ನಟಿ ಇಶಿತಾ ವರ್ಷಾ ಸಂದರ್ಶನ; 'ಅಗ್ನಿಸಾಕ್ಷಿ'ಯಿಂದ 'ಯಲ್ಲಮ್ಮ'ನ ಪಯಣದವರೆಗೆ...

ಕಿರುತೆರೆಯ ಜನಪ್ರಿಯ ನಟಿ, ತನ್ನ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಇಶಿತಾ ವರ್ಷಾ ಈಗ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯ ಮೂಲಕ ದೈವಿಕ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಅಗ್ನಿಸಾಕ್ಷಿ'ಯ ಚಂದನಾ ಪಾತ್ರದಿಂದ ಹಿಡಿದು 'ಸ್ವಾರ್ಥರತ್ನ' ಸಿನಿಮಾದ ಟಾಂಬಾಯ್ ಲುಕ್ ವರೆಗೆ ಸದಾ ಹೊಸತನಕ್ಕೆ ತುಡಿಯುವ ಇಶಿತಾ ಅವರು, ತಮ್ಮ ವೃತ್ತಿಜೀವನ, ವೈಯಕ್ತಿಕ ಪಯಣ ಮತ್ತು ಯಲ್ಲಮ್ಮ ಪಾತ್ರದ ವಿಶೇಷತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

Actress Ishitha Varsha Interview her personal life movies and television journey

ನೀವು ಎಲ್ಲಿಯವರು? ಇಂಡಸ್ಟ್ರಿಗೆ ಬಂದ ಆರಂಭದ ದಿನಗಳ ಬಗ್ಗೆ ಸ್ವಲ್ಪ ಹೇಳ್ತೀರಾ?

ಇಶಿತಾ ವರ್ಷಾ: ನಾನು ಮೂಲತಃ ಬೆಂಗಳೂರಿನವಳು. ಇಂಡಸ್ಟ್ರಿಗೆ ಬಂದ ಆರಂಭದ ದಿನಗಳಲ್ಲಿ ನಟನೆ ಅಂದ್ರೆ ಬರೀ ರಿಯಾಕ್ಟ್ ಮಾಡೋದು ಅಷ್ಟೇ ಅಂದ್ಕೊಂಡಿದ್ದೆ. ಆದ್ರೆ ಅದು ಅದಕ್ಕಿಂತ ದೊಡ್ಡದು ಮತ್ತು ಪ್ರತಿ ಹಂತದಲ್ಲೂ ಕಲಿಯುವ ಪ್ರಕ್ರಿಯೆ ಅಂತ ಆಮೇಲೆ ಗೊತ್ತಾಯ್ತು. ಈಗಲೂ ನಾನು ವಾಯ್ಸ್ ಮಾಡ್ಯುಲೇಶನ್ ಸೇರಿದಂತೆ ಹೊಸ ವಿಷಯಗಳನ್ನು ಕಲಿಯುತ್ತಲೇ ಇದ್ದೀನಿ.

2018ರಲ್ಲಿ 'ಸ್ವಾರ್ಥರತ್ನ' ಸಿನಿಮಾದಲ್ಲಿ ಅಭಿನಯಿಸಿದ ಅನುಭವ ಹೇಗಿತ್ತು?

ಇಶಿತಾ ವರ್ಷಾ: ಆ ಸಿನಿಮಾದ ಅನುಭವ ತುಂಬಾ ಚೆನ್ನಾಗಿತ್ತು. ನಾನು ಫಸ್ಟ್ ಒಂದು ಚಿಕ್ಕ ಪಾತ್ರಕ್ಕೆ ಆಡಿಶನ್ ಕೊಟ್ಟಿದ್ದೆ, ಆದ್ರೆ ನಿರ್ದೇಶಕ ಅಶ್ವಿನ್ ಅವರು ನನ್ನನ್ನು ಪ್ರಮುಖ ಪಾತ್ರಕ್ಕೆ ಸೆಲೆಕ್ಟ್ ಮಾಡಿದ್ರು. ಆ ಫಿಲ್ಮ್‌ನಲ್ಲಿ ನಾನು ಯಾವುದೇ ಮೇಕಪ್ ಅಥವಾ ಲಿಪ್‌ಸ್ಟಿಕ್ ಇಲ್ದೆ ಪಕ್ಕಾ 'ಟಾಂಬಾಯ್' ಪಾತ್ರ ಮಾಡಿದ್ದೆ. ಚಿತ್ರತಂಡದ ಜೊತೆ ಇವತ್ತಿಗೂ ಒಳ್ಳೆ ಬಾಂಡಿಂಗ್ ಇದೆ.

Actress Ishitha Varsha Interview her personal life movies and television journey

ಯಲ್ಲಮ್ಮ ಪಾತ್ರಕ್ಕೆ ನೀವು ಆಯ್ಕೆಯಾದಾಗ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು?

ಇಶಿತಾ ವರ್ಷಾ: ಅಗ್ನಿಸಾಕ್ಷಿ ಆದ್ಮೇಲೆ ಇದು ನನ್ನ ಮೊದಲ ಮೈಥಾಲಜಿ ಸೀರಿಯಲ್. ರೇಣುಕಾ ಯಲ್ಲಮ್ಮನ ಪಾತ್ರಕ್ಕೆ ಜನರ ರೆಸ್ಪಾನ್ಸ್ ತುಂಬಾ ಪಾಸಿಟಿವ್ ಆಗಿದೆ. ಜನರು ನನ್ನ ಲುಕ್ ಮತ್ತು ಆ ದೈವಿಕ ಪಾತ್ರಕ್ಕೆ ನಾನು ಸೂಟ್ ಆಗ್ತೀನಿ ಅಂತ ಹೇಳ್ತಿದ್ದಾರೆ. ಆ ಪಾತ್ರದ ಪಾಸಿಟಿವ್ ವೈಬ್ಸ್ ನನಗೂ ತುಂಬಾ ಖುಷಿ ಕೊಡುತ್ತೆ.

ಹೊಸ ಕಲಾವಿದರ ಜೊತೆ ಸೆಟ್‌ನಲ್ಲಿ ನಿಮ್ಮ ಬಾಂಡಿಂಗ್ ಹೇಗಿದೆ?

ಇಶಿತಾ ವರ್ಷಾ: ಹೌದು, ಪರಶುರಾಮ ಅಧ್ಯಾಯ ಶುರುವಾದ್ಮೇಲೆ ಒಬ್ಬ ಲೈಟ್ಮ್ಯಾನ್ ಬಿಟ್ಟು ಉಳಿದವರೆಲ್ಲಾ ಹೊಸಬರೇ. ಆದ್ರೆ ಎಲ್ಲರ ಜೊತೆ ಕೆಲಸ ಮಾಡೋಕೆ ನಾನು ತುಂಬಾ ಕಂಫರ್ಟಬಲ್ ಆಗಿದ್ದೀನಿ. ಪೌರಾಣಿಕ ಸೀರಿಯಲ್ ಆಗಿರೋದ್ರಿಂದ ಭಾಷೆ ಸ್ವಲ್ಪ ಚೇಂಜ್ ಅನ್ಸಿದ್ರೂ, ಟೀಮ್ ಜೊತೆಗಿನ ಬಾಂಡಿಂಗ್ ಮಾತ್ರ ತುಂಬಾ ಚೆನ್ನಾಗಿದೆ.

Actress Ishitha Varsha Interview her personal life movies and television journey

'ಯಲ್ಲಮ್ಮ'ನ ಪಾತ್ರದ ನಿಮಗೆ ಏನು ಅನುಭವ ಕೊಟ್ಟಿದೆ?

ಇಶಿತಾ ವರ್ಷಾ: ಹೌದು, ನಾನು ಏಕಕಾಲದಲ್ಲಿ ಎರಡು ಪ್ರಾಜೆಕ್ಟ್ಗಳನ್ನು ಮಾಡುವುದಿಲ್ಲ. ಹಾಗಾಗಿ ಸದ್ಯಕ್ಕೆ ನಾನು ಪೂರ್ಣವಾಗಿ 'ಯಲ್ಲಮ್ಮ' ಸೀರಿಯಲ್‌ನಲ್ಲಿ ಮಾತ್ರ ತೊಡಗಿಸಿಕೊಂಡಿದ್ದೇನೆ. ಈ ಪಾತ್ರದ ಲುಕ್ ಮತ್ತು ಗಾಂಭೀರ್ಯ ನನ್ನ ಹಿಂದಿನ ಎಲ್ಲಾ ಪಾತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿದೆ.

ಇಷ್ಟು ವರ್ಷಗಳ ನಿಮ್ಮ ಸಾಧನೆಯ ಹಿಂದೆ ಮನೆಯವರ ಪ್ರೋತ್ಸಾಹ ಎಷ್ಟಿದೆ?

ಇಶಿತಾ ವರ್ಷಾ: ನಾನು ಇನ್ನೂ ದೊಡ್ಡ ಸಾಧನೆಯನ್ನೇನೂ ಮಾಡಿಲ್ಲ, ಕಲಿಯುವುದು ಮತ್ತು ಮಾಡುವುದು ಬಹಳಷ್ಟಿದೆ. ಆದ್ರೆ ಮನೆಯವರ ಸಪೋರ್ಟ್ ಬಗ್ಗೆ ಹೇಳಬೇಕೆಂದರೆ, ಅವರು ಮೊದಲಿನಿಂದಲೂ ನನಗೆ ತುಂಬಾ ಸಪೋರ್ಟಿವ್ ಆಗಿದ್ದಾರೆ. ಯಾವ ಪಾತ್ರ ಮಾಡಬೇಕು ಎಂಬ ನಿರ್ಧಾರ ನನ್ನದೇ ಆಗಿದ್ದರೂ, ಮನೆಯವರಿಂದ ಸಿಗುವ ಆ 'ಮಾರಲ್ ಸಪೋರ್ಟ್' ನನಗೆ ದೊಡ್ಡ ಶಕ್ತಿ.

ಸಿನಿಮಾಗಳಲ್ಲಿ ದೊಡ್ಡ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಪ್ಲಾನ್ ಇದೆಯಾ?

ಇಶಿತಾ ವರ್ಷಾ: ಸದ್ಯಕ್ಕೆ ಬೆಳ್ಳಿತೆರೆಯ ಬಗ್ಗೆ ಯಾವುದೇ ಪ್ಲಾನ್ ಇಲ್ಲ. ನಾನು ಯಾವುದನ್ನೂ ಮುಂಚಿತವಾಗಿ ಪ್ಲಾನ್ ಮಾಡುವುದಿಲ್ಲ. ಒಳ್ಳೆ ಪಾತ್ರಗಳು ಬಂದರೆ ಖಂಡಿತ ಮಾಡುತ್ತೇನೆ. ಈಗ ಪ್ರೇಕ್ಷಕರಿಗೆ ಒಟಿಟಿ, ವೆಬ್ ಸೀರೀಸ್ ಹೀಗೆ ಸಾಕಷ್ಟು ಆಯ್ಕೆಗಳಿವೆ. ಇಂಟರೆಸ್ಟಿಂಗ್ ಪಾತ್ರ ಬಂದರೆ ಮಾತ್ರ ಮಾಡುತ್ತೇನೆ.

ನಿಮ್ಮ ಅಭಿಮಾನಿಗಳಿಗೆ ಏನು ಹೇಳಲು ಬಯಸುತ್ತೀರಿ?

ಇಶಿತಾ ವರ್ಷಾ: ನನ್ನನ್ನು ನೋಡಿ ಹರಸುತ್ತಿರುವ ಪ್ರತಿಯೊಬ್ಬ ಅಭಿಮಾನಿಗೂ ನಾನು ಚಿರಋಣಿ. ಅವರು ತಮ್ಮ ಅಮೂಲ್ಯವಾದ ಅರ್ಧ ಗಂಟೆ ಸಮಯವನ್ನು ನಮಗಾಗಿ ಮೀಸಲಿಟ್ಟು ಸೀರಿಯಲ್ ನೋಡುತ್ತಾರೆ. ಅವರು ನೀಡುವ ಪ್ರೀತಿಯೇ ನಾವು ಇಷ್ಟೊಂದು ವಿಭಿನ್ನ ಪಾತ್ರಗಳನ್ನು ಮಾಡಲು ಕಾರಣ. ಆ ಪ್ರೀತಿಗೆ ನಾನು ಸದಾ ಆಭಾರಿ.

More from Filmibeat

English summary
Actress Ishitha Varsha Interview: her personal life, movies and television journey;
Read more about: actress serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X