twitter
    For Quick Alerts
    ALLOW NOTIFICATIONS  
    For Daily Alerts

    Exclusive Interview : 'ಕ್ಲೋಸ್ ಟು ದಿ ಬೋನ್' ಪುಸ್ತಕ ಬರೆದ 'ಯುವರಾಜ' ನಟಿ

    |

    ಕೆನಡಾದಲ್ಲಿ ಹುಟ್ಟಿ ಕನ್ನಡ ಸಿನಿಮಾ ಮಾಡಿದ ನಟಿ ಲೀಸಾ ರೇ. ಶಿವರಾಜ್ ಕುಮಾರ್ ನಟನೆಯ 'ಯುವರಾಜ' ಸಿನಿಮಾ ಮೂಲಕ ಲೀಸಾ ರೇ ಕನ್ನಡಿಗರಿಗೆ ಹೆಚ್ಚು ಪರಿಚಿತವಾದರು.

    ಲೀಸಾ ರೇ ಬೆಂಗಾಲಿ ಕುಟುಂಬದವರು. ಕೆನಡಾದಲ್ಲಿಯೇ ವಾಸವಾಗಿದ್ದರು. ತಮ್ಮ ಬಾಲ್ಯದ ಕೆಲ ಸಮಯವನ್ನು ಕೊಲ್ಕತ್ತಾದಲ್ಲಿ ಕಳೆದರು. ನಂತರ ಮಾಡಲಿಂಗ್ ನಲ್ಲಿ ಮಿಂಚಿದರು. ಬಳಿಕ ಸಿನಿಮಾ ಅವಕಾಶ ಪಡೆದರು.

    ಕ್ಯಾನ್ಸರ್ ಗೆದ್ದ ಲೀಸಾ ರೇ ಹಸಮಣೆ ಏರಲು ಸಿದ್ಧಕ್ಯಾನ್ಸರ್ ಗೆದ್ದ ಲೀಸಾ ರೇ ಹಸಮಣೆ ಏರಲು ಸಿದ್ಧ

    ಕನ್ನಡ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಎಲ್ಲ ಚೆನ್ನಾಗಿದೆ ಎನ್ನುವಾಗಲೇ ಕ್ಯಾನ್ಸರ್ ಅವರ ಶಕ್ತಿ ಕಡಿಮೆ ಮಾಡಲು ಪ್ರಯತ್ನ ಮಾಡಿತು. ಆದರೆ ಲೀಸಾ ಧೈರ್ಯವಾಗಿ ಕ್ಯಾನ್ಸರ್ ಎದುರಿಸಿದರು. ಮಾಡೆಲ್, ಚಿತ್ರನಟಿ, ರಂಗಭೂಮಿ ಕಲಾವಿದೆ, ಕಿರುತೆರೆ ನಟಿ ಜೊತೆಗೆ ಕಾಲಂ ಬರೆಯುತ್ತಿದ್ದ ಲೀಸಾ ರೇ ಇದೀಗ ಪುಸ್ತಕ ಬರೆದಿದ್ದಾರೆ.

    'ಕ್ಲೋಸ್ ಟು ದಿ ಬೋನ್' ಲೀಸಾ ರೇ ಬರೆದಿರುವ ಪುಸ್ತಕ. ಇದು ಅವರ ಮೊದಲ ಪುಸ್ತಕ. ಹೀಗಾಗಿ, ಅವರು ಬೆಂಗಳೂರು ಲಿಟರೇಚರ್ ಫೆಸ್ಟಿವಲ್ 2019 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಫಿಲ್ಮಿಬೀಟ್ ಜೊತೆಗೆ ಎಕ್ಸ್‌ಕ್ಲೂಸಿವ್ ಮಾತನಾಡಿದ್ದಾರೆ. ಅವರ ಸಂದರ್ಶನ ಮಾತುಗಳು ಹೀಗಿವೆ.

    ಬೆಂಗಳೂರು ಸಾಕ್ಷರತಾ ನಗರ

    ಬೆಂಗಳೂರು ಸಾಕ್ಷರತಾ ನಗರ

    ಬೆಂಗಳೂರಿನ ತಮ್ಮ ಪ್ರೀತಿ ಬಗ್ಗೆ ಹೇಳುತ್ತಾ ಲೀಸಾ ರೇ ತಮ್ಮ ಮಾತು ಶುರು ಮಾಡಿದರು. ಬೆಂಗಳೂರು ಲೀಸಾ ರೇಗೆ ಬಹಳ ಇಷ್ಟವಂತೆ. ''ನಾನು ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದು, ತುಂಬ ಉತ್ಸುಕಳಾಗಿದ್ದೇನೆ. ಇದು ಒಂದು ರೀತಿ ಶಕ್ತಿ ನೀಡುವ ವಾತಾವರಣ. ನಾನು ಒಬ್ಬ ಓದುಗಳಾಗಿದ್ದು, ಬೆಂಗಳೂರು ಸಾಕ್ಷರತಾ ನಗರ. ಹಾಗಾಗಿ ಇಷ್ಟ'' ಎಂದಿದ್ದಾರೆ.

    ಪುಸ್ತಕದಲ್ಲಿ ಏನಿಲ್ಲ ಅಂತ ಹೇಳುತ್ತೇನೆ

    ಪುಸ್ತಕದಲ್ಲಿ ಏನಿಲ್ಲ ಅಂತ ಹೇಳುತ್ತೇನೆ

    ತಮ್ಮ ಮೊದಲ ಪುಸ್ತಕದ ಬಗ್ಗೆಯ ಪ್ರಶ್ನೆಗೆ ಉತ್ತರ ನೀಡಿದ ಲೀಸಾ ರೇ ಪುಸ್ತಕದಲ್ಲಿ ಏನು ಇಲ್ಲ ಎನ್ನುವುದರ ಬಗ್ಗೆ ಮೊದಲು ನಾನು ಹೇಳುತ್ತೇನೆ. ಎಂದು ವಿವರಿಸಿದರು. ''ಇದು ಕ್ಯಾನ್ಸರ್ ನೆನಪುಗಳ ಬಗ್ಗೆ ಇರುವ ಪುಸ್ತಕವಲ್ಲ. ಒಬ್ಬ ಸ್ಟಾರ್ ಬಯೋಗ್ರಾಫಿ ಅಲ್ಲ. ಇದು ಮನಸ್ಸಿನ ಪ್ರವಾಸ ಕಥನ. ಒಬ್ಬ ಯುವತಿಯ ಯಶಸ್ಸು, ಸೋಲು, ಕನಸು, ಭರವಸೆಯ ಬಗ್ಗೆ ಪುಸ್ತಕ ಇದೆ.'' ಎಂದು ತಿಳಿಸಿದರು.

    ಲೇಖಕಿಯಾಗಿ ರೂಪುಗೊಂಡಿರುವ ಲೀಸಾ

    ಪುಸ್ತಕದ ಲೇಖಕಿಯಾಗಿ ಹೊಸ ಜರ್ನಿ ಶುರು

    ಪುಸ್ತಕದ ಲೇಖಕಿಯಾಗಿ ಹೊಸ ಜರ್ನಿ ಶುರು

    ಲೇಖಕಿಯಾಗಿ ಹೊಸ ಜರ್ನಿ ಶುರು ಮಾಡುತ್ತಿದ್ದು, ''ನನಗೆ ಓದುವುದು ಮತ್ತು ಬರೆಯುವುದರ ಬಗ್ಗೆ ಆಸಕ್ತಿ ಇತ್ತು. ಇದೇ ಪುಸ್ತಕ ಬರೆಯುವ ಸ್ಫೂರ್ತಿ ನೀಡಿತು. ಪುಸ್ತಕದಲ್ಲಿ ಹಾಸ್ಯ ಕೂಡ ಬೆರೆತಿದ್ದು, ಅದು ಓದುಗರಿಗೆ ತಲುಪುತ್ತದೆ ಎನ್ನುವ ನಂಬಿಕೆ ಇದೆ. ನಮ್ಮ ಹಿಂದೆ ಇರುವ ಮುಖವಾಡವನ್ನು ತೆಗೆದು ಹಾಕುವ ಪ್ರಯತ್ನ ಈ ಪುಸ್ತಕದಲ್ಲಿ ಇದೆ. 16ನೇ ವಯಸ್ಸಿನಲ್ಲಿಯೇ ಕ್ಯಾಮರಾ ಮುಂದೆ ಬಂದ ನಾನು ಇಲ್ಲಿ ಅನೇಕ ವಿಷಯಗಳನ್ನು ಹೇಳಿದ್ದೇನೆ.'' ಎಂದರು.

    'ಕ್ಲೋಸ್ ಟು ದಿ ಬೋನ್' ಶೀರ್ಷಿಕೆ ಬಗ್ಗೆ

    ಪುಸ್ತಕದ ಶೀರ್ಷಿಕೆ 'ಕ್ಲೋಸ್ ಟು ದಿ ಬೋನ್' ಏಕೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಲೀಸಾ ರೇ, ತಾನು ಮೂಳೆ ಕ್ಯಾನ್ಸರ್ ನಿಂದ ಬಳಲಿದ್ದು, 'ಕ್ಲೋಸ್ ಟು ದಿ ಬೋನ್' ಟೈಟಲ್ ಅದಕ್ಕೆ ಹೋಲಿಕೆ ಆಗುತ್ತಿದೆ ಎಂದರು. ಆದರೆ, ಅದರ ಜೊತೆಗೆ ನಮ್ಮ ಸುತ್ತಲೂ ನಡೆಯುವ ಎಲ್ಲಾ ರಕ್ಷಾ ಕವಚಗಳನ್ನು ತೆಗೆದು ಹಾಕುವುದರ ಬಗ್ಗೆಯೂ ಪುಸ್ತಕದಲ್ಲಿ ಹೇಳಿದ್ದು, ಈ ಹೆಸರು ಇಟ್ಟೆ. ಎಂದು ವಿವರಿಸಿದರು.

    ಅವಳಿ ಮಕ್ಕಳಿಗೆ ಅಮ್ಮನಾದ 'ಯುವರಾಜ' ನಾಯಕಿ ಲೀಸಾ ರೇಅವಳಿ ಮಕ್ಕಳಿಗೆ ಅಮ್ಮನಾದ 'ಯುವರಾಜ' ನಾಯಕಿ ಲೀಸಾ ರೇ

    English summary
    Actress Lisa Ray interview about her debut book 'Close To The Bone'.
    Tuesday, November 12, 2019, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X