twitter
    For Quick Alerts
    ALLOW NOTIFICATIONS  
    For Daily Alerts

    ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!

    |

    ಇತ್ತೀಚೇಗೆ ಸುಚೇಂದ್ರ ಪ್ರಸಾದ್ ಅವರ ಪತ್ನಿ ಪವಿತ್ರಾ ಲೋಕೇಶ್ ಮದುವೆ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿತ್ತು. ತಮ್ಮ ಕೌಟುಂಬಿಕ ಬದುಕು ಚರ್ಚೆಯಾಗುತ್ತಿದ್ದರೂ ಇದ್ಯಾವುದಕ್ಕೂ ತಲೆ ಕೆಡಸಿಕೊಳ್ಳದೆ ಸುಚೇಂದ್ರ ಪ್ರಸಾದ್ ಸಿನಿಮಾ ನಿರ್ದೇಶನದಲ್ಲಿ ನಿರತರಾಗಿದ್ದಾರೆ.

    ಸುಚೇಂದ್ರ ಪ್ರಸಾದ್ ಒಂದು ವಿಶಿಷ್ಠವಾದ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. 70ರ ದಶಕದಲ್ಲಿ ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ. ದೊಡ್ಡರಂಗೇಗೌಡರು ಬರೆದಿದ್ದ ಗೀತ ಗುಚ್ಛವನ್ನಿಟ್ಟುಕೊಂಡು 'ಮಾವು-ಬೇವು' ಅಂತಲೇ ಶೀರ್ಷಿಕೆಯನ್ನಿಟ್ಟು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಒಂದು ತಿಂಗಳ ಹಿಂದಷ್ಟೇ ಸೆಟ್ಟೇರಿದೆ.

    ಡಾ.ದೊಡ್ಡರಂಗೇಗೌಡರ ಈ ಗೀತ ಗುಚ್ಛದಲ್ಲಿ ಒಟ್ಟು 10 ಹಾಡುಗಳಿವೆ. ಎಸ್‌.ಪಿ ಬಾಲಸುಬ್ರಹ್ಮಣ್ಯಂ ಈ ಹತ್ತೂ ಹಾಡುಗಳನ್ನು ಹಾಡಿದ್ದರೆ, ಎಲ್ ವೈದ್ಯನಾಥನ್ ವಾದ್ಯ ನೀಡಿದ್ದರು. ಸಿ. ಅಶ್ವಥ್ ಸ್ವರ ಸಂಯೋಜನೆ ಮಾಡಿದ್ದರು. ಆದ್ರೀಗ ಎಸ್‌ಪಿಬಿ, ಎಲ್ ವೈದ್ಯನಾಥನ್ ಹಾಗೂ ಸಿ ಅಶ್ವಥ್ ಮೂರು ಇಲ್ಲ. ಆದರೆ ಅವರು ಬಿಟ್ಟು ಹೋದ ಆ ಹಾಡುಗಳೇ ಈ ಸಿನಿಮಾ ಆಗುತ್ತಿದೆ. ಈಗಾಗಲೇ ನಾಲ್ಕು ಹಾಡುಗಳ ಚಿತ್ರೀಕರಣ ಮುಗಿಸಿರುವ ಸುಚೇಂದ್ರ ಪ್ರಸಾದ್ ಫಿಲ್ಮಿಬೀಟ್ ಜೊತೆ 'ಮಾವು ಬೇವು' ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    'ಮಾವು-ಬೇವು ಹಾಡಿನ ಬಗ್ಗೆ ಯಾಕಿಷ್ಟು ಒಲವು?

    'ಮಾವು-ಬೇವು ಹಾಡಿನ ಬಗ್ಗೆ ಯಾಕಿಷ್ಟು ಒಲವು?

    "ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡ ರಂಗೇಗೌಡರು 70ರ ದಶಕದಲ್ಲಿ ಮಾವು-ಬೇವು ಶೀರ್ಷಿಕೆ ಅಡಿಯಲ್ಲಿ ಬರೆದ 10 ಹಾಡುಗಳೂ ಜನಜನಿತ. ಎಸ್‌ಪಿ ಬಾಲ ಸುಬ್ರಹ್ಮಣ್ಯಂ ಗಾಯನ, ಎಲ್ ವೈದ್ಯನಾಥನ್ ಅವರ ವಾದ್ಯ ಸಹಕಾರ. ಸಿ ಅಶ್ವಥ್ ಅವರ ಸ್ವರ ಸಂಯೋಜನೆ. ಇಂತಹ ಅಪೂರ್ವ ಸಂಗಮ ಆ ಕಾಲ ಸಿದ್ಧಿಸಿ, ಈಗ ಎಷ್ಟೋ ಜನರಲ್ಲಿ ಸುಪ್ರಭಾತದ ಹಾಗೆ ಮೊಳಗುತ್ತಿದೆ. ಕಿರಿಯರು ಹಿರಿಯರು ಎನ್ನದೆ ಅಷ್ಟೂ ಹಾಡುಗಳು ಇವರನ್ನು ಸೆಳೆದಿವೆ."

    'ಮಾವು-ಬೇವು' ಸಿನಿಮಾ ಮಾಡಬೇಕು ಅನಿಸಿದ್ದೇಕೆ?

    'ಮಾವು-ಬೇವು' ಸಿನಿಮಾ ಮಾಡಬೇಕು ಅನಿಸಿದ್ದೇಕೆ?

    "ಲಹರಿ ಸಂಸ್ಥೆಯವರು ಮೊದಲು ಇದನ್ನು ಪಡೆದಿದ್ದರು. ಲಹರಿಯವರು ಇದು ತುಂಬಾ ಒಳ್ಳೆಯ ತಂಡ. ನೀವು ಇದನ್ನು ಸಿನಿಮಾವನ್ನಾಗಿ ಮಾಡುತ್ತೀರಾ ಎಂದರೆ, ನಾವು ನಿಮ್ಮ ಜೊತೆಗಿರುತ್ತೇವೆ ಎಂದು ಹೇಳಿ ಕೈ ಜೋಡಿಸಿದ್ದಾರೆ. 10 ಹಾಡುಗಳಲ್ಲಿ ಈಗಾಗಲೇ ಎರಡು ಹಾಡುಗಳನ್ನು ಈಗಾಗಲೇ ಚಿತ್ರೀಕರಿಸಿದ್ದೇವೆ. ಮತ್ತೆರಡು ಹಾಡುಗಳ ಚಿತ್ರೀಕರಣ ಮಾಡುತ್ತಿದ್ದೇವೆ. ಹಾಡುಗಳೇ ಈ ಚಿತ್ರದ ಆತ್ಮ ಆಗಿದೆ."

    ಸಿನಿಮಾದಲ್ಲಿ 10 ಹಾಡುಗಳು ಹೇಗೆ?

    ಸಿನಿಮಾದಲ್ಲಿ 10 ಹಾಡುಗಳು ಹೇಗೆ?

    "ನಾವು ಏನು ಮಾಡಲು ಹೊರಟಿದ್ದೇವೆ ಎಂದರೆ, ಈ 10 ಹಾಡುಗಳ ಧ್ವನಿಯಾರ್ಥವನ್ನು ಹಿಡಿದುಕೊಂಡು ಕಥೆಯನ್ನು ಹೆಣೆದುಕೊಳ್ಳಲಾಗಿದೆ. ಪ್ರತಿ ಪದಕ್ಕೂ ಒಂದೊಂದು ಅರ್ಥವಿರುತ್ತೆ. ಎಲ್ಲಾ ಅರ್ಥಗಳೂ ಒಟ್ಟಿಗೆ ನಾವು ಗ್ರಹಿಸಿದ್ದಾಗ, ಆ ಸಾಹಿತ್ಯ ಹೇಗೆ ಧ್ವನಿಸುತ್ತೆ. ಅದನ್ನು ಆಧಾರಾವಾಗಿಟ್ಟುಕೊಂಡು ಕಥೆಯನ್ನು ಹೆಣೆದಿದ್ದೇವೆ. ಹಾಗೂ ಸಮಕಾಲೀನ ಪ್ರಜ್ಞೆಯನ್ನು ಇಟ್ಟುಕೊಂಡಿದ್ದೇವೆ. ಆ ಸಮಕಾಲೀನ ಪ್ರಜ್ಞೆಯಲ್ಲಿ ಇರಬಹುದಾದ ಕಥೆಯನ್ನು ಚಿತ್ರರೂಪ ನೀಡಲು ಹೊರಟಿದ್ದೇವೆ. "

    70ರ ದಶಕದ ಹಾಡುಗಳು ಮರುಸೃಷ್ಟಿ ಆಗಿದೆಯಾ?

    70ರ ದಶಕದ ಹಾಡುಗಳು ಮರುಸೃಷ್ಟಿ ಆಗಿದೆಯಾ?

    "10 ಹಾಡುಗಳು ಯತಾವತ್ತು ಹಾಗೇ ಇರುತ್ತೆ. ಮರುಸೃಷ್ಟಿ ಮಾಡಿಸಿ ಮತ್ತೊಮ್ಮೆ ಗಾಯನ ಮಾಡಿಲ್ಲ. ಹಾಗೆ ನೋಡಿಕೊಂಡರೆ, ಎಸ್‌ಪಿ ಬಾಲಸುಬ್ರಹ್ಮಣಂ ಈವರೆಗೆ ಹಾಡಿರುವ ಹಾಡುಗಳನ್ನು ಮತ್ತೆ ಮರುಸೃಷ್ಟಿ ಪ್ರಯೋಗ ಮಾಡುತ್ತೇನೆ. ಬಳಸಿಕೊಳ್ಳುತ್ತೇನೆ ಎಂದಲ್ಲಿ ಇದು ಅವರ ಕೊನೆಯ ಚಿತ್ರವಾಗುತ್ತದೆ. ಹಾಗೇ ಸಿ. ಅಶ್ವಥ್ ಅವರ ರಾಗ ಸಂಯೋಜನೆ ಕೂಡ ಆಗುತ್ತೆ. ಹಾಗೇ ವೈದ್ಯನಾಥನ್ ಕೂಡ. ಆ ಮೂವರು ಹಿರಿಯರು ಈಗ ಭೌತಿಕವಾಗಿ ಇಲ್ಲ. ಆದರೆ ಅವರು ಬಿಟ್ಟು ಹೋದ ಆಸ್ತಿ ಇದೆಯಲ್ಲ ಅದು ಈ ಚಿತ್ರಕ್ಕೆ ಹರಿದು ಬಂದಿರುವುದು ತುಂಬಾನೇ ವಿಶೇಷ."

    'ಮಾವು-ಬೇವು' ಸಿನಿಮಾದಲ್ಲಿ ಯಾರಿದ್ದಾರೆ?

    'ಮಾವು-ಬೇವು' ಸಿನಿಮಾದಲ್ಲಿ ಯಾರಿದ್ದಾರೆ?

    "ಈ ಸಿನಿಮಾದಲ್ಲಿ ಕಲಾವಿದರಾಗಿ ಸಂದೀಪ್ ನೀನಾಸಂ ಎಂಬುವವರು, ಸಾವಿರ ಹಾಡುಗಳನ್ನು ಹಾಡಿರುವ ಚೈತ್ರ ಅವರು ಈ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡ್ಯಾನಿ ಕುಟ್ಟಪ್ಪ ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಪ್ರಿಯಾ ಮತ್ತೊರ್ವ ರಂಗ ಮತ್ತು ಸಿನಿಮಾದಲ್ಲಿರುವ ಹೆಣ್ಣು ಮಗಳು ಮತ್ತೊಂದು ಪಾತ್ರ ಮಾಡುತ್ತಿದ್ದಾರೆ. ಶ್ರೀನಿವಾಸ್ ಮೂರ್ತಿ, ಸುಂದರಶ್ರೀ, ಜೆಕೆ ಶ್ರೀನಿವಾಸ್ ಮೂರ್ತಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ."

    ಸಿನಿಮಾ ಮಾಡಬೇಕು ಅಂತ ಅನಿಸಿದ್ದೇಕೆ?

    ಸಿನಿಮಾ ಮಾಡಬೇಕು ಅಂತ ಅನಿಸಿದ್ದೇಕೆ?

    "ದೊಡ್ಡರಂಗೇ ಗೌಡರು 10 ವರ್ಷಗಳ ಹಿಂದೆ ಈ ಪ್ರಯತ್ನಕ್ಕೆ ಮುಂದಾಗಿದ್ದರು. ಅದು ಸಾಧ್ಯವಾಗದೇ ಈಗ ಅದು ಮತ್ತೆ ಗರಿಗೆದರಿ ಬರುತ್ತಿದೆ. ಈ ಚಿತ್ರದಲ್ಲಿ ಹಾಡುಗಳಿವೆಯಲ್ಲಾ. ಅದನ್ನು ತುಟಿಚಲನೆ ಅಂತ ಇಟ್ಟುಕೊಂಡು ಮಾಡುವುದಿಲ್ಲ. ಈ ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿ ನಿಲ್ಲುತ್ತವೆ. ಕಥೆಯನ್ನು ಬೆಳೆಸುತ್ತವೆ."

    ಸಿನಿಮಾ ಚಿತ್ರೀಕರಣ ಎಲ್ಲಿವರೆಗೆ ಬಂದಿದೆ?

    ಸಿನಿಮಾ ಚಿತ್ರೀಕರಣ ಎಲ್ಲಿವರೆಗೆ ಬಂದಿದೆ?

    "ನಾಲ್ಕು ಹಾಡುಗಳನ್ನು ಈಗಾಗಲೇ ಮುಗಿಸಿದ್ದೇವೆ. ಇನ್ನೂ 5 ಹಾಡುಗಳನ್ನು ಮೊದಲು ಚಿತ್ರೀಕರಣ ಮಾಡಿಕೊಂಡು ಬಳಿಕ ಮಾತಿನ ಭಾಗದ ಚಿತ್ರೀಕರಣವನ್ನು ಮಾಡುತ್ತೇವೆ. ಎಲ್ಲವೂ ಸರಿ ಹೋದಲ್ಲಿ ನವೆಂಬರ್ ಅಥವಾ ಡಿಸೆಂಬರ್ ಒಳಗೆ ಸೆನ್ಸಾರ್ ಮಂಡಳಿಯಿಂದ ಪಡೆಯಬಹುದಾದ ಪ್ರಮಾಣ ಪತ್ರವನ್ನು ಪಡೆಯಬಹುದು. ಆ ಮೇಲೆ ಪ್ರದರ್ಶನ ಬಗ್ಗೆ ಯೋಚಿಸುತ್ತೇವೆ. ಪ್ರದರ್ಶನ ಅನ್ನುವುದು ದೊಡ್ಡ ಸುಳಿ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಿಡುಗಡೆ ಮಾಡುತ್ತೇವೆ." ಎನ್ನುತ್ತಾರೆ ನಿರ್ದೇಶಕ ಸುಚೇಂದ್ರ ಪ್ರಸಾದ್.

    English summary
    After Pavithra Lokesh Marriage News Suchendra Prasad Directing New Movie Maavu Bevu, Know More.
    Tuesday, June 28, 2022, 10:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X