twitter
    For Quick Alerts
    ALLOW NOTIFICATIONS  
    For Daily Alerts

    Exclusive : 'ಮಂಗಳಯಾನ' ಮುಗಿಸಿದ ದತ್ತಣ್ಣ ಮದುವೆ ಯಾಕೆ ಆಗ್ಲಿಲ್ಲ?

    |

    Recommended Video

    Mission Mangal Movie: ಮಂಗಳಯಾನ' ಮುಗಿಸಿದ ದತ್ತಣ್ಣ ಮದುವೆ ಯಾಕೆ ಆಗ್ಲಿಲ್ಲ? | FILMIBEAT KANNADA

    ''ನನ್ನ ಪ್ರಕಾರ ಮದುವೆ ಎನ್ನುವುದು ಒಂದು ಡೈಯಿಂಗ್ ಇನ್ಸ್ಟಿಟ್ಯೂಷನ್,'' ಎಂಬುದು ನಟ ದತ್ತಣ್ಣ ಅವರ ಕಡ್ಡಿ ಮುರಿದಂತಹ ಮಾತು.

    ಬಾಲಿವುಡ್‌ನ ಅಕ್ಷಯ್ ಕುಮಾರ್ ಜತೆ 'ಮಂಗಲಯಾನ' ಸಿನೆಮಾಗಾಗಿ ತೆರೆ ಹಂಚಿಕೊಂಡ 77 ವರ್ಷದ ಹಿರಿಯ ಕನ್ನಡ ನಟ, ಮೂರು ರಾಷ್ಟ್ರ ಪ್ರಶಸ್ತಿ ವಿಜೇತ ಎಚ್. ಜಿ. ದತ್ತಾತ್ರೇಯ 'ಫಿಲ್ಮಿ ಬೀಟ್' ಜತೆ ಮಾತುಕತೆಗೆ ಕುಳಿತರು. ಚಂದ್ರಯಾನ- 2 ಉಡಾವಣೆ ಹಾಗೂ ಕರ್ನಾಟಕ ರಾಜಕೀಯ ಬೆಳವಣಿಗೆಗಳನ್ನು ಎದುರಿಗಿಟ್ಟುಕೊಂಡು ಮಾತಿಗೆ ಕುಳಿತ ದತ್ತಣ್ಣ ಬದುಕಿನ ಹಲವು ಆಯಾಮಗಳ ಕುರಿತು ಇದೇ ಮೊದಲ ಬಾರಿಗೆ ಮನ ಬಿಚ್ಚಿ ಮಾತನಾಡಿದರು. ಅವರು ಜತೆಗಿನ ಆಪ್ತ ಮಾತುಕತೆಯ ತುಣುಕೊಂಡು ಇಲ್ಲಿದೆ.

    ಸಾಯುತ್ತಿರುವ ವ್ಯವಸ್ಥೆ:

    ''ನನ್ನ ಪ್ರಕಾರ... ನನ್ನ ಭಾವನೆಯಲ್ಲಿ... ಮದುವೆ ಎನ್ನುವುದು ಒಂದು ಮಹತ್ವಾಕಾಂಕ್ಷೆಯ ವಿಷಯ ಅಲ್ಲ. ಇದು ನನ್ನ ಅಭಿಪ್ರಾಯ ಆಗಿದ್ದು, ಎಲ್ಲರೂ ಅದನ್ನು ಒಪ್ಪಬೇಕು ಅಂತೇನು ಅಲ್ಲ. ಇದು ಅವರವರಿಗೆ ಬಿಟ್ಟ ವಿಷಯ,'' ಎಂದರು ದತ್ತಣ್ಣ.

    ''ಯಾಕೆ ನೀವು ಮದುವೆ ಆಗಿಲ್ಲ..? ಅಂತ ಕೆಲವರು ಆಗಾಗ ನನ್ನನ್ನು ಕೇಳಿದ್ದಾರೆ. ಮದುವೆ ಎನ್ನುವುದರ ಬಗ್ಗೆ ನನಗೆ ಅಷ್ಟೊಂದು ದೊಡ್ಡ ಅಭಿಪ್ರಾಯ ಇರಲಿಲ್ಲ. ಯಾರು ನನ್ನನ್ನು ಮದುವೆ ಆಗುತ್ತೇನೆ ಅಂತ ಬಂದು ಕೇಳಲಿಲ್ಲ. ನಾನೂ ಕೂಡ ಯಾರ ಬಳಿಯು ಹೋಗಿ ಹೇಳಲಿಲ್ಲ. ನನ್ನ ಭಾವನೆಯಲ್ಲಿ ಮದುವೆ ಎನ್ನುವುದು ಇವತ್ತು ಒಂದು ಡೈಯಿಂಗ್ ಇನ್ಸ್ಟಿಟ್ಯೂಷನ್.''

    ದತ್ತಣ್ಣನ ಸಾಧನೆಗೆ ಸಲಾಂ ಎಂದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ದತ್ತಣ್ಣನ ಸಾಧನೆಗೆ ಸಲಾಂ ಎಂದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್

    ''ನಮ್ಮ ಕೆಲವು ಸ್ನೇಹಿತರು ಮದುವೆ.. ಗಿದುವೆ.. ಎನ್ನುವಾಗ, ಯಾಕೋ ಅದರ ಬಗ್ಗೆ ಅಷ್ಟೊಂದು ಮಾತನಾಡುತ್ತೀರಿ, ಅದಕ್ಕೆ ಯಾಕೆ ಅಷ್ಟೊಂದು ಮಹತ್ವ ನೀಡುತ್ತೀರಿ ಎನ್ನತ್ತಿದ್ದೆ. ಸ್ಕೂಲ್ ಮುಗಿಯುತ್ತೆ, ಕಾಲೇಜ್ ಮುಗಿಯುತ್ತೆ, ದುಡಿಯುತ್ತೇವೆ, ಮನೆ ಕಟ್ಟುತ್ತೇವೆ ಅದೇ ರೀತಿ ಮದುವೆ ಕೂಡ ಒಂದು. ಮದುವೆ ಎಂಬುದು ಒಂದು ಮಹತ್ವಾಕಾಂಕ್ಷೆಯ ವಿಷಯ ಎನ್ನುವುದು ನನ್ನ ಪ್ರಕಾರ ಸುಳ್ಳು. ಆದರೆ, ಬೇರೆಯವರ ಅಭಿಪ್ರಾಯ ಬೇರೆ ಇರಬಹುದು.''

    ಪ್ರೀತಿಯನ್ನು ದೂರದಿಂದ ಅನುಭವಿಸಬೇಕು

    ಪ್ರೀತಿಯನ್ನು ದೂರದಿಂದ ಅನುಭವಿಸಬೇಕು

    ''ನಾನು ಅವರನ್ನು ಬಹಳ ಪ್ರೀತಿಸುತ್ತೇನೆ... ಎಂದುಕೊಂಡು ಮಾಡಿಕೊಂಡ ಮದುವೆಗಳು ಕೂಡ ಮುರಿದು ಬಿದ್ದಿವೆ. ಮೊನ್ನೆ ಮೊನ್ನೆ ಮೂವತ್ತು ವರ್ಷಗಳ ಸಂಸಾರದ ಬಳಿಕ ನನ್ನ ಫ್ರೆಂಡ್ ತನ್ನ ಪತ್ನಿಗೆ ವಿಚ್ಚೇದನನೀಡಿದ. ಆತ ಮತ್ತೊಂದು ಮದುವೆ ಆಗುತ್ತೇನೆ ಎಂದಾಗ ನಾನು ಅದರ ಅಗತ್ಯ ಇದೆಯೇ ಎಂದು ಹೇಳಿದೆ. ನನ್ನ ಪ್ರಕಾರ ಪ್ರೀತಿಯನ್ನು ದೂರದಿಂದ ಅನುಭವಿಸಬೇಕು.''

    ನೀರ್ ದೋಸೆ 'ದತ್ತಣ್ಣ'ಗೆ 75 ವರ್ಷ ಆಯ್ತಣ್ಣಾ.! ನೀರ್ ದೋಸೆ 'ದತ್ತಣ್ಣ'ಗೆ 75 ವರ್ಷ ಆಯ್ತಣ್ಣಾ.!

    ನಾನು ಕಂಡ ಕೊನೆಯ ಒಳ್ಳೆಯ ಮದುವೆ

    ನಾನು ಕಂಡ ಕೊನೆಯ ಒಳ್ಳೆಯ ಮದುವೆ

    ''ನಮ್ಮ ಅಪ್ಪ ಅಮ್ಮ ಮದುವೆ ಆಗಿದ್ರಲ್ಲ... ಅದು ನಾನು ಕಂಡ ಕೊನೆಯ ಒಳ್ಳೆಯ ಮದುವೆ. ಇದನ್ನು ನಾನು ಯಾವಾಗಲೂ ಹೇಳುತ್ತೇನೆ. ಅದರ ನಂತರ ಒಳ್ಳೆಯ ಮದುವೆ ಅಂತ ನಾನು ಯಾವುದನ್ನು ನೋಡಿಲ್ಲ. ಜಗಳ.. ಕದನ.. ನೋಡಿದ್ದೇನೆ. ವಿಚ್ಚೇದನ ನೋಡಿದ್ದೇನೆ. ಅವನು ಇವಳನ್ನು ಬೈಯುವುದು, ಇವನು ಅವಳನ್ನು ಬೈಯುವುದನ್ನು ನೋಡಿದ್ದೇನೆ. ಹೀಗಾಗಿ, ಮದುವೆ ಎಂಬ ಕಲ್ಪನೆ ಅಷ್ಟೊಂದು ಚೆನ್ನಾಗಿಲ್ಲ.''

    ಓದು ಕೆಲಸದ ನಡುವೆ ಮದುವೆ ಯೋಚನೆ ಮಾಡಲಿಲ್ಲ

    ಓದು ಕೆಲಸದ ನಡುವೆ ಮದುವೆ ಯೋಚನೆ ಮಾಡಲಿಲ್ಲ

    ''ನಾನು ಓದಿನಲ್ಲಿ ಚುರುಕಾಗಿದ್ದೆ. ಸ್ಕೂಲ್, ಪಿಯುಸಿ ಮುಗಿಸಿ, ಇಂಜಿನಿಯರಿಂಗ್ ಓದಿದೆ. ಸಣ್ಣ ಸಣ್ಣ ಕೆಲಸ ಮಾಡಿದೆ. ಆಮೇಲೆ ಏರ್ ಫೋರ್ಸ್ ಕೆಲಸಕ್ಕೆ ಸೇರಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿದೆ. ಮದುವೆಗೆ ಅಷ್ಟೊಂದು ಪ್ರಾಮುಖ್ಯತೆ ನೀಡದ ಕಾರಣ, ಅದರ ಬಗ್ಗೆ ಯೋಚನೆ ಕೂಡ ಬರಲಿಲ್ಲ. ನನ್ನ ಸುತ್ತ ಮುತ್ತಲಿನ ವಾತಾವರಣ ಕೂಡ ಹಾಗೆಯೇ ಇತ್ತು.''

    ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸಿದ ಕನ್ನಡದ ದತ್ತಣ್ಣ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸಿದ ಕನ್ನಡದ ದತ್ತಣ್ಣ

    ನೀವು ಅದೇ ರೀತಿ ಯೋಚನೆ ಮಾಡಬೇಕು ಎಂದಿಲ್ಲ

    ನೀವು ಅದೇ ರೀತಿ ಯೋಚನೆ ಮಾಡಬೇಕು ಎಂದಿಲ್ಲ

    ''ಒಬ್ಬ ವ್ಯಕ್ತಿಯ ಹತ್ತಿರಕ್ಕೆ ಹೋದಾಗಲೇ ತಪ್ಪುಗಳು ಕಾಣುತ್ತವೆ. ದೂರದಲ್ಲಿ ಇದ್ದಾಗ ಎಲ್ಲವೂ ಅದ್ಬುತವಾಗಿ ಕಾಣುತ್ತದೆ. ಒಂದು ವಯಸ್ಸಿನಲ್ಲಿ ಒಬ್ಬರಿಗೊಬ್ಬರ ಮೇಲೆ ಸೆಳೆತ ಉಂಟಾಗುತ್ತದೆ. ಆದರೆ, ಪ್ರೀತಿ, ಲವ್ ಬಗ್ಗೆ ಯಾರಿಗೂ ಅರ್ಥ ಆಗುವುದಿಲ್ಲ. ಮದುವೆ ಎನ್ನುವುದು ನಾನು ಅಂದುಕೊಂಡ ಮಟ್ಟಿಗೆ ಕೆಟ್ಟದಾಗಿ ಇದೆ ಅಂತೇನು ಅಲ್ಲ. ನೀವು ಅದೇ ರೀತಿ ಯೋಚನೆ ಮಾಡಬೇಕು ಎಂದೂ ಅಲ್ಲ. ಅದು ಅವರವರ ಮನೋ ಧರ್ಮ. ನಿಮಗೆ ಮದುವೆ ಇಷ್ಟ ಇದ್ರೆ ಮಾಡಿಕೊಳ್ಳಿ.'' ಹೀಗೆ ಹೇಳಿ ನಗುತ್ತಾಲೇ ತಮ್ಮ ಮಾತು ಮುಗಿಸಿದರು ದತ್ತಣ್ಣ.

    English summary
    Kannada actor Dathanna (H. G. Dattatreya) still bachelor, the actor revealed big secret in his life in filmibeat kannada exclusive interview.
    Wednesday, July 24, 2019, 15:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X