twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ: ಜೊತೆ-ಜೊತೆಯಲಿ 'ಆರ್ಯವರ್ಧನ್' ಆಂತರ್ಯ

    |

    'ಚಿಟ್ಟೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ತುಂಟಾಟ ಸಿನಿಮಾ ಮೂಲಕ ನಾಯಕ ನಟನಾಗಿ ಕೆಲ ಕಾಲ ಕನ್ನಡ ಬೆಳ್ಳಿ ತೆರೆಯಲ್ಲಿ ಮಿಂಚಿದ ಅನಿರುದ್ಧ ಅವರು ಈಗ ಕಿರುತೆರೆ ಪ್ರವೇಶ ಮಾಡಿದ್ದಾರೆ.

    ಅನಿರುದ್ಧ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಜೊತೆ-ಜೊತೆಯಲಿ' ಧಾರವಾಹಿ ಪ್ರಸ್ತುತ ಪ್ರಸಾರವಾಗುತ್ತಿರುವ ಟಾಪ್ ಕನ್ನಡದ ಧಾರವಾಹಿಗಳಲ್ಲಿ ಒಂದಾಗಿದೆ.

    ಅನಿರುದ್ಧ ನಿರ್ವಹಿಸಿರುವ ಆರ್ಯವರ್ಧನ್ ಪಾತ್ರ ಹೆಂಗೆಳೆಯರ ಮಾತ್ರವಲ್ಲದೆ ಯುವಕರ ಮೆಚ್ಚುಗೆಯನ್ನೂ ಗಳಿಸಿದೆ. ಅನಿರುದ್ಧ ಅವರು ಕಿರುತೆರೆ-ಹಿರಿತೆರೆ, ಆರ್ಯವರ್ಧನ್ ಆಂತರ್ಯ, ವಿಷ್ಣುವರ್ಧನ್ ಸ್ಮಾರಕ ಇನ್ನೂ ಹಲವು ವಿಷಯಗಳ ಬಗ್ಗೆ 'ಫಿಲ್ಮಿಬೀಟ್‌ ಕನ್ನಡ'ದ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

    ಧಾರಾವಾಹಿ ನಟನೆಯ ಹೊಸ ಅನುಭವ ಹೇಗಿದೆ?

    ಧಾರಾವಾಹಿ ನಟನೆಯ ಹೊಸ ಅನುಭವ ಹೇಗಿದೆ?

    ಮೊದಲಿನಿಂದಲೂ ಕಿರುತೆರೆ ಬಗ್ಗೆ ಓಳ್ಳೆಯ ಗೌರವ ಇತ್ತು. ಈಗಲೂ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವುದು ಸಂತೋಶವೇ ತಂದಿದೆ. ಸಿನಿಮಾಕ್ಕಿಂತಲೂ ಹೆಚ್ಚು ಆಯಾಮಗಳು, ಅಭಿನಯಕ್ಕೆ ಹೆಚ್ಚಿನ ಅವಕಾಶಗಳು, ಭಾವಾಭಿವ್ಯಕ್ತಿಗೆ ಹೆಚ್ಚು ಮತ್ತು ಭಿನ್ನ-ವಿಭಿನ್ನ ಸನ್ನಿವೇಶಗಳು ಧಾರಾವಾಹಿಯಲ್ಲಿ ದೊರೆಯುತ್ತದೆ. ಸಿನಿಮಾಗಳಲ್ಲಿ ನಟನಿಗೆ ಬಹು ಆಯಾಮ ಸಿಗುವುದು ಸ್ವಲ್ಪ ಕಡಿಮೆ.

    ಜೊತೆ-ಜೊತೆಯಲಿ ತಂದುಕೊಟ್ಟಿರುವ ಖ್ಯಾತಿಯ ಪುಳಕ ಹೇಗಿದೆ?

    ಜೊತೆ-ಜೊತೆಯಲಿ ತಂದುಕೊಟ್ಟಿರುವ ಖ್ಯಾತಿಯ ಪುಳಕ ಹೇಗಿದೆ?

    ಧಾರಾವಾಹಿಯ ರೀಚ್ ಬಹಳ ದೊಡ್ಡದು. ಥಿಯೇಟರ್‌ಗಳು ಇಲ್ಲದ ಕಡೆಗಳಲ್ಲೂ ಟಿವಿಗಳಿವೆ. ಸಣ್ಣ ಹಳ್ಳಿ-ಹಳ್ಳಿಗೂ ಧಾರಾವಾಹಿ ತಲುಪುತ್ತದೆ. ಎಲ್ಲಾ ವಯಸ್ಸಿನ ಜನ ನೋಡ್ತಿದ್ದಾರೆ. ಪ್ರತಿಕ್ರಿಯಿಸುತ್ತಿದ್ದಾರೆ. ಒಟ್ಟಾಗಿ ಮಾಡಿದ ಈ ಪ್ರಯತ್ನವನ್ನು ಜನರು ಇಷ್ಟಪಟ್ಟಿದ್ದಾರೆ. ಅಂತಿಮವಾಗಿ ಜನರೇ ದೇವರು, ಅವರ ಆಶೀರ್ವಾದ ನಮಗೆ, ನಮ್ಮ ತಂಡಕ್ಕೆ ದೊರಕಿದೆ.

    ನಿಮ್ಮ ಧಾರಾವಾಹಿ ಬೇರೆ ಧಾರಾವಾಹಿಗಳಿಗಿಂತಲೂ ಭಿನ್ನ ಎಂದು ಹೇಗೆ ಕರೆದುಕೊಳ್ಳುತ್ತೀರಿ?

    ನಿಮ್ಮ ಧಾರಾವಾಹಿ ಬೇರೆ ಧಾರಾವಾಹಿಗಳಿಗಿಂತಲೂ ಭಿನ್ನ ಎಂದು ಹೇಗೆ ಕರೆದುಕೊಳ್ಳುತ್ತೀರಿ?

    ಕೆಲವು ಧಾರಾವಾಹಿಗಳು ಹಣ ಉಳಿಸುವ ಸಲುವಾಗಿಯೋ ಬೇರೆಯ ಕಾರಣಕ್ಕೋ ಒಂದೇ ದಿನದಲ್ಲಿ ಎರಡು-ಮೂರು ಎಪಿಸೋಡ್‌ ಶೂಟಿಂಗ್ ಮಾಡಿಬಿಡುತ್ತವೆ. ಒಂದೇ ಸ್ಥಳದಲ್ಲಿ ಕತೆಗಳನ್ನು ಬೆಳೆಸುತ್ತದೆ. ಆದರೆ ನಮ್ಮ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿರುವ ಆರೂರು ಜಗದೀಶ್ ಹಾಗಲ್ಲ, ಧಾರಾವಾಹಿ ರಿಚ್ ಆಗಿರಬೇಕೆಂಬ ಕಾರಣಕ್ಕೆ ಬಹಳ ಶ್ರಮ ವಹಿಸುತ್ತಿದ್ದಾರೆ. ಮೂರು ದಿವಸ ಒಂದೇ ಸನ್ನಿವೇಶ ಶೂಟ್ ಮಾಡಿದ ಉದಾಹರಣೆಯೂ ಇದೆ. ನಾವು ಎಲ್ಲೂ ಸಹ ಕ್ವಾಲಿಟಿ ಕಾಂಪ್ರಮೈಸ್ ಮಾಡಿಕೊಂಡಿಲ್ಲ.

    ಸಿನಿಮಾದವರು ಧಾರಾವಾಹಿಗೆ ಬಂದ್ರೆ ''ಡಿ-ಪ್ರೊಮೋಷನ್'' ಎನ್ನುತ್ತಾರಲ್ಲಾ?

    ಸಿನಿಮಾದವರು ಧಾರಾವಾಹಿಗೆ ಬಂದ್ರೆ ''ಡಿ-ಪ್ರೊಮೋಷನ್'' ಎನ್ನುತ್ತಾರಲ್ಲಾ?

    ಹೌದು ಹಾಗೊಂದು ಮಾತು ಚಾಲ್ತಿಯಲ್ಲಿದೆ. ಸಿನಿಮಾ ಮಾಡ್ಬಾರ್ದು ಎಂದು ಕೆಲವರು ಹೇಳುತ್ತಾರೆ. ಆದರೆ ನನಗೆ ಅದರಲ್ಲಿ ನಂಬಿಕೆ ಇಲ್ಲ. ನನಗೆ ಟಿವಿಯ ಶಕ್ತಿಯ ಚೆನ್ನಾಗಿ ಗೊತ್ತು, ಹಾಗಾಗಿ ಧಾರವಾಹಿ ತಂಡ ನನ್ನನ್ನು ಭೇಟಿ ಮಾಡಿದಾಗ ಮೊದಲಿಗೆ ಡಾಕ್ಯುಮೆಂಟರಿ ಕಾರಣಕ್ಕೆ ಬೇಡವೆಂದು ಹೇಳಿದ್ದೆ ಆದರೆ ನಂತರ ಒಪ್ಪಿಕೊಂಡೆ. ನನ್ನ ಮಕ್ಕಳಾದ ಜೇಷ್ಠವರ್ಧನ್ ಮತ್ತು ಮಗಳು ಶ್ಲೋಕ ಒತ್ತಾಸೆ ಸಹ ಧಾರವಾಹಿ ಒಪ್ಪಿಕೊಳ್ಳಲು ಕಾರಣವಾಯ್ತು.

    ನಿಮ್ಮ ಲುಕ್ ಬಗ್ಗೆ ಹೇಳಿ ಹಾಗೆ ಧಾರವಾಹಿ ನಟನೆ ಕಷ್ಟವಾ ಅಥವಾ ಸಿನಿಮಾ ನಟನೆಯಾ?

    ನಿಮ್ಮ ಲುಕ್ ಬಗ್ಗೆ ಹೇಳಿ ಹಾಗೆ ಧಾರವಾಹಿ ನಟನೆ ಕಷ್ಟವಾ ಅಥವಾ ಸಿನಿಮಾ ನಟನೆಯಾ?

    ಎರಡು ತಿಂಗಳು ಭಿನ್ನ-ಭಿನ್ನ ಲುಕ್‌ಗಳನ್ನು ಧಾರಾವಾಹಿ ತಂಡ ಪ್ರಯತ್ನ ಮಾಡಿತು ಯಾವುದೂ ಸರಿಬರಲಿಲ್ಲ. ಕೊನೆಗೆ ನಾನೇ ರಿಕ್ವೆಸ್ಟ್ ಮಾಡಿಕೊಂಡು ಒಂದು ತಿಂಗಳು ಕಾಲವಕಾಶ ಪಡೆದು ಗಡ್ಡ ಬಿಟ್ಟೆ, ಸಾಲ್ಟ್-ಪೆಪ್ಪರ್ ಲುಕ್ ನಿರ್ದೇಶಕರಿಗೆ ಹಿಡಿಸಿತು. ಇನ್ನು ಧಾರಾವಾಹಿ-ಸಿನಿಮಾದಲ್ಲಿ ಧಾರಾವಾಹಿ ನಟನೆಯೇ ಕಷ್ಟ. ಸತತವಾಗಿ ಪ್ರತಿದಿನವೂ ಶ್ರಮಪಡಬೇಕು. ಸಿನಿಮಾದಲ್ಲಿ ಬ್ರೇಕ್‌ಗಳು ಇರುತ್ತವೆ. ನಟನೆಯ ವಿಷಯದಲ್ಲಿ ಸಿನಿಮಾದಲ್ಲಿ ಬಹುತೇಕ ಒಂದೇ ಎಮೋಷನ್ ಕ್ಯಾರಿಯಾಗುತ್ತದೆ, ಇಲ್ಲಿ ಪ್ರತಿ ಸನ್ನಿವೇಶಕ್ಕೂ ಭಾವಗಳು ಬದಲಾಗುತ್ತಿರುತ್ತವೆ. ಧಾರಾವಾಹಿಯೇ ಹೆಚ್ಚು ಚ್ಯಾಲೆಂಜಿಂಗ್.

    ವಯಸ್ಸಾದವನ-ಯುವತಿಯ ಪ್ರೇಮಕತೆ ಅಸಾಂಪ್ರದಾಯಿಕ ಅನ್ನಿಸಲಿಲ್ಲವಾ?

    ವಯಸ್ಸಾದವನ-ಯುವತಿಯ ಪ್ರೇಮಕತೆ ಅಸಾಂಪ್ರದಾಯಿಕ ಅನ್ನಿಸಲಿಲ್ಲವಾ?

    ಧಾರಾವಾಹಿಯನ್ನು ಒಪ್ಪಿಕೊಳ್ಳಲು ಕತೆಯಲ್ಲಿನ ಭಿನ್ನತೆಯೂ ಒಂದು ಕಾರಣವೇ. ಧಾರಾವಾಹಿಯಲ್ಲಿ ಅವರಿಬ್ಬರ ಪ್ರೇಮ ಸಹಜ ಎಂಬಂತೆ ತೋರಿಸಲಾಗುತ್ತಿದೆ. ಆರ್ಯವರ್ಧನ್ ಮತ್ತು ಅನು ನಡುವಿನ ಪ್ರೇಕ ನಿಷ್ಕಲ್ಮಶವಾದುದು ಹಾಗಾಗಿ ಅದನ್ನು ಜನ ತಿರಸ್ಕರಿಸುತ್ತಿಲ್ಲ. ಒಂದೊಮ್ಮೆ ಆರ್ಯವರ್ಧನ್ ಆಕೆಯ ಅನುವಿನ ದೇಹದ ಮೈಮಾಟಕ್ಕೆ ಆಕರ್ಷಿತನಾಗಿದ್ದರೆ, ಅದು ಚಪಲತೆಯಾಗಿಬಿಡುತ್ತಿತ್ತು, ಆದರೆ ಆರ್ಯವರ್ಧನ್ ಹಾಗಲ್ಲ, ಆತನಿಗೆ ಅನು ಮೇಲೆ ನಿಜವಾದ ಪ್ರೇಮವಿದೆ.

    ಆರ್ಯವರ್ಧನ್ ಪಾತ್ರ ಸ್ವಲ್ಪ ಗೊಂದಲದಿಂದ ಕೂಡಿದೆ ಅನಿಸುವುದಿಲ್ಲವೇ?

    ಆರ್ಯವರ್ಧನ್ ಪಾತ್ರ ಸ್ವಲ್ಪ ಗೊಂದಲದಿಂದ ಕೂಡಿದೆ ಅನಿಸುವುದಿಲ್ಲವೇ?

    ಹಾಗೇನಿಲ್ಲ, ಆತ ಸಂದರ್ಭಕ್ಕೆ ತಕ್ಕಂತೆ ವರ್ತಿಸುತ್ತಾನೆ. ಆತನ ನಿರ್ಣಯಗಳನ್ನು ಆತನೇ ತೆಗೆದುಕೊಳ್ಳುತ್ತಾನೆ, ಜೊತೆಯಲ್ಲಿರುವವರಿಗೆ ಸರ್ಪ್ರೈಸ್ ಕೊಡುವ ಯತ್ನವನ್ನು ಆಗಾಗ್ಗೆ ಮಾಡುತ್ತಾನೆ, ಹಾಗಾಗಿ ನಿಮಗೆ ಹಾಗೆ ಅನ್ನಿಸಿರಬಹುದು. ಅವನಿಗೆ ತನ್ನ ಮತ್ತು ಅನುವಿನ ಸಂಬಂಧವನ್ನು ಸಮಾಜ ಒಪ್ಪಿಕೊಳ್ಳುತ್ತದಾ ಎಂಬ ಸಂಶಯವಷ್ಟೇ ಇದೆ. ಮಿಕ್ಕಂತೆ ಆತನ ವ್ಯಕ್ತಿತ್ವದಲ್ಲಿ ಯಾವುದೇ ಗೊಂದಲಗಳಿಲ್ಲ.

    ಲಾಕ್‌ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದೀರಿ?

    ಲಾಕ್‌ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದೀರಿ?

    ಭಾರತಿ ಅಮ್ಮನ ಬಗ್ಗೆ ಡಾಕ್ಯುಮೆಂಟರಿ ಮಾಡುತ್ತಿದ್ದು, ಬಹು ದಿನಗಳಿಂದ ಈ ಕೆಲಸ ನಡೀತಿದೆ. ಈಗ ಸಬ್‌ಟೈಟಲ್ಸ್ ಬರೆಯುವ ಕೆಲಸ ಮಾಡುತ್ತಿದ್ದೇನೆ. ಕೆಲವು ದಿನಪತ್ರಿಗಳಿಗೆ ಲೇಖನಗಳನ್ನು ಬರೀತಿದ್ದೀನಿ. ಪತ್ನಿ, ತಾಯಿ, ಮಕ್ಕಳ ಜೊತೆ ಕಾಲ ಕಳೆದಯುತ್ತಿದ್ದೀನಿ. ಜೊತೆಗೆ ಹಳೆಯ ಸಿನಿಮಾಗಳನ್ನು ನೋಡುತ್ತಿದ್ದೇನೆ.

    ವಿಷ್ಣುವರ್ಧನ್ ಅವರ ಸ್ಮಾರಕ ಕಾರ್ಯ ಎಲ್ಲಿರವರೆಗೆ ಬಂತು?

    ವಿಷ್ಣುವರ್ಧನ್ ಅವರ ಸ್ಮಾರಕ ಕಾರ್ಯ ಎಲ್ಲಿರವರೆಗೆ ಬಂತು?

    ಸರ್ಕಾರದ ಕಡೆಯಿಂದ ಒಪ್ಪಿಗೆಗಳೆಲ್ಲಾ ಮುಗಿದಿವೆ. ಇನ್ನು ಟೆಂಡರ್ ಒಂದು ನೀಡಬೇಕು. ಅದಕ್ಕೆ ಮೂರು ತಿಂಗಳ ಸಮಯ ಹಿಡಿಯುತ್ತದೆ. ಅದಾದ ನಂತರ ಕಾಮಗಾರಿ ಪ್ರಾರಂಭವಾಗುತ್ತದೆ. ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ವಾಗುತ್ತದೆ. ಈಗಾಗಲೇ ಪ್ಲ್ಯಾನಿಂಗ್ ಎಲ್ಲವೂ ತಯಾರಿದೆ.

    English summary
    Actor Anirudh talked about serial Jothe Jotheyali and his charector Aryavardhan. He also talked about Vishnuvardhan Monument.
    Friday, April 3, 2020, 14:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X