇದೆ. "

  ಅಭಿಷೇಕ್ ಸಿನಿಮಾ ಬಜೆಟ್ ಏನು?

  ಅಭಿಷೇಕ್ ಸಿನಿಮಾ ಬಜೆಟ್ ಏನು?

  " ತುಂಬಾ ದೊಡ್ಡ ಬಜೆಟ್ ಸಿನಿಮಾವಿದು. ಸುಮಾರು 30 ರಿಂದ 35 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದೇವೆ. ಇಷ್ಟು ಹಣವನ್ನು ಸಿನಿಮಾ ಕೇಳುತ್ತೆ. ದುಬಾರಿ ಸೀನ್‌ಗಳೆಲ್ಲಾ ಇವೆ. ದಂಗೆ ಅಂದ್ಮೇಲೆ ಆಕ್ಷನ್ ಸೀನ್‌ಗಳೆಲ್ಲಾ ಇರುತ್ತೆ. ಹೋರಾಟಗಾರನ ಕಥೆಯಾಗಿದೆ. 135 ದಿನ ಶೂಟಿಂಗ್ ಪ್ಲ್ಯಾನ್ ಮಾಡಿದ್ದೇವೆ."

  ಅಭಿಗೆ ಕಿಟ್ಟಿ ಟ್ರೈನಿಂಗ್ ಕೊಡುತ್ತಾರಾ?

  ಅಭಿಗೆ ಕಿಟ್ಟಿ ಟ್ರೈನಿಂಗ್ ಕೊಡುತ್ತಾರಾ?

  "ಕಥೆ ಎಲ್ಲಾ ಮುಗಿದಿದೆ. ಈಗ ಡೈಲಾಗ್‌ ಮೇಲೆ ವರ್ಕ್ ಮಾಡುತ್ತಿದ್ದೇವೆ. ಬಾಡಿ ಟ್ರಾನ್ಸ್‌ಫರ್ಮೇಷನ್ ನಡೆಯುತ್ತಿದೆ. ಪಾನಿಪುರಿ ಕಿಟ್ಟಿ ಟ್ರೈನಿಂಗ್ ಕೊಡುತ್ತಿದ್ದಾರೆ. ಕಾಳಿ ಹಾಗೂ ನಮ್ಮ ಸಿನಿಮಾಗೆ ನಡೆಯುತ್ತಿದೆ. ಕಾಳಿ ಸಿನಿಮಾ ಮುಗಿಯುತ್ತಿದ್ದಂತೆ ನನ್ನ ಸಿನಿಮಾ ಆರಂಭ ಆಗುತ್ತೆ."

  English summary
  Abhishek Ambareesh New Movie With Mahesh First Look Released, Know More.
  Sunday, May 29, 2022, 17:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X