»   » 'ಅಕಿರ' ಚಿತ್ರದ ಕಥೆಗೆ ಕ್ಲೀನ್ ಬೌಲ್ಡ್ ಆದ ನಾಯಕಿಯರು.!

'ಅಕಿರ' ಚಿತ್ರದ ಕಥೆಗೆ ಕ್ಲೀನ್ ಬೌಲ್ಡ್ ಆದ ನಾಯಕಿಯರು.!

By: ಹರ್ಷಿತಾ ರಾಕೇಶ್
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿರುವ 'ಅಕಿರ' ಸಿನಿಮಾ ನಾಳೆ ನಿಮ್ಮೆದುರಿಗೆ ಬರಲಿದೆ. 'ಪೊಲೀಸ್ ಕ್ವಾಟರ್ಸ್' ಖ್ಯಾತಿಯ ನಟ ಅನೀಶ್ ತೇಜೇಶ್ವರ್ ಗೆ 'ಅಕಿರ' ಚಿತ್ರದಲ್ಲಿ ಅದಿತಿ ರಾವ್ ಹಾಗೂ ಕ್ರಿಷಿ ತಪಂಡಾ ನಾಯಕಿಯರು.

ಇಬ್ಬರು ನಾಯಕಿಯರು ಇದ್ಮೇಲೆ 'ಅಕಿರ' ಟ್ರೈಯಾಂಗಲ್ ಲವ್ ಸ್ಟೋರಿ ಚಿತ್ರ ಅಂತ ಭಾವಿಸಬೇಕಿಲ್ಲ. ಎರಡು ಬೇರೆ ಬೇರೆ ಲವ್ ಸ್ಟೋರಿ ಇರುವ ಕಾರಣ 'ಅಕಿರ' ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. [ಈ ವಾರ ತೆರೆಗೆ ಬರುತ್ತಿದೆ ಬಹುನಿರೀಕ್ಷಿತ ಸಿನಿಮಾ 'ಅಕಿರ']


akhira-heroines-aditi-rao-and-krishi-tapanda-interview

ಅಂದ್ಹಾಗೆ, 'ಅಕಿರ' ಚಿತ್ರಕ್ಕೆ ನಟಿ ಅದಿತಿ ರಾವ್ ಗ್ರೀನ್ ಸಿಗ್ನಲ್ ಕೊಡಲು ಮುಖ್ಯ ಕಾರಣ ಚಿತ್ರದ ಪಾತ್ರವಂತೆ. ''ಅಕಿರ' ಚಿತ್ರದಲ್ಲಿ ನನ್ನ ಪಾತ್ರ ನನಗೆ ತುಂಬಾ ಇಷ್ಟ ಆಯ್ತು. ಹೀರೋಯಿನ್ ಅಂದ್ರೆ ಬರೀ ಕಾಲೇಜ್ ಗೆ ಹೋಗೋದಲ್ಲ. ನನಗೆ ಈ ಸಿನಿಮಾದಲ್ಲಿ ಓಲ್ಡ್ ಏಜ್ ಹೋಮ್ ನಡೆಸುವ ಯುವತಿಯ ಪಾತ್ರ ಸಿಕ್ಕಿದೆ'' ಅಂತ ಲವಲವಿಕೆಯಿಂದ ಹೇಳುತ್ತಾರೆ ನಟಿ ಅದಿತಿ ರಾವ್. ['ಫಿಲ್ಮಿಬೀಟ್' ವಿಶೇಷ; 'ಅಕಿರ' ನಾಯಕ ಅನೀಶ್ ಸಂದರ್ಶನ]


akhira-heroines-aditi-rao-and-krishi-tapanda-interview

ಇನ್ನೂ ನಟಿ ಕ್ರಿಷಿ ತಪಂಡಾರದ್ದು ಬೇರೆ ಕಥೆ. ''ಸಿನಿಮಾ ಕಥೆ ಕೇಳಿದ ತಕ್ಷಣ ಹಿಂದು ಮುಂದೆ ನೋಡದೆ ನಾನು ಒಪ್ಪಿಕೊಂಡೆ. ತುಂಬಾ ಪಾಸಿಟೀವ್ ಅನಿಸ್ತು. ಜಾಸ್ತಿ ಯೋಚನೆ ಮಾಡಲೇ ಇಲ್ಲ'' ಅಂತ ಪಟ ಪಟ ಅಂತ ಮಾತನಾಡುತ್ತಾರೆ ಕ್ರಿಷಿ ತಪಂಡಾ.


akhira-heroines-aditi-rao-and-krishi-tapanda-interview

ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಕ್ರಿಷಿ, ಬುಲೆಟ್ ಸಹ ಓಡಿಸಿದ್ದಾರೆ.


akhira-heroines-aditi-rao-and-krishi-tapanda-interview

ಅಂದ್ಹಾಗೆ, 'ಅಕಿರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ನವ ಪ್ರತಿಭೆ ನವೀನ್ ರೆಡ್ಡಿ. ಹಲವಾರು ವಿಶೇಷತೆಗಳಿಂದ ಸುದ್ದಿ ಆಗಿರುವ 'ಅಕಿರ' ನಾಳೆ ಬಿಡುಗಡೆ ಆಗುತ್ತಿದೆ. ನೀವು ಟಿಕೆಟ್ ಬುಕ್ ಮಾಡಿದ್ದೀರಾ ಹೇಗೆ..?

English summary
Kannada Actor Anish Tejeshwar starrer 'Akhira' is all set to release on may 6th. The movie is directed by Naveen Reddy. Here is an Exclusive Interview with the 'Akira' heroines Aditi Rao and Krishi Tapanda. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada