twitter
    For Quick Alerts
    ALLOW NOTIFICATIONS  
    For Daily Alerts

    "ಅದೊಂದೇ ಕಾರಣಕ್ಕೆ ನಾನು ಇಂಡಸ್ಟ್ರಿ ಬಿಟ್ಟೆ ಎಂದು ಹೇಳಿಲ್ಲ": ನಟಿ ಆಶಿತಾ ಸ್ಪಷ್ಟನೆ

    |

    15 ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದ ನಟಿ ಆಶಿತಾ ಇದ್ದಕ್ಕಿದಂತೆ ಚಿತ್ರರಂಗದಿಂದ ದೂರಾಗಿದ್ದರು. 'ರೋಡ್‌ ರೋಮಿಯೋ', 'ಗ್ರೀನ್‌ ಸಿಗ್ನಲ್‌', 'ಬಾ ಬಾರೋ ರಸಿಕ', 'ಮೈ ಗ್ರೀಟಿಂಗ್ಸ್‌', 'ತವರಿನ ಸಿರಿ', 'ಆಕಾಶ್‌' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆಶಿತಾ ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದರು.

    ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ತಮಗೆ ಕೆಲ ಸವಾಲುಗಳು ಎದುರಾಯಿತು ಎಂದು ಆಶಿತಾ ಹೇಳಿದ್ದಾರೆ. "ಚಿತ್ರರಂಗಕ್ಕೆ ಬಂದಾಗ ಸಮಸ್ಯೆ ಬರಲಿಲ್ಲ. ಆ ನಂತರ ಸಿನಿಮಾ ಸ್ವಲ್ಪ ಕಮರ್ಷಿಯಲ್ ಆಗಲು ಶುರುವಾಯಿತು. ಆಗ ಕೆಲವರು ವಿಚಿತ್ರ ಬೇಡಿಕೆಗಳನ್ನು ಇಟ್ಟರು. ಅದು ನನಗೆ ಇಷ್ಟವಾಗದ ಕಾರಣ ನಾನು ಚಿತ್ರರಂಗದಿಂದ ದೂರಾದೆ ಎಂದು ಹೇಳಿದ್ದಾರೆ. ಚಿತ್ರರಂಗದಲ್ಲಿ ಇರುವವರೆಲ್ಲಾ ಇದೇ ರೀತಿ ಎಂದು ಹೇಳುವುದಿಲ್ಲ. ಆದರೆ ಕೆಲವರು ಮಾತ್ರ ಆ ರೀತಿ ನಡೆದುಕೊಂಡಿದ್ದರು ಎಂದು ಅಂದಿನ ಘಟನೆಗಳನ್ನು ನೆನಪಿಸಿಕೊಂಡಿದ್ದರು.

    ಸಿನಿಮಾ ಶೂಟಿಂಗ್ ವೇಳೆಗೆ ಕಿರುಕುಳ ಎದುರಾಗಿತ್ತು. ಅವರು ಹೇಳಿದಂತೆ ಕೇಳಲಿಲ್ಲ ಎನ್ನುವ ಕಾರಣಕ್ಕೆ ನನನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ ಎಂದು ಆಶಿತಾ ಸಂದರ್ಶನದಲ್ಲಿ ಹೇಳಿದ್ದರು. ಈ ಬಗ್ಗೆ ಫಿಲ್ಮಿಬೀಟ್ ಜೊತೆ ಆಶಿತಾ ಮಾತನಾಡಿದ್ದು, ನನಗೆ ಪಬ್ಲಿಸಿಟಿ ಬೇಕಾಗಿಲ್ಲ. ನನಗಾದ ಅನುಭವನ್ನಷ್ಟೆ ನಾನು ಸಂದರ್ಶನದಲ್ಲಿ ಹೇಳಿದ್ದೇನೆ ಎಂದಿದ್ದಾರೆ.

     ಈ ಕಾರಣಕ್ಕೆ ನಾನು ಇಂಡಸ್ಟ್ರಿ ಬಿಟ್ಟೆ ಎಂದಿಲ್ಲ

    ಈ ಕಾರಣಕ್ಕೆ ನಾನು ಇಂಡಸ್ಟ್ರಿ ಬಿಟ್ಟೆ ಎಂದಿಲ್ಲ

    "ಯಾವುದೇ ತರಹದ ಪಬ್ಲಿಸಿಟಿ ನನಗೆ ಇಷ್ಟ ಇಲ್ಲ. ಅದು ಬರೀ ಜನರಲ್ ಸ್ಟೇಟ್‌ಮೆಂಟ್. ಕಲಾವಿದರಾಗಿ ಇಂತಹವನ್ನೆಲ್ಲಾ ಎದುರಿಸುತ್ತೀವಿ. ನಾನು ಚಿತ್ರರಂಗದಿಂದ ದೂರಾಗಲೂ ಇದು ಒಂದು ಕಾರಣ. ಇದೊಂದೇ ಕಾರಣಕ್ಕೆ ನಾನು ಇಂಡಸ್ಟ್ರಿ ಬಿಟ್ಟೆ ಎಂದು ಹೇಳಿಲ್ಲ. ಕಲಾವಿದರಾಗಿ, ನಟಿಯರಾಗಿ ಇದನ್ನೆಲ್ಲಾ ಎದುರಿಸುತ್ತೇವೆ. ಚಿತ್ರರಂಗದಲ್ಲಿ ಸೀರಿಯಸ್‌ ಆಗಿ ಕೆಲಸ ಮಾಡುವವರು ಇದನ್ನೆಲ್ಲಾ ಒಪ್ಪಲ್ಲ, ಮಾಡುವುದಿಲ್ಲ. ಆದರೆ ನಂತರ ಚಿತ್ರರಂಗದಲ್ಲಿರುವವರು ಬಿಟ್ಟು ಯಾರ್‌ ಯಾರೋ ಬಂದು ಸಿನಿಮಾಗಳನ್ನು ಮಾಡಲು ಶುರು ಮಾಡಿದರು. ಅಂತಹ ಸಮಯದಲ್ಲಿ ಈ ಸಮಸ್ಯೆಗಳು ಎದುರಾಯಿತು. ಅದನ್ನೇ ನಾನು ಹೇಳಿದ್ದೆ.

     ಎಲ್ಲಾ ಫೀಲ್ಡ್‌ನಲ್ಲೂ ಇದು ಸರ್ವೇಸಾಮಾನ್ಯ

    ಎಲ್ಲಾ ಫೀಲ್ಡ್‌ನಲ್ಲೂ ಇದು ಸರ್ವೇಸಾಮಾನ್ಯ

    "ಇಂಡಸ್ಟ್ರಿಯಲ್ಲಿ ಈ ತರ ಎಲ್ಲಾ ನಡೆಯುತ್ತೆ. ಕಲಾವಿದರಾಗಿ ನಮ್ಮ ಆಯ್ಕೆ. ಮಾಡಬೇಕೋ ಬೇಡವೋ ಎನ್ನುವುದು. ನನಗೆ ಇಷ್ಟ ಇರಲಿಲ್ಲ. ನನಗೆ ಅಂತಹ ತಂಡ, ಅಂತಹ ಜನರ ಜೊತೆ ಕೆಲಸ ಮಾಡಲು ಇಷ್ಟ ಇರಲಿಲ್ಲ. ಹಾಗಾಗಿ ನಾನು ಅಂತಹ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ ಅಷ್ಟೆ. ಅದನ್ನು ಬಿಟ್ಟು ದೊಡ್ಡ ಬ್ಲಂಡರ್ ಏನು ಆಗಿರಲಿಲ್ಲ. ಎಲ್ಲಾ ಫೀಲ್ಡ್‌ನಲ್ಲೂ ಇದು ಸರ್ವೇಸಾಮಾನ್ಯ. ಯಾರದರೂ ಕೆಲಸ ಕೊಟ್ಟರೆ, ಮೇಲಿನವರು ಕೆಳಗಿರುವವರನ್ನು ತುಳಿಯಲು ನೋಡೇ ನೋಡುತ್ತಾರೆ. ಅದೇ ರೀತಿ ಆಗಿದ್ದು, ಹುಡುಗಿಯರಾಗಿದ್ದಾಗ ಸವಾಲುಗಳು ಹೆಚ್ಚು. ಅದರಲ್ಲೂ ಇಂತಹ ರಂಗಗಳಲ್ಲಿ ಸವಾಲು ಮತ್ತಷ್ಟು ಹೆಚ್ಚಾಗಿರುತ್ತದೆ."

     ಇಂಡಸ್ಟ್ರಿ ಬಿಡಲು ಬೇರೆ ಕಾರಣವೂ ಇತ್ತು

    ಇಂಡಸ್ಟ್ರಿ ಬಿಡಲು ಬೇರೆ ಕಾರಣವೂ ಇತ್ತು

    "ಎಲ್ಲರೂ ಹೀಗೆ ಎಂದು ನಾನು ಹೇಳಿಲ್ಲ. ಕೆಲವರು ಮಾತ್ರ ಹೀಗೆ. ಸಿನಿಮಾ ಬಗ್ಗೆ ಗೊತ್ತಿಲ್ಲದವರು. ಸಿನಿಮಾನೇ ಎಲ್ಲಾ ಎಂದುಕೊಂಡು ಬರದವರು. ಸುಮ್ನೆ ಒಮ್ಮೆ ನೋಡೋಣ ಎಂದುಕೊಂಡು ಬಂದವರು ಈ ರೀತಿ ಮಾಡುತ್ತಿದ್ದರು. ನನಗೆ ಯಾರ ಹೆಸರು ಹೇಳಲು ಇಷ್ಟ ಇಲ್ಲ. ನಾನು ಸುಮ್ಮನೆ ಸಂದರ್ಶನದಲ್ಲಿ ಮಾತನಾಡುತ್ತಾ ಆ ವಿಚಾರಗಳ ಬಗ್ಗೆಯೂ ಮಾತನಾಡಿದೆ ಅಷ್ಟೆ. ಸಂದರ್ಶನದಲ್ಲೂ ನಾನು ಯಾರ ಹೆಸರನ್ನು ಹೇಳಿಲ್ಲ. ಹಾಗಂತ ಎಲ್ಲರೂ ಅದೇ ರೀತಿ ಎಂದು ಹೇಳಿಲ್ಲ. ಇದು ಒಂದೇ ಕಾರಣಕ್ಕೆ ನಾನು ಇಂಡಸ್ಟ್ರಿ ಬಿಟ್ಟೆ ಅನ್ನುವುದು ಸುಳ್ಳು. ನನಗೆ ಒಳ್ಳೆಯ ಸಬ್ಜೆಕ್ಟ್‌ ಸಿಗಲಿಲ್ಲ. ಜೊತೆಗೆ ನಾನು ಎಂಬಿಎ ಓದುತ್ತಿದ್ದೆ. ಈ ಎಲ್ಲಾ ಕಾರಣಗಳಿಂದ ನಾನು ಸಿನಿಮಾಗಳಲ್ಲಿ ನಟಿಸಲಿಲ್ಲ ಅಷ್ಟೆ. ಅದು ಒಂದೇ ಕಾರಣ ಎನ್ನಲು ಸಾಧ್ಯವಿಲ್ಲ. ಆದರೆ ಅದೂ ಕೂಡ ನಾನು ಚಿತ್ರರಂಗ ಬಿಡಲು ಪ್ರೇರೇಪಿಸಿತು."

     ಬ್ಯುಸಿನೆಸ್‌ನಲ್ಲೇ ನನಗೆ ಖುಷಿ ಇದೆ

    ಬ್ಯುಸಿನೆಸ್‌ನಲ್ಲೇ ನನಗೆ ಖುಷಿ ಇದೆ

    "ನನಗೆ ಯಾವುದೇ ಪಬ್ಲಿಸಿಟಿ ಬೇಡ. ನಾನು ವೈಯಕ್ತಿಕ ಜೀವನದಲ್ಲಿ ಬಹಳ ಖುಷಿಯಾಗಿದ್ದೀನಿ. ಈಗ ಏನು ನಡೀತಿದೆ, ನನ್ನ ಬ್ಯುಸಿನೆಸ್‌ ಇದೆ ಅದರಲ್ಲೇ ನಾನು ಸಂತೋಷದಿಂದ ಇದ್ದೀನಿ. ನನಗೆ ಮೊದಲಿನಿಂದಲೂ ಬ್ಯುಸಿನೆಸ್‌ ಮಾಡಬೇಕು ಎನ್ನುವುದು ನನ್ನ ಆಸೆಯಿತ್ತು. ಅದನ್ನೇ ಮಾಡ್ತೀದ್ದೀನಿ. ಈಗ ವಿಚಾರ ಮಾತಾಡಿ ಮತ್ತೆ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕು ಎನ್ನುವ ಅವಶ್ಯಕತೆ ಇಲ್ಲ" ಎಂದು ಆಶಿತಾ ವಿವರಿಸಿದ್ದಾರೆ.

    English summary
    Actress Ashitha Reaction To Filmibeat Over Her MeToo Allegation. Know More.
    Friday, September 16, 2022, 18:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X