For Quick Alerts
  ALLOW NOTIFICATIONS  
  For Daily Alerts

  ತಮಿಳು ಸ್ಟಾರ್ ಸಿನಿಮಾದಲ್ಲಿ ಅವಕಾಶ ಪಡೆದ ಸಂಹಿತಾ ಶಾ ವಿಶೇಷ

  |

  ಸಂಹಿತಾ ಹೆಸರಲ್ಲಿ ಇಬ್ಬರು ಕನ್ನಡತಿಯರಿದ್ದಾರೆ. ಒಬ್ಬರು ಮಾಡೆಲಿಂಗ್ ಕ್ಷೇತ್ರದಿಂದ ಬಂದು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಸಂಹಿತಾ ವಿನ್ಯ. ಮತ್ತೊಬ್ಬರು ನಮ್ಮ ಇವತ್ತಿನ ಕಥಾ ನಾಯಕಿ ಸಂಹಿತಾ ಶಾ. ಕನ್ನಡದಲ್ಲಿ ನವನಟಿಯರಿಗೆ ಕೊರತೆಯಿಲ್ಲ. ಆದರೆ ಚಿತ್ರರಂಗ ಪ್ರವೇಶಿಸಿ ಒಂದೇ ಚಿತ್ರಕ್ಕೆ ಗುಡ್ ಬೈ ಹೇಳಿ ಹೋಗುವವರು ಅಧಿಕ. ಒಂದಷ್ಟು ಮಂದಿಗೆ ಮೊದಲ ಚಿತ್ರಕ್ಕೇ ಸುಸ್ತಾದವರಾದರೆ, ಇನ್ನೊಂದಷ್ಟು ಮಂದಿಗೆ ಅವಕಾಶಗಳೇ ಇರುವುದಿಲ್ಲ.

  ಇವರ ನಡುವೆ, ಮೊದಲ ಚಿತ್ರ ಸುಪರ್ ಹಿಟ್ ಆಗದಿದ್ದರೂ, ಸಿನಿಮಾದ ಮೇಲಿನ ತಮ್ಮ ಆಸಕ್ತಿ ಕಳೆದುಕೊಳ್ಳದವರು ಕೂಡ ಸಾಕಷ್ಟು ಮಂದಿ ಇರುತ್ತಾರೆ. ಮುಂದಿನ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡುತ್ತಾ, ಒಂದು ಬ್ರೇಕ್ ಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವವರ ಪಟ್ಟಿಯಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿರುವ ನಟಿ ಸಂಹಿತಾ ಶಾ.

  ಖಳನಟ ಗಣೇಶ್ ಕೇಸರ್ಕರ್ ಪರದೆ ಮೇಲೆ ಸದಾ ಪೊಲೀಸ್ ಆಫೀಸರ್..!

  ಕನ್ನಡದ ಜತೆಗೆ ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿರುವ ಸಂಹಿತಾ ಪ್ರಸ್ತುತ ತಮಿಳಿನ ಸ್ಟಾರ್ ನಟನೋರ್ವ ಜತೆಗೆ ನಾಯಕಿಯಾಗಿ ನಟಿಸಿ ಬಂದಿದ್ದಾರೆ. ಫಿಲ್ಮೀಬೀಟ್ ಜತೆಗೆ ಅವರು ತಮ್ಮ ಸಿನಿಮಾ ಬದುಕಿನ ಜತೆಗೆ ಮಾತನಾಡಿದ್ದಾರೆ. ಮುಂದೆ ಓದಿ...

  ನಿಮ್ಮ ಚಿತ್ರರಂಗದ ಪ್ರವೇಶ ಆಗಿದ್ದು ಹೇಗೆ?

  ನಿಮ್ಮ ಚಿತ್ರರಂಗದ ಪ್ರವೇಶ ಆಗಿದ್ದು ಹೇಗೆ?

  ನನ್ನದು ಮೂಲತಃ ಬೆಂಗಳೂರು. ಎಂಬಿಎ ವಿದ್ಯಾರ್ಥಿನಿಯಾಗಿರುವಾಗಲೇ ಎಲ್ ವಿ ಡಿಎಸ್ ಎನ್ನುವ ಡ್ಯಾನ್ಸ್ ಸ್ಕೂಲ್ ನಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದೆ. ಅಲ್ಲಿ ನನ್ನನ್ನು ಗಮನಿಸಿದ ಸಿನಿಮಾ ಕೊರಿಯೋಗ್ರಾಫರ್ ಒಬ್ಬರು ಮೊದಲ ಅವಕಾಶ ನೀಡಿದರು. ಅದು ನವನಾಯಕನೋರ್ವ ಜತೆಗೆ 143 ಎನ್ನುವ ಚಿತ್ರದ ಡ್ಯುಯೆಟ್ ಸಾಂಗಲ್ಲಿ ಹೆಜ್ಜೆ ಹಾಕುವುದಾಗಿತ್ತು. ಹಾಗೆ ಇಟ್ಟ ಹೆಜ್ಜೆ ಇಂದು ನಾಯಕಿಯಾಗುವ ತನಕ ತಂದು ನಿಲ್ಲಿಸಿದೆ.

  ನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ ಜಿಲ್ಕ' ಎನ್ನುತ್ತಾರೆ ಕವೀಶ್ ಶೆಟ್ಟಿ

  ಇದುವರೆಗೆ ನಟಿಸಿರುವ ಚಿತ್ರಗಳ ಬಗ್ಗೆ ಹೇಳಿ

  ಇದುವರೆಗೆ ನಟಿಸಿರುವ ಚಿತ್ರಗಳ ಬಗ್ಗೆ ಹೇಳಿ

  ದೆವ್ವದ ಚಿತ್ರಗಳ ಟ್ರೆಂಡ್ ಹುಟ್ಟಿಕೊಂಡಾಗ ಬಂದಂಥ ಚಿತ್ರ `ಮತ್ತೆ ಶ್!' ಅದರಲ್ಲಿ ವಿಜಯ್ ಚೆಂಡೂರ್ ಗೆ ಜೋಡಿಯಾಗಿ ನಟಿಸಿದೆ. ರವಿಶಂಕರ್ ಅವರೊಂದಿಗೆ ಡಿಸೆಂಬರ್ 16 ಎನ್ನುವ ಸಿನಿಮಾದಲ್ಲಿ ನಟಿಸಿದೆ. `ಪಟ್ಟಾಭಿಷೇಕ' ಚಿತ್ರದಲ್ಲಿ ಯುವರಾಜ್ ಕಲ್ಯಾಣ್ ಕುಮಾರ್ ಅವರಿಗೆ ಒನ್ ಆಫ್ ದಿ ಹೀರೋಯಿನ್ ಆದೆ. `ಎ ಒನ್' ನ ಚಿತ್ರದ ಮೂಲಕ ಒನ್ ಆ್ಯಂಡ್ ಓನ್ಲಿ ನಾಯಕಿಯಾಗುವ ಅವಕಾಶ ಲಭಿಸಿತು. ಚಿತ್ರದ ನಾಯಕ ನಿರ್ದೇಶಕರಾದ ಎಆರ್ ರಮೇಶ್ ಅವರೊಂದಿಗೆ `ನಂದೇ ಆಟ' ಎನ್ನುವ ಹೊಸ ಚಿತ್ರದಲ್ಲಿಯೂ ನಟಿಸುತ್ತಿದ್ದೇನೆ. ಇದರೊಂದಿಗೆ ರಾಜುದೇವಸಂದ್ರ ನಿರ್ದೇಶನದ `ಕತ್ಲೆಕಾಡು' ಸಿನಿಮಾದಲ್ಲಿ ಕೂಡ ನಟಿಸಿದ್ದು, ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ

  'ಕತ್ಲೆಕಾಡು' ಚಿತ್ರ ನೀಡಿದ ವಿಶೇಷ ಅನುಭವ ಏನು?

  'ಕತ್ಲೆಕಾಡು' ಚಿತ್ರ ನೀಡಿದ ವಿಶೇಷ ಅನುಭವ ಏನು?

  ಚಿತ್ರಕ್ಕಾಗಿ ಕಾಡಿನಲ್ಲಿ ಶೂಟಿಂಗ್ ಮಾಡಲಾಗಿದೆ. ಆಗ ಇದುವರೆಗೆ ಮೃಗಾಲಯಗಳಲ್ಲಿ ಮಾತ್ರ ನೋಡಿದ್ದಂಥ ಪ್ರಾಣಿಗಳನ್ನು ಕಾಡಿನಲ್ಲೇ ನೇರವಾಗಿ ನೋಡುವ ಅವಕಾಶ ನನಗೆ ಲಭಿಸಿತು. ಆನೆ, ಚಿರತೆ, ಜಿಂಕೆ, ಗೂಬೆ.. ಹೀಗೆ ವೈವಿಧ್ಯಮಯವಾದ ಪ್ರಾಣಿಗಳನ್ನು ನೋಡಿ ತುಂಬ ಖುಷಿಯಾಯಿತು. ಈ ಚಿತ್ರವನ್ನು ನೋಡಿದವರಿಗೂ ಅಷ್ಟೇ, ಪ್ರಕೃತಿ ಬಗ್ಗೆ ಹೆಚ್ಚು ಆಸಕ್ತಿ ಮೂಡುವುದು ಸಹಜ.

  ಜಿಲ್ಕ'ದ ನಾಯಕಿಗೆ ದರ್ಶನ್ ಜತೆಗೆ ಡ್ಯುಯೆಟ್ ಹಾಡುವಾಸೆ

  ಇವೆಲ್ಲವುಗಳ ಜತೆ ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸಿದ್ದೀರಂತೆ?

  ಇವೆಲ್ಲವುಗಳ ಜತೆ ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸಿದ್ದೀರಂತೆ?

  ನನ್ನ ಮೊದಲ ಅನ್ಯಭಾಷಾ ಚಿತ್ರ ಕರ್ನಾಟಕದಲ್ಲೇ ಆಯಿತು. ಅದು `ರಂಗ್ ರಂಗ್ ದ ದಿಬ್ಬಣ' ಎನ್ನುವ ತುಳುಭಾಷೆಯ ಚಿತ್ರ. ತೆಲುಗಲ್ಲಿ `ನಕ್ಷತ್ರಂ' ಎನ್ನುವ ಚಿತ್ರದಲ್ಲಿ ನಟಿಸಿದ್ದೇನೆ. ತಮಿಳಲ್ಲಿ `ನಾ ವೇರೆ ಮಾದಿರಿ' ಮತ್ತು `ಏಳಾಂ ಪಿರೈ' ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ. ತಮಿಳಿನಲ್ಲಿ ಒಂದು ದೊಡ್ಡ ಬ್ಯಾನರ್ ಸಿನಿಮಾದಲ್ಲಿ ನಟಿಸಿದ್ದೇನೆ. ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬಳಾಗಿ ನಾನು ನಟಿಸಿದ್ದೇನೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಅದರಲ್ಲಿ ಎರಡು ಹಾಡುಗಳಲ್ಲಿ ನಾನಿದ್ದೇನೆ. ಚಿತ್ರದ ನಾಯಕರಾಗಿ ಸ್ಟಾರ್ ನಟರೊಬ್ಬರು ಅಭಿನಯಿಸುತ್ತಿದ್ದು ತಾವಾಗಿಯೇ ಮಾಧ್ಯಮದ ಮುಂದೆ ಹೇಳುವ ತನಕ ಚಿತ್ರದ ಬಗ್ಗೆ ಮಾಧ್ಯಮಗಳಿಗೆ ತಿಳಿಸದಂತೆ ಕಾಂಟ್ರ್ಯಾಕ್ಟ್ ಮಾಡಿಕೊಂಡಿದ್ದಾರೆ.

  ನಿಮಗೆ ಕೌಟುಂಬಿಕವಾಗಿ ಸಿಗುವ ಪ್ರೋತ್ಸಾಹ ಹೇಗಿದೆ?

  ನಿಮಗೆ ಕೌಟುಂಬಿಕವಾಗಿ ಸಿಗುವ ಪ್ರೋತ್ಸಾಹ ಹೇಗಿದೆ?

  ತಂದೆ ತಾಯಿಗೆ ನಾವು ನಾಲ್ಕು ಮಂದಿ ಮಕ್ಕಳು. ನನಗೆ ಇಬ್ಬರು ಅಣ್ಣಂದಿರು. ನಾನೊಬ್ಬಳೇ ಹೆಣ್ಣು ಮಗುವಾದ ಕಾರಣ ಮುದ್ದಿನಿಂದ ಬೆಳೆದೆ. ಹಾಗಾಗಿಯೇ ಆರಂಭದಲ್ಲಿ ಸಿನಿಮಾ ಕ್ಷೇತ್ರಕ್ಕೆ ಹೋಗಿ ಕಷ್ಟಪಡುವುದು ಬೇಡ ಎಂದೇ ಹೇಳುತ್ತಿದ್ದರು. ಆದರೆ ನನ್ನ ನಿರಂತರ ಉತ್ಸಾಹ ಮತ್ತು ಸಿಗುತ್ತಿರುವ ಅವಕಾಶಗಳನ್ನು ನೋಡಿ ಮನಸು ಬದಲಿಸಿದ್ದಾರೆ. ನಿಜ ಹೇಳಬೇಕೆಂದರೆ ತಮಿಳಿನ ಸ್ಟಾರ್ ಚಿತ್ರದಲ್ಲಿ ಅವಕಾಶ ದೊರಕಿದ್ದು ನನ್ನ ತಂದೆಯ ಮೂಲಕವೇ ಎಂದು ಹೇಳಬಹುದು.

  English summary
  Samhitha Sha is Actress in Kannada Tamil And Telugu films. She Acted 13 Films in Kannada And other language. Here She talks about her film career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X