Exclusive Interview : ಮೊದಲ ಹಿಂದಿ ಚಿತ್ರದ ಬಗ್ಗೆ ನ್ಯಾಷನಲ್ ಸ್ಟಾರ್ ಟಾಕ್
Recommended Video
2011 ರಿಂದ 2019.. ತನ್ನ ವೃತ್ತಿ ಜೀವನದ 8 ವರ್ಷಗಳನ್ನು ಒಬ್ಬ ನಟ ಬರೀ ಎರಡು ಸಿನಿಮಾಗಳಿಗಾಗಿ ಮೀಸಲು ಇಟ್ಟಿದ್ದಾರೆ. ಆ ಎರಡು ಮಹಾ ಸಿನಿಮಾಗಳಿಗಾಗಿ ದೊಡ್ಡ ತ್ಯಾಗ ಮಾಡಿದ್ದಾರೆ. ಅವರೇ ಪ್ರಭಾಸ್
'ಬಾಹುಬಲಿ' ಸಿನಿಮಾದಿಂದ ನ್ಯಾಷನಲ್ ಸ್ಟಾರ್ ಆಗಿರುವ ಪ್ರಭಾಸ್ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. 'ಸಾಹೋ' ಪ್ರಭಾಸ್ ನಟನೆಯ ಮೊದಲ ಹಿಂದಿ ಸಿನಿಮಾವಾಗಿದ್ದು, ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪೈಕಿ ಅಗ್ರ ಸ್ಥಾನದಲ್ಲಿದೆ.
'ಸಾಹೋ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಭಾರತ ಚಿತ್ರರಂಗದ ಮತ್ತೊಂದು ಮಹಾನ್ ಸಿನಿಮಾ ಇದಾಗಿದ್ದು, 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.
ಅಂದಹಾಗೆ, 'ಸಾಹೋ' ಸಿನಿಮಾದ ವಿಶೇಷ ನಟ ಪ್ರಭಾಸ್ 'ಡೈಲಿ ಹಂಟ್' ಹಾಗೂ 'ಒನ್ ಇಂಡಿಯಾ'ಗೆ ಸಂದರ್ಶನ ನೀಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

'ಬಾಹುಬಲಿ'ಯ ದೊಡ್ಡ ಯಶಸ್ಸಿನ ನಂತರ, ಆ ಒತ್ತಡದ ಜೊತೆಗೆ ಹೇಗೆ 'ಸಾಹೋ' ಸಿನಿಮಾ ಶುರು ಮಾಡಿದ್ರಿ?
''ಪ್ರಾರಂಭದಲ್ಲಿ ಇಂತಹ ದೊಡ್ಡ ಸಿನಿಮಾ ಮಾಡುವ ಆಲೋಚನೆ ನಮಗೂ ಇರಲಿಲ್ಲ. 'ಬಾಹುಬಲಿ' ಚಿತ್ರದ ಬಳಿಕ ಒಂದು ಸಾಮಾನ್ಯ ಆಕ್ಷನ್ ಸಿನಿಮಾ ಮಾಡುವುದು ಸುಲಭ ಆಗಿರಲಿಲ್ಲ. ಒಂದು ಒಳ್ಳೆಯ ಸಿನಿಮಾ ಮಾಡುವ ತಯಾರಿ ನಡೆದಿತ್ತು. ಆದರೆ, 'ಸಾಹೋ' ಸಿನಿಮಾ ಬರು ಬರುತ್ತಾ ದೊಡ್ಡದಾಗಿ ಬೆಳೆಯಿತು.''

ಚಿತ್ರದ ನಿರ್ದೇಶಕ ಸುಜಿತ್ ಗೆ ಕೇವಲ 28 ವರ್ಷ. ಇಷ್ಟು ದೊಡ್ಡ ಸಿನಿಮಾವನ್ನು ಹೇಗೆ ನಿಭಾಯಿಸಿದರು?
''ಈ ಹಿಂದೆ ಸುಜಿತ್ ಒಂದೇ ಒಂದು ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದರು. ಆದರೆ, 'ಸಾಹೋ' ಸಿನಿಮಾದಲ್ಲಿ ದೊಡ್ಡ ದೊಡ್ಡ ನಟರು ಇರುವ ಕಾರಣ, ಪ್ರಾರಂಭದಲ್ಲಿ ಅವರಿಗೆ ಕೊಂಚ ಸಮಯ ಬೇಕಾಯಿತು. ಆದರೆ, ಅವರು ತುಂಬ ಆತ್ಮವಿಶ್ವಾಸ ಹೊಂದಿದ್ದರು. ಸಮಯ ತೆಗೆದುಕೊಂಡು, ಕಲಾವಿದರನ್ನು ಒಪ್ಪಿಸುತ್ತಿದ್ದರು. ಮೂರ್ನಾಲ್ಕು ತಿಂಗಳ ನಂತರ ಎಲ್ಲ ಸುಗಮವಾಗಿ ನಡೆಯಲು ಶುರು ಆಯ್ತು.

ಇನ್ನು ಕೆಲವೇ ದಿನದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ನೀವು ಅಷ್ಟೊಂದು ಕೂಲ್ ಆಗಿ ಹೇಗಿದ್ದೀರಿ ಹೇಗೆ?
(ನಗುತ್ತಾ) ''ನಾನು ಒಬ್ಬ ನಟ.. ಹಾಗಾಗಿ ನಾನು ಈಗಲೂ ನಟನೆ ಮಾಡುತ್ತಿದ್ದೇನೆ. ನಿಜವಾಗಿಯೂ ನಾನು ತುಂಬ ಒತ್ತಡದಲ್ಲಿ ಇದ್ದೇನೆ. ನಿರ್ದೇಶಕ, ನಿರ್ಮಾಪಕರು ಹಾಗೂ ನನಗೆ ಹೆಚ್ಚು ಒತ್ತಡ ಇದೆ. ನಮ್ಮ ಸ್ನೇಹಿತರು, ಮನೆಯವರು, 'ಬಾಹುಬಲಿ' ನೋಡಿದ ಪ್ರೇಕ್ಷಕರು, ಅಭಿಮಾನಿಗಳು ಎಲ್ಲರಿಂದ ನಿರೀಕ್ಷೆ ಇದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಎಲ್ಲವೂ ಒಳ್ಳೆದಾಗುತ್ತೆ ಎನ್ನುವ ಭರವಸೆ ಇದೆ.''

ಇದು ನಿಮ್ಮ ಮೊದಲ ಹಿಂದಿ ಸಿನಿಮಾ, ಹೀಗಾಗಿ ಪ್ರಚಾರ ಕಾರ್ಯದ ಅನುಭವ ಹೇಗಿತ್ತು?
''ಬಾಹುಬಲಿ' ಸಿನಿಮಾ ಪ್ರಮೋಷನ್ ಗೆ ಬಂದಾಗ ಹಿಂದಿ ಮಾಧ್ಯಮದೊಂದಿಗೆ ಮಾತಾಡಿ ಅಭ್ಯಾಸ ಆಗಿತ್ತು. ಈಗ ಓಕೆ. ಸಾಮಾನ್ಯವಾಗಿ ನಾನು ಹೆಚ್ಚು ಜನರ ಜೊತೆಗೆ ಮಾತನಾಡುವುದಿಲ್ಲ. ಆದರೆ, ಈಗ ನನ್ನ ಸ್ನೇಹಿತರು ಪ್ರಮೋಷನ್ಸ್ ನಲ್ಲಿ ಶ್ರದ್ದಾ ಕಪೂರ್ ಗಿಂತ ನೀನೆ ಹೆಚ್ಚು ಮಾತನಾಡುತ್ತಿದ್ದೀಯಾ ಎನ್ನುತ್ತಾರೆ.''

ಸೌತ್ ನಲ್ಲಿ ಹೀರೋಯಿನ್ ಗಳಿಗೆ ಹೆಚ್ಚು ಪ್ರಾದಾನ್ಯತೆ ಇರುವುದಿಲ್ಲ ಎನ್ನುವ ಮಾತಿದೆ. ಆದರೆ, ಇಲ್ಲಿ ಶ್ರದ್ಧಾಗೆ ಆಕ್ಷನ್ ಪಾತ್ರ ಇದೆ. ಆ ಬಗ್ಗೆ ಹೇಳಿ
''ಸೌತ್ ಚಿತ್ರಗಳಲ್ಲಿ ಹೀರೋಯಿನ್ ಗಳ ಪಾತ್ರಕ್ಕೆ ಪ್ರಾಮುಖ್ಯತೆ ಇರುವುದಿಲ್ಲ ಎಂದೆನು ಇಲ್ಲ. 'ಬಾಹುಬಲಿ'ಯಲ್ಲಿ ದೇವಸೇನಾ ಪಾತ್ರ ಕೆಲವು ಕಡೆ 'ಬಾಹುಬಲಿಯನ್ನು ಬೀಟ್ ಮಾಡುವ ಹಾಗಿತ್ತು. ಶ್ರದ್ಧಾಗೆ ಕೂಡ 'ಸಾಹೋ' ಸಿನಿಮಾದಲ್ಲಿ ಪ್ರಮುಖ ಪಾತ್ರ ಇದೆ. ಶ್ರದ್ಧಾ ಪಾತ್ರದಿಂದ ಈ ಸಿನಿಮಾ ತಿರುವು ಪಡೆಯುತ್ತದೆ. ಐ ಲವ್ ಶ್ರದ್ಧಾ ರೋಲ್ ಇನ್ ದಿನ್ ಫಿಲ್ಮ್.''

ನೀವು ಒಬ್ಬ ದೊಡ್ಡ ನಟನಾದರೂ, ತುಂಬ ಡೌನ್ ಟು ಅರ್ಥ್ ಪರ್ಸನ್. ಅದು ಹೇಗೆ ಸಾಧ್ಯ?
''ಅದು ನಾನು ಪ್ರಾರಂಭದಲ್ಲಿ ನೀಡಿದ ಫ್ಲಾಪ್ ಸಿನಿಮಾಗಳಿಂದ ಇರಬಹುದು. ನಾನು ಭೇಟಿ ಮಾಡಿದ ರಾಜಮೌಳಿ ಹಾಗೂ ಆ ರೀತಿಯ ವ್ಯಕ್ತಿಗಳಿಂದ ಇರಬಹುದು. ನಮ್ಮ ತಾಯಿ ಇಂಡಸ್ಟ್ರಿಯಲ್ಲಿ ಹುಷಾರು ಎಂದು ಹೇಳುತ್ತಿದ್ದರು ಹಾಗಾಗಿ ಇರಬಹುದು ಅಥವಾ ನನ್ನ ಸ್ನೇಹಿತರಿಂದ ಇರಬಹುದು.''
ಕೊನೆಯದಾಗಿ ನಿಮ್ಮ ಅಭಿಮಾನಿಗಳಿಗೆ ಏನು ಸಂದೇಶ ನೀಡುತ್ತೀರಿ?
''ಆಗಸ್ಟ್ 30 ರಂದು 'ಸಾಹೋ' ಸಿನಿಮಾ ಬಿಡುಗಡೆ ಆಗುತ್ತಿದೆ. ಎಲ್ಲರೂ ಸಿನಿಮಾ ನೋಡಿ. ನೀವೆಲ್ಲ ಏಂಜಾಯ್ ಮಾಡುತ್ತೀರಿ ಎನ್ನುವ ಭರವಸೆ ಇದೆ. ಥ್ಯಾಂಕ್ಯು.''


Click it and Unblock the Notifications