SSLCಯಲ್ಲಿ 95%, PUCಯಲ್ಲಿ 97% ಮಾರ್ಕ್ಸ್; ಮುಂದಿನ ಕನಸು ಬಿಚ್ಚಿಟ್ಟ ನಟಿ ಅಂಕಿತಾ ಜಯರಾಮ್

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಫಲಿತಾಂಶ ಪ್ರಕಟವಾಗಿದೆ. ಶೇಕಡ 86.02 ರಷ್ಟು ದಾಖಲೆ ಫಲಿತಾಂಶ ದಾಖಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 12.5 ರಷ್ಟು ಏರಿಕೆ ಕಂಡಿದೆ. ನಟಿ ಅಂಕಿತಾ ಜಯರಾಮ್ ಕಾಮರ್ಸ್ ವಿಭಾಗದಲ್ಲಿ ಒಟ್ಟು 600 ಅಂಕಗಳಿಗೆ 579 ಅಂಕಗಳನ್ನು ಗಳಿಸಿ 97% ರಷ್ಟು ಫಲಿತಾಂಶ ಗಳಿಸಿದ್ದಾರೆ. ಆಕೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ.

ಬಾಲನಟಿಯಾಗಿ 10 ವರ್ಷಗಳ ಹಿಂದೆ ಅಂಕಿತಾ ಬಣ್ಣ ಹಚ್ಚಲು ಆರಂಭಿಸಿದ್ದರು. ಕನ್ನಡದ ಸ್ಟಾರ್ ನಟರ ಜೊತೆಗೆಲ್ಲಾ ಸ್ಕ್ರೀನ್‌ ಶೇರ್ ಮಾಡಿಕೊಂಡು ಗೆದ್ದಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯ 'ಕರ್ಣ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಒಂದೆರಡು ಸಿನಿಮಾಗಳು ಕೂಡ ಆಕೆಯ ಕೈಯಲ್ಲಿದೆ. ನಟನೆಯ ಜೊತೆ ಜೊತೆಗೆ ಓದಿನಲ್ಲಿ ಕೂಡ ಅಂಕಿತಾ ಮುಂದಿದ್ದಾರೆ. ಕನ್ನಡದಲ್ಲಿ 97, ಬಿಸ್ನೆಸ್ ಸ್ಟಡೀಸ್‌ನಲ್ಲಿ 98, ಇಂಗ್ಲಿಷ್‌ನಲ್ಲಿ 94, ಅಕೌಂಟೆನ್ಸಿಯಲ್ಲಿ 96, ಸ್ಟಾಟ್ಸ್‌ಲ್ಲಿ 100ಕ್ಕೆ 100 ಹಾಗೂ ಕಂಪ್ಯೂಟರ್ ಸೈನ್ಸ್ 94 ಅಂಕ ಗಳಿಸಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಅಂಕಿತಾ ಮಾತನಾಡಿದ್ದಾರೆ. ತಂದೆ ಜಯರಾಮ್ ಕೂಡ ಮಗಳ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Actress Ankitha Jayaram Scores 97 in PUC she reacts on Success

ಸಾಕಷ್ಟು ಜನ ಫೋನ್ ಮಾಡಿ ಅಭಿನಂದನೆ ತಿಳಿಸಿದ್ರು ಬಹಳ ಖುಷಿಯಾಗ್ತಿದೆ ಎಂದು ಅಂಕಿತಾ ಹೇಳಿದ್ದಾರೆ. "ಟೈಮ್ ಸಿಕ್ಕಿದಾಗ್ಲೆಲ್ಲಾ ಓದಿಕೊಳ್ತಿದ್ದೆ.. ಯಾವುದೇ ಟೈಮ್‌ ಟೇಬಲ್, ಶೆಡ್ಯೂಲ್ ಅಂತ ಮಾಡಿಕೊಳ್ಳಲಿಲ್ಲ. ಇಡೀ ದಿನ ಫ್ರೀ ಇದ್ರೆ ಓದುತ್ತಿದ್ದೆ. ಶೂಟಿಂಗ್ ಇದ್ದಾಗ ಏನು ಮಾಡೋಕೆ ಆಗ್ತಿರಲಿಲ್ಲ.. ಅಪ್ಪಿತಪ್ಪಿ ಸಮಯ ಸಿಕ್ರೆ, ಓದಿಕೊಳ್ತಿದ್ದೆ. ಎಸ್‌ಎಸ್‌ಎಲ್‌ಸಿಯಲ್ಲಿ 95% ಅಂಕ ಬಂದಿತ್ತು.. ಸದ್ಯಕ್ಕೆ ಬಿಬಿಎ ಅಥವಾ ಬಿಸಿಎ ಡಿಗ್ರಿ ಓದಬೇಕು ಎಂದುಕೊಂಡಿದ್ದೇನೆ.. ಮುಂದೆ ಯಾವುದಾದರೂ ಪರೀಕ್ಷೆ ಬರೆಯುವ ಆಲೋಚನೆಯಿದೆ" ಎಂದಿದ್ದಾರೆ.

ಓದಿನ ಜೊತೆಗೆ ನಟನೆಯನ್ನು ಮುಂದುವರೆಸುವ ಆಸೆಯನ್ನು ಅಂಕಿತಾ ವ್ಯಕ್ತಪಡಿಸಿದ್ದಾರೆ. "ಚಿಕ್ಕಂದಿನಿಂದ ನಾನು ಅಪ್ಪು ಸರ್ ಅಭಿಮಾನಿ.. ಚಿಕ್ಕಂದಿನಲ್ಲಿ ಅವರ ಸಿನಿಮಾಗಳನ್ನು ನೋಡಿ ಅವರಂತೆಯೇ ಸಿನಿಮಾದಲ್ಲಿ ಬರಬೇಕು ಅಂದುಕೊಂಡೆ.. ತಂದೆ ಪ್ರೋತ್ಸಾಹ ಸಿಕ್ತು.. ಬಳಿಕ ಅಪ್ಪು ಸರ್, ಶಿವಣ್ಣ ಸರ್ ಎಲ್ಲರ ಜೊತೆ ನಟಿಸುವ ಅವಕಾಶ ಸಿಕ್ತು. ಇದು ಹೀಗೆ ಮುಂದುವರೆದಿದೆ. ನನ್ನ ಓದಿಗೆ ಸಿನಿಮಾ, ಧಾರಾವಾಹಿ ಚಿತ್ರೀಕರಣದ ವೇಳೆ ಕೂಡ ಪ್ರೋತ್ಸಾಹ ಸಿಗುತ್ತಿತ್ತು. ಕಾಲೇಜಿನಲ್ಲಿ ಕೂಡ ನನ್ನ ಚೆನ್ನಾಗಿ ಓದುತ್ತೇನೆ ಎನ್ನುವ ಕಾರಣಕ್ಕೆ ನಟನೆಗೆ ಅಡ್ಡಿಪಡಿಸಲಿಲ್ಲ. ಶಿಕ್ಷಕರು ಸಪೋರ್ಟ್ ಮಾಡಿದ್ರು.. ಅದೆಲ್ಲಾ ನನಗೆ ಸಹಕಾರಿ ಆಯಿತು.. ಓದಿನ ಜೊತೆಗೆ ನಟನೆಯನ್ನು ಮುಂದುವೆರೆಸ್ತೀನಿ" ಎಂದಿದ್ದಾರೆ.

Actress Ankitha Jayaram Scores 97 in PUC she reacts on Success

ಅಂಕಿತಾ ತಂದೆ ಜಯರಾಮ್ ಮಗಳ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಚಿತ್ರೀಕರಣದ ಬಿಟ್ಟು ಉಳಿದ ಸಮಯದಲ್ಲಿ ಓದಿಕೊಳ್ಳುತ್ತಿದ್ದಳು.. ಮೈಕೋ ಲೇಔಟ್‌ನಲ್ಲಿರುವ ಶಾಂತಿನಿಕೇತನ್ ಟ್ರಸ್ಟ್ ಶಾಲೆಯಲ್ಲಿ ಓದಿದ್ಲು.. ಎಸ್‌ಎಸ್‌ಎಲ್‌ಸಿಯಲ್ಲಿ 95% ಅಂಕ ಪಡೆದಿದ್ಲು. ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾಳೆ. ಇದೇ ಓದಬೇಕು ಎಂದು ಯಾವುದಕ್ಕೂ ಒತ್ತಡ ಹೇರಲ್ಲ. ಅವಳಿಗೆ ಏನು ಇಷ್ಟ ಇದ್ಯೋ ಅದಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ" ಎಂದಿದ್ದಾರೆ.

ಉದಯ ಟಿವಿಯ 'ಜನನಿ' ಧಾರಾವಾಹಿಯಲ್ಲಿ ಮೊದಲಿಗೆ ಅಂಕಿತಾ ನಟಿಸಿದ್ದರು. ಜೀ ಕನ್ನಡದ 'ಭೂಮಿಗೆ ಬಂದ ಭಗವಂತ', ಕಲರ್ಸ್ ಕನ್ನಡ ವಾಹಿನಿಯ 'ಯಜಮಾನ', ಈಗ ಮತ್ತೆ ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ರೀನಾ ಆಗಿ ಸದ್ಯ ಅಂಕಿತಾ ಬಣ್ಣ ಹಚ್ಚಿದ್ದಾರೆ. 'ಭರಾಟೆ' ಚಿತ್ರದಲ್ಲಿ ಆಕೆಗೆ ಒಳ್ಳೆ ಅವಕಾಶ ಸಿಕ್ಕಿತ್ತು. ಬಳಿಕ 'ಯುವರತ್ನ', 'ಕ್ರಾಂತಿ', 'ವೇದ' ಸೇರಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

Read more about: actress serial tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X