ಮಾನಸ ಜೋಷಿಯ ಮೊದಲ ಸೆಲೆಬ್ರಿಟಿ ಕ್ರಶ್ ಈ ಬಾಲಿವುಡ್ ನಟ

By Bharath Kumar

Recommended Video

Sakkath Shukravara with Pavan Ranadheera season 2 : Manasa Joshi part 3 | Filmibeat Kannada

'ಕಿರಗೂರಿನ ಗಯ್ಯಾಳಿಗಳು' ಸಿನಿಮಾದಲ್ಲಿ ಗಯ್ಯಾಳಿ ಆಗಿ ಕಾಣಿಸಿಕೊಂಡಿದ್ದ ನಟಿ ಮಾನಸ ಜೋಷಿ 'ಹಜ್', 'ಲಾಸ್ಟ್ ಬಸ್' ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಪ್ಪಟ ಕನ್ನಡದ ಈ ಹುಡುಗಿಗೆ ಬಾಲಿವುಡ್ ಸ್ಟಾರ್ ನ ಮೇಲೆ ಮೊದಲ ಸೆಲೆಬ್ರಿಟಿ ಕ್ರಶ್ ಆಗಿತ್ತಂತೆ.

ಈ ವಿಷ್ಯವನ್ನ ಖುದ್ದು ಮಾನಸ ಜೋಷಿ ಅವರೇ ಹೇಳಿಕೊಂಡಿದ್ದಾರೆ. ಫಿಲ್ಮಿಬೀಟ್ ಕನ್ನಡದಲ್ಲಿ ಮೂಡಿ ಬರುವ 'ಸಖತ್ ಶುಕ್ರವಾರ' ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಮಾನಸ ಜೋಷಿ Rapid Fire ಸುತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಕೊಡುವಾಗ ಈ ಸಂಗತಿಯನ್ನ ಹಂಚಿಕೊಂಡರು.

Actress Manasa Joshi first celebrity crush

ಅಷ್ಟಕ್ಕೂ, ಯಾರು ಆ ಬಾಲಿವುಡ್ ನಟ ಅಂತಾ ಯೋಚನೆ ಮಾಡ್ತಿದ್ದಾರೆ. ಅವರೇ ನವಾಜುದ್ದೀನ್ ಸಿದ್ದಿಕಿ. ಬಿ-ಟೌನ್ ಇಂಡಸ್ಟ್ರಿಯಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟನಿಗೆ ಕನ್ನಡ ನಟಿ ಫಿದಾ ಆಗಿದ್ದರಂತೆ.

ಮದುವೆ ಆದ್ಮೇಲೂ, ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮಾನಸ ಜೋಷಿ ಒಳ್ಳೊಳ್ಳೆ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಕಿರುತೆರೆಯಲ್ಲಿ 'ಮಹಾದೇವಿ' ಸೀರಿಯಲ್ ಮಾಡಿರುವ ಮಾನಸ ಜೋಷಿ ಸದ್ಯ ಸ್ಟಾರ್ ಸುವರ್ಣ ವಾಹಿನಿಗಾಗಿ 'ಶ್ರೀ' ಎಂಬ ಧಾರಾವಾಹಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದೂರದರ್ಶನ ವಾಹಿನಿಯ ಮಹೇಶ್ ಜೋಷಿ ಪುತ್ರಿಯಾಗಿರುವ ಮಾನಸ ಜೋಷಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ಬಹುಪರಾಕ್' ಸಿನಿಮಾದಿಂದ. ಅಲ್ಲಿಂದ ಆರಂಭವಾದ ತಮ್ಮ ಸಿನಿ ಜರ್ನಿಯಲ್ಲಿ ಸಾಕಷ್ಟು ಪ್ರಯೋಗಗಳನ್ನ ಮಾಡುತ್ತಾ ಮುಂದೆ ಸಾಗಿದ್ದಾರೆ. ಸಖತ್ ಶುಕ್ರವಾರ ಕಾರ್ಯಕ್ರಮದಲ್ಲಿ ಮಾನಸ ಜೋಷಿ ಮಾತನಾಡಿರುವ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ....

More from Filmibeat

English summary
Kannada Actress Manasa Joshi spoke about who is her first celebrity crush in Sakkath Shukravara show. Watch video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X