'ಕೆಜಿಎಫ್'ನ ಈ ಪಾತ್ರದಲ್ಲಿ ನಟಿಸಿದ್ದು ಈ ಸುಂದರಿಯೇ

Recommended Video

KGF Movie : ಕೆಜಿಎಫ್ ನಲ್ಲಿ ಈ ಪಾತ್ರ ಮಾಡಿದ್ದು ಈ ಸುಂದರಿಯೇ | FILMIBEAT KANNADA

ಒಂದು ಸಿನಿಮಾ ಗೆದ್ದರೆ, ಆ ಸಿನಿಮಾದ ಮೂಲಕ ಅನೇಕರು ಹುಟ್ಟುತ್ತಾರೆ. ಒಂದು ಯಶಸ್ವಿ ಸಿನಿಮಾದಲ್ಲಿ ಕೆಲಸ ಮಾಡಿದ ಸಾಕಷ್ಟು ಕಲಾವಿದ, ತಂತ್ರಜ್ಞರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಈಗ 'ಕೆಜಿಎಫ್' ಸಿನಿಮಾ ಕೂಡ ಆ ರೀತಿಯ ಜಾದುವನ್ನು ಮಾಡಿದೆ.

ಕೆಜಿಎಫ್' ಸಿನಿಮಾ ಸೂಪರ್ ಹಿಟ್ ಆಗಿದೆ. ಮಾತ್ರವಲ್ಲದೆ ಈ ಸಿನಿಮಾದಲ್ಲಿ ಕೆಲಸ ಮಾಡಿದ ಅನೇಕರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ಅದೇ ರೀತಿ ಸಿನಿಮಾದ ಒಂದು ಪಾತ್ರದಲ್ಲಿ ನಟಿಸಿದ್ದ ನಟಿ ರೂಪ ರಾಯಪ್ಪ ಕೂಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗುತ್ತಿದ್ದಾರೆ.

'ಕೆಜಿಎಫ್' ಸಿನಿಮಾದ ಸೆಕೆಂಡ್ ಹಾಫ್ ನಲ್ಲಿ ಬರುವ ಗರ್ಭಿಣಿಯ ಸನ್ನಿವೇಶ ಎಲ್ಲರಿಗೂ ಕಣ್ಣೀರು ಬರುವಂತೆ ಮಾಡಿದೆ. ಸಿನಿಮಾದ ಭಾವನಾತ್ಮಕ ದೃಶ್ಯಗಳಲ್ಲಿ ಇದು ಒಂದಾಗಿದೆ. ಅಂದಹಾಗೆ, ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ರೂಪಾ ರಾಯಪ್ಪ.

ಮೂಲತಃ ಬೆಂಗಳೂರಿನ ಹುಡುಗಿಯಾಗಿದ್ದ ರೂಪಾ ರಾಯಪ್ಪ 'ಕೆಜಿಎಫ್' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ತಮ್ಮ ವಯಸ್ಸಿಗೂ ಮೀರಿದ ಪಾತ್ರ ಮಾಡಿರುವ ಅವರಿಗೆ ಮೆಚ್ಚುಗೆ ಮಳೆ ಹರಿದು ಬರುತ್ತಿದೆ.

ಅಂದಹಾಗೆ, ತಮ್ಮ ಮೊದಲ ಸಿನಿಮಾದ ಅನುಭವ, ಹೊಸ ಪ್ರಾಜೆಕ್ಟ್ ಗಳು ಹಾಗೂ ಮುಂದಿನ ಸಿನಿಮಾ ಕನಸಿನ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಅವರು ಮಾತನಾಡಿದ್ದಾರೆ. ಮುಂದೆ ಓದಿ..

ಬೆಂಗಳೂರಿನ ಹುಡುಗಿ ರೂಪ

ಬೆಂಗಳೂರಿನ ಹುಡುಗಿ ರೂಪ

ಬೆಂಗಳೂರಿನ ಹುಡುಗಿಯಾಗಿರುವ ರೂಪಾ ರಾಯಪ್ಪ ಹೆಸರಿಗೆ ತಕ್ಕ ಹಾಗೆ ರೂಪವಂತೆ. ಆಕ್ಟಿಂಗ್ ಬಗ್ಗೆ ಚಿಕ್ಕ ವಯಸ್ಸಿನಿಂದ ಆಸಕ್ತಿ ಹೊಂದಿದ್ದ ಆಕೆ ತನ್ನ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. 'ಕೆಜಿಎಫ್' ಇವರ ಮೊದಲ ಸಿನಿಮಾವಾಗಿದ್ದು, ಇದಕ್ಕೂ ಮುಂಚೆ ಅನೇಕ ನಾಟಕಗಳು ಹಾಗೂ ಜಾಹಿರಾತುಗಳಲ್ಲಿ ನಟಿಸಿದ್ದಾರಂತೆ.

ಆಡಿಷನ್ ಮೂಲಕ 'ಕೆಜಿಎಫ್'ಗೆ ಆಯ್ಕೆ

ಆಡಿಷನ್ ಮೂಲಕ 'ಕೆಜಿಎಫ್'ಗೆ ಆಯ್ಕೆ

ರೂಪಾಗೆ 'ಕೆಜಿಎಫ್' ಸಿನಿಮಾದ ಆಡಿಷನ್ ಇದೆ ಎಂದು ತಿಳಿದ ನಂತರ ಪ್ರಯತ್ನ ಪಟ್ಟಿದ್ದಾರೆ. ಆಡಿಷನ್ ನಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆಯಿಂದ ಆಯ್ಕೆ ಕೂಡ ಆಗಿದ್ದಾರೆ. 'ಕೆಜಿಎಫ್'ನಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ಎಲ್ಲರೂ ಖುಷಿ ಪಡುತ್ತಿದ್ದು, ಫೇಸ್ ಬುಕ್, ಇನ್ಟಾಗ್ರಾಮ್ ಸೇರಿದಂತೆ ಎಲ್ಲ ಕಡೆ ಅವರ ಅಭಿನಯಕ್ಕೆ ಮೆಚ್ಚುಗೆಯ ಮಳೆ ಹರಿಯುತ್ತಿದೆಯಂತೆ.

ಗಿರಿರಾಜ್ ಬಿ ಎಂ ನನ್ನ ಗುರುಗಳು

ಗಿರಿರಾಜ್ ಬಿ ಎಂ ನನ್ನ ಗುರುಗಳು

ತಮ್ಮ ಸಿನಿಮಾ ಹಿಂದಿನ ತಯಾರಿಯ ಬಗ್ಗೆ ಮಾತನಾಡಿರುವ ರೂಪ ''ಎರಡುವರೆ ವರ್ಷಗಳಿಂದ ನಾನು ನಾಟಕಗಳನ್ನ ಮಾಡುತ್ತಿದ್ದೇನೆ. ಬೆಂಗಳೂರು ಲಿಟಲ್ ಥಿಯೇಟರ್, ಜಾಗೃತಿ ಥಿಯೇಟರ್, ಪ್ರಕಾಸಮ್, ಮೀಮೂವ್ ತಂಡಗಳಲ್ಲಿ ಇಂಗ್ಲೀಷ್ ಹಾಗೂ ಕನ್ನಡ ನಾಟಕಗಳನ್ನು ಮಾಡಿದ್ದೇನೆ. ಗಿರಿರಾಜ್ ಬಿ ಎಂ ಅವರು ನನ್ನ ಗುರುಗಳು, ಅವರ ಜೊತೆಗೆ ಅನೇಕ ನಾಟಕಗಳನ್ನ ಮಾಡಿದ್ದೇನೆ. ನಾನು ಚಿತ್ರರಂಗಕ್ಕೆ ಬರಲೂ ಅವರೇ ಪ್ರೇರೇಪಣೆ ನೀಡಿದರು.'' ಎಂದರು.

ನನ್ನ ಪಾತ್ರ ನೋಡುತ್ತ ಎಮೋಷನಲ್ ಆದೆ

ನನ್ನ ಪಾತ್ರ ನೋಡುತ್ತ ಎಮೋಷನಲ್ ಆದೆ

ಚಿತ್ರದ ಬಗ್ಗೆ ವಿವರಿಸಿದ ಅವರು ''ನನ್ನ ದೃಶ್ಯವನ್ನ ಚಿತ್ರಮಂದಿರದಲ್ಲಿ ನೋಡುವಾಗ ತುಂಬ ಎಮೋಷನಲ್ ಆದೆ. ಅಳು ತಡೆಯಲು ಆಗಲಿಲ್ಲ. ಫ್ರೆಂಡ್ಸ್ ಜೊತೆಗೆ ಸಿನಿಮಾ ನೋಡಿದೆ. ಇದೆಲ್ಲ ನನಗೆ ತುಂಬ ಖುಷಿ ಕೊಟ್ಟಿದೆ. 'ಕೆಜಿಎಫ್' ನಲ್ಲಿ ಡಿ ಗ್ಲಾಮರ್ ಪಾತ್ರ ಮಾಡಿದ್ದೇನೆ. ಆ ಪಾತ್ರ ಮಾಡಿರುವುದು ನಾನೇ ಎಂದು ಕಂಡು ಹಿಡಿಯಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. 'ಕೆಜಿಎಫ್' ಪಾರ್ಟ್ 2 ನಲ್ಲಿಯೂ ನನ್ನ ಪಾತ್ರ ಮುಂದುವರೆಯಲಿದೆ.'' ಎಂದು ತಮ್ಮ ಸಂತಸ ಹಂಚಿಕೊಂಡರು.

'ಮೈಸೂರು ಡೈರಿಸ್' ಚಿತ್ರದಲ್ಲಿ ನಟನೆ

'ಮೈಸೂರು ಡೈರಿಸ್' ಚಿತ್ರದಲ್ಲಿ ನಟನೆ

''ಕೆಜಿಎಫ್' ಬಳಿಕ 'ಮೈಸೂರು ಡೈರಿಸ್' ಸಿನಿಮಾದಲ್ಲಿ ರೂಪ ನಟಿಸುತ್ತಿದ್ದಾರಂತೆ. ಆ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ಇದರ ಜೊತೆಗೆ ಇನ್ನು ಕೆಲವು ಸಿನಿಮಾಗಳಿಗೆ ಅವರು ಆಯ್ಕೆ ಆಗಿದ್ದು, ಆ ಸಿನಿಮಾಗಳು ಕೂಡ ಸದ್ಯದಲ್ಲಿಯೇ ಪ್ರಾರಂಭ ಆಗಲಿವೆಯಂತೆ.

ಗ್ಲಾಮರ್ ಹಾಗೂ ಲೀಡ್ ರೋಲ್

ಗ್ಲಾಮರ್ ಹಾಗೂ ಲೀಡ್ ರೋಲ್

ಮುಂದೆ ರೂಪಾಗೆ ಒಳ್ಳೆಯ ಪಾತ್ರಗಳು ಹಾಗೂ ಒಳ್ಳೆಯ ಸಿನಿಮಾಗಳನ್ನು ಮಾಡುವ ಆಸೆ ಇದೆಯಂತೆ. ಪಾತ್ರಕ್ಕೆ ಮಹತ್ವ ಇರುವ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ. ಗ್ಲಾಮರ್ ಇರುವ ಪಾತ್ರಗಳಲ್ಲಿಯೂ ನಟಿಸುಲು ಸಿದ್ಧ ಎಂದು ಗಟ್ಟಿಯಾಗಿ ಹೇಳುತ್ತಿದ್ದಾರೆ. ಜೊತೆಗೆ ಪ್ರಮುಖವಾಗಿ ಲೀಡ್ ಪಾತ್ರಗಳಲ್ಲಿ ನಟಿಸಲು ಕಾಯುತ್ತಿದ್ದಾರಂತೆ.

More from Filmibeat

English summary
All about KGF kannada movie actress Roopa Rayappa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X