twitter
    For Quick Alerts
    ALLOW NOTIFICATIONS  
    For Daily Alerts

    Exclusive Interview: ಕನ್ನಡದಲ್ಲಿ ಅತಿ ಹೆಚ್ಚು ಬೇಡಿಕೆಯ ಸ್ವಿಲ್ ಫೋಟೋಗ್ರಾಫರ್ ಇವರೇ

    |

    ಕೆಲವೊಂದು ಸಂಗತಿ ಎಷ್ಟೊಂದು ಆಶ್ಚರ್ಯ ಅನಿಸುತ್ತೆ ನೋಡಿ.. ಒಂದು ದೊಡ್ಡ ಸಿನಿಮಾದ ಸಣ್ಣದೊಂದು ಡೈಲಾಗ್ ಈ ಮಟ್ಟಿಗೆ ಜನಪ್ರಿಯತೆ ತಂದುಕೊಡಲು ಸಾಧ್ಯವೆ ಎನ್ನುವ ಪ್ರಶ್ನೆ ಮೂಡಿಸುತ್ತದೆ. ಒಂದೇ ಒಂದು ಪದದ ಸಂಭಾಷಣೆ ಒಬ್ಬ ಕಲಾವಿದನನ್ನು ಫೇಮಸ್ ಮಾಡಿಬಿಟ್ಟಿದೆ.

    'ಜ್ಯೂಸ್ ಕುಡಿತಿಯಾ' ಇದು ಯಶ್ ನಟನೆಯ 'ಮಾಸ್ಟರ್ ಪೀಸ್' ಸಿನಿಮಾದ ದೃಶ್ಯವೊಂದರಲ್ಲಿ ಬರುವ ಸಣ್ಣ ಸಂಭಾಷಣೆ. ಈ ಸಣ್ಣ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪಾಪ್ಯೂಲರ್ ಆಗಿದೆ. ಅದು ಯಾವ ಮಟ್ಟಿಗೆ ಅಂದರೆ, ಇದೇ ಹೆಸರಿನಲ್ಲಿ ಒಂದು ಹಾಡೆ ಬಂದಿದೆ. ಅಲ್ಲದೆ. 'ಜ್ಯೂಸ್ ಕುಡಿತಿಯಾ' ಎಂದು ಬೆಂಗಳೂರಿನಲ್ಲಿ ಒಂದು ಜ್ಯೂಸ್ ಅಂಗಡಿಯೇ ಶುರುವಾಗಿದೆ.

    ಸ್ಟಾರ್ ಹೀರೋಗಳ ಫೇವರೇಟ್ ತಂತ್ರಜ್ಞ, ಯಾರಿವರು..?ಸ್ಟಾರ್ ಹೀರೋಗಳ ಫೇವರೇಟ್ ತಂತ್ರಜ್ಞ, ಯಾರಿವರು..?

    ಸಾಮಾಜಿಕ ಜಾಲತಾಣಗಳಲ್ಲಿ ಈ ಡೈಲಾಗ್ ಬಳಕೆ ಮಾಡಿ ಅನೇಕ ಟ್ರೋಲ್ ಗಳು ಆಗುತ್ತಲೇ ಇರುತ್ತದೆ. ಈ ಮೋಸ್ಟ್ ಫೇಮಸ್ ಡೈಲಾಗ್ ಅನ್ನು ಮೊದಲ ಬಾರಿ ಹೇಳಿದ್ದು ರಾಘವೇಂದ್ರ. 'ಮಾಸ್ಟರ್ ಪೀಸ್' ಚಿತ್ರದಲ್ಲಿ ಅವರು ಹೇಳಿದ್ದ ಡೈಲಾಗ್ ಈಗ ಈ ಮಟ್ಟಕ್ಕೆ ಹಿಟ್ ಆಗಿದೆ.

    ಈ ಡೈಲಾಗ್ ನಿಂದ ಅವರ ಜೊತೆಗೆ ಮಾತು ಶುರು ಮಾಡಿದ ನಮಗೆ, ಅವರು ಚಿತ್ರರಂಗದ ಜರ್ನಿ ಬಗ್ಗೆ ತಿಳಿಯಿತು. ಕಸ ಹೊಡೆಯುತ್ತ ತಮ್ಮ ಕೆರಿಯರ್ ಶುರು ಮಾಡಿದ ರಾಘವೇಂದ್ರ ಇಂದು 'ಕೆಜಿಎಫ್ 2' ದಂತಹ ದೊಡ್ಡ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಿನಿಮಾ ರಂಗದ ಏಳು ಬೀಳಿನ ಕಥೆಯನ್ನು ಅವರೇ ನಮ್ಮ ಮುಂದೆ ಇಟ್ಟಿದ್ದಾರೆ.

    ಸಂದರ್ಶನ: ನವೀನ್ ಎಂ ಎಸ್ (ನವಿ ಕನಸು)

    ಸಿನಿಮಾಗಾಗಿ ಸರ್ಕಾರಿ ಕೆಲಸ ಬಿಟ್ಟೆ

    ಸಿನಿಮಾಗಾಗಿ ಸರ್ಕಾರಿ ಕೆಲಸ ಬಿಟ್ಟೆ

    ''ನನ್ನ ಹೆಸರು ರಾಘವೇಂದ್ರ ಬಿ ಕೋಲಾರ. ಕೋಲಾರದ ಒಂದು ಹಳ್ಳಿಯವನು. ಬಿಎಂಟಿಸಿಯಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದೆ. ಆದರೆ, ಸಿನಿಮಾಗೆ ಬರುವ ಆಸೆ ತುಂಬ ಇತ್ತು. ಆಗ ನಮ್ಮ ಅಣ್ಣ ಸೆಟ್ ಕೆಲಸಕ್ಕೆ ಸೇರಿಸಿದರು. 2008ರಲ್ಲಿ ಸೀರಿಯಲ್ ಗೆ ಕಸ ಹೊಡೆಯಲು ಸೇರಿಕೊಂಡು, ಅಲ್ಲಿಂದ ನನ್ನ ಚಿತ್ರರಂಗದ ಜರ್ನಿ ಶುರು ಮಾಡಿದೆ. 'ಮುಗಿಲು' ನನ್ನ ಮೊದಲ ಧಾರಾವಾಹಿ. ಆಗೆಲ್ಲ 30 ರಿಂದ 40 ರೂಪಾಯಿ ಸಿಗುತ್ತಿತ್ತು ಅಷ್ಟೇ.''

    'ಮನಸಾರೆ'ಯಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದೆ

    'ಮನಸಾರೆ'ಯಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದೆ

    ''ಹಾಗೆ ಕೆಲಸ ಮಾಡುತ್ತಾ ಅದೇ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕನಾದೆ. ಆ ಧಾರಾವಾಹಿ ಮುಗಿದ ನಂತರ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಆದರೂ ಸಿನಿಮಾ ಬಿಟ್ಟು ಇರಲು ನನಗೆ ಆಗಲಿಲ್ಲ. ಫೋಟೋಗ್ರಫಿ ಕೋರ್ಸ್ ಮಾಡಿಕೊಂಡು, ಒಬ್ಬ ಫೋಟೋಗ್ರಾಫರ್ ಬಳಿ ಕೆಲಸಕ್ಕೆ ಸೇರಿದೆ. 'ಮನಸಾರೆ' ಸಿನಿಮಾಗೆ ನಾನೇ ಫೋಟೋಗ್ರಾಫಿ ಮಾಡಿದೆ. ಆ ಸಿನಿಮಾದ ಪೋಸ್ಟರ್ ಗಳು ನನಗೆ ಒಳ್ಳೆಯ ಹೆಸರು ತಂದು ಕೊಟ್ಟಿತು.''

    Interview: ಧಾರವಾಡದ ಸಾಮಾನ್ಯ ಹುಡುಗ ಈಗ ಅಕಾಡೆಮಿಗೆ ಅಧ್ಯಕ್ಷInterview: ಧಾರವಾಡದ ಸಾಮಾನ್ಯ ಹುಡುಗ ಈಗ ಅಕಾಡೆಮಿಗೆ ಅಧ್ಯಕ್ಷ

    ಯಶ್ ರೊಂದಿಗೆ 14 ಸಿನಿಮಾಗಳು

    ಯಶ್ ರೊಂದಿಗೆ 14 ಸಿನಿಮಾಗಳು

    ''ಮನಸಾರೆ ನಂತರ ಪಂಚರಂಗಿ, 'ಜಂಗ್ಲಿ' ಯೋಧ, ಡ್ರಾಮ, ಬಹದ್ದೂರ್, ಭರ್ಜರಿ, ಕೆಂಡಸಂಪಿಗೆ, ರಾಜಕುಮಾರ, ಯುವರತ್ನ ಹೀಗೆ ಸಿನಿಮಾ ಮಾಡುತ್ತಿದ್ದೇನೆ. ಯಶ್ ಅಣ್ಣ ಜೊತೆಗೆ 'ಲಕ್ಕಿ ಸಿನಿಮಾದಿಂದ ಹಿಡಿದು 'ಕೆಜಿಎಫ್ 2' ವರೆಗೆ ಸಿನಿಮಾಗಳು 14 ಸಿನಿಮಾಗಳು ಕೆಲಸ ಮಾಡಿದ್ದೇನೆ. ಶರಣ್ ಸರ್ ಅವರ 7 ಚಿತ್ರಕ್ಕೆ ವರ್ಕ್ ಮಾಡಿದ್ದೇನೆ. ಇಲ್ಲಿವರೆಗೆ 42ಕ್ಕೂ ಹೆಚ್ಚು ಸಿನಿಮಾಗಳಾಗಿವೆ. ಅದರ ಜೊತೆಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ಡ್ರಾಮಾ', 'ಅಧ್ಯಕ್ಷ', 'ಮಾಸ್ಟರ್ ಪೀಸ್' ಸಿನಿಮಾಗಳಲ್ಲಿ ನಟನೆ ಮಾಡಿದ್ದೇನೆ.''

    ನನ್ನ ಜೀವನ ಬದಲಿಸಿದ್ದು 'ಜ್ಯೂಸ್ ಕುಡಿತಿಯಾ' ಡೈಲಾಗ್

    ನನ್ನ ಜೀವನ ಬದಲಿಸಿದ್ದು 'ಜ್ಯೂಸ್ ಕುಡಿತಿಯಾ' ಡೈಲಾಗ್

    ''ಇಷ್ಟೆಲ್ಲ ಇದ್ದರೂ 'ಜ್ಯೂಸ್ ಕುಡಿತಿಯಾ' ಡೈಲಾಗ್ ನನ್ನ ಜೀವನವನ್ನು ಬದಲಿಸಿದೆ. ಎಲ್ಲೇ ಹೋದರು ಜನ ಗುರುತಿಸುತ್ತಾರೆ. ಏನೇ ಸಂಭ್ರಮ ಇದ್ದರೂ ಆ ಫೋಟೋ ಹಾಕಿ ಟ್ರೋಲ್ ಮಾಡುತ್ತಾರೆ. ಖುಷಿಯಾಗುತ್ತದೆ. ನಾನು ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದು 'ಮನಸಾರೆ' ಸಿನಿಮಾದಲ್ಲಿ. 'ಮನಸಾರೆ' ಸಿನಿಮಾದಲ್ಲಿ ಫೋಟೋಗ್ರಾಫರ್ ದೃಶ್ಯವೇ ಇತ್ತು. ಈ ಸಣ್ಣ ದೃಶ್ಯವನ್ನು ನೀನೇ ಮಾಡೋ ಅಂತ ಭಟ್ ಸರ್ ಹೇಳಿದರು.''

    Exclusive Interview : 'ಕ್ಲೋಸ್ ಟು ದಿ ಬೋನ್' ಪುಸ್ತಕ ಬರೆದ 'ಯುವರಾಜ' ನಟಿExclusive Interview : 'ಕ್ಲೋಸ್ ಟು ದಿ ಬೋನ್' ಪುಸ್ತಕ ಬರೆದ 'ಯುವರಾಜ' ನಟಿ

    ಈ ಮಟ್ಟಿಗೆ ಹಿಟ್ ಆಗುತ್ತೆ ಅಂತ ಗೊತ್ತಿರಲಿಲ್ಲ

    ಈ ಮಟ್ಟಿಗೆ ಹಿಟ್ ಆಗುತ್ತೆ ಅಂತ ಗೊತ್ತಿರಲಿಲ್ಲ

    ''ರಾಮಾಚಾರಿ ಸಿನಿಮಾ ಮಾಡಿದ್ದರಿಂದ 'ಮಾಸ್ಟರ್ ಪೀಸ್' ಸಿನಿಮಾ ಸಿಕ್ತು. ಜ್ಯೂಸ್ ಕುಡಿತಿಯಾ ಅಂತ ಒಂದು ಡೈಲಾಗ್ ಇದೆ, ಫೋರ್ಸ್ ಆಗಿ ಡೈಲಾಗ್ ಹೇಳು.. ಚೆನ್ನಾಗಿ ಮಾಡು, ಬೇರೆ ತರ ಮಾಡು ಅಂದ್ರು. ಹತ್ತು ಸಲ ಪ್ರಾಕ್ಟಿಸ್ ಮಾಡಿದೆ. ಹೇಗೆ ಮಾಡಲಿ ಅಂತ ತೋರಿಸಿದೆ. ಕೊನೆಗೆ ಜೋರಾಗಿ ಮಾಡಿದೆ. ಆ ಡೈಲಾಗ್ ಈ ಮಟ್ಟಿಗೆ ಹಿಟ್ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ.''

    ಹೀರೋ ಆಗುವ ಅವಕಾಶವೂ ಬಂತು

    ಹೀರೋ ಆಗುವ ಅವಕಾಶವೂ ಬಂತು

    ''ಜ್ಯೂಸ್ ಕುಡಿತಿಯಾ ಡೈಲಾಗ್ ಪಾಪುಲರ್ ಆದ ಮೇಲೆ ಹೀರೋ ಆಗುವ ಅವಕಾಶ ಬಂತು. ಆದರೆ, ನಾನು ಒಬ್ಬ ಟೆಕ್ನಿಷಿಯನ್ ಇಷ್ಟ ಬೇಗ ಹೀರೋ ಆಗೋದು ಬೇಡ ಅಂತ ಸುಮ್ಮನಾದೆ. ಜ್ಯೂಸ್ ಕುಡಿತಿಯಾ ಅಂತ ಒಂದು ಹಾಡು ಬಂತು. ನಾಗರಬಾವಿಯಲ್ಲಿ ಒಂದು ಜ್ಯೂಸ್ ಅಂಗಡಿ ಕೂಡ ಓಪನ್ ಆಯ್ತು. ನಾನು ಅಪ್ಪು ಸರ್ ಅಭಿಮಾನಿ. ನನ್ನ ಅದೃಷ್ಟಕ್ಕೆ ಅವರ ಜೊತೆಗೆ ಕೆಲಸ ಮಾಡಿದೆ. ನಿರ್ದೇಶಕ ಕೃಷ್ಣ ಸರ್ ನನ್ನ ಗುರುಗಳು.

    ಡೈರೆಕ್ಟರ್ ಆಗುವ ಆಸೆ ಇದೆ

    ಡೈರೆಕ್ಟರ್ ಆಗುವ ಆಸೆ ಇದೆ

    ''ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವ ಆಸೆಯಿಂದ ಚಿತ್ರರಂಗಕ್ಕೆ ಬಂದೆ. ಆದರೆ, ಇಲ್ಲಿಯವರೆಗೆ ಅದನ್ನು ಬಿಟ್ಟು ಎಲ್ಲವನ್ನು ಮಾಡುತ್ತಿದ್ದೇನೆ. ಒಳ್ಳೆಯ ಕಥೆ ಇದೆ. ನಿರ್ಮಾಪಕರನ್ನು ಸಂಪರ್ಕ ಮಾಡುತ್ತಿದ್ದೇನೆ. ಎಲ್ಲ ಓಕೆ ಆದ್ರೆ ಆ ಚಿತ್ರದ ಶುರು ಆಗುತ್ತೆ. ಅದರೊಂದಿಗೆ 'ಚತುಷ್ಪತ' ಎಂಬ ಸಿನಿಮಾಗೆ ನಾನೇ ಸಿನಿಮಾಟೋಗ್ರಾಫಿ ಮಾಡುತ್ತಿದ್ದೇನೆ. ಸದ್ಯ 'ಭರತ ಬಾಹುಬಲಿ' ಸಿನಿಮಾದಲ್ಲಿಯೂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.''

    English summary
    All about Juice Kudithiya fame Raghavendra B Kolar interview.
    Tuesday, January 7, 2020, 23:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X